Grama Panchayat Election: ಕತ್ತರಿಗುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಲೀಲಾವತಮ್ಮ ಅವಿರೋಧ ಆಯ್ಕೆ
ಹಾಲಿ ಅಧ್ಯಕ್ಷೆ ಮಮತಾ ತನ್ನ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಿಣಾಮ ನಡೆದ ಚುನಾವಣೆಯಲ್ಲಿ ಲೀಲಾವತಮ್ಮ ಎಂ.ಎಲ್.ಆಂಜನೇಯರೆಡ್ಡಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸುರೇಶ್ ಘೋಷಿಸಿದರು
Source : Chikkaballapur Reporter
ಸಚಿವ ಎಂ.ಸಿ.ಸುಧಾಕರ್ ಬೆಂಬಲಿತ ಸದಸ್ಯೆ ಲೀಲಾವತಮ್ಮ ಅಧ್ಯಕ್ಷರಾಗಿ ಆಯ್ಕೆ
ಚಿಂತಾಮಣಿ : ತಾಲೂಕಿನ ಅಂಬಾಜಿದುರ್ಗ ಹೋಬಳಿ ಕತ್ತರಿಗುಪ್ಪೆ ಗ್ರಾಮ ಪಂಚಾಯತಿ ಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಸದಸ್ಯೆ ಲೀಲಾವತಮ್ಮ ಎಂ.ಎಲ್.ಆಂಜನೇಯ ರೆಡ್ಡಿ ಅವಿರೋಧ ಆಯ್ಕೆ ಗೊಂಡಿದ್ದಾರೆ.
ಹಾಲಿ ಅಧ್ಯಕ್ಷೆ ಮಮತಾ ತನ್ನ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಿಣಾಮ ನಡೆದ ಚುನಾವಣೆಯಲ್ಲಿ ಲೀಲಾವತಮ್ಮ ಎಂ.ಎಲ್.ಆಂಜನೇಯರೆಡ್ಡಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾ ಅಧಿಕಾರಿ ಸುರೇಶ್ ಘೋಷಿಸಿದರು.
ಈ ವೇಳೆ ಮಾತನಾಡಿದ ಡೇರಿ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಮುಖಂಡ ಆಂಜ ನೇಯರೆಡ್ಡಿ ಅವರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೆಚ್ಚಿನ ಗಮನ ವಹಿಸು ತ್ತಿದ್ದು, ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪಂಚಾಯತಿ ಅಭಿವೃದ್ಧಿ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ ಎಂ ಹನುಮಂತಪ್ಪ, ಕೃಷಿಕ ಸಮಾಜದ ನಿರ್ದೇಶಕ ರಾದ ಅಲ್ಲಾಬಕಾಶ್,ಆಂಜನೇಯರೆಡ್ಡಿ,ಟಿಎಪಿಸಿಎಂಎಸ್ ಅಧ್ಯಕ್ಷ ನಾಗೇಶ್, ನಾರಾಯಣ ಸ್ವಾಮಿ, ಸುಬ್ರಮಣಿ, ಮುನಿರೆಡ್ಡಿ ವಿ, ಮುನಿ ಆಂಜನಪ್ಪ, ಗಂಗಾಧರಪ್ಪ, ವಿನಾಯಕ್ ರೆಡ್ಡಿ ಕೆ ಆರ್,ಸೈಯದ್ ಖಾದರ್, ಫೋಟೋ ನಾರಾಯಣಪ್ಪ,ಸೇರಿದಂತೆ ಸಚಿವ ಎಂ ಸಿ ಸುಧಾ ಕರ್ ಬೆಂಬಲಿಗರು ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.
4ನೇ ವರ್ಷದ ಗರುಡಗಿರಿ ಪ್ರದಕ್ಷಣೆ
ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀ ಕೊದಂಡರಾಮಸ್ವಾಮಿ ಭಜನಾ ಮಂಡಳಿವತಿಯಿAದ ಅಯೋಜಿಸಿದ್ದ 4ನೇ ವರ್ಷದ ಗರುಡಗಿರಿ ಪ್ರದಕ್ಷಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ಗರುಡಾದ್ರಿ ಲಕ್ಷಿöÃನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ಈ ಸಂದರ್ಭದಲ್ಲಿ ಗ್ರಾಮ ಅಧ್ಯಕ್ಷೆ ಸೀತಮ್ಮ ಅಂಜನಪ್ಪ, ಪಂಚಾಯತಿ ಉಪಾಧ್ಯಕ್ಷೆ ಗೌತಮಿ ವಿಜಯ ಗೋಪಾಲರೆಡ್ಡಿ, ಸದಸ್ಯ ಆರ್.ಶ್ರೀನಿವಾಸಲು, ರಾಮಲಕ್ಷ್ಮಮ್ಮ ಮುಖಂಡ ರಾದ ಕಾಮ ರೆಡ್ಡಿ, ಎಂ.ಆರ್.ಬಾಲಕೃಷ್ಣನ್, ಮದ್ದಿರೆಡ್ಡಿ, ರಾಮರೆಡ್ಡಿ, ಡಿ.ಸಿ.ನರಸಿಂಹಯ್ಯ, ರಾಮ ಚಂದ್ರಪ್ಪ, ಸತ್ಯಪ್ಪ ಮತ್ತಿತರರು ಇದ್ದರು.
ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳಿಂದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