ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕ-ಇರಾನ್ ನಡುವೆ ಶಾಶ್ವತ ಶಾಂತಿಗಾಗಿ ಚೀನಾ ಮಂತ್ರ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಡಿಸಿದ ನಾಲ್ಕು ಅಂಶವೇನು?

Xi Jinping peace proposal: ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಶಾಶ್ವತ ಶಾಂತಿಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನಾಲ್ಕು ಅಂಶಗಳ ಮಾರ್ಗಸೂಚಿಯನ್ನು ಪ್ರಸ್ತಾಪಿಸಿದ್ದಾರೆ. ಬೀಜಿಂಗ್‌ನಲ್ಲಿ ಯುಎಇ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ಸಭೆಯಲ್ಲಿ ಕ್ಸಿ ಈ ಪ್ರಸ್ತಾಪವನ್ನು ಮಾಡಿದರು.

ಅಮೆರಿಕ-ಇರಾನ್ ನಡುವೆ ಶಾಶ್ವತ ಶಾಂತಿಗಾಗಿ ಚೀನಾ ಅಧ್ಯಕ್ಷ ಹೇಳಿದ್ದೇನು?

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (ಸಂಗ್ರಹ ಚಿತ್ರ) -

Priyanka P
Priyanka P Apr 15, 2026 6:58 PM

ಇಸ್ಲಾಮಾಬಾದ್, ಏ.15: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಮಾತುಕತೆಗಳಲ್ಲಿ ಅಮೆರಿಕ ಮತ್ತು ಇರಾನ್ (US-Iran) ಪ್ರಗತಿ ಸಾಧಿಸುವಲ್ಲಿ ವಿಫಲವಾದ ನಂತರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಮಧ್ಯಪ್ರಾಚ್ಯ ಸಂಘರ್ಷದಲ್ಲಿ (Middle East Crisis) ಶಾಶ್ವತ ಶಾಂತಿಗಾಗಿ ನಾಲ್ಕು ಅಂಶಗಳ ಮಾರ್ಗಸೂಚಿಯನ್ನು ಪ್ರಸ್ತಾಪಿಸಿದ್ದಾರೆ. ಬೀಜಿಂಗ್‌ನಲ್ಲಿ ಯುಎಇ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ಸಭೆಯಲ್ಲಿ ಕ್ಸಿ ಈ ಪ್ರಸ್ತಾಪವನ್ನು ಮಾಡಿದರು. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಭುಗಿಲೆದ್ದ ನಂತರ ಚೀನಾಕ್ಕೆ ಭೇಟಿ ನೀಡಿದ ಮೊದಲ ಮಧ್ಯಪ್ರಾಚ್ಯ ನಾಯಕ ಯುಎಇ ಕ್ರೌನ್ ಪ್ರಿನ್ಸ್ ಆಗಿದ್ದಾರೆ.

ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ಪ್ರದೇಶದ ದೇಶಗಳ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂದು ಚೀನಾ ಅಧ್ಯಕ್ಷರು ಹೇಳಿದರು. ಅಮೆರಿಕ ಮತ್ತು ಇರಾನ್ ನಡುವಿನ ಮೊದಲ ಸುತ್ತಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಇಸ್ಲಾಮಾಬಾದ್‌ನಲ್ಲಿ ಮುಕ್ತಾಯಗೊಂಡಿದ್ದರೂ ಸಹ ಈ ಬೆಳವಣಿಗೆ ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಏ.14) ಪಾಕಿಸ್ತಾನದಲ್ಲಿ ಮುಂದಿನ ಎರಡು ದಿನಗಳಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಬಹುದು ಎಂದು ಸುಳಿವು ನೀಡಿದ್ದಾರೆ.

ಅಮೆರಿಕ ದಿಗ್ಬಂಧನ ಮುರಿಯಲಾಗದೆ ಮಾರ್ಗ ಬದಲಿಸಿದ ಚೀನಾ ಹಡಗು

ಚೀನಾದ ನಾಲ್ಕು ಅಂಶಗಳ ಪ್ರಸ್ತಾಪವೇನು?

ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಪ್ರಕಾರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರಸ್ತಾಪಿಸಿದ ನಾಲ್ಕು ಅಂಶಗಳು ಹೀಗಿವೆ:

  • ಶಾಂತಿಯುತ ಸಹಬಾಳ್ವೆಯ ತತ್ವವನ್ನು ಪಾಲಿಸುವಂತೆ ಕ್ಸಿ ಕರೆ ನೀಡಿದ್ದಾರೆ. ಮಧ್ಯಪ್ರಾಚ್ಯಕ್ಕೆ ಸಾಮಾನ್ಯ, ಸಮಗ್ರ ಮತ್ತು ಸಹಕಾರಾತ್ಮಕ ಹಾಗೂ ದೀರ್ಘಕಾಲಿಕ ಭದ್ರತಾ ವ್ಯವಸ್ಥೆಯನ್ನು ಉತ್ತೇಜಿಸಲು ಅವರು ಕರೆ ನೀಡಿದರು.
  • ರಾಷ್ಟ್ರೀಯ ಸಾರ್ವಭೌಮತ್ವದ ತತ್ವವನ್ನು ಪಾಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಗಲ್ಫ್ ರಾಷ್ಟ್ರಗಳ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂದು ಅವರು ಹೇಳಿದರು.
  • ಅಭಿವೃದ್ಧಿ ಮತ್ತು ಭದ್ರತೆಯನ್ನು ಸಂಘಟಿಸುವ ತತ್ವಗಳನ್ನು ಅವರು ಒತ್ತಿ ಹೇಳಿದರು. ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
  • ಕೊನೆಯದಾಗಿ, ಚೀನಾದ ಅಧ್ಯಕ್ಷರು ಅಂತಾರಾಷ್ಟ್ರೀಯ ನಿಯಮ ಆಧಾರಿತ ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯವನ್ನು ಎತ್ತಿ ತೋರಿಸಿದರು. ವಿಶ್ವವು ಮತ್ತೆ ಕಾಡಿನ ನಿಯಮ ಸ್ಥಿತಿಗೆ ಕುಸಿಯದಂತೆ ತಡೆಯಲು ಅಂತಾರಾಷ್ಟ್ರೀಯ ಕಾನೂನಿನ ನಿಯಮವನ್ನು ಎತ್ತಿಹಿಡಿಯಬೇಕು ಎಂದು ಅವರು ಹೇಳಿದರು.

ಶಾಂತಿ ಮಾತುಕತೆಯ ಬಗ್ಗೆ ಇತ್ತೀಚಿನ ಮಾಹಿತಿ

ಶೆಹಬಾಜ್ ಷರೀಫ್ ಮಧ್ಯಪ್ರಾಚ್ಯಕ್ಕೆ ಪ್ರವಾಸ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿಗೆ ನಾಲ್ಕು ದಿನಗಳ ರಾಜತಾಂತ್ರಿಕ ಭೇಟಿಯನ್ನು ಕೈಗೊಳ್ಳಲಿದ್ದಾರೆ.

ಅಮೆರಿಕಕ್ಕೆ ಮತ್ತೆ ಮುಖಭಂಗ; ದಿಗ್ಬಂಧನವನ್ನು ಮೀರಿ ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ನ 2 ಹಡಗುಗಳು

ಯುದ್ಧ 'ಮುಗಿಯುವ ಹಂತಕ್ಕೆ ಬಂದಿದೆ ಎಂದ ಟ್ರಂಪ್: ಇರಾನ್ ಜೊತೆಗಿನ ಯುದ್ಧ ಮುಗಿಯುವ ಹಂತಕ್ಕೆ ತುಂಬಾ ಹತ್ತಿರದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿಲ್ಲ ಎಂಬುದಕ್ಕೆ ಬದ್ಧವಾಗಿರಬೇಕು: ಶಾಂತಿ ಮಾತುಕತೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವ ವಹಿಸಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಇರಾನ್‌ ಪರಮಾಣು ಶಸ್ತ್ರಾಸ್ತ್ರ ಹೊಂದಿಲ್ಲ ಎಂಬುದಕ್ಕೆ ಬದ್ಧವಾದರೆ ಅಮೆರಿಕವು ಇರಾನ್ ಅನ್ನು ಅಭಿವೃದ್ಧಿಪಡಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ ಅಂತಾ ಹೇಳಿದರು. ಟೆಹರಾನ್‌ನ ಪರಮಾಣು ಕಾರ್ಯಕ್ರಮವು ಎರಡು ದೇಶಗಳ ನಡುವಿನ ದೀರ್ಘಕಾಲದ ವಿವಾದವಾಗಿದೆ. ಇದು ಟ್ರಂಪ್, ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಲು ಪ್ರಮುಖ ಕಾರಣವಾಗಿದೆ.

ಇಸ್ರೇಲ್, ಲೆಬನಾನ್ ನೇರ ಮಾತುಕತೆಗೆ ಒಪ್ಪಿಗೆ: ಇಸ್ರೇಲ್ ಮತ್ತು ಲೆಬನಾನ್ ನೇರ ಮಾತುಕತೆ ನಡೆಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.