Ukraine: ಯುದ್ಧದ ವೆಚ್ಚ ಭರಿಸಲು ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್ !
ಮೂರು ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ ನಿರಂತರವಾಗಿ ಯುದ್ಧವನ್ನು ನಡೆಸುತ್ತಿವೆ. ಉಕ್ರೇನ್ ತನ್ನ ಸಂಪನ್ಮೂಲಗಳ ಬಹುಪಾಲನ್ನು ಯುದ್ದಕ್ಕೆ ಖರ್ಚು ಮಾಡುತ್ತಿದೆ. ಇದೀಗ ಉಕ್ರೇನ್‌ಗೆ ನೀಡುವ ಯುದ್ಧ ಸಾಮಗ್ರಿ ಪೂರೈಕೆಯನ್ನು ಅಮೆರಿಕ ಸ್ಥಗಿತಗೊಳಿಸಿದೆ. ಇದೀಗ ಉಕ್ರೇನ್ ತನ್ನ ಸೇನೆಯ ಖರ್ಚುಗಳನ್ನು ಪೂರೈಸಲು ನೀಲಿ ಚಿತ್ರವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆ.


ಕೀವ್: ಮೂರು ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ (Ukraine) ನಿರಂತರವಾಗಿ ಯುದ್ಧವನ್ನು ನಡೆಸುತ್ತಿವೆ. ಉಕ್ರೇನ್ ತನ್ನ ಸಂಪನ್ಮೂಲಗಳ ಬಹುಪಾಲನ್ನು ಯುದ್ದಕ್ಕೆ ಖರ್ಚು ಮಾಡುತ್ತಿದೆ. ಇದೀಗ ಉಕ್ರೇನ್‌ಗೆ ನೀಡುವ ಯುದ್ಧ ಸಾಮಗ್ರಿ ಪೂರೈಕೆಯನ್ನು ಅಮೆರಿಕ ಸ್ಥಗಿತಗೊಳಿಸಿದೆ. ಇದೀಗ ಉಕ್ರೇನ್ ತನ್ನ ಸೇನೆಯ ಖರ್ಚುಗಳನ್ನು ಪೂರೈಸಲು ನೀಲಿ ಚಿತ್ರವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದೆ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಒಂದು ವೇಳೆ ಇದಕ್ಕೆ ಮಾನ್ಯತೆ ಸಿಕ್ಕಲ್ಲಿ ಇದರಿಂದ ಬರುವ ಆದಾಯವನ್ನು ಸೇನೆಗೆ ವ್ಯಯಿಸಲು ಜೆಲೆನ್‌ಸ್ಕಿ ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಉಕ್ರೇನಿಯನ್ ಸಂಸತ್ತಿನ ಹಣಕಾಸು ಸಮಿತಿಯ ಉಪಾಧ್ಯಕ್ಷ ಯಾರೋಸ್ಲಾವ್ ಝೆಲೆಜ್ನಿಯಾಕ್, ಅಶ್ಲೀಲ ಚಿತ್ರಗಳನ್ನು ಹೊಂದಿರುವುದು, ಉತ್ಪಾದಿಸುವುದು ಮತ್ತು ವಿತರಿಸುವ ಕಾನೂನಿನಲ್ಲಿ ಬದಲಾವಣೆ ತರುತ್ತೇವೆ ಎಂದು ಹೇಳಿದ್ದಾರೆ. ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಹೋರಾಡುತ್ತಿರುವಾಗ, ಯುದ್ಧಕಾಲದ ತೆರಿಗೆ ಆದಾಯವನ್ನು ಹೆಚ್ಚಿಸಲು ಪೋರ್ನೋಗ್ರಫಿಯನ್ನು ಅಪರಾಧ ಮುಕ್ತಗೊಳಿಸಲು ವಿವಾದಾತ್ಮಕ ಮಸೂದೆಯನ್ನು ರಚಿಸಲಾಗಿದೆ. ಕಾನೂನು ಕ್ರಮ ಎದುರಿಸುತ್ತಿದ್ದರೂ ಕ್ರಿಯೇಟರ್‌ಗಳು ಈಗಾಗಲೇ ಲಕ್ಷಾಂತರ ತೆರಿಗೆಗಳನ್ನು ಪಾವತಿಸುತ್ತಿರುವುದರಿಂದ, ಈ ಕ್ರಮವು ಕಾನೂನು ವಿರೋಧಾಭಾಸಗಳನ್ನು ಕೊನೆಗೊಳಿಸಬಹುದು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಬಹುದು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Vladimir Putin: ಉಕ್ರೇನ್ ಯುದ್ಧದ ಬಗ್ಗೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಪುಟಿನ್ ಸಿದ್ದ- ರಷ್ಯಾದಿಂದ ಮಹತ್ವದ ಘೋಷಣೆ
ಉಕ್ರೇನ್ ಕಾನೂನಿನ ಪ್ರಕಾರ ಕ್ರಿಮಿನಲ್ ಕೋಡ್‌ನ ಆರ್ಟಿಕಲ್ 301 ಪ್ರಕಾರ, ಅಶ್ಲೀಲ ವಸ್ತುಗಳ ಸೃಷ್ಟಿ, ವಿತರಣೆ ಮತ್ತು ಇರಿಸಿಕೊಳ್ಳುವುದು ಕಾನೂನುಬಾಹಿರ. ಇದ್ಕೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ನೀಡಬಹುದಾಗಿದೆ. ಉಕ್ರೇನ್‌ನ ಈ ಕಾನೂನು ಅನೇಕ ಯುರೋಪಿಯನ್ ದೇಶಗಳು, ಅಮೆರಿಕ ಹಾಗೂ ರಷ್ಯಾಕ್ಕಿಂತ ಕಠಿಣವಾಗಿದೆ. ಇದು ಒಪ್ಪಿಗೆ ನೀಡುವ ವಯಸ್ಕರ ನಡುವೆ ನಗ್ನ ಚಿತ್ರಗಳ ಖಾಸಗಿ ವಿನಿಮಯವನ್ನು ಸಹ ನಿಷೇಧಿಸುತ್ತದೆ. ಆದರೆ ದೇಶದಲ್ಲಿ ಈ ಕಾನೂನು ಜಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾನೂನು ಮಾನ್ಯತೆ ಸಿಕ್ಕಲ್ಲಿ ಉಕ್ರೇನ್‌ಗೆ ವಾರ್ಷಿಕ ನೂರಾರು ಕೋಟಿ ರೂ. ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತದಿಂದ 24,000 ಮಾನವ ಬಳಕೆ ಡ್ರೋನ್‌ಗಳನ್ನು ಖರೀದಿಸಬಹುದಾಗಿದೆ ಎಂದು ವರದಿಗಳು ತಿಳಿಸಿದೆ.