ತನ್ನ ವೀರ್ಯದಿಂದ ಹುಟ್ಟಿದ ಎಲ್ಲಾ ಮಕ್ಕಳಿಗೆ ಆಸ್ತಿ ಬರೆಯುವ ಯೋಜನೆ ಮಾಡಿದ್ನಾ ಜೆಫ್ರಿ; ಬಗೆದಷ್ಟು ಬಯಲಾಗ್ತಿದೆ ಲೈಂಗಿಕ ಹಗರಣ
Jeffrey Epstein’s baby ranch plan: ಲೈಂಗಿಕ ಅಪರಾಧ ಆರೋಪಗಳಲ್ಲಿ ಸಿಲುಕಿದ್ದ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಅವರ ಬಗ್ಗೆ ಮತ್ತೊಂದು ಆತಂಕಕಾರಿ ವಿಚಾರ ಬಹಿರಂಗವಾಗಿದೆ. ತನ್ನ ಅಪಾರ ಸಂಪತ್ತು ಮತ್ತು ಪ್ರಭಾವವನ್ನು ಬಳಸಿ ಬೇಬಿ ರಾಂಚ್ ಮೂಲಕ ಮಾನವರ ಸೂಪರ್ ರೇಸ್ ನಿರ್ಮಿಸುವ ಯೋಜನೆಯನ್ನು ಅವರು ರೂಪಿಸಿದ್ದಾರೆ ಎಂಬುದನ್ನು ವರದಿಗಳು ಹೇಳುತ್ತಿವೆ.
ಉದ್ಯಮಿ ಜೆಫ್ರಿ ಎಪ್ಸ್ಟೀನ್ -
ನ್ಯೂಯಾರ್ಕ್, ಫೆ.9: ಅಮೆರಿಕದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾಗಿದ್ದ ಜೆಫ್ರಿ ಎಪ್ಸ್ಟೈನ್ (Jeffrey Epstein) 2019ರಲ್ಲಿ ಲೈಂಗಿಕ ಸಾಗಣೆ ಸಂಬಂಧಿತ ಫೆಡರಲ್ ಆರೋಪದ ವಿಚಾರಣೆ ವೇಳೆ ನ್ಯೂಯಾರ್ಕ್‌ನ ಜೈಲಿನಲ್ಲಿ ಮೃತಪಟ್ಟರು. ಆದರೆ, ಅವರ ಸಾವಿನ ಮುನ್ನ, ತನ್ನ ಅಪಾರ ಸಂಪತ್ತು, ಆಸ್ತಿ ಹಾಗೂ ಸಾಮಾಜಿಕ ಪ್ರಭಾವವನ್ನು ಬಳಸಿ ತನ್ನದೇ ಡಿಎನ್‌ಎ (DNA) ಹರಡುವ ಮೂಲಕ ಮಾನವರ ಸೂಪರ್ ರೇಸ್ (super race) ನಿರ್ಮಿಸುವ ಅತೀವ ಆತಂಕಕಾರಿ ಯೋಜನೆಯನ್ನು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅನೇಕ ವರ್ಷಗಳ ಕಾಲ ಜೆಫ್ರಿ ಎಪ್ಸ್ಟೈನ್ ತಮ್ಮ ಆಲೋಚನೆಗಳನ್ನು ವಿಜ್ಞಾನಿಗಳು ಹಾಗೂ ಇತರರೊಂದಿಗೆ ಹಂಚಿಕೊಂಡಿದ್ದು, ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ, ಬೇಬಿ ರಾಂಚ್ ಎಂದು ಕರೆಯುತ್ತಿದ್ದ ಯೋಜನೆಯನ್ನು ರೂಪಿಸಲು ಬಯಸಿದ್ದನೆಂದು ಹೇಳಲಾಗಿದೆ. ವರದಿ ಪ್ರಕಾರ, ಎಪ್ಸ್ಟೀನ್ ಆ ಆಸ್ತಿಯನ್ನು ಮಹಿಳೆಯರು ತನ್ನ ವೀರ್ಯದಿಂದ ಗರ್ಭಧರಿಸಿ ತನ್ನ ಮಕ್ಕಳಿಗೆ ಜನ್ಮ ನೀಡುವ ಸ್ಥಳವೆಂದು ಕಲ್ಪಿಸಿಕೊಂಡನು. ಆದರೆ, ಈ ಯೋಜನೆ ವಾಸ್ತವವಾಗಿ ಜಾರಿಗೆ ಬಂದಿತ್ತೆಂಬ ಯಾವುದೇ ಸಾಕ್ಷ್ಯವಿಲ್ಲ.
