Sunita Williams: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ಕೂದಲಿನ ಆರೈಕೆ ಹೇಗೆ ಮಾಡ್ತಾರೆ?
ಬಾಹ್ಯಾಕಾಶದಲ್ಲಿದ್ದ ಸುನಿತಾ ಅವರ ಹಲವು ಫೋಟೋವನ್ನು ಈ ಹಿಂದೆ ನಾಸಾ ಬಿಡುಗಡೆ ಮಾಡಿತ್ತು. ಅದರಲ್ಲಿ ಸುನಿತಾ ಅವರ ಕೂದಲು ಕೆದರಿಕೊಂಡತೆ ಇತ್ತು. ಬಾಹ್ಯಾಕಾಶದಲ್ಲಿ ಅವರು ಕೂದಲನ್ನು ಕಟ್ಟುತ್ತಿರಲಿಲ್ಲ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಮ್ಮ ಕೂದಲಿನ ಆರೈಕೆ ಹೇಗೆ ಮಾಡುತ್ತಾರೆ? ಎಲ್ಲದಕ್ಕೂ ಉತ್ತರ ಇಲ್ಲಿದೆ.

ಸುನಿತಾ ವಿಲಿಯಮ್ಸ್

ವಾಷಿಂಗ್ಟನ್: 8 ದಿನದ ಅಧ್ಯಯನಕ್ಕೆ ಎಂದು ತೆರಳಿದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ (Sunita Williams) ಹಾಗೂ ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದರು. ಇದೀಗ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಬಾಹ್ಯಾಕಾಶದಲ್ಲಿದ್ದ ಸುನಿತಾ ಅವರ ಹಲವು ಫೋಟೋವನ್ನು ಈ ಹಿಂದೆ ನಾಸಾ ಬಿಡುಗಡೆ ಮಾಡಿತ್ತು. ಅದರಲ್ಲಿ ಸುನಿತಾ ಅವರ ಕೂದಲು ಕೆದರಿಕೊಂಡತೆ ಇತ್ತು. ಬಾಹ್ಯಾಕಾಶದಲ್ಲಿ ಅವರು ಕೂದಲನ್ನು ಕಟ್ಟುತ್ತಿರಲಿಲ್ಲ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಮ್ಮ ಕೂದಲಿನ ಆರೈಕೆ ಹೇಗೆ ಮಾಡುತ್ತಾರೆ? ಎಲ್ಲದಕ್ಕೂ ಉತ್ತರ ಇಲ್ಲಿದೆ.
ಇತ್ತೀಚೆಗೆ ಟ್ರಂಪ್ ಸುನಿತಾ ವಿಲಿಯಮ್ಸ್ ಬಗ್ಗೆ ಮಾತನಾಡುತ್ತಾ, ಒಳ್ಳೆಯ, ಗಟ್ಟಿಯಾದ ಕೂದಲಿನ ಮಹಿಳೆಯನ್ನು ನಾನು ನೋಡುತ್ತೇನೆ ಎಂದು ಅವರ ಕೂದಲಿನ ಬಗ್ಗೆ ಹೇಳಿದ್ದರು. ಗಗನಯಾತ್ರಿಗಳು, ವಿಶೇಷವಾಗಿ ಮಹಿಳೆಯರು ಬಾಹ್ಯಾಕಾಶದಲ್ಲಿ ತಮ್ಮ ಕೂದಲನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿತ್ತು. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇರುವುದರಿಂದ ಕೂದಲು ಅಷ್ಟಾಗಿ ಉದುರುವುದಿಲ್ಲ.
ಗುರುತ್ವಾಕರ್ಷಣೆಯು ಕೂದಲನ್ನು ಕೆಳಕ್ಕೆ ಎಳೆಯುವುದಿಲ್ಲವಾದ್ದರಿಂದ, ಅದನ್ನು ಹಿಂದಕ್ಕೆ ಕಟ್ಟಬೇಕೆಂದು ಇರುವುದಿಲ್ಲ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಒಳಗೆ ಗಾಳಿಯ ಹರಿವು ತೇವಾಂಶವನ್ನು ಆವಿಯಾಗಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಕೂದಲು ಬಹು ಬೇಗ ಒಣಗುತ್ತದೆ. ಕೆಲ ಗಗನಯಾತ್ರಿಗಳು ಕೂದಲನ್ನು ಹಾಗೆಯೇ ಗಾಳಿಗೆ ಹಾರಾಡಲು ಬಿಡಲು ಇಷ್ಟಪಡುತ್ತಾರೆ. ಕೂದಲು ಮುಖಕ್ಕೆ ಬಂದು ಕಷ್ಟವಾಗದೇ ಇರುವುದರಿಂದ ಅವರು ಇದನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಈ ಸುದ್ದಿಯನ್ನೂ ಓದಿ: Sunita Williams: ಊದಿಕೊಂಡ ಕಣ್ಣು, ಮಗುವಿನಂತಾದ ಚರ್ಮ! ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ ಆರೋಗ್ಯ ಹೇಗಿದೆ?
ಈ ಹಿಂದೆ ಗಗನಯಾತ್ರಿಯಾಗಿದ್ದ ಕರೆನ್ ನೈಬರ್ಗ್ ತಮ್ಮ ಕೂದಲಿನ ಆರೈಕೆ ಹೇಗೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. 2013 ರಲ್ಲಿ ISS ನಲ್ಲಿದ್ದಾಗ, ನೈಬರ್ಗ್ ತನ್ನ ಉದ್ದನೆಯ ಕೂದಲನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಹೇಗೆ ತೊಳೆಯುತ್ತಾಳೆ ಎಂಬುದನ್ನು ಪ್ರದರ್ಶಿಸುವ YouTube ವೀಡಿಯೊವನ್ನು ಹಂಚಿಕೊಂಡಿದ್ದರು. ಮೊದಲು ಅವರು ತನ್ನ ನೆತ್ತಿಯ ಮೇಲೆ ಬಿಸಿನೀರನ್ನು ಚಿಮುಕಿಸುತ್ತಾರೆ. ಕೂದಲನ್ನು ಕೈಯಲ್ಲಿ ಹಿಡಿದು ಸಂಪೂರ್ಣವಾಗಿ ನೀರನ್ನು ಹಾಕಿ ತೊಳೆಯುತ್ತಾರೆ. ಆ ವಿಡಿಯೋ ವೈರಲ್ ಆಗಿತ್ತು.