ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ: Rs. 2,30,500 ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ YZF-R2 ಬಿಡುಗಡೆ

ಹೊಚ್ಚ ಹೊಸ YZF-R2 ಮೋಟಾರ್‌ಸೈಕಲ್, ತೀವ್ರ ಸ್ಪರ್ಧಾತ್ಮಕತೆಯ 200 ಸಿಸಿ ಮಾರುಕಟ್ಟೆ ವಿಭಾಗ ದಲ್ಲಿ ಯಮಹಾ ಸಂಸ್ಥೆಯ ಮೊಟ್ಟಮೊದಲ ಕೊಡುಗೆಯಾಗಿದೆ. ಸೂಪರ್ ಸ್ಪೋರ್ಟ್ ಕಾರ್ಯಕ್ಷಮತೆ, ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನ ಮತ್ತು ದೈನಂದಿನ ಬಳಕೆಯ ಬಹುಮುಖತೆ ಬಯಸುವ ಹೊಸ ಪೀಳಿಗೆಯ ಸವಾರರಿಗಾಗಿ ಇದನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ

-

Profile
Ashok Nayak Aug 28, 2026 9:42 PM

ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್, ಜಾಗತಿಕ ಮಟ್ಟದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಹೊಸ YZF-R2 ಮೋಟಾರ್‌ ಸೈಕಲ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೂಲಕ ದೇಶ ದಲ್ಲಿ ಕಂಪನಿಯ ಜನಪ್ರಿಯ R-ಸರಣಿಯ ಪೋರ್ಟ್‌ಫೋಲಿಯೋವನ್ನು ಮತ್ತಷ್ಟು ಬಲಪಡಿಸಿದೆ.

ದೆಹಲಿಯ ಎಕ್ಸ್-ಶೋರೂಂ ದರದಂತೆ Rs. 2,30,500 ಆರಂಭಿಕ ಬೆಲೆ ಹೊಂದಿರುವ ನೂತನ YZF-R2, ಭಾರತೀಯ ಸವಾರರ ಬದಲಾಗುತ್ತಿರುವ ಆಕಾಂಕ್ಷೆಗಳಿಗೆ ತಕ್ಕಂತೆ ಪ್ರೀಮಿಯಂ ಬೈಕ್‌ ಗಳ ಶ್ರೇಣಿಯನ್ನು ವಿಸ್ತರಿಸುವ ಯಮಹಾದ ಬದ್ಧತೆಯನ್ನು ಸಾರಿದೆ.

ಹೊಚ್ಚ ಹೊಸ YZF-R2 ಮೋಟಾರ್‌ಸೈಕಲ್, ತೀವ್ರ ಸ್ಪರ್ಧಾತ್ಮಕತೆಯ 200 ಸಿಸಿ ಮಾರುಕಟ್ಟೆ ವಿಭಾಗದಲ್ಲಿ ಯಮಹಾ ಸಂಸ್ಥೆಯ ಮೊಟ್ಟಮೊದಲ ಕೊಡುಗೆಯಾಗಿದೆ. ಸೂಪರ್ ಸ್ಪೋರ್ಟ್ ಕಾರ್ಯಕ್ಷಮತೆ, ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನ ಮತ್ತು ದೈನಂದಿನ ಬಳಕೆಯ ಬಹುಮುಖತೆ ಬಯಸುವ ಹೊಸ ಪೀಳಿಗೆಯ ಸವಾರರಿಗಾಗಿ ಇದನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: Jawa 42 FJ All Stars Bike: ಆಕರ್ಷಕ ಲುಕ್, ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ 'ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್'; ಬೆಲೆ ಎಷ್ಟು?

ಸಂಪೂರ್ಣ ಹೊಸ ಪ್ಲಾಟ್‌ ಫಾರ್ಮ್‌ ನಲ್ಲಿ ನಿರ್ಮಿಸಲಾಗಿರುವ ಹಾಗೂ ಭಾರತೀಯ ಸಹಯೋಗಿ ಗಳ ನಿಕಟ ಸಹಭಾಗಿತ್ವದೊಂದಿಗೆ ಜಪಾನ್‌ ನಲ್ಲಿ ಇಂಜಿನಿಯರಿಂಗ್ ಮಾಡಲಾದ ನೂತನ ಎಂಜಿನ್ ಹೊಂದಿರುವ YZF-R2, ಅತ್ಯುತ್ತಮ ಕಾರ್ಯಕ್ಷಮತೆ, ವಿಶ್ವಾಸಾರ್ಹ ನಿರ್ವಹಣೆ ಮತ್ತು ಯಮಹಾದ ಸಾಂಪ್ರದಾಯಿಕ ರೇಸ್-ಪ್ರೇರಿತ ಎಂಜಿನಿಯರಿಂಗ್ ಅನ್ನು ಹೊಂದಿದೆ.

ಹೆಚ್ಚುತ್ತಿರುವ ಆಕಾಂಕ್ಷೆಗಳು, ಬದಲಾಗುತ್ತಿರುವ ಜೀವನಶೈಲಿ ಮತ್ತು ಪ್ರೀಮಿಯಂ ವಾಹನಗಳ ಮೇಲಿನ ಒಲವಿನಿಂದಾಗಿ ಭಾರತದ ಪ್ರೀಮಿಯಂ ಮೋಟಾರ್‌ಸೈಕಲ್ ಮಾರುಕಟ್ಟೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ಇದರಲ್ಲಿ 200 ಸಿಸಿ ವಿಭಾಗವು ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ವಿಭಾಗ ವಾಗಿ ಹೊರಹೊಮ್ಮಿದ್ದು, ಹೆಚ್ಚಿನ ಕಾರ್ಯಕ್ಷಮತೆ ಮತ್ತು ವಿಶಿಷ್ಟ ಚಾಲನಾ ಅನುಭವವನ್ನು ಎದುರು ನೋಡುವ ಸವಾರರನ್ನು ಸೆಳೆಯುತ್ತಿದೆ.

ಈ ಬೆಳವಣಿಗೆಯು ಯಮಹಾಗೆ ತನ್ನ ಒಟ್ಟಾರೆ ಮೋಟಾರ್‌ ಸೈಕಲ್ ವ್ಯವಹಾರವನ್ನು ವಿಸ್ತರಿಸಲು ಮತ್ತು ದೇಶದ ಪ್ರಮುಖ ಮಾರುಕಟ್ಟೆ ವಿಭಾಗದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಗಟ್ಟಿಗೊಳಿಸಲು ಉತ್ತಮ ಅವಕಾಶವನ್ನು ಸೃಷ್ಟಿಸಿದೆ. ಈ ವಿಭಾಗಕ್ಕಾಗಿಯೇ ವಿಶೇಷವಾಗಿ ರೂಪಿಸಲಾದ YZF-R2, ಶಕ್ತಿ, ಚುರುಕುತನ ಮತ್ತು ದಿನನಿತ್ಯದ ಸವಾರಿಯ ಸರಳತೆಯ ನಡುವೆ ಸೂಕ್ತ ಸಮತೋಲನವನ್ನು ಕಾಯ್ದುಕೊಂಡಿದ್ದು, ರೇಸ್ ಟ್ರ್ಯಾಕ್, ಹೆದ್ದಾರಿ ಹಾಗೂ ನಗರದ ದೈನಂದಿನ ಪ್ರಯಾಣ ಎಲ್ಲದಕ್ಕೂ ಸರಿಸಮಾನವಾಗಿ ಸೈ ಎನಿಸಿಕೊಳ್ಳಲಿದೆ.

ಹೊಸ YZF-R2 ಮೂರು ವೇರಿಯಂಟ್‌ ಗಳು ಮತ್ತು ಐದು ವಿಶಿಷ್ಟ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದ್ದು, ಸವಾರರು ತಮ್ಮ ವೈಯಕ್ತಿಕ ಶೈಲಿಗೆ ಹೊಂದುವ ಬೈಕ್ ಅನ್ನು ಆಯ್ಕೆ ಮಾಡಿ ಕೊಳ್ಳಬಹುದು. ಇದರ ಮೂಲ (ಬೇಸ್) ವೇರಿಯಂಟ್ ಮೆಟಾಲಿಕ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂಯಿಷ್ ಗ್ರೇ ಬಣ್ಣಗಳಲ್ಲಿ ಸಿಗಲಿದ್ದು, ಕ್ಲೀನ್ ಮತ್ತು ಆಕರ್ಷಕ ನೋಟಕ್ಕಾಗಿ ಸಂಪೂರ್ಣ ಕಪ್ಪು ಬಣ್ಣದ ಮುಂಭಾಗ-ಹಿಂಭಾಗದ ಚಕ್ರಗಳು ಹಾಗೂ ಮ್ಯಾಟ್-ಫಿನಿಶ್ ಸೀಟ್ ಪಡೆದಿದೆ. ನಂತರದ ಎರಡನೇ ವೇರಿಯಂಟ್ 3ನೇ ಪೀಳಿಗೆಯ ಬೈ- ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಹೊಂದಿದ್ದು, ಮ್ಯಾಟ್ ವೈಟ್ ಪರ್ಲ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಜತೆಗೆ ದೇಹದ ಬಣ್ಣದ ಅಲಾಯ್ ಚಕ್ರಗಳು, ಮಾಡೆಲ್‌ ಗೆ ತಕ್ಕ ಗ್ರಾಫಿಕ್ಸ್ ಮತ್ತು ಪ್ರೀಮಿಯಂ ಫಿನಿಶಿಂಗ್ ಮೂಲಕ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಟಾಪ್ -ಎಂಡ್ ಆವೃತ್ತಿಯಾದ YZF-R2M ಅತ್ಯುನ್ನತ ಸೂಪರ್‌ ಸ್ಪೋರ್ಟ್ ಅನುಭವವನ್ನು ಬಯಸುವ ಸವಾರರಿಗಾಗಿ ಪ್ರತ್ಯೇಕ ಮೆಟಾಲಿಕ್ ಗ್ರೇ ಬಣ್ಣದಲ್ಲಿ ಬಿಡುಗಡೆಯಾಗಿದೆ. ಕ್ವಿಕ್ ಶಿಫ್ಟರ್ ಜತೆಗೆ ಇದು ಪ್ರೀಮಿಯಂ 3ಡಿ ಎಂಬಾಸ್ಡ್ ಲಾಂಛನ, ಫಾಕ್ಸ್ ಸ್ವೆಡ್- ಫಿನಿಶ್ ಸೀಟ್, ಸಿಲ್ವರ್- ಫಿನಿಶ್ ಸ್ವಿಂಗ್‌ ಆರ್ಮ್ ಮತ್ತು ಯಮಹಾದ ಪ್ರಮುಖ R1 ಬೈಕ್‌ ನ ಹೈ -ಗ್ಲಾಸ್ ಫಿನಿಶ್‌ ನಿಂದ ಪ್ರೇರಿತವಾದ ಶಾಟ್ -ಬ್ಲಾಸ್ಟೆಡ್ ಮಫ್ಲರ್ ಎಂಡ್ ಕ್ಯಾಪ್ ಹೊಂದಿದೆ. ಅಲ್ಲದೆ ಈ ಎಂ ವೇರಿಯಂಟ್‌ ನಲ್ಲಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಫೋರ್ಕ್, ಹಿಂಭಾಗದ ಶಾಕ್ ಅಬ್ಸಾರ್ಬರ್‌ ಗಳು, ಕ್ಲಚ್ ಲಿವರ್ ಮತ್ತು ಬ್ರೇಕ್ ಲಿವರ್‌ ಗಳನ್ನು ನೀಡಲಾಗಿದ್ದು, ಸವಾರರಿಗೆ ತಮ್ಮಿಷ್ಟದಂತೆ ನಿಯಂತ್ರಣ ಹೊಂದಿಸಲು ಮತ್ತು ಅತ್ಯುತ್ತಮ ರೈಡಿಂಗ್ ಡೈನಾಮಿಕ್ಸ್‌ ಪಡೆಯಲು ಸಹಕಾರಿಯಾಗಿದೆ.

YZF-R2 ನ ಎಲ್ಲಾ ವೇರಿಯಂಟ್‌ ಗಳಲ್ಲಿಯೂ ಅತ್ಯಾಧುನಿಕ ಕಾರ್ಯಕ್ಷಮತೆ ಹಾಗೂ ಸುರಕ್ಷತಾ ಫೀಚರ್‌ ಗಳನ್ನು ಒದಗಿಸಲಾಗಿದೆ. ಇದರಲ್ಲಿ 17-ಇಂಚಿನ ಚಕ್ರಗಳು, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಅಸಿಸ್ಟ್ & ಸ್ಲಿಪ್ಪರ್ ಕ್ಲಚ್, ವಿವಿಧ ರೈಡಿಂಗ್ ಮೋಡ್‌ಗಳಿರುವ ಯಮಹಾ ರೈಡ್ ಕಂಟ್ರೋಲ್ (ವೈ ಆರ್ ಸಿ), 37 ಎಂಎಂ ಅಪ್‌ ಸೈಡ್-ಡೌನ್ (ಯು ಎಸ್ ಡಿ) ಫ್ರಂಟ್ ಫೋರ್ಕ್‌ ಗಳು ಮತ್ತು ಸ್ಟ್ಯಾಂಡರ್ಡ್ ಡ್ಯುಯಲ್- ಚಾನೆಲ್ ಎಬಿಎಸ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಯಮಹಾದ ಜಾಗತಿಕ R-ಸರಣಿಯ ಬೈಕ್‌ ಗಳ ಪ್ರೇರಣೆಯೊಂದಿಗೆ ಸಿದ್ಧಗೊಂಡಿರುವ ಹೊಚ್ಚಹೊಸ YZF-R2, ಶಾರ್ಪ್ ಹಾಗೂ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಗಮನ ಸೆಳೆಯುತ್ತದೆ. ವೇಗ, ಚುರುಕುತನ ಮತ್ತು ನಿಖರತೆಯನ್ನು ಬಿಂಬಿಸುವಂತೆ ಬೈಕ್ ನ ಮೇಲ್ಮೈಯನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ಬೈಕ್ ನಿಂತಿರುವಾಗಲೂ ರೋಮಾಂಚಕ ಲುಕ್ ಹೊಂದಿದೆ.