ಅಸಫಲತೆಗೆ ಬೇಸರ ಬೇಡ

ಅಸಫಲತೆಗೆ ಬೇಸರ ಬೇಡ

image-b5df300c-df14-4c5e-830e-d15e37f17241.jpg
Profile Vishwavani News February 24, 2022
image-947c8525-7671-47d7-bf86-63eb75f8a07c.jpg
ಮಹಾದೇವ ಬಸರಕೋಡ ಬದುಕಿನ ಕೆಲವು ಸಂದರ್ಭಗಳಲ್ಲಿ ಒಂದಲ್ಲ ಒಂದು ಮಟ್ಟದ ಅಸಫಲತೆಯನ್ನು ಎದುರುಗೊಳ್ಳುವುದು ಅನಿವಾರ್ಯ ಎಂದೇ ಹೇಳಬಹುದು. ಇಂತಹ ಸಂಕಷ್ಟ ಸಂದರ್ಭಗಳು ನಮ್ಮ ಮನಸ್ಸನ್ನು ಬಹುಬೇಗ ಕದಡಿ ಬಿಡುತ್ತವೆ. ದಿಕ್ಕು ತೋಚದೇ ನಿರಾಸೆಯ ಭಾವ ಕಾಡತೊಡಗುತ್ತದೆ. ನಮ್ಮೆಲ್ಲ ಅಸಫಲತೆಗೆ, ಅಪಜಯಕ್ಕೆ ಇತರರು ಕಾರಣರು ಎಂದು ಮತ್ತೊಬ್ಬರ ಬೊಟ್ಟು ಮಾಡುತ್ತ ನಿಂದಿಸುವಲ್ಲಿ ನಿರತರಾಗುತ್ತೇವೆ. ನನ್ನದು ದುರಾದೃಷ್ಟ ಎಂಬ ಊರುಗೋಲು ಹಿಡಿದು ನಮ್ಮನ್ನು ನಾವು ಸಮರ್ಥಿಸಿಕೊಳ್ಳುವ, ಸಮಾಧಾನಿಸಿ ಕೊಳ್ಳುವ, ಆತ್ಮತೃಪ್ತಿಪಟ್ಟುಕೊಳ್ಳುವ ಪ್ರಯತ್ನಗಳಲ್ಲಿ ತೊಡಗಿಕೊಳ್ಳುತ್ತೇವೆ. ನಮ್ಮ ಕ್ರಿಯಾಶೀಲತೆಯಿಂದ ವಿಮುಖಗೊಳ್ಳುತ್ತೇವೆ. ಇಂತಹ ಮಾನಸಿಕ ಸ್ಥಿತಿಯಿಂದ ಹೊರಬರಲು, ಅಸಫಲತೆಗಳು ಬದುಕಿನ ಅವಿಭಾಜ್ಯ ಅಂಗ ಮತ್ತು ಅವು ಸ್ಥಾಯಿಯಲ್ಲ ಎಂಬ ಸತ್ಯವನ್ನು ಮನಗಾಣಬೇಕು. ತಮ್ಮ ಆಶ್ರಮದಲ್ಲಿ ಎಲ್ಲ ವಿದ್ಯಾಭ್ಯಾಸವನ್ನು ಪೂರ್ಣಗೊಳಸಿದ ಶಿಷ್ಯರೊಬ್ಬರಿಗೆ ಸನ್ಯಾಸತ್ವದ ದೀಕ್ಷೆ ನೀಡಿ ತಾವು ಬೋಧಿಸಿದ ಆಧ್ಯಾತ್ಮಿಕ ಚಿಂತನೆ ಗಳಲ್ಲಿ ಸದಾ ತೊಡಗಿಕೊಳ್ಳುವಂತೆ ಮಾತ್ರವಲ್ಲದೇ ಅದನ್ನು ಜನಸಾಮಾನ್ಯರಿಗೆ ಹಂಚುವಂತೆ, ಮಾತ್ರವಲ್ಲದೇ ಅವರ ಬದುಕನ್ನು ಸಾರ್ಥಕ ಗೊಳಿಸುವ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವಂತೆ ಗುರುಗಳು ತಿಳಿಸಿದರು. ತಮ್ಮ ಗುರುಗಳ ಅಣತಿಯಂತೆ ಒಂದಷ್ಟು ಜನರಿಗೆ ನಿರಂತರವಾಗಿ ವರ್ಷದುದ್ದಕ್ಕೂ ಅವರು ಧರ್ಮಬೋಧನೆ ಮಾಡುತ್ತಲೇ ಬಂದರು. ತುಂಬ ಶ್ರಮವಹಿಸಿ ತಮ್ಮ ಪ್ರವಚನ ಗಳನ್ನು ಸಿದ್ಧಪಡಿಸಿಕೊಂಡು ಪ್ರವಚನ ಮಾಡುತ್ತಿದ್ದರು. ಆದರೆ, ಮತ್ತೆ ಮತ್ತೆ ಅವರೆಲ್ಲರನ್ನೂ ತರಬೇತುಗೊಳಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರೂ ಅವರ ಯಾವ ಪ್ರಯತ್ನವೂ ಫಲ ನೀಡಲೇ ಇಲ್ಲ. ಇವರ ಪ್ರವಚನ ಕೇಳಿದ ಜನರಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಅವರೆಲ್ಲ ಇವರ ಯಾವುದೇ ಧಾರ್ಮಿಕ ಚಿಂತನೆಗಳನ್ನು  ಅನುಸರಿಸದೇ ಹೋದರು. ಇದರಿಂದ ಅವರಿಗೆ ನಿರಾಸೆಯಾಯಿತು. ತಮ್ಮ ಪ್ರಯತ್ನವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಯಿತು ಎಂದು ಮರುಗಿದರು. ಸನ್ಯಾಸತ್ವ ಬಿಟ್ಟು ಬಿಡಬೇಕು, ಆಧ್ಯಾತ್ಮಿಕ ಚಿಂತನೆಗಳಲ್ಲಿ ಯಾವುದೇ ಸತ್ವವಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಈ ಕುರಿತು ಮಾರ್ಗದರ್ಶನ ಪಡೆಯಲು ತಮ್ಮ ಗುರುಗಳ ಹತ್ತಿರ ಬಂದು ತಮ್ಮ ನಿರ್ಧಾರವನ್ನು ತಿಳಿಸಿದರು. ಆಗ ಗುರುಗಳ ನಸುನಕ್ಕು ಅವರಿಗೆ ಒಂದು ವಾರ ಆಶ್ರಮದಲ್ಲಿಯೇ ತಂಗುವಂತೆ ತಿಳಿಸಿದರು. ಒಂದಷ್ಟು ಹೂವಿನ ಬೀಜಗಳನ್ನು, ಮತ್ತು ಎರಡು ಹೂವಿನ ಕುಂಡಗಳನ್ನು ಕೊಟ್ಟು ಇವುಗಳನ್ನು ಎರಡಲ್ಲೂ ಸಮನಾಗಿ ಹಾಕಿ ಗಿಡಗಳನ್ನು ಬೆಳೆಸು ಎಂದರು. ಒಂದು ವಾರದ ನಂತರ ನೋಡಿದರೆ, ಒಂದು ಕುಂಡದಲ್ಲಿ ಹೂವಿನ ಗಿಡಗಳು ತುಂಬು ಹೂವು ತೊಟ್ಟು ನಳನಳಿಸುತ್ತಿದ್ದರೆ ಮತ್ತೊಂದು ಕುಂಡದಲ್ಲಿಯ ಗಿಡಗಳು ಬೆಳದಿರಲೇ ಇಲ್ಲ. ಅವುಗಳನ್ನು ತೋರಿಸಿ ಗುರುಗಳು ಬೀಜಗಳು ಒಂದೇ ಆಗಿದ್ದರೂ ವ್ಯತ್ಯಾಸ ಏಕೆ? ಎಂದು ಪ್ರಶ್ನಿಸಿದರು. ಆಗ ಶಿಷ್ಯರು ಹೇಳಿದರು ‘ಒಂದರಲ್ಲಿ ಫಲವತ್ತಾದ ಮಣ್ಣು ಇತ್ತು ಮತ್ತೊಂದರಲ್ಲಿ ಬರಿ ಮರುಳು. ಹಾಗಾಗಿ ಮರಳು ಇರುವ ಕುಂಡದಲ್ಲಿ ಗಿಡ ಚಿಗುರಲು ಸಾಧ್ಯವೇ ಗುರುಗಳೇ’. ‘ನೀನು ಹೇಳುವುದು ಸರಿಯಾಗಿದೇ ಇದೆ. ಆಧ್ಯಾತ್ಮಿಕ ಚಿಂತನೆಗಳು ಚೈತನ್ಯದ ಬೀಜಗಳಿದ್ದಂತೆ. ಅವುಗಳು ಬರಡು ಹೃದಯದಲ್ಲಿ ಚಿಗುರೊಡೆಯಲು ಸಾಧ್ಯವೇ? ಎಂದು ಗುರುಗಳು ನಸು ನಕ್ಕರು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಿಗಬೇಕಾದರೆ ನಿಧಾನವಾಗಿ, ವಿವೇಚನೆಯಿಂದ ಮುನ್ನಡೆಯಬೇಕಾದ ಅಗತ್ಯವಿದೆ. ನಮ್ಮ ಪ್ರತಿಯೊಂದು ಪ್ರಯತ್ನ ಗಳು ಯಶಸ್ಸಿನ ಹಾದಿಯಲ್ಲಿಯೇ ಸಾಗಬೇಕು ಎಂಬುದು ಸದಾ ಸರ್ವಸಮ್ಮತವಲ್ಲ ಎಂಬ ಸತ್ಯದ ಬೆಳಕಿನಲ್ಲಿ ಸಾಗಬೇಕು. ಅಸಫಲತೆಗಳನ್ನು ಕೂಡ ಬರಮಾಡಿಕೊಳ್ಳಬೇಕು. ಸಮಚಿತ್ತ ಭಾವವನ್ನು ನಮ್ಮದಾಗಿಸಿಕೊಳ್ಳಬೇಕು. ಒಂದಷ್ಟು ತಾಳ್ಮೆಯನ್ನು ರೂಢಿಸಿಕೊಳ್ಳಬೇಕು. ನಮ್ಮ ಪರಿಮಿತಿ ಮತ್ತು ದೌರ್ಬಲ್ಯಗಳನ್ನು  ಮೆಟ್ಟಿ ನಿಲ್ಲಬೇಕು. ಡಾ.ಜಾನ್ಸ್‌ನ ಅವರ ಮಾತಿನಂತೆ ಮಹಾತ್ಕಾರ್ಯಗಳು ಹಠಾತ್ ಬಲದಿಂದಲ್ಲ, ಅವುಗಳು ನಿರಂತರ ಪರಿಶ್ರಮದ ಫಲಗಳು ಎಂಬ ಮಾತನ್ನು ಬದುಕಿ ನಲ್ಲಿ ಅರ್ಥೈಯಿಸಿಕೊಂಡಾಗ ನಾವು ನಮ್ಮೆಲ್ಲ ಕಾರ್ಯಗಳಲ್ಲಿ ಯಶಸ್ಸು ಕೈ ಹಿಡಿದು ಜೊತೆಯಾಗುತ್ತದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