Hamas torture: ʼ491 ದಿನ ಪ್ರಾಣಿಗಳಂತೆ ಸರಪಳಿಯಲ್ಲಿ ಕಟ್ಟಿ ಹಾಕಿದ್ದರು, ಆಹಾರಕ್ಕಾಗಿ ಗೋಗರೆದೆವುʼ- ಹಮಾಸ್ ಕ್ರೂರತೆ ಬಿಚ್ಚಿಟ್ಟ ಇಸ್ರೇಲಿ ಒತ್ತೆಯಾಳು
Hamas Torture: ಹಮಾಸ್ ಸೆರೆವಾಸದ ನಂತರ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳಾಗಿದ್ದ ಎಲಿ ಶರಾಬಿ, ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡುತ್ತಾ ಹಮಾಸ್ ನ ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ. ತಾವು ಎದುರಿಸಿದ ಭೀಕರ ಹಿಂಸೆಯನ್ನು ಆಕ್ರೋಶಭರಿತರಾಗಿ ಹಾಗೂ ಭಾವೋದ್ವೇಗದಿಂದ ವಿವರಿಸಿದ್ದಾರೆ.

ಎಲಿ ಶರಾಬಿ

ಹಮಾಸ್: 491 ದಿನಗಳ ಸೆರೆವಾಸದ ನಂತರ ಬಿಡುಗಡೆಯಾದ ಇಸ್ರೇಲಿ(Israel) ಒತ್ತೆಯಾಳಾಗಿದ್ದ ಎಲಿ ಶರಾಬಿ, ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(United Nations Security Council)ಯಲ್ಲಿ ಮಾತನಾಡುತ್ತಾ ಹಮಾಸ್(Hamas Torture,)ನ ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ. ತಾವು ಎದುರಿಸಿದ ಭೀಕರ ಹಿಂಸೆ(Torture)ಯನ್ನು ಆಕ್ರೋಶಭರಿತರಾಗಿ ಹಾಗೂ ಭಾವೋದ್ವೇಗದಿಂದ ವಿವರಿಸಿದ್ದಾರೆ. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್(southern Israel)ನಲ್ಲಿ ಹಮಾಸ್ ದಾಳಿ(Hamas Surprise Attack) ನಡೆಸಿ ಸುಮಾರು 251 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋದವರ ಪೈಕಿ ಎಲಿ ಶರಾಬಿ ಕೂಡಾ ಒಬ್ಬರು. ಅವರು ಫೆಬ್ರವರಿ 8, 2025ರಂದು ಕದನ ವಿರಾಮ ಒಪ್ಪಂದದ ಪ್ರಕಾರ ಬಿಡುಗಡೆಯಾಗಿದ್ದರು.
“ಫೆಬ್ರವರಿ 8ರಂದು ಬಿಡುಗಡೆಯಾದಾಗ ತನ್ನ ತೂಕ 44 ಕೆಜಿ ಇತ್ತು. ಹಮಾಸ್ ದಾಳಿಯಲ್ಲಿ ಕೊಲ್ಲಲ್ಪಟ್ಟ ತನ್ನ ಕಿರಿಯ ಮಗಳ ತೂಕಕ್ಕಿಂತ ಕಡಿಮೆ. ಅವರು ನಮಗೆ ಊಟವನ್ನೂ ಕೊಡುತ್ತಿರಲಿಲ್ಲ. ಹಸಿವು ಎಂದು ಆಹಾರಕ್ಕಾಗಿ ಗೋಗರೆದೆವು. ಅವರು ನಮ್ಮನ್ನು ಹೊಡೆದು, ಸರಪಳಿಯಿಂದ ಬಂಧಿಸಿಟ್ಟಿದ್ದರು” ಎಂದು ಎಲಿ ಶರಾಬಿ ವಿವರಿಸಿದ್ದಾರೆ. "ನಾನು ನರಕದಿಂದ ಹಿಂತಿರುಗಿದ್ದೇನೆ. ನನ್ನನ್ನು ಭೂಗತ ಕೋಣೆಯಲ್ಲಿ ಇರಿಸಲಾಯಿತು. ಶೌಚಾಲಯ ಬಳಸಲು ಬೇಡಿದೆ. ಆಹಾರಕ್ಕಾಗಿ ಬೇಡಿದೆ. ಬಿಡುಗಡೆಗಾಗಿ ಬೇಡಿದೆ. ಭಿಕ್ಷಾಟನೆಯೇ ನನ್ನ ಅಸ್ತಿತ್ವವಾಯಿತು," ಎಂದು ಭಾವನಾತ್ಮಕವಾಗಿ ಎಲಿ ಶರಾಬಿ UNSCಗೆ ತಿಳಿಸಿದರು.
ರೆಡ್ ಕ್ರಾಸ್, ಯುಎನ್ ಅನ್ನು ಪ್ರಶ್ನಿಸಿದ ಎಲಿ ಶರಾಬಿ:
“ಇಸ್ರೇಲಿ ಒತ್ತೆಯಾಳುಗಳು ಅತ್ಯಂತ ಕ್ರೂರವಾದ ಹಿಂಸೆಯನ್ನು ಅನುಭವಿಸುತ್ತಿದ್ದಾಗ ವಿಶ್ವಸಂಸ್ಥೆ ಎಲ್ಲಿತ್ತು? ರೆಡ್ ಕ್ರಾಸ್ ಎಲ್ಲಿತ್ತು? ಜಗತ್ತು ಎಲ್ಲಿತ್ತು?” ಶರಾಬಿ ಪ್ರಶ್ನಿಸಿದ್ದಾರೆ. "ನೀವು ಮಾನವೀಯತೆಯ ಪರವಾಗಿ ನಿಂತಿದ್ದೀರಾ ಎಂದಾದರೆ, ಗಾಜಾದಲ್ಲಿ ಇನ್ನೂ ಒತ್ತೆಯಾಳುಗಳಾಗಿ ಚಿತ್ರಹಿಂಸೆ ಅನುಭವಿಸುತ್ತಿರುವ 59 ಜನರನ್ನು ವಾಪಸ್ ಕರೆತಂದು ಅದನ್ನು ಸಾಬೀತುಪಡಿಸಿ" ಎಂದು ಶರಾಬಿ ವಿಶ್ವಸಂಸ್ಥೆಯ ಅತ್ಯಂತ ಶಕ್ತಿಶಾಲಿ ಸಂಸ್ಥೆಯಾದ ಭದ್ರತಾ ಮಂಡಳಿಗೆ ಸವಾಲು ಹಾಕಿದರು. ಒತ್ತೆಯಾಳುಗಳ ದುಃಸ್ಥಿತಿಯ ಕುರಿತು ಸಭೆ ನಡೆಸಲು ಕಳೆದ ವಾರ ಇಸ್ರೇಲ್ ವಿನಂತಿ ಮಾಡಿದ ನಂತರ ಎಲಿ ಶರಾಬಿ ಕೌನ್ಸಿಲ್ ಮುಂದೆ ಹಾಜರಾಗಿ ಮಾತನಾಡಿದ್ದರು.
ಈ ಸುದ್ದಿಯನ್ನು ಓದಿ: Viral Video: ಕಳೆದ ಹೋಗಿದ್ದ ಶ್ವಾನವನ್ನು ಮತ್ತೆ ಭೇಟಿಯಾದ ಮಾಲೀಕ; ಭಾವುಕ ಕ್ಷಣದ ವಿಡಿಯೋ ವೈರಲ್
ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಅಕ್ಟೋಬರ್ 7ರ ಬೆಳಿಗ್ಗೆ, ತಾನು ವಾಸಿಸುತ್ತಿದ್ದ ಕಿಬ್ಬುಟ್ಜ್ ಪ್ರದೇಶಕ್ಕೆ ಉಗ್ರಗಾಮಿಗಳು ಇದ್ದಾರೆ ಎಂದು ಕೇಳಿದಾಗ, "ಸೈನ್ಯ ಬರುತ್ತದೆ, ಅವರು ಯಾವಾಗಲೂ ನಮ್ಮ ಬೆಂಬಲಕ್ಕೆ ಇರುತ್ತಾ ಚಿಂತಿಸಬೇಡಿ ಎಂದು ಎಲಿ ಶರಾಬಿ ತನ್ನ ಹೆಂಡತಿಗೆ ಭರವಸೆ ನೀಡಿದ್ದರು. ಆದರೆ, ಅವರ ದುರದೃಷ್ಟಕ್ಕೆ ಹಮಾಸ್ ಕೈಗೆ ಸಿಲುಕಿದ ಎಲಿ ಶರಾಬಿ ಒತ್ತೆಯಾಳಾಗಿ ಗಾಜಾಗೆ ತೆರಳಬೇಕಾಯಿತು. ಅವರು ತಮ್ಮ ಕಿರಿಯ ಮಗಳನ್ನೂ ಕಳೆದುಕೊಂಡರು.
ಗಾಜಾದಲ್ಲಿ ಈಗಾಗಲೇ ಹಲವು ಒತ್ತೆಯಾಳುಗಳನ್ನು ಕೊಲ್ಲಲಾಗಿದೆ. ಅವರೆಲ್ಲರ ಮೃತದೇಹಗಳು ಗಾಜಾದಲ್ಲಿಯೇ ಇವೆ. ಅವರೆಲ್ಲರನ್ನೂ ಈಗಲೇ ಮನೆಗೆ ಕರೆತರಬೇಕು ಎಂದು ಎಲಿ ಶರಾಬಿ ಭಾವೋದ್ವೇಗದಿಂದ ಭದ್ರತಾ ಮಂಡಳಿಯ ಮುಂದೆ ಮನವಿ ಮಾಡಿದ್ದಾರೆ.