ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೇತನ ಹೆಚ್ಚಳಕ್ಕಾಗಿ ಜಾಬ್ ಬದಲಾಯಿಸಿ 3 ತಿಂಗಳಲ್ಲೇ ಕಂಪನಿಯಿಂದ ವಜಾಗೊಂಡ ಉದ್ಯೋಗಿ! ಪೋಸ್ಟ್ ನಲ್ಲಿ ಹೇಳಿದ್ದೇನು?

Viral News: ಹೆಚ್ಚಿನ ಸಂಬಳ ಅಥವಾ ವೈಯಕ್ತಿಕ ಕಾರಣದಿಂದ ಕೆಲವೊಮ್ಮೆ ಕೆಲಸ ಬದಲಾವಣೆ ಮಾಡಬೇಕಾದ ಸಂದರ್ಭ ಬರಬಹುದು.. ಆದರೆ ಇಂತಹ ನಿರ್ಧಾರಗಳು ಕೆಲವೊಮ್ಮೆ ನಮ್ಮ ಪರಿಸ್ಥಿತಿ ಯನ್ನು ಅತಂತ್ರ ಮಾಡಿಬಿಡಬಹುದು. ಇದಕ್ಕೆ ಪ್ರತಿಕೂಲವಾಗಿ ಹೆಚ್ಚಿನ ಸಂಬಳ ಪಡೆಯುವ ಉದ್ದೇಶ ದಿಂದ ಯುವಕನೊಬ್ಬ ಕೆಲಸ ಬದಲಾಯಿಸಿದ್ದು ಆದರೆ, ಕೆಲಸಕ್ಕೆ ಸೇರಿದ ಕೇವಲ ಮೂರೇ ತಿಂಗಳಲ್ಲಿ ಕಂಪನಿಯು ಅವರನ್ನು ಕೆಲಸದಿಂದ ತೆಗೆದುಹಾಕಿರುವ ಘಟನೆ ನಡೆದಿದೆ. ಉದ್ಯೋಗಿ ರೆಡ್ಡಿಟ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಂಬಳ ಏರಿಕೆಗಾಗಿ ಕಂಪನಿ ಬದಲಾಯಿಸಿ, 3 ತಿಂಗಳಲ್ಲೇ ಜಾಬ್ ಕಳೆದುಕೊಂಡ ಉದ್ಯೋಗಿ

ಸಂಗ್ರಹ ಚಿತ್ರ -

Profile
Pushpa Kumari Jul 5, 2026 4:06 PM

ನವದೆಹಲಿ,ಜು.5: ​ಪ್ರತಿಯೊಬ್ಬ ವ್ಯಕ್ತಿಗೂ ತಾನು ಮಾಡುತ್ತಿರುವ ವೃತ್ತಿ ಬಹಳಷ್ಟು ಪ್ರಮುಖವಾಗಿರುತ್ತದೆ. ಆದರೆ ಹೆಚ್ಚಿನ ಸಂಬಳ ಅಥವಾ ವೈಯಕ್ತಿಕ ಕಾರಣದಿಂದ ಕೆಲವೊಮ್ಮೆ ಕೆಲಸ ಬದ ಲಾವಣೆ ಮಾಡಬೇಕಾದ ಸಂದರ್ಭ ಬರಬಹುದು. ಆದರೆ ಇಂತಹ ನಿರ್ಧಾರಗಳು ಕೆಲವೊಮ್ಮೆ ನಮ್ಮ ಪರಿಸ್ಥಿತಿಯನ್ನು ಅತಂತ್ರ ಮಾಡಿಬಿಡಬಹುದು. ಇದಕ್ಕೆ ಪ್ರತಿಕೂಲವಾಗಿ ಹೆಚ್ಚಿನ ಸಂಬಳ ಪಡೆಯುವ ಉದ್ದೇಶದಿಂದ ಯುವಕನೊಬ್ಬ ಕೆಲಸ ಬದಲಾಯಿಸಿದ್ದು ಆದರೆ, ಕೆಲಸಕ್ಕೆ ಸೇರಿದ ಕೇವಲ ಮೂರೇ ತಿಂಗಳಲ್ಲಿ ಕಂಪನಿಯು ಅವರನ್ನು ಕೆಲಸದಿಂದ ತೆಗೆದುಹಾಕಿರುವ ಘಟನೆ ನಡೆದಿದೆ. ಉದ್ಯೋಗಿ ರೆಡ್ಡಿಟ್‌ನಲ್ಲಿ ತಮ್ಮ ಅನುಭವವನ್ನು (Viral News) ಹಂಚಿಕೊಂಡಿದ್ದಾರೆ.

