ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾಲ್‌ ಸೆಂಟರ್‌ ಮೇಲೆ ರೇಡ್... ಬೆನ್ನಲ್ಲೇ ಜನರಿಂದ ಲೂಟಿ; ಏನಿದು ಘಟನೆ? ವಿಡಿಯೊ ಫುಲ್‌ ವೈರಲ್‌

ಪಾಕಿಸ್ತಾನದ ನಕಲಿ ಕಾಲ್ ಸೆಂಟರ್ ಮೇಲೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ಮತ್ತು ಗುಪ್ತಚರ ಸಂಸ್ಥೆಗಳು ದಾಳಿ ನಡೆಸಿದ ನಂತರ ಸ್ಥಳೀಯರು ಸೆಂಟರ್‌ಗೆ ನುಗ್ಗಿ ಲ್ಯಾಪ್‌ಟಾಪ್‌ ಮತ್ತು ಇತರ ತಾಂತ್ರಿಕ ಉಪಕರಣಗಳನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ.

ಕಾಲ್‌ ಸೆಂಟರ್‌ ಮೇಲೆ ರೇಡ್... ಬೆನ್ನಲ್ಲೇ ಜನರಿಂದ ಲೂಟಿ- ವಿಡಿಯೊ ಇದೆ

Profile pavithra Mar 18, 2025 8:54 AM

ಇಸ್ಲಮಾಬಾದ್: ಪಾಕಿಸ್ತಾನದ ನಕಲಿ ಕಾಲ್ ಸೆಂಟರ್ ಮೇಲೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ಮತ್ತು ಗುಪ್ತಚರ ಸಂಸ್ಥೆಗಳು ದಾಳಿ ಮಾಡಿದ್ದು, ದಾಳಿಯ ನಂತರ ಇಸ್ಲಾಮಾಬಾದ್‍ನ ಸೆಕ್ಟರ್ ಎಫ್ -11 ರಲ್ಲಿನ ಈ 'ಹಗರಣ ಕೇಂದ್ರ'ವನ್ನು ಸ್ಥಳೀಯರು ಲೂಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿವೆ. ಯುವಕರ ಗುಂಪುವೊಂದು ಕಾಲ್‍ ಸೆಂಟರ್‌ನ ಆವರಣಕ್ಕೆ ನುಗ್ಗಿ ಲ್ಯಾಪ್‍ಟಾಪ್ ಹಾಗೂ ಇನ್ನಿತರ ತಾಂತ್ರಿಕ ಸಲಕರಣೆಗಳನ್ನು ತೆಗೆದುಕೊಂಡು ಓಡಿ ಹೋಗುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಇದು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವರದಿ ಪ್ರಕಾರ, ಎಫ್ಐಎಯ ಸೈಬರ್ ಕ್ರೈಮ್ ಸೆಲ್ ಮಾ.15ರ ಶನಿವಾರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಅಂತರರಾಷ್ಟ್ರೀಯ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಶಂಕಿಸಲಾದ ಕಾಲ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡು ಅದರ ಮೇಲೆ ದಾಳಿ ನಡೆಸಿ ವಿದೇಶಿ ಪ್ರಜೆಗಳನ್ನು ಸೇರಿದಂತೆ 24 ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಆದರೆ ದಾಳಿಯ ಸಮಯದಲ್ಲಿ ಕೆಲವು ಶಂಕಿತರು ಅವರಿಂದ ತಪ್ಪಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸ್ಥಳೀಯರು ಲ್ಯಾಪ್‌ಟಾಪ್‌ ಹಾಗೂ ಇನ್ನಿತರ ವಸ್ತುಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಇಲ್ಲಿದೆ ನೋಡಿ...



ಈ ಕಾಲ್ ಸೆಂಟರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಅರಿವಿದ್ದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿದ್ದರು ಎಂದು ಎಫ್ಐಎ ಮೂಲಗಳು ಬಹಿರಂಗಪಡಿಸಿವೆ. ತನಿಖೆಯ ವೇಳೆ ಮೋಸದ ಯೋಜನೆಗಳ ಮೂಲಕ ವಿವಿಧ ದೇಶಗಳಲ್ಲಿನ ಸಂತ್ರಸ್ತರನ್ನು ವಂಚಿಸಲು ಕಾಲ್ ಸೆಂಟರ್‌ ಪಾಕಿಸ್ತಾನಿ ಕಾರ್ಮಿಕರನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ.

ಶಂಕಿತರನ್ನು ಬಂಧಿಸುವಲ್ಲಿ ಏಜೆನ್ಸಿಯು ಯಶಸ್ಸಿಯಾದರೂ ಕೂಡ ಕಳಪೆ ನಿರ್ವಹಣೆ ಹಾಗೂ ಭದ್ರತೆಯ ಕೊರತೆಯಿಂದ ಸ್ಥಳೀಯರಿಗೆ ಆವರಣಕ್ಕೆ ನುಗ್ಗಲು ಮತ್ತು ಪುರಾವೆಯಾಗಿ ವಶಪಡಿಸಿಕೊಳ್ಳಬೇಕಾದ ಅಮೂಲ್ಯ ಉಪಕರಣಗಳನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿದೆ. ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೊಗಳಲ್ಲಿ ಸ್ಥಳೀಯರು ಲ್ಯಾಪ್‌ಟಾಪ್‌ ಹಾಗೂ ಇನ್ನಿತರ ವಸ್ತುಗಳನ್ನು ಕೊಂಡೊಯ್ಯುವುದು, ಕೆಲವು ವಿದೇಶಿಯರು ಘಟನಾ ಸ್ಥಳದಿಂದ ಪಲಾಯನ ಮಾಡುತ್ತಿರುವುದು ಸೆರೆಯಾಗಿದೆ. ಎಫ್ಐಎ ಅಸಮರ್ಪಕ ಕಾರ್ಯನಿರ್ವಹಣೆ ಹಾಗೂ ಭದ್ರತೆಯ ಅವ್ಯವಸ್ಥೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ED ಅಧಿಕಾರಿಗಳ ವೇಷ ಧರಿಸಿ ಚಿನ್ನದಂಗಡಿ ಮಾಲೀಕನ ಮನೆ ಲೂಟಿ ಮಾಡಿದ ಖತರ್ನಾಕ್‌ ಕಳ್ಳರು! ಕೊನೆಗೆ ಆಗಿದ್ದೇನು?

ಬಂಧಿತ ವ್ಯಕ್ತಿಗಳನ್ನು ಹೆಚ್ಚಿನ ತನಿಖೆಗಾಗಿ ಎಫ್ಐಎ ಕಚೇರಿಗೆ ವರ್ಗಾಯಿಸಲಾಗಿದೆ. ಆದರೆ ಎಫ್ಐಎ ಅಧಿಕಾರಿಗಳು ಅಕ್ರಮ ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗಿರುವುದನ್ನು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದರೂ, ಏಜೆನ್ಸಿ ಇನ್ನೂ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.