Viral Video: ಕಳೆದ ಹೋಗಿದ್ದ ಶ್ವಾನವನ್ನು ಮತ್ತೆ ಭೇಟಿಯಾದ ಮಾಲೀಕ; ಭಾವುಕ ಕ್ಷಣದ ವಿಡಿಯೋ ವೈರಲ್
ದೆಹಲಿಯ ವ್ಯಕ್ತಿಯೊಬ್ಬ ತನ್ನ ಕಳೆದುಹೋದ ನಾಯಿಯೊಂದಿಗೆ ಮತ್ತೆ ಒಂದಾಗಿರುವುದು ಅಂತರ್ಜಾಲದಲ್ಲಿ ಎಲ್ಲರ ಮನ ಗೆದ್ದಿದೆ. ನಾಯಿ ತನ್ನ ಮಾಲೀಕರನ್ನು ಭೇಟಿಯಾಗುವ ವೀಡಿಯೊವನ್ನು ಶುಕ್ರವಾರ ಮುಂಜಾನೆ ರೆಡ್ಡಿಟ್‌ನಲ್ಲಿ ನಾಯಿಯ ಮಾಲೀಕರ ಸ್ನೇಹಿತ ಹಂಚಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನವದೆಹಲಿ: ಪ್ರಾಣಿಗಳು ಮನುಷ್ಯನೊಂದಿಗೆ ಕಂಡುಕೊಳ್ಳುವ ಭಾವನಾತ್ಮಕ ನಂಟು ಮನುಷ್ಯ ಮನುಷ್ಯರ ನಡುವೆಯೇ ಕಾಣ ಸಿಗುವುದು ಅನುಮಾನ. ಅದರಲ್ಲೂ ಶ್ವಾನ ಹಾಗೂ ಮಾನವರ ನಡುವೆ ಇರುವ ಒಂದು ಬಾಂಧವ್ಯವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಒಂದು ಹೊತ್ತಿನ ಊಟ ಹಾಕಿದರೂ ಸಾಕು ಶ್ವಾನಗಳು ಜೀವನ ಪರ್ಯಂತ ನೀಯತ್ತಾಗಿರುತ್ತವೆ. ಇದಕ್ಕೆ ಸಾಕ್ಷಿಯಾಗಿ ನಾಯಿ ಹಾಗೂ ಮನುಷ್ಯನ ನಡುವಿನ ಸಂಬಂಧ ವಿವರಿಸುವ ಹಲವು ಸಿನಿಮಾಗಳೇ ಆಗಿವೆ. ಇದೀಗ ಅಂತಹದೇ ವಿಡಿಯೋ ಒಂದು ವೈರಲ್ (Viral Video) ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ದೆಹಲಿಯ ವ್ಯಕ್ತಿಯೊಬ್ಬ ತನ್ನ ಕಳೆದುಹೋದ ನಾಯಿಯೊಂದಿಗೆ ಮತ್ತೆ ಒಂದಾಗಿರುವುದು ಅಂತರ್ಜಾಲದಲ್ಲಿ ಎಲ್ಲರ ಮನ ಗೆದ್ದಿದೆ. ನಾಯಿ ತನ್ನ ಮಾಲೀಕರನ್ನು ಭೇಟಿಯಾಗುವ ವೀಡಿಯೊವನ್ನು ಶುಕ್ರವಾರ ಮುಂಜಾನೆ ರೆಡ್ಡಿಟ್‌ನಲ್ಲಿ ನಾಯಿಯ ಮಾಲೀಕರ ಸ್ನೇಹಿತ ಹಂಚಿಕೊಂಡಿದ್ದಾರೆ. ಚಾರ್ಲಿ ಎಂಬ ಹೆಸರಿನ ಶ್ವಾನ ಕಳೆದು ಹೋಗಿತ್ತು. ಮಾಲೀಕ ತನ್ನ ಶ್ವಾನವನ್ನು ಎಲ್ಲೆಡೆ ಹುಡುಕುತ್ತಿದ್ದರು. ವಿಡಿಯೋ ಹಂಚಿಕೊಂಡ ವ್ಯಕ್ತಿ, ಚಾರ್ಲಿಯನ್ನು ಹೇಗೆ ಹುಡಕಲಾಯಿತು ಎಂದು ವಿವರಿಸಿದ್ದಾರೆ.
