ಅರಿಶಿನದ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣ ಸಾಧ್ಯವೇ?
Health Tips: ರಕ್ತದೊತ್ತಡ ಎನ್ನುವುದು ಪ್ರತಿಯೊಬ್ಬರಿಗೆ ಕಾಡುವ ಸಮಸ್ಯೆಯಾಗಿದೆ. ಇದನ್ನು ನಿರ್ಲಕ್ಷ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವ ವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆ ಕಾಡಬಹುದು. ಹೀಗಾಗಿ ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು. ಮುಖ್ಯವಾಗಿ ಬೆಳಿಗ್ಗೆ ಅರಿಶಿನ ನೀರು ಕುಡಿಯುವ ಮೂಲಕ ರಕ್ತದೊತ್ತಡ ನಿಯಂತ್ರಣ ಸಾಧ್ಯವೆ?
ಸಂಗ್ರಹ ಚಿತ್ರ -
ನವದೆಹಲಿ,ಮೆ 7: ಇತ್ತೀಚೆಗೆ ರಕ್ತದೊತ್ತಡ (Blood Pressure) ಎನ್ನುವುದು ಪ್ರತಿಯೊಬ್ಬರಿಗೆ ಕಾಡುವ ಸಮಸ್ಯೆಯಾಗಿದೆ. