Golden Visas: ಅಮೆರಿಕದಂತೆ ವಿಶ್ವದಾದ್ಯಂತ ಯಾವೆಲ್ಲಾ ದೇಶಗಳು ʼಗೋಲ್ಡನ್ ವೀಸಾʼ ನೀಡುತ್ತವೆ ಗೊತ್ತಾ?
Golden Visas: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವೀಸಾ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ವಿದೇಶಿಯರಿಗೆ "ಗೋಲ್ಡ್ ಕಾರ್ಡ್" ವಾಸ ಪರವಾನಗಿಯನ್ನು ನೀಡಲಾಗುತ್ತದೆ. ಹಾಗಾದ್ರೆ ಯಾವ ಎಲ್ಲಾ ದೇಶಗಳು ಗೋಲ್ಡನ್ ವೀಸಾ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೊಸ ವೀಸಾ ಯೋಜನೆ(Golden Visas)ಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ವಿದೇಶಿಯರಿಗೆ "ಗೋಲ್ಡ್ ಕಾರ್ಡ್" ವಾಸ ಪರವಾನಗಿಯನ್ನು ನೀಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ, "ಗೋಲ್ಡನ್ ವೀಸಾಗಳು" ಎಂದು ಕರೆಯಲ್ಪಡುವ ವ್ಯವಸ್ಥೆಯು ಪ್ರಪಂಚದ ಅತಿ ಶ್ರೀಮಂತ ಒಂದು ಶೇಕಡಾ ಜನರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ರಿಯಲ್ ಎಸ್ಟೇಟ್ ಖರೀದಿ, ಆರ್ಥಿಕ ಹೂಡಿಕೆಗಳನ್ನು ಮಾಡುವ ಅಥವಾ ಕೆಲವು ಸಂದರ್ಭಗಳಲ್ಲಿ ಸರ್ಕಾರಕ್ಕೆ ನೇರವಾಗಿ ಹಣವನ್ನು ದಾನ ಮಾಡುವ ವಿದೇಶಿಯರಿಗೆ ಈ ವ್ಯವಸ್ಥೆ ಸಹಾಯ ಮಡುತ್ತದೆ. US ನೀಡುವ 5 ಮಿಲಿಯನ್ ಡಾಲರ್ "ಗೋಲ್ಡ್ ಕಾರ್ಡ್" ವಿಶ್ವದ ಅತ್ಯಂತ ದುಬಾರಿ ವೀಸಾ ಯೋಜನೆಗಳಲ್ಲಿ ಒಂದಾಗಿದೆ. ಕಡಿಮೆ ಹೂಡಿಕೆ ಮಿತಿಯೊಂದಿಗೆ ಗೋಲ್ಡನ್ ವೀಸಾಗಳನ್ನು ನೀಡುವ ದೇಶಗಳ ಪಟ್ಟಿ ಇಲ್ಲಿದೆ:
ಗ್ರೀಸ್
2013ರಲ್ಲಿ ಗ್ರೀಸ್ ತನ್ನ ಗೋಲ್ಡನ್ ವೀಸಾ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದೇಶಿಯರಿಗೆ ಗ್ರೀಕ್ ಶಾಶ್ವತ ನಿವಾಸ ಪರವಾನಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಈ ಪರವಾನಗಿಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಬೇಕಾಗುತ್ತದೆ ಮತ್ತು ಕನಿಷ್ಠ ಸುಮಾರು 2,50,000 ಯುರೋಗಳಷ್ಟು ($262,800) ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಬೇಕಾಗುತ್ತದೆ.
ಮಾಲ್ಟಾ
ಮಾಲ್ಟಾದ ಗೋಲ್ಡನ್ ವೀಸಾ ಕಾರ್ಯಕ್ರಮದ ಪ್ರಕಾರ, ಹೂಡಿಕೆದಾರರು 3,50,000 ಯುರೋಗಳಷ್ಟು ($3,70,000) ರಿಯಲ್ ಎಸ್ಟೇಟ್ ಖರೀದಿ ಮಾಡಬೇಕು ಅಥವಾ 12,000 ಯುರೋಗಳಷ್ಟು ($12,500) ಕನಿಷ್ಠ ವಾರ್ಷಿಕ ಬಾಡಿಗೆ ಆದಾಯವನ್ನು ಕಾಯ್ದುಕೊಳ್ಳಬೇಕು. ಕನಿಷ್ಠ 1,50,000 ಯುರೋಗಳಷ್ಟು (ಸುಮಾರು $1,60,000) ಹಣಕಾಸಿನ ನಿವ್ವಳ ಮೌಲ್ಯವನ್ನು ಹೊಂದಿರುವುದರ ಜೊತೆಗೆ, ಸಂಭಾವ್ಯ ಹೂಡಿಕೆದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಕನಿಷ್ಠ 5,00,000 ಯುರೋಗಳಷ್ಟು ($5,25,000 ಕ್ಕಿಂತ ಹೆಚ್ಚು) ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿರಬೇಕು.
ಇಟಲಿ
ಇಟಲಿ ಹೂಡಿಕೆ ಯೋಜನೆಯು ಎರಡು ವರ್ಷಗಳ ಹೂಡಿಕೆದಾರರ ವೀಸಾ, ಹೂಡಿಕೆ ಸ್ವಾತಂತ್ರ್ಯ (ಸರ್ಕಾರಿ ಬಾಂಡ್, ಷೇರುಗಳು ಅಥವಾ ಸಾರ್ವಜನಿಕ ಹಿತಾಸಕ್ತಿ ಉಪಕ್ರಮಗಳು), ಮತ್ತು 10 ವರ್ಷಗಳ ಪೌರತ್ವವನ್ನು ನೀಡುತ್ತದೆ. ಸ್ಟಾರ್ಟ್‌ಅಪ್‌ಗಳಿಗೆ, ಕನಿಷ್ಠ ಹೂಡಿಕೆ ಮೊತ್ತ 2,71,000 ಯುರೋ ($2,95,000).
ಯುನೈಟೆಡ್ ಅರಬ್ ಎಮಿರೇಟ್ಸ್
ಅರ್ಜಿದಾರರು ಗಲ್ಫ್ ರಾಷ್ಟ್ರದಲ್ಲಿ ಆಸ್ತಿಯ ಮೇಲೆ ಕನಿಷ್ಠ ಎರಡು ಮಿಲಿಯನ್ AED (ಸುಮಾರು $5,50,000) ಖರ್ಚು ಮಾಡಿದರೆ ಯುಎಇ ವಿದೇಶಿಯರಿಗೆ ವಾಸಿಸಲು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ನೀಡುತ್ತದೆ. ಈ ಕಾರ್ಯಕ್ರಮವು 10 ವರ್ಷಗಳ ಗೋಲ್ಡನ್ ವೀಸಾ, ತೆರಿಗೆ ಪ್ರೋತ್ಸಾಹ, ಸರಳೀಕೃತ ನಿವಾಸ ಕಾರ್ಯವಿಧಾನ ಮತ್ತು ಯಾವುದೇ ವಯಸ್ಸಿನ ಕುಟುಂಬ ಸದಸ್ಯರನ್ನು ಸೇರಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ.
ಸೈಪ್ರಸ್
ಸೈಪ್ರಸ್‌ನಲ್ಲಿನ ನಿವಾಸ-ಹೂಡಿಕೆ ಯೋಜನೆ ಪ್ರಕಾರ, ಹೂಡಿಕೆದಾರರು ಕನಿಷ್ಠ 3,00,000 ಯುರೋಗಳಷ್ಟು (ಸುಮಾರು $320,000) ಮೌಲ್ಯದ ಮನೆಯನ್ನು ಖರೀದಿಸಬೇಕು, ಆ ಮೊತ್ತವನ್ನು ನೋಂದಾಯಿತ ಸೈಪ್ರಿಯೋಟ್ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ಅಥವಾ ಸೈಪ್ರಸ್ ಇನ್ವೆಸ್ಟ್‌ಮೆಂಟ್ ಫಂಡ್ಸ್ ಅಸೋಸಿಯೇಷನ್‌ನಲ್ಲಿ ಹೂಡಿಕೆ ಮಾಡಬೇಕು. ಹೆಚ್ಚುವರಿಯಾಗಿ, ಹೂಡಿಕೆದಾರರು ಸೈಪ್ರಸ್‌ನ ಹೊರಗೆ 50,000 ಯುರೋಗಳಿಗಿಂತ ಹೆಚ್ಚಿನ ಆದಾಯದ ಮೂಲಗಳನ್ನು ಹೊಂದಿದ್ದಾರೆ ಎಂದು ಸಾಬೀತುಪಡಿಸಬೇಕು.
ಪೋರ್ಚುಗಲ್
ದೇಶವು ಕಡಿಮೆ ನಿವಾಸದ ಅಗತ್ಯವನ್ನು ಹೊಂದಿದೆ (ವರ್ಷಕ್ಕೆ ಏಳು ದಿನಗಳು) ಮತ್ತು ಇದು ಕೇವಲ ಐದು ವರ್ಷಗಳಲ್ಲಿ ಪೌರತ್ವವನ್ನು ನೀಡುತ್ತದೆ. ಇಲ್ಲಿ ಇನ್ನು ಮುಂದೆ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಅನುಮತಿಸಲಾಗುವುದಿಲ್ಲ. ಕಡಿಮೆ ಸಾಂದ್ರತೆಯ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಆರ್ಥಿಕ ಪ್ರವೇಶ ಬಿಂದು $2,71,000 ಆಗಿರುವುದರಿಂದ, ಇದು ಷೆಂಗೆನ್ ಪ್ರದೇಶದೊಳಗೆ ವೀಸಾ-ಮುಕ್ತ ಪ್ರಯಾಣವನ್ನು ಸಹ ಅನುಮತಿಸುತ್ತದೆ.
ಸ್ಪೇನ್
ಸ್ಪೇನ್ ಸಾಮಾನ್ಯವಾಗಿ ಗೋಲ್ಡನ್ ವೀಸಾ ನೀಡುವ ಉತ್ತಮ ದೇಶಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಏಕೆಂದರೆ ಅದು ಯಾವುದೇ ವಾಸಸ್ಥಾನ ನಿರ್ಬಂಧಗಳನ್ನು ಹೊಂದಿಲ್ಲ. ಮಿಗಿಲಾಗಿ, ಇದು ಸಂಗಾತಿಗಳು ಮತ್ತು ಆರ್ಥಿಕ ಅವಲಂಬಿತರಿಗೆ ವಾಸಿಸುವ ಹಕ್ಕುಗಳನ್ನು ನೀಡುತ್ತದೆ. ಕೆಲವೊಮ್ಮೆ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇಲ್ಲಿನ ಗೋಲ್ಡನ್ ವೀಸಾ ಪಡೆಯಬಹುದು. ಹೂಡಿಕೆದಾರರು ಕನಿಷ್ಠ 5,00,000 ಯುರೋಗಳಷ್ಟು ರಿಯಲ್ ಎಸ್ಟೇಟ್ ಹೂಡಿಕೆ ಮಾಡಬೇಕು ಅಥವಾ ಪರ್ಯಾಯವಾಗಿ, ಅವರು ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ 1 ಮಿಲಿಯನ್ ಯುರೋಗಳನ್ನು ಹೊಂದಿರಬೇಕು.
ಲಾಟ್ವಿಯಾ
ಲಾಟ್ವಿಯಾ ರೆಸಿಡೆನ್ಸ್ ಬೈ ಇನ್ವೆಸ್ಟ್ಮೆಂಟ್ ಪ್ರೋಗ್ರಾಂ ಕೇವಲ $54,000 ಹೂಡಿಕೆಯೊಂದಿಗೆ ಅಗ್ಗದ ಗೋಲ್ಡನ್ ವೀಸಾ ನೀಡುವ ದೇಶವಾಗಿದೆ. ಇದು ಐದು ವರ್ಷ ವಾಸ ಮಾಡಲು ಪರವಾನಗಿ, ವೀಸಾ-ಮುಕ್ತ ಷೆಂಗೆನ್ ಪ್ರಯಾಣ ಮತ್ತು ನವೀಕರಣಕ್ಕೆ ಕನಿಷ್ಠ ವಾಸ್ತವ್ಯದ ಅಗತ್ಯವಿಲ್ಲದೆ ರಷ್ಯಾಕ್ಕೆ ಪ್ರವೇಶವನ್ನು ನೀಡುತ್ತದೆ.