ಚಾರ್ಲಿ ಗೋಲ್ಡನ್ ರಿಟ್ರೇವರ್ ನಾಯಿಯಾಗಿದ್ದು, ತನ್ನ ಮಾಲೀಕನನ್ನು ಕಂಡ ಕೂಡಲೇ ಬಾಲ ಅಲ್ಲಾಡಿಸುತ್ತಾ ಓಡೋಡಿ ಬಂದಿದೆ. ಪೋಸ್ಟ್‌ನಲ್ಲಿ ಹೇಳಿರುವಂತೆ ಮಾಲೀಕ ತನ್ನ ಶ್ವಾನವನ್ನು ಭೇಟಿಯಾಗಲು ರಾತ್ರಿಯಿಡೀ ಪ್ರಯಾಣ ಮಾಡಿದ್ದಾನೆ. ಕೊನೆಗೂ ನಾಯಿ ಸಿಕ್ಕಿದೆ. ಆ ವ್ಯಕ್ತಿ ಚಾರ್ಲಿಯನ್ನು ಕಂಡ ಕೂಡಲೇ ಮುದ್ದಿಸುತ್ತಾ, ಮೊಣಕಾಲುಗಳ ಮೇಲೆ ಕುಳಿತುಕೊಳ್ಳುತ್ತಾನೆ.
ಈ ಸುದ್ದಿಯನ್ನೂ ಓದಿ: Viral Video: ಪ್ರವಾಸಿಗನ ಕಂಜೂಸ್ ಬುದ್ಧಿ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ವೈರಲ್ ವಿಡಿಯೊ!
ನನ್ನ ಸ್ನೇಹಿತನಿಗೆ ಕೊನೆಗೂ ಚಾರ್ಲಿ ಸಿಕ್ಕಿದ್ದಾಳೆ. ಆತ ಶ್ವಾನವನ್ನು ಹುಡುಕಲು ಎಲ್ಲೆಡೆ ಪೋಸ್ಟರ್‌ಗಳನ್ನು ಅಂಟಿಸಿದ್ದ. ಪೋಸ್ಟರ್ ನೋಡಿದ ಯಾರೋ ಅಂಗಡಿಕಾರರು ನಮಗೆ ಮಾಹಿತಿ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ. ಯಾರೋ ಕೆಲಸಗಾರರು ನಾಯಿಯನ್ನು ಅಲಿಘರ್‌ಗೆ ಕರೆದೊಯ್ದಿದ್ದರು. ಅಂಗಡಿ ಮಾಲೀಕರಿಗೆ ಕೆಲಸಗಾರ ಹೇಗೋ ತಿಳಿದಿತ್ತು. ಕೆಲಸಗಾರನನ್ನು ಬೆದರಿಸಿದಾಗ ಆತ ಕೊನೆಗೂ ನಾಯಿ ಎಲ್ಲಿದೆ ಎಂದು ಹೇಳಿದ್ದಾನೆ. ಸಹಾಯ ಮಾಡಿದ ಮತ್ತು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್‌ಗೆ ರೆಡ್ಡಿಟ್ ಬಳಕೆದಾರರಿಂದ ಹಲವಾರು ಕಾಮೆಂಟ್‌ಗಳು ಬಂದವು, ಅವರು ನಾಯಿ ಮಾಲೀಕರನ್ನು ಅಭಿನಂದಿಸಿದರು ಮತ್ತು ಚಾರ್ಲಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದರು.