ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅತಿನಿದ್ದೆ ಎಂದರೇನು? ಇದಕ್ಕೆ ಪರಿಹಾರವೇನು?

ನಿದ್ದೆ ಮಾಡುವುದಕ್ಕೊಂದು ಹೊತ್ತು- ಜಾಗ ಎಂಬುದೆಲ್ಲ ಇರುತ್ತದೆ. ಹಗಲಿನಲ್ಲಿ ಜಾಗೃತರಾಗಿದ್ದು, ರಾತ್ರಿ ನಿದ್ರಿಸುವುದು ಎಲ್ಲ ಪ್ರಾಣಿಗಳಿಗೂ ಸಹಜ ಚರಿ. ಅದರ ಹೊರತಾಗಿ ಹೀಗೆ ಕಂಡಕಂಡಲ್ಲಿ ಗೊರಕೆ ಹೊಡೆಯುತ್ತಿದ್ದರೆ ಲೇವಡಿಗೆ ಒಳಗಾಗುವುದು ಸಾಮಾನ್ಯ. ಹೀಗೆ ಗೊರೆಯುವವರಲ್ಲಿ ಕೆಲವರು ಹೈಪರ್‌ ಸೋಮ್ನಿಯಾ ಅಥವಾ ಅತಿನಿದ್ರೆಯಿಂದ ಬಳಲುತ್ತಲೂ ಇರಬಹುದು. ಏನಿದು ಸಮಸ್ಯೆ?

ಅತೀಯಾದ ನಿದ್ದೆಗೆ ಕಾರಣವೇನು? ಇಲ್ಲಿದೆ ಪರಿಹಾರ

ಸಾಂದರ್ಭಿಕ ಚಿತ್ರ. -

Profile
Pushpa Kumari Dec 26, 2025 7:00 AM

ನವದೆಹಲಿ, ಡಿ. 25: ಶಾಲೆಯ ತರಗತಿಗಳಲ್ಲಿ, ಕಚೇರಿಗಳಲ್ಲಿ, ಸಭೆಗಳಲ್ಲಿ, ವೇದಿಕೆಗಳಲ್ಲಿ, ಸದನದಲ್ಲಿ- ಹೀಗೆ ಎಲ್ಲೆಂದರಲ್ಲಿ ತೂಕಡಿಸುವವರು ಸದಾ ಹಾಸ್ಯದ ವಸ್ತುವಾಗುತ್ತಾರೆ. ನಿದ್ದೆ ಮಾಡುವುದಕ್ಕೊಂದು ಹೊತ್ತು- ಜಾಗ ಎಂಬುದೆಲ್ಲಾ ಇರುತ್ತದೆ. ಹಗಲಿನಲ್ಲಿ ಜಾಗೃತರಾಗಿದ್ದು ರಾತ್ರಿ ನಿದ್ರಿಸುವುದು ಎಲ್ಲಾ ಪ್ರಾಣಿಗಳಿಗೂ ಸಹಜ ಚರಿ. ಅದರ ಹೊರತಾಗಿ ಹೀಗೆ ಕಂಡಕಂಡಲ್ಲಿ ಗೊರಕೆ ಹೊಡೆಯುತ್ತಿದ್ದರೆ (Excessive Sleepiness) ಲೇವಡಿಗೆ ಒಳಗಾಗುವುದು ಸಾಮಾನ್ಯ. ಹೀಗೆ ಗೊರೆಯುವವರಲ್ಲಿ ಕೆಲವರು ಹೈಪರ್‌ ಸೋಮ್ನಿಯಾ ಅಥವಾ ಅತಿನಿದ್ರೆಯಿಂದ ಬಳಲುತ್ತಲೂ ಇರಬಹುದು. ಏನಿದು ಸಮಸ್ಯೆ?

ಹೊತ್ತಲ್ಲದ ಹೊತ್ತಲ್ಲಿ ನಿದ್ದೆ ಮಾಡುವುದಕ್ಕೆ ಹಲವಾರು ಕಾರಣ ಗಳು ಇರಬಹುದು. ಪಾಳಿಗಳಲ್ಲಿ ಕೆಲಸ ಮಾಡುವುದು, ಮನೆಯಲ್ಲಿ ಶಿಶುಗಳನ್ನು ಅಥವಾ ರೋಗಿಗಳನ್ನು ನೋಡಿಕೊಳ್ಳುವುದು, ಮಾನಸಿಕ ಸಮಸ್ಯೆ, ಒತ್ತಡದ ಬದುಕು ಅಥವಾ ಯಾವುದಾದರೂ ಔಷಧಿಯ ಅಡ್ಡ ಪರಿಣಾಮ ಗಳೂ ಇರಬಹುದು. ಇದರಿಂದಾಗಿ ರಾತ್ರಿಯ ವೇಳೆ ನಿದ್ದೆ ಸರಿಯಾಗದೆ ಹಗಲಿನಲ್ಲಿ ತೂಕಡಿಸು ವಂತಾಗುವುದು ಸಾಮಾನ್ಯ. ಈ ಸಮಸ್ಯೆಗಳು ಹೆಚ್ಚಿನ ಬಾರಿ ತಾತ್ಕಾಲಿಕವಾಗಿದ್ದು, ಬದುಕು ಸಾಮಾನ್ಯ ಲಯಕ್ಕೆ ಮರಳಿದ ನಂತರ ನಿದ್ದೆಯೂ ಸರಿಯಾಗಬಹುದು. ಆದರೆ ಹೈಪರ್‌ ಸೋಮ್ನಿಯಾ ಅಥವಾ ಅತಿನಿದ್ದೆ ಇದಿಷ್ಟೇ ಅಲ್ಲ.

ಎಂಥಾ ಸಮಸ್ಯೆಯಿದು?

ಸಮಸ್ಯೆ ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ. ಇದು ಆಯಾ ವ್ಯಕ್ತಿಯ ವಯಸ್ಸು, ಜೀವನಶೈಲಿ ಮುಂತಾದವುಗಳ ಮೇಲೆ ಸ್ವಲ್ಪ ವ್ಯತ್ಯಾಸವಾಗುತ್ತದೆ. ಸಾಮಾನ್ಯ ವಾಗಿ ಹಗಲಿನ ಅರ್ಧಕ್ಕರ್ಧ ಹೊತ್ತು ನಿದ್ದೆಗೆ ಜಾರುವ ಅಥವಾ ತೂಕರಿಸುತ್ತಿರುವ ಮೂಲಕ ಜಾಗೃತ ಸಮಯದ ಬಹುಸಮಯ ಜಡವಾಗಿರುವ ಸಮಸ್ಯೆಯಿದು. ಹಾಗೆಂದು ಇವರೇನೂ ರಾತ್ರಿ ನಿದ್ದೆ ಕಡಿಮೆ ಮಾಡುವುದಿಲ್ಲ. ಸಾಮಾನ್ಯ ಮನುಷ್ಯರಷ್ಟೇ ಅಥವಾ ಅದಕ್ಕಿಂತ ಹೆಚ್ಚೇ ನಿದ್ರಿಸಿರುತ್ತಾರೆ.

ಲಕ್ಷಣಗಳೇನು?

ಅಗತ್ಯವಾದಷ್ಟು ವಿಶ್ರಾಂತಿ, ನಿದ್ದೆ ದೊರೆತ ತಕ್ಷಣ ದೇಹ ಚೈತನ್ಯಶೀಲವಾಗುತ್ತದೆ. ಆದರೆ ಈ ಸಮಸ್ಯೆ ಇರುವವರಲ್ಲಿ ಎಷ್ಟು ನಿದ್ರೆ ಮಾಡಿದರೂ ಸುಸ್ತು ಕಡಿಮೆ ಆಗದಂಥ ಸ್ಥಿತಿ. ರಾತ್ರಿ 10 ತಾಸು ನಿದ್ದೆ ಮಾಡಿದರೂ, ಹಗಲಿಗೆ ತೂಕಡಿಕೆ ಹೋಗು ವುದಿಲ್ಲ. ಇದರಿಂದಾಗಿ ಶರೀರ ಮಾತ್ರವಲ್ಲ, ಬುದ್ಧಿಯೂ ಜಡವಾಗಿರುತ್ತದೆ. ಮಾತ್ರವಲ್ಲ, ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು, ವಾಹನ ಚಲಾಯಿಸಲು ಕಷ್ಟವಾಗುತ್ತದೆ. ನೆನಪು ಮತ್ತು ಏಕಾಗ್ರತೆಯ ಸಮಸ್ಯೆ ಕಾಣಿಸಬಹುದು.

ಪರಿಹಾರ ಹೇಗೆ?

ಹಲವು ಮಂದಿಯಲ್ಲಿ ಜೀವನಶೈಲಿಯ ಬದಲಾವಣೆ ಬಹಳಷ್ಟನ್ನು ಸುಧಾರಿಸಬಲ್ಲದು. ಅಂದರೆ, ರಾತ್ರಿ ಎಷ್ಟು ಹೊತ್ತು ಮಲಗುತ್ತಾರೆ ಎಂಬುದಕ್ಕಿಂತಲೂ ಎಷ್ಟು ಗಾಢವಾಗಿ ನಿದ್ರಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ʻರಾತ್ರಿ ಮಲಗಿದ್ದಷ್ಟೇ ಗೊತ್ತು, ಏಳುವಾಗ ಬೆಳಗಾಗಿತ್ತು, ಕನಸೂ ಬೀಳಲಿಲ್ಲʼ ಎಂಬಂತೆ ಎಷ್ಟೋ ಬಾರಿ ಆಗುವುದಿದೆ. ಹೀಗೆ ಮಕ್ಕಳಂತೆ ಮೈಮರೆತು ನಿದ್ರಿಸುವುದು ವಯಸ್ಕರಿಗೂ ಆರೋಗ್ಯಕರ.

ಉತ್ತಮ ಜೀರ್ಣಕ್ರಿಯೆಗಾಗಿ ವೈದ್ಯರು ಸೂಚಿಸಿದ ಆಹಾರಗಳಿವು

ಮಲಗುವ ಮುನ್ನ ಅಲ್ಕೋಹಾಲ್‌ ಸೇವನೆ, ಸ್ಕ್ರೀನ್‌ ನೋಡುವುದು, ಟಿವಿಯಲ್ಲಿ ಹಿಂಸೆಯ ಸಿನೆಮಾ ನೋಡುವುದು- ಇಂಥ ಕೆಲವು ಅಭ್ಯಾಸಗಳಿಂದ ದೂರ ಇದ್ದಷ್ಟೂ ನಿದ್ರೆಯ ಗುಣಮಟ್ಟ ಉತ್ತಮ ಗೊಳ್ಳುತ್ತದೆ. ರಾತ್ರಿಯ ಊಟಕ್ಕೆ ಅತ್ಯಂತ ಮಸಾಲೆಭರಿತ ತಿನಿಸುಗಳ ಬದಲು, ಪೌಷ್ಟಿಕ ಮತ್ತು ಸಮತೋಲಿತ ಆಹಾರವು ನಿದ್ದೆಯನ್ನು ಖಾತ್ರಿಪಡಿಸಬಲ್ಲದು. ಮಾತ್ರವಲ್ಲ, ಹಗಲಿನ ಹೊತ್ತಲ್ಲಿ ಸಾಕಷ್ಟು ನೀರು ಕುಡಿದು, ರಾತ್ರಿ ಮಲಗುವಾಗ ಅಗತ್ಯವಿದ್ದಷ್ಟೇ ನೀರು ಕುಡಿದರೆ, ನಡುರಾತ್ರಿಗೆ ಬಾತ್‌ರೂಂ ಸಲುವಾಗಿ ಎಚ್ಚರವಾಗುವುದನ್ನು ತಪ್ಪಿಸಬಹುದು.

ರಾತ್ರಿ ಮಲಗುವ ಮತ್ತು ಬೆಳಗ್ಗೆ ಏಳುವ ಸಮಯ ಆದಷ್ಟೂ ನಿಯಮಿತವಾಗಿರಲಿ. ಇದರಿಂದ ದೇಹದೊಳಗಿನ ನೈಸರ್ಗಿಕ ಗಡಿಯಾರಕ್ಕೆ ಹೊಂದಿಕೊಳ್ಳುವುದು ಅನುಕೂಲ. ಮಲಗುವ ಜಾಗ ಪ್ರಶಸ್ತವಾಗಿರಲಿ- ಅತಿ ಸೆಕೆ, ಅತಿ ಚಳಿ, ಗದ್ದಲಗಳೆಲ್ಲ ನಿದ್ದೆಗೆ ಬಾಧಕವೇ. ಹಗಲಿನ ಹೊತ್ತು, ಅಗತ್ಯವಾದರೆ, ಸಣ್ಣದೊಂದು ಪವರ್‌ ನ್ಯಾಪ್‌ ಮಾಡಬಹುದು. ಇದರಿಂದ ದೇಹಕ್ಕೆ ಆಯಾಸ ವಾಗದ ರೀತಿಯಲ್ಲಿ ರಾತ್ರಿಯವರೆಗೆ ಚಟುವಟಿಕೆಯಿಂದ ಇರಬಹುದು. ಇಷ್ಟಾಗಿಯೂ ಹಗಲಿಡೀ ನಿದ್ದೆ ಬಡಿದಂತಾಗುತ್ತಿದೆ ಎಂದಾದರೆ, ಬೇರೆ ಸಮಸ್ಯೆಯೂ ಇರಬಹುದು. ವೈದ್ಯರ ನೆರವು ಕೋರುವುದು ಸೂಕ್ತ.