ಈ ಸುದ್ದಿಯನ್ನು ಓದಿ; Viral Video: ಕಾಲ್ ಸೆಂಟರ್ ಮೇಲೆ ರೇಡ್... ಬೆನ್ನಲ್ಲೇ ಜನರಿಂದ ಲೂಟಿ; ಏನಿದು ಘಟನೆ? ವಿಡಿಯೊ ಫುಲ್ ವೈರಲ್
ಡೊಮಿನಿಕಾ
ಡೊಮಿನಿಕಾ ಗೋಲ್ಡನ್ ವೀಸಾ ಕಾರ್ಯಕ್ರಮದಡಿ, ಹೂಡಿಕೆದಾರರು ದೇಶದ ಆರ್ಥಿಕತೆಗೆ ಕನಿಷ್ಠ $2,00,000 ಕೊಡುಗೆ ನೀಡಬೇಕಾಗುತ್ತದೆ. ಪ್ರತಿಯಾಗಿ, ವೀಸಾ ಹೊಂದಿರುವವರು ಮತ್ತು ಅವರ ಕುಟುಂಬಗಳಿಗೆ ಪೂರ್ಣ ಪೌರತ್ವವನ್ನು ನೀಡಲಾಗುತ್ತದೆ.
ಗ್ರೆನಡಾ
ಇಲ್ಲಿನ ಗೋಲ್ಡನ್ ವೀಸಾ ಪಡೆಯಲು ಗ್ರೆನಡಾ ದೇಶದ ಆರ್ಥಿಕತೆಗೆ ಕನಿಷ್ಠ $2,35,000 ಕೊಡುಗೆ ನೀಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಗ್ರೆನಡಾ ವೀಸಾ ಹೊಂದಿರುವವರಿಗೆ ಗ್ರೆನಡಾ, ಚೀನಾ, ಸಿಂಗಾಪುರ್, ರಷ್ಯಾ, ಬ್ರಿಟನ್ ಮತ್ತು ಯುರೋಪ್‌ನ ಷೆಂಗೆನ್ ಪ್ರದೇಶದಂತಹ ದೇಶಗಳಿಗೆ ಭೇಟಿ ನೀಡಲು ಅನುಮತಿ ನೀಡುತ್ತದೆ.
ಥಾಯ್ಲೆಂಡ್
ಥಾಯ್ಲೆಂಡ್ ಶ್ರೇಣೀಕೃತ ಸದಸ್ಯತ್ವ ವ್ಯವಸ್ಥೆ ಮತ್ತು $20,000 ಮೌಲ್ಯದ ಕಡಿಮೆ ಪ್ರವೇಶ ಶುಲ್ಕದೊಂದಿಗೆ 20 ವರ್ಷಗಳ ವೀಸಾ ಯೋಜನೆಯನ್ನು ಹೊಂದಿದೆ. ಕನಿಷ್ಠ ವಾಸ್ತವ್ಯದ ನಿರ್ಬಂಧವಿಲ್ಲ, ಆದ್ದರಿಂದ ಅಭ್ಯರ್ಥಿಗಳು ಕುಟುಂಬ ಸದಸ್ಯರನ್ನು ಕರೆತರಬಹುದು ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಹೋಲಿಸಿದರೆ ಇಲ್ಲಿನ ದೈನಂದಿನ ಖರ್ಚು ವೆಚ್ಚ ಕಡಿಮೆಯಾಗಿದೆ.
ಸ್ವಿಟ್ಜರ್ಲೆಂಡ್
ಹೂಡಿಕೆದಾರರು ನೇರ ಹೂಡಿಕೆಯ ಬದಲು ವಾರ್ಷಿಕವಾಗಿ $3,00,000ದಿಂದ $1.2 ಮಿಲಿಯನ್ ತೆರಿಗೆಗಳನ್ನು ಪಾವತಿಸಿದರೆ, ಸ್ವಿಸ್ ನಿವಾಸ ಕಾರ್ಯಕ್ರಮವು ಅನಿಯಮಿತ ನವೀಕರಣದ ಅವಕಾಶಗಳೊಂದಿಗೆ ಆರು ತಿಂಗಳ ಆರಂಭಿಕ ವಾಸ ಪರವಾನಗಿಯನ್ನು ನೀಡುತ್ತದೆ. ವೀಸಾ ಹೊಂದಿರುವವರು ಸ್ವಿಟ್ಜರ್ಲೆಂಡ್‌ನ ದೋಷರಹಿತ ಹಣಕಾಸು ವ್ಯವಸ್ಥೆ, ಮೂಲಸೌಕರ್ಯ ಮತ್ತು ವೀಸಾ-ಮುಕ್ತ ಷೆಂಗೆನ್ ಪ್ರಯಾಣಕ್ಕೆ ಪ್ರವೇಶವನ್ನು ಹೊಂದಿರುತ್ತಾರೆ.