ಬ್ಯಾಗ್ ಹುಡುಕಲು ಬ್ಲೂಟೂತ್ !
ಬ್ಯಾಗ್ ಹುಡುಕಲು ಬ್ಲೂಟೂತ್ !
Vishwavani News
August 16, 2022
ಲಂಡನ್‌ನ ವಿಮಾನ ನಿಲ್ದಾಣಗಳಲ್ಲಿ ಈಗ ಲಗೇಜ್‌ಗಳ ರಾಶಿ!
ಲಾಕ್‌ಡೌನ್ ಮುಗಿದ ನಂತರ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಯಣಿಸಲು ಆರಂಭಿ ಸಿದ್ದರಿಂದ, ಲಗೇಜ್‌ಗಳು ರಾಶಿ ಬೀಳುತ್ತಿವೆ. ಜತೆಗೆ, ಮೊದಲಿಗಿಂತಲೂ ಹೆಚ್ಚಿನ ಸಂಖ್ಯೆ ಯಲ್ಲಿ ಲಗೇಜ್‌ಗಳು ಕಳೆದುಹೋಗುತ್ತಿವೆ! ಬ್ರಿಟನ್‌ಗೆ ಸಂಚರಿಸುವವರ ಸಂಖ್ಯೆ ಜಾಸ್ತಿ ಯಾಗಿದ್ದು, ಅವರೆಲ್ಲರಿಗೆ ಸೇವೆ ನೀಡಲು ಸಾಕಷ್ಟು ಸಿಬ್ಬಂದಿಯೇ ಇಲ್ಲ.
ಕೋವಿಡ್ ಸಮಯದಲ್ಲಿ ಊರಿಗೆ ಹೋದ ಸಿಬ್ಬಂದಿ ಎಲ್ಲರೂ ಮರಳಿ ಬಂದಿಲ್ಲದೇ ಇರುವುದರಿಂದ, ಲಂಡನ್ ಮೊದಲಾದ ವಿಮಾನ ನಿಲ್ದಾಣಗಳಲ್ಲಿ ಗೊಂದಲ ಏರ್ಪ ಟ್ಟಿದೆ. ಯುರೋಪಿನ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಕಳೆದುಕೊಳ್ಳುವವರ ಸಂಖ್ಯೆ
ಬಹಳಷ್ಟು ಹೆಚ್ಚಳಗೊಂಡಿದೆ. ೨೦೧೯ಕ್ಕೆ ಹೋಲಿಸಿದರೆ, ಶೇ.೩೦ರಷ್ಟು ಹೆಚ್ಚಿನ ಲಗೇಜ್‌ಗಳು ಕಳೆದುಹೋಗುತ್ತಿವೆ!
ಜಗತ್ತಿನಾದ್ಯಂತ ವಿಮಾನ ಪ್ರಯಾಣಿಕರ ಅಂಕಿ ಅಂಶಗಳ ಪ್ರಕಾರ, ೧,೦೦೦ ಲಗೇಜ್ ನಲ್ಲಿ, ೫.೬ ಲಗೇಜ್ ಕಳೆದು ಹೋಗುತ್ತಿದೆ ಅಥವಾ ಹಾನಿಗೊಳ್ಳುತ್ತಿದೆ. ಇದಕ್ಕೆ ಪರಿಹಾರ ವಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರು ಬ್ಲೂಟೂತ್ ಬಳಸಿ, ತಮ್ಮ ಲಗೇಜ್ ಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಲಗೇಜ್ ಟ್ರ್ಯಾಕಿಂಗ್ ಆಪ್ ಮೂಲಕ, ಈ ಬ್ಲೂಟೂತ್ ಸಿಗ್ನಲ್ ಯಾವ ಬ್ಯಾಗ್ ಎಲ್ಲಿದೆ ಎಂದು ಪತ್ತೆ ಹಚ್ಚಬಲ್ಲದು.
ಅಕಸ್ಮಾತ್ ಯಾವುದಾದರೂ ವಿಮಾನ ನಿಲ್ದಾಣದಲ್ಲಿ ಲಗೇಜ್ ಕಳೆದುಹೋದರೆ, ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದ್ದರಿಂದ, ಈಗ ಬ್ಯಾಗ್ ಹುಡುಕಲು ಸಹ ಆಧುನಿಕ ತಂತ್ರಜ್ಞಾನ ಸಹಾಯ ಮಾಡುತ್ತಿದೆ ಎಂದಾಯಿತು.