ವ್ಯಾಪಾರ ಒಪ್ಪಂದದ ಬಳಿಕ ಪಿಒಕೆ, ಜಮ್ಮು, ಕಾಶ್ಮೀರ ಸೇರಿಸಿ ಸಂಪೂರ್ಣ ಭಾರತದ ನಕ್ಷೆ ಬಿಡುಗಡೆ ಮಾಡಿದ ಅಮೆರಿಕ
ಎಪ್ಸ್ಟೈನ್ ಅವರ ಈ ಕಲ್ಪನೆಗೆ ಮೂಲ ಕಾರಣವಾಗಿದ್ದದ್ದು ಟ್ರಾನ್ಸ್‌ಹ್ಯೂಮನಿಸಂ ಮೇಲಿನ ಅವರ ಆಸಕ್ತಿ. ಟ್ರಾನ್ಸ್‌ಹ್ಯೂಮನಿಸಂ ಎಂಬುದು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನಗಳ ಬಳಕೆಯಿಂದ ಮಾನವ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು ಎಂದು ಪ್ರಚಾರ ಮಾಡುವ ಒಂದು ಚಳವಳಿಯಾಗಿದೆ.
ಆದರೆ, ವಿಮರ್ಶಕರು ಟ್ರಾನ್ಸ್‌ಹ್ಯೂಮನಿಸ್ಟ್ ಚಿಂತನೆಯ ಕೆಲವು ಅಂಶಗಳನ್ನು 20ನೇ ಶತಮಾನದ ಆರಂಭದಲ್ಲಿ ಮಾನವ ಜಾತಿಯನ್ನು ಆಯ್ಕೆ ಮೂಲಕ ಸಂತಾನೋತ್ಪತ್ತಿ ಮೂಲಕ ಸುಧಾರಿಸಬಹುದು ಎಂಬ ನಂಬಿಕೆಯನ್ನು ಹೊಂದಿದ್ದ ಯುಜೆನಿಕ್ಸ್ ತತ್ವದೊಂದಿಗೆ ಹೋಲಿಕೆ ಮಾಡುತ್ತಾ ಬಂದಿದ್ದಾರೆ. ಈ ಯುಜೆನಿಕ್ಸ್ ತತ್ವವನ್ನೇ ನಂತರ ನಾಜಿಗಳು ಅಳವಡಿಸಿಕೊಂಡು ಭೀಕರವಾಗಿ ದುರುಪಯೋಗ ಮಾಡಿಕೊಂಡಿದ್ದರು.
ಭಾರತ ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ; ಮೋದಿ ಹೇಳಿದ್ದೇನು? ಯಾರಿಗೆ ಹೆಚ್ಚು ಲಾಭ?
14 ವರ್ಷದಷ್ಟು ಕಿರಿಯ ಬಾಲಕಿಯರನ್ನೂ ಸಾಗಣೆ ಮಾಡಿದ್ದಾನೆ ಎಂಬ ಆರೋಪಗಳಿದ್ದ ಜೆಫ್ರಿ ಎಪ್ಸ್ಟೈನ್, ತಾನು ತಪ್ಪಿತಸ್ಥನಲ್ಲ ಎಂದು (ನಾಟ್ ಗಿಲ್ಟಿ) ಅರ್ಜಿ ಸಲ್ಲಿಸಿದ್ದರು. ಆದರೆ, ವರ್ಷಗಳ ಅವಧಿಯಲ್ಲಿ ತನಿಖಾಧಿಕಾರಿಗಳು ಮತ್ತು ಪತ್ರಕರ್ತರು, ತಮ್ಮ ಆರ್ಥಿಕ ಸಾಧನೆಗಳನ್ನು ಅತಿರಂಜಿತವಾಗಿ ಅಥವಾ ಕಲ್ಪಿತವಾಗಿ ಬಿಂಬಿಸಿದ್ದದ್ದು, ತನ್ನ ಗುರುತುಗಳನ್ನು ತಪ್ಪಾಗಿ ಪರಿಚಯಿಸಿದ್ದದ್ದು ಹಾಗೂ ವ್ಯಾಪಾರ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ತನ್ನ ಪಾತ್ರವನ್ನು ಅತಿಯಾಗಿ ವಿವರಿಸಿದ್ದನ್ನು ದಾಖಲೆಗಳೊಂದಿಗೆ ಬಹಿರಂಗಪಡಿಸಿದ್ದಾರೆ.
ಆದರೂ, ತನ್ನಲ್ಲಿದ್ದ ಅಪಾರ ಹಣದಿಂದ ಎಪ್ಸ್ಟೈನ್ ರಾಜಕೀಯ, ಹಣಕಾಸು ಮತ್ತು ಶೈಕ್ಷಣಿಕ ವಲಯಗಳಲ್ಲಿನ ಪ್ರಭಾವಶಾಲಿ ವ್ಯಕ್ತಿಗಳ ನಡುವೆ ತನ್ನ ಸ್ಥಾನವನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡಿದ್ದ.