ರೇಸ್ ವಾಹನ, ನೋಟ ನವೀನ
ರೇಸ್ ವಾಹನ, ನೋಟ ನವೀನ
Vishwavani News
August 2, 2022
ಬೈಕೋಬೇಡಿ
ಅಶೋಕ್ ನಾಯಕ್
ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ 5ಜಿ ಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದರೆ, ವಾಹನ ಕ್ಷೇತ್ರವು ಒಂದು ಹೆಜ್ಜೆ ಮುಂದೆ ಹೋಗಿದೆ
ಎನ್ನಬಹುದು. ಕಾರಣ, 6ಜಿ ಅಂದರೆ, 6ನೇ ಜನರೇಷನ್ ವಾಹನಗಳು!
ಕೆಲವು ಮೂಲಗಳ ಪ್ರಕಾರ, 6ಜಿ ವಾಹನಕ್ಕೆ ಈಗ ಅಧಿಕ ಬೇಡಿಕೆ. ದೀರ್ಘ ಕಾಲ ಬಾಳಿಕೆ ಬರುವ ವಾಹನದ ಬಿಡಿ ಭಾಗಗಳು, ಖರೀದಿಗೆ ಇನ್ನಷ್ಟು ಬಲ ನೀಡಿದೆ. ಬೇರೊಂದು ಸೆಗ್ಮೆಂಟ್‌ನ್ನು ಗಮನಿಸಿದರೆ, ರೇಸ್‌ಗೆ ಬಳಸುವ ದುಬಾರಿ ವಾಹನ ಗಳಿಗೂ ಇನ್ನೊಂದೇ ರೀತಿಯ ಬೇಡಿಕೆ ಇದೆ. ಆದ್ದರಿಂದಲೇ ‘ಬಿಎಂಡಬ್ಲ್ಯು’ನ ೧೮ ಲಕ್ಷ ರುಪಾಯಿಗಳ ಬೈಕ್ ಜನಪ್ರಿಯ!
ಹೋಂಡಾ ಎಕ್ಟಿವಾ 6ಜಿ
ಪ್ರತೀ ಲೀಟರ್ ಪೆಟ್ರೋಲಿಗೆ 49 ಕಿ.ಮೀ. ಓಡುವ ಈ ಬೈಕ್ ತನ್ನೊಳಗೆ 5.3 ಲೀಟರ್ ಪೆಟ್ರೋಲ್ ಸಂಗ್ರಹಿಸಿಟ್ಟುಕೊಳ್ಳುವುದು. ಇದರ ಎಂಜಿನ್ ಸಾಮರ್ಥ್ಯ 1.9.51 ಸಿಸಿ ಆಗಿದೆ. ಸುಮಾರು 73 ಸಾವಿರ ರೂಪಾಯಿಯಲ್ಲಿ ಈ ಬೈಕ್ ಖರೀದಿಗೆ ಲಭ್ಯವಿದ್ದು, ಎರಡು ವೇರಿಯಂಟ್ ಹಾಗೂ 8 ಬಣ್ಣಗಳಲ್ಲಿ ಲಭ್ಯವಿದೆ. 6ಜಿ ಗುರುತಿಸಲಾಗಿರುವ ಇದರಲ್ಲಿ, ಎರಡೂ ಬದಿಯ ವೀಲ್‌ನಲ್ಲಿ ಕಂಬೈಂಡ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ. ಕಳೆದೊಂದು ವರ್ಷಗಳಲ್ಲಿ ಈ ವಾಹನದ ಮಾರಾಟ ದುಪ್ಪಟ್ಟಾಗಿದೆ.
ಹಲವು ಕಾರಣಗಳಿಗಾಗಿ 6ಜಿ ಸೌಲಭ್ಯದ ವಾಹನವನ್ನು ಖರೀದಿಸಬಹುದು. ಉತ್ತಮ ಎಂಜಿನ್, ಹಲವು ವರ್ಷಗಳ ಕಾಲ ಬಾಳಿಕೆ ಬರುವ ಇದರ ಬಿಡಿಭಾಗಗಳು ವಾಹನಕ್ಕೆ ತನ್ನದೇ ಆದ ಐಡೆಂಟಿಟಿಯನ್ನು ನೀಡಿವೆ. ಇದಕ್ಕೆ ಸರ್ವಿಸ್ ಅಗತ್ಯ ಬಿದ್ದಾಗ ಹೆಚ್ಚು ಖರ್ಚಿಲ್ಲ. ನೀಲಿ, ಕೆಂಪು, ಹಳದಿ, ಕಪ್ಪು, ಬಿಳಿ ಹಾಗೂ ಕಪ್ಪು ಮಿಶ್ರಿತ ಬಿಳಿ ಬಣ್ಣಗಳಲ್ಲಿ ವಾಹನ ಮಾರಾಟಕ್ಕೆ ಲಭ್ಯವಿದೆ.
ಉತ್ತಮ ಮೈಲೇಜ್ ನೀಡುವ ಈ ವಾಹನ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಸರಾಸರಿ 45 ರಿಂದ 50 ಕಿ.ಮೀ. ಕ್ರಮಿಸುವುದು. ಈ ವಾಹನವು ಟಿವಿಎಸ್ ಜುಪಿಟರ್, ಸುಜುಕಿ ಎಕ್ಸೆಸ್, ಯಾಮಾಹಾ ರೇ ಜೆಡ್‌ಆರ್ ಮತ್ತು ಹೀರೋ ಮೇಸ್ಟ್ರೋ ಎಡ್ಜ್ ಮಾಡೆಲ್‌ಗಳಿಗೆ ನಿಕಟ ಸ್ಪರ್ಧೆ ನೀಡಬಲ್ಲವು.
ಬಿಎಂಡಬ್ಲ್ಯು ನೈನ್‌ಟಿ
ಸುಮಾರು 221 ಕೆಜಿ ಭಾರ, 18 ಲೀಟರ್ ಪೆಟ್ರೋಲ್ ಸಂಗ್ರಹಣೆ ಅವಕಾಶ ಇರುವ ಬಿಎಂ ಡಬ್ಲ್ಯು ನೈನ್‌ಟಿ ಬೈಕಿನ ಎಂಜಿನ್ ಕೆಪಾಸಿಟಿ 1170 ಸಿಸಿ ಆಗಿದೆ. ಇದೊಂದು ‘ಕೆಫೆ ರೇಸರ್ ಬೈಕ್’ ಆಗಿದ್ದು, ಬೆಲೆ 18 ಲಕ್ಷ ರುಪಾಯಿಗಳಿಂದ ಆರಂಭ. ಒಂದು ವೇರಿ ಯಂಟ್ ಹಾಗೂ 4 ಬಣ್ಣಗಳಲ್ಲಿ ಈ ವಾಹನ ಲಭ್ಯ. ಈ ವಾಹನಕ್ಕೂ ಎಂಟಿ ಲಾಕಿಂಗ್ ಸಿಸ್ಟಮ್ ನೀಡಲಾಗಿದೆ.
ಮಾರುಕಟ್ಟೆಯಲ್ಲಿ ಕೂಡ 2021 ಆರ್ ನೈನ್‌ಟಿ ಹಾಗೂ ಆರ್ ನೈನ್ಟಿ ಸ್ಕ್ರ್ಯಾಂಬ್ಲರ್ ವಾಹನವನ್ನು ಪರಿಚಯಿಸಿದೆ. ದುಂಡಾದ ಹೆಡ್‌ಲೈಟ್, ಬೀಫಿ ಆಕಾರದ ಪೆಟ್ರೋಲ್ ಸಂಗ್ರಹ ಸ್ಥಳ ಇವು ವಿಶೇಷ ಫೀಚರ್ಸ್‌ಗಳು. 3.5 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ವನ್ನು ಪಡೆಯಬಲ್ಲ ಈ ರೇಸ್ ಬೈಕ್, ಐಡಿಯಲ್ ಕಂಡಿಷನ್‌ಗಳಲ್ಲಿ 200 ಕಿ.ಮೀ. ವೇಗ ದಲ್ಲಿ ಚಲಿಸುವ ಸಾಮರ್ಥ್ಯ ಪಡೆದಿದೆ.
ಆರ್ ನೈನ್ಟಿ ಸ್ಕ್ರ್ಯಾಂಬ್ಲರ್ ಬರುವುದು ನಾಲ್ಕು ಬಣ್ಣಗಳಲ್ಲಿ. ಅವು ಕಲಮಟ್ಟಾ ಮೆಟಾಲಿಕ್ ಮ್ಯಾಟ್ ಬ್ರೌನ್ ಪೈಂಟ್ ಜತೆಗೆ ಟ್ಯಾಂಕ್ ಮೇಲೆ 23 ಅಕ್ಷರಗಳು, ಕಾಸ್ಮಿಕ್ ಬ್ಲೂ/ಬಿಳಿ ಬಣ್ಣ, ಕೆಂಪು ಮತ್ತು ಕಪ್ಪು ಮತ್ತು ಗ್ರಾನೈಟ್ ಗ್ರೇ. ಸಂಪೂರ್ಣ ಎಲ್ಇಡಿ ಲೈಟ್, ಹೊಂದಾಣಿಕೆಯ ಕ್ಲಚ್/ಬ್ರೇಕ್, ಯುಎಸ್ಬಿ ಚಾರ್ಜಿಂಗ್ ಇಂಟರ್ ಫೇಸ್, ಹೊಸತಾದ ಸೆಮಿ ಡಿಜಿಟಲ್ ಕ್ಲಸ್ಟರ್.