ಅನೇಕ ವೃತ್ತಿಪರರು ಹೆಚ್ಚಿನ ಸಂಬಳಕ್ಕಾಗಿ ಉದ್ಯೋಗಗಳನ್ನು ಬದಲಾಯಿಸುವುದು ಸಾಮಾನ್ಯವಾಗಿ ಆದಾಯ ಮತ್ತು ವೃತ್ತಿ ಬೆಳವಣಿಗೆ ಎರಡನ್ನೂ ಸುಧಾರಿಸಲು ನೇರ ಮಾರ್ಗವೆಂದು ಅಂದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಇದು ಯಶಸ್ಸು ತಂದು ಕೊಡುವುದಿಲ್ಲ. 30 ಪ್ರತಿಶತ ವೇತನ ಹೆಚ್ಚಳದೊಂದಿಗೆ ಹೊಸ ಕಂಪನಿಗೆ ಸೇರಿದ ನಂತರ ಮಾರ್ಕೆಟಿಂಗ್ ವೃತ್ತಿಪರರೊಬ್ಬರು ತೀವ್ರವಾದ ನಷ್ಟ ಅನುಭವಿಸಿದ್ದಾರೆ.​

ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಶೇಕಡಾ 30 ರಷ್ಟು ಸಂಬಳದ ಏರಿಕೆಗೆ ಬೇರೆಂದೂ ಕಂಪನಿಗೆ ಕೆಲಸಕ್ಕೆ ಸೇರಿದ್ದರು. ಆ ಕೆಲಸದ ಕಾರಣಕ್ಕೆ ಬೇರೆ ಕಡೆಗೂ ಅವರ ಸ್ಥಳಾಂತರ ಗೊಂಡಿದ್ದರು. ಆದರೆ, ಕೆಲಸಕ್ಕೆ ಸೇರಿದ ಕೇವಲ ಮೂರೇ ತಿಂಗಳಲ್ಲಿ ಕಂಪನಿಯು ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಕಚೇರಿ ಹುದ್ದೆಯಾಗಿದ್ದರಿಂದ ಉದ್ಯೋಗಿ ಬೇರೆ ನಗರಗಳನ್ನು ಸ್ಥಳಾಂತರಿಸಬೇಕಾಗಿತ್ತು. ಹೀಗಾಗಿ ವಿಮಾನಗಳು, ಸಾಗಣೆದಾರರು, ಪ್ಯಾಕರ್‌ಗಳು ಮತ್ತು ಬ್ರೋಕರೇಜ್ ಶುಲ್ಕಗಳು ಸೇರಿದಂತೆ ಸ್ಥಳಾಂತರ ವೆಚ್ಚಗಳನ್ನು ಕಂಪನಿಯು ಭರಿಸಿತ್ತು‌., ಉದ್ಯೋಗಿ ಶೀಘ್ರದಲ್ಲೇ ಹೊಸ ಪರಿಸರಕ್ಕೆ ಹೊಂದಿಕೊಂಡು ಮಾರ್ಕೆಟಿಂಗ್ ಯೋಜನೆಗಳನ್ನು ಸಿದ್ಧಪಡಿಸಿದ್ದರು.

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಆದರೆ ​ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಕಂಪನಿಯು ತನ್ನ ಶೇಕಡಾ 15 ರಷ್ಟು ಉದ್ಯೋಗಿ ಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಘೋಷಣೆ ಮಾಡಿದೆ. ಹಿರಿಯ ಎಂಜಿನಿಯರ್‌ಗಳು, ಉನ್ನತ ಸಂಸ್ಥೆಗಳಿಂದ ಹೊಸ ಪದವೀಧರರು, ಅನುಭವಿ ವೃತ್ತಿಪರರು ಮತ್ತು ಅನೇಕ ಪ್ರತಿಭಾನ್ವಿತ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಆ ವ್ಯಕ್ತಿ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಕಂಪನಿಯ ಕಾರಣದಿಂದ ಕೆಲಸ ಹೋಗಿರುವುದರಿಂದ, ಇದು ನಿಮ್ಮ ವೈಯಕ್ತಿಕ ತಪ್ಪಲ್ಲ..ಜಗತ್ತಿನಲ್ಲಿ ಅವಕಾಶಗಳಿದೆ ಎಂದು ಬೆಂಬಲಿಸಿದ್ದಾರೆ. ಮತ್ತೊಬ್ಬರು ನಾವು ವಾಸ್ತವದಲ್ಲಿ ಅನುಭವಿಸುವುದಕ್ಕಿಂತ ಹೆಚ್ಚಾಗಿ ಕಲ್ಪನೆಯಲ್ಲೇ ಬದುಕುತ್ತೇವೆ ಎಂದು ಬರೆದಿದ್ದಾರೆ.