Happy Birthday ಇಸ್ರೊ !

Happy Birthday ಇಸ್ರೊ !

image-68a52809-23ad-4429-a62f-09f4f8869684.jpg
Profile Vishwavani News August 16, 2022
image-21cc6bce-50b5-4950-b71e-dd072ff4f0ab.jpg
ಇಸ್ರೊ ಸ್ಥಾಪನೆಯಾಗಿ ನಿನ್ನೆಗೆ ೫೩ ವರ್ಷ! ಡಿಯರ್ ಇಸ್ರೋ, ಹೇಗಿದಿಯಾ? ನೀನೊಂದು ಮುಗಿಯದ ಪಯಣ. ಆಗಾಗ ನಿನ್ನ ಪಯಣಗಳು ನಮ್ಮ ಕಣ್ಣಿಗೂ ಹುರುಪನ್ನು ತುಂಬುತ್ತವೆ. ನೀ ತಯಾರಿಸಿದ ರಾಕೆಟ್ ಭೂಮಿಗೆ ಲಂಬಾಕಾರದಲ್ಲಿ ಗಟ್ಟಿಯಾಗಿ ನಿಂತು, ಬೆಂಕಿಯನ್ನು ಗುಳುತ್ತಾ ಆಗಸಕ್ಕೆ ನೆಗೆದು, ಉಪಗ್ರಹವನ್ನು ನೆತ್ತಿಯ ಮೇಲೆ ಹೊತ್ತೊಯ್ದು ಕಕ್ಷೆಗೆ ಸೇರಿಸುವ ಆ ಪರಿ ಅದ್ಭುತ. ಅದೆಷ್ಟೋ ಸಲ ಮುಗ್ಗರಿಸಿ ಬಿದ್ದರೂ ಮತ್ತೇ ಮೇಲೇಳುವ ನಿನ್ನ ಆತ್ಮವಿಶ್ವಾಸಕ್ಕೆ ನೀನೇ ಸಾಟಿ. 1962ರಲ್ಲಿ ಇಂಕೋ ಸ್ಪಾರ್(ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ) ಎಂಬ ಹೆಸರಿನಿಂದ ಡಾ.ವಿಕ್ರಮ್ ಸಾರಾ ಭಾಯ್ ಅವರ ಕನಸಿನ ಕೂಸಾಗಿ ಜನಿಸಿದ ನಿನ್ನ ಹೆಸರು ಜಗತ್ತಿನಾದ್ಯಂತ ರಾರಾಜಿಸಲಿ ಎನ್ನುವ ಕಾರಣಕ್ಕಾಗಿ 1969ರಲ್ಲಿ ನಿನಗೆ ಇಸ್ರೋ (ಭಾರತದ ಬಾಹ್ಯಾಕಾಶ ಸಂಶೋಧನಾ ಸಮಿತಿ) ಎಂದು ಮರು ನಾಮಕರಣ ಮಾಡಿದರು. 1971 ರಲ್ಲಿ ಆರ್ಯಭಟ ಎಂಬ ಭಾರತದ ಮೊದಲ ಕೃತಕ ಉಪಗ್ರಹವನ್ನು ತಯಾರಿಸಿ ಅದನ್ನು ಉಡಾಯಿಸಲು ಬಹು ಉತ್ಸುಕತೆಯಿಂದ ನೀನಿದ್ದೆ. ಆದರೆ ದುರದೃಷ್ಟವಶಾತ್ ನೀನು ನಿನ್ನ ಜನಕ ಡಾ. ವಿಕ್ರಮ್ ಸಾರಾಭಾಯ್ ಅವರನ್ನು ಕಳೆದು ಕೊಂಡಿದ್ದೆ! ಅದು ನಿನಗೆ ಬಿದ್ದ ಮೊದಲ ಬಹುದೊಡ್ಡ ಹೊಡೆತ! ನಂತರ 1975ರಲ್ಲಿ ಆರ್ಯಭಟವನ್ನು ಕಕ್ಷೆಗೆ ಸೇರಿಸಲಾಯಿತು. ನಂತರ ಯಶಸ್ವಿ ಸಾರಥಿಯಾಗಿ ನಿನ್ನ ಜೊತೆಗೆ ಬಹು ಕಾಲದವರೆಗೆ ನಿಂತವರು ಪ್ರೊ. ಸತೀಶ್ ಧವನ್. ಅವರ ಅವಧಿಯಲ್ಲಿ ನೀನು ಅದೇಷ್ಟೋ ಬದಲಾವಣೆಗಳನ್ನು ಕಂಡೆ. ಮೊದಲ ಉಡಾವಣಾ ವಾಹಕ ಎಸ್‌ಎಎಲ್ವಿ ತಯಾರಿಸಿ ಉಡಾಯಿಸಲಾಯಿತಾ ದರೂ, ಅದು ವಿಫಲಗೊಂಡಿತು. ಮತ್ತೆ ಮರುವರ್ಷ ಅದೇ ಪ್ರಯತ್ನ ಮಾಡಿ, ಅದರಿಂದಲೇ ರೋಹಿಣಿ ಎಂಬ ಉಪಗ್ರಹವನ್ನೂ ಯಶಸ್ವಿಯಾಗಿ ಉಡಾಯಿಸಿ ಬಿಟ್ಟೆ. 1993ರಲ್ಲಿ ಪಿಎಸ್‌ಎಲ್ವಿ ಸೋತರೂ ಮತ್ತೆ 1994ರಲ್ಲಿ ಗೆದ್ದೆ. 2008ರಲ್ಲಿ ಮೊದಲ ಪ್ರಯತ್ನದ ಚಂದ್ರನ ಕಕ್ಷೆಗೆ ಕಾಲಿಟ್ಟು, ಚಂದ್ರನ ಮೇಲ್ಮೈ ಹಿಮದ ರೂಪದಲ್ಲಿ ನೀರಿದೆ ಎಂದು ನೀ ಸಾರಿದಾಗ ಉಳಿದೆಲ್ಲ ದೇಶಗಳು ದಿಗ್ಭ್ರಮೆಗೆ ಒಳಗಾಗಿದ್ದು ಸುಳ್ಳಲ್ಲ. ಆಮೇಲೆ 2013-14ರಲ್ಲಿ ಒಂದೇ ಸಲಕ್ಕೆ ಮಂಗಳನ ಕಕ್ಷೆಯಲ್ಲೂ ನಿನ್ನ ಕರಾಮತ್ತು ತೋರಿಸಿ ಎಲ್ಲರೂ ತಮ್ಮ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದೆ. ಇದೆಲ್ಲವೂದಕ್ಕೂ ಕಿರೀಟಪ್ರಾಯವಾದಂತಹ ನಿನ್ನ ಸಾಧನೆಯೆಂದರೆ, ಯಾರೂ ಊಹಿಸದ ರೀತಿಯಲ್ಲಿ ಪಿಎಸ್‌ಎಲ್ವಿ ಉಡಾ ವಣಾ ವಾಹನದ ಮೂಲಕ, ಇಡೀ ಜಗತ್ತಿನಲ್ಲಿಯೇ ಮೊದಲ ಬಾರಿಗೆ, ಒಂದೇ ಸಲಕ್ಕೆ 104 ಉಪಗ್ರಹಗಳನ್ನು ನಭಕ್ಕೆ ಹಾರಿಸಿ, ನಿನ್ನ ಕೀರ್ತಿಪತಾಕೆಯನ್ನು ಇನ್ನು ಉತ್ತುಂಗಕ್ಕೇರಿಸಿಕೊಂಡೆ! ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಮಹಾನ್ ಸಾಹಸಕ್ಕೆ ಚಂದ್ರಯಾನ-2 ಮೂಲಕ ಕೈ ಹಾಕಿ ಕೂದಲೆಳೆ ಅಂತರ ದಲ್ಲಿಯೇ ಆ ಸಾಹಸದಿಂದ ವಂಚಿತನಾದಾಗಲಂತೂ ಎಲ್ಲರಿಗೆ ನಿರಾಸೆಯಾಯಿತು. ಅದಾಗಲೇ ನೀನು ನಮ್ಮ ಭಾರತದ ಗಗನ ಯಾನಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವ ಗಗನಯಾನ, ಶುಕ್ರಯಾನ, ಮಂಗಳ ಯಾನ-2 ಗಳಿಗಾಗಿ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟುವ ಯೋಜನೆಯಲ್ಲಿ ತೊಡಗಿರುವೆ. ಮೊನ್ನೆ ಒಂದು ವಾರದ ಹಿಂದೆ ನಿನ್ನ ಪುಟ್ಟ ಅಥವಾ ಬೇಬಿ ರಾಕೆಟ ಎಂದೇ ಕರೆಯಲ್ಪಡುವ ಎಸ್‌ಎಸ್‌ಎಲ್‌ವಿ ಮೊದಲ ಬಾರಿಗೆ ಉಡಾವಣೆಯಾಗಿ ಕೊನೆ ಹಂತದಲ್ಲಿ ವಿ-ಲಗೊಂಡಾಗ ನಿನಗೆ ಅದೇಷ್ಟೋ ನೋವಾಯಿತೋ ಏನೋ! ಆದರೂ ನೀ ಸೋಲಿಗೆ ಹೆದರದೇ ಮತ್ತೆ ನಿನ್ನ ಕೆಲಸದಲ್ಲಿ ನಿರತನಾಗಿ ಸದಾ ಹೊಸದರತ್ತ ತುಡಿಯುವೆ. ನಿನಗೆ ಜನ್ಮದಿದನ ಶುಭಾಶಯಗಳು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