ಹೊಸ ತಲೆಮಾರಿನ ವಾಹನಗಳು
ಹೊಸ ತಲೆಮಾರಿನ ವಾಹನಗಳು
Vishwavani News
August 16, 2022
ಬೈಕೋಬೇಡಿ
ಅಶೋಕ್ ನಾಯಕ್
ಯಾವುದೇ ವಾಹನ ತಯಾರಿಕಾ ಕಂಪೆನಿಯಾದರೂ, ಜನರೇಶನ್ ಬದಲಾದಂತೆ, ತನ್ನನ್ನು ತಾನು ಅಪ್ಡೇಟ್ ಮಾಡಿಕೊಳ್ಳ ಬೇಕಾದದ್ದು ತುಂಬಾ ಅಗತ್ಯ. ಅದು ಬ್ರ್ಯಾಂಡ್ ಆಗಿರಲಿ, ವೆರೈಟಿ ಆಗಿರಲಿ, ಹೊಸ ವಾಹನವೇ ಆಗಿರಲಿ, ಅಪ್ಡೇಟ್ ಆಗಿರದ ವಾಹಕ್ಕೆ ಬೇಡಿಕೆ ಕಡಿಮೆ ಎಂದು ಹೆಚ್ಚಿನವರ ಅಂಬೋಣ. ಆದರೆ, ಅಪ್ಡೇಟ್ ಆಗದಿ ದ್ದರೂ, ಖರೀದಿದಾರರ ಟೇಸ್ಟ್ ಬಗ್ಗೆ ಅರಿವು ಇರಲೇಬೇಕು.
ಟಿವಿಎಸ್ ರೈಡರ್ 125
ಎಂಜಿನ್ ಕೆಪಾಸಿಟಿ ೧೨೪.೮ ಸಿಸಿ ಯೊಂದಿಗೆ ಟಿವಿಎಸ್ ರೈಡರ್ ೧೨೫ ಬೈಕ್ ಪ್ರತೀ ಲೀಟರ್ ಪೆಟ್ರೋಲಿಗೆ ೫೭ ಕಿ.ಮೀ. ದೂರ ಕ್ರಮಿಸುವುದು. ಇದರಲ್ಲಿ ಸುಮಾರು ೧೦ ಲೀಟರ್ ಪೆಟ್ರೋಲ್ ತುಂಬಿಸಬಹುದು.
೯೦ ಸಾವಿರ ರೂಪಾಯಿ ಆಸುಪಾಸು ದರದಲ್ಲಿ ಈ ಬೈಕ್ ಖರೀದಿಗೆ ಲಭ್ಯವಿದೆ. ಎರಡು ವೇರಿಯಂಟ್ ಹಾಗೂ ೪ ಬಣ್ಣಗಳಲ್ಲಿ ವಾಹನವನ್ನು ಖರೀದಿಸಬಹುದು. ಇದರಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಎರಡೂ ಕಡೆಯ ವೀಲ್‌ಗಳಿಗೆ ನೀಡಲಾಗಿದೆ. ಹೊಸ ಪ್ರೀಮಿಯಮ್ ಮೋಟಾರು ಸೈಕಲನ್ನು ಪರಿಚಯಿಸಿದ್ದು, ತನ್ನನ್ನು ತಾನು ಅಪ್ಡೇಟೆಡ್ ಮಾಡಿಕೊಂಡಿದೆ. ಈ ವಾಹನಕ್ಕೆ ಬಜಾಜ್ ಪಲಾರ್ ಎನ್‌ಎಸ್ ೧೨೫ ಮತ್ತು ಹೋಂಡಾ ಎಸ್ಪಿ ೧೨೫ ನಿಕಟ ಸ್ಪರ್ಧೆ ನೀಡಬಲ್ಲವು.
ಡ್ರಮ್, ಡಿಸ್ಕ್ ಹಾಗೂ ಕನೆಕ್ಟೆಡ್ ಮುಂತಾದ ರೀತಿಯಲ್ಲಿ ಟಿವಿಎಸ್ ಕಂಪೆನಿ ವೇರಿಯಂಟ್ ವಿಚಾರದಲ್ಲಿ ಆ-ರ್ ನೀಡಬಲ್ಲವು. ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಥ್ರಿ-ವಾಲ್ವ್ ಎಂಜಿನ್ ಮುಂತಾದವು ವೇರಿಯಂಟ್‌ನಲ್ಲಿ ಬಳಕೆ ಯಾಗುತ್ತವೆ. ಸಾಮಾನ್ಯ ವಾಗಿ ೬೦ ಕಿ.ಮೀ. ಪ್ರತೀ ಗಂಟೆಗೆ ಓಡುವ ಈ ಬೈಕ್, ಗರಿಷ್ಠ ೯೯ ಕಿ.ಮೀ. ವರೆಗೂ ವೇಗ ಪಡೆಯಬಲ್ಲದು. ಸ್ಟ್ರೈಕಿಂಗ್ ರೆಡ್, ಬ್ಲೇಜಿಂಗ್ ಬ್ಲೂ, ವಿಕ್ಡ್ ಬ್ಲಾಕ್ ಹಾಗೂ ಫೆರಿ ಹಳದಿ ಮುಂತಾದ ಬಣ್ಣಗಳಲ್ಲಿ ೧೨೫ ಸಿಸಿ ಸ್ಪೋಟ್ಸ್ ಬೈಕ್ ಲಭ್ಯವಿದೆ.
ಬಿಎಂಡಬ್ಲ್ಯು ಸಿ ೪೦೦ ಜಿಟಿ
೩೫೦ ಸಿಸಿ ಎಂಜಿನ್ ಸಾಮರ್ಥ್ಯದ ಈ ವಾಹನವು ಹೊಸ ಲುಕ್ ಹೊಂದಿರುವ ಸ್ಕೂಟರ್. ಇದರಲ್ಲಿ ೧೩ ಲೀಟರ್ ಇಂಧನ ಸಂಗ್ರಹ ಇರುತ್ತದೆ. ಇದರ ಖರೀದಿ ದರ ೧೦.೪೦ ಲಕ್ಷ ರುಪಾಯಿಗಳಿಂದ ಆರಂಭ. ಸಿಂಗಲ್ ವೇರಿಯಂಟ್ ಹಾಗೂ ಎರಡು ಬಣ್ಣಗಳಲ್ಲಿ ವಾಹನ ಲಭ್ಯವಿದೆ. ಎಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ವ್ಯವಸ್ಥೆ ನೀಡಲಾಗಿದೆ.
ಇದು ಜರ್ಮನ್ ಕಂಪೆನಿಯ ಉತ್ಪನ್ನವಾಗಿದ್ದು, ಸಂಪೂರ್ಣವಾಗಿ ಬಿಲ್ಟಪ್ ಯೂನಿಟ್ ಆಗಿದೆ. ಇದನ್ನು ಸಿಬಿಯು ಕೂಡ ಎನ್ನಬಹುದು. ಸಿವಿಟಿ ಗೇರ್ ಬಾಕ್ಸ್‌ಗೆ ಲಿಂಕ್ ಪಡೆದುಕೊಂಡಿದೆ. ಮೊದಲ ೯.೫ ಸೆಕೆಂಡುಗಳಲ್ಲಿ ೧೦೦ ಕಿಮೀ ನಷ್ಟು ವೇಗ ಪಡೆಯುವ ಈ ಬೈಕ್, ಗರಿಷ್ಠ ೧೩೯ ಕಿಮೀ ನಷ್ಟು ವೇಗದಲ್ಲಿ ಸಂಚರಿಸಬಲ್ಲದು.