ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೀಸಲಾತಿ ಗೊಂದಲ

ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮ ಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರದ ಕಾಲದಲ್ಲಿ ಈ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ರಾಜ್ಯದ ಸರಕಾರಿ ಉದ್ಯೋಗಗಳ ನೇಮಕಾತಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಎಸ್‌ಸಿ ಕೋಟಾವನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್‌ಟಿ ಕೋಟಾವನ್ನು ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು.

ಮೀಸಲಾತಿ ಗೊಂದಲ

-

Profile
Ashok Nayak Oct 13, 2026 5:56 PM

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಪ್ರಮಾಣ ಹೆಚ್ಚಿಸಿ ಜಾರಿಗೆ ತರಲಾಗಿದ್ದ ಮಹತ್ವದ ಕಾಯಿದೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಶೇ. 50ರ ಸಾಂವಿಧಾನಿಕ ಮಿತಿಯನ್ನು ಮೀರಿ ಒಟ್ಟು ಮೀಸಲು ಶೇ. 56ಕ್ಕೆ ಏರಿಸಿದ್ದ ರಾಜ್ಯ ಸರಕಾರದ ತೀರ್ಮಾನಕ್ಕೆ ನ್ಯಾಯಾಲಯ ತಡೆ ನೀಡಿದೆ.

ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮ ಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರದ ಕಾಲದಲ್ಲಿ ಈ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ರಾಜ್ಯದ ಸರಕಾರಿ ಉದ್ಯೋಗಗಳ ನೇಮಕಾತಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಎಸ್‌ಸಿ ಕೋಟಾವನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್‌ಟಿ ಕೋಟಾವನ್ನು ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು.

ಇದರಿಂದಾಗಿ ರಾಜ್ಯದ ಒಟ್ಟು ಮೀಸಲು ಪ್ರಮಾಣ ಶೇ.56ಕ್ಕೆ ಮುಟ್ಟಿತ್ತು. ಐತಿಹಾಸಿಕ ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಶೇ.50ರ ಮಿತಿಯನ್ನು ಒತ್ತಿ ಹೇಳಿತ್ತು. ಸಂವಿಧಾನ ನಿಗದಿಪಡಿಸಿರುವ ಶೇ.50ರ ಮಿತಿ ಮೀರುವುದಕ್ಕೆ ಬಲವಾದ ಸಾಂವಿಧಾನಿಕ ಸಮರ್ಥನೆ ಮತ್ತು ಅಸಾಧಾರಣ ಸನ್ನಿವೇಶಗಳು ಇರಬೇಕಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: High Court: ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ: ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಸೂಕ್ತ ಕಾನೂನು ಆಧಾರವಿಲ್ಲದೆ ಮೀಸಲು ಮಿತಿ ವಿಸ್ತರಿಸಿರುವುದು ಸಮಂಜಸವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಮೀಸಲು ಪ್ರಮಾಣ ಯಾವ ಯಾವ ರಾಜ್ಯದಲ್ಲಿ ಹೇಗಿದೆ ಎಂಬು ದನ್ನು ತಿಳಿಯುವುದು ಮುಖ್ಯ. ಕೆಲವಜು ರಾಜ್ಯಗಳು ಶೇ.50ರ ಮಿತಿಯನ್ನು ಮೀರಿವೆ. ಉದಾಹರಣೆ ಗೆ ಪಕ್ಕದ ತಮಿಳು ನಾಡಿನಲ್ಲಿ, ಮೀಸಲಾತಿಯ ಪ್ರಮಾಣ ಶೇ.69ರವರೆಗೂ ಇವೆ. ಆದರೆ ಇದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿರುವುದರಿಂದ, ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದು ಸಾಧ್ಯವಿಲ್ಲದಿರುವುದರಿಂದ, ಅದು ಕೋರ್ಟ್ ಚಾಟಿಯಿಂದ ಬಚಾವಾಗಿದೆ. ಆದರೆ ಮಧ್ಯ ಪ್ರದೇಶ, ಬಿಹಾರ ಮೊದಲಾದ ರಾಜ್ಯಗಳು ಕೂಡ ಮೀಸಲಾತಿಯನ್ನು 63, 73 ಶೇಕಡವರೆಗೂ ಏರಿಸಲು ಯತ್ನಿಸಿವೆ. ಆದರೆ ಅಲ್ಲಿನ ಹೈಕೋರ್ಟ್‌ಗಳು ಅವನ್ನು ರದ್ದುಪಡಿಸಿವೆ.

ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯು ಈ ಮೀಸಲನ್ನು ಶಿಫಾರಸು ಮಾಡಿತ್ತು. ಸಂವಿಧಾನವೂ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲು ಕೊಡು ವಂತಹ ಅವಕಾಶ ಇದೆ ಎಂದಿದೆ. ಈಗ ಉಂಟಾಗಿರುವ ಕಾನೂನು ತೊಡಕನ್ನು ಬಿಡಿಸುವ ಯತ್ನವನ್ನು ಸರಕಾರ ಪ್ರಾಮಾಣಿಕವಾಗಿ ಮಾಡಬೇಕಿದೆ. ಇಲ್ಲದಿದ್ದರೆ ಈ ಗೊಂದಲ ಮುಂದು ವರಿಯಲಿದೆ.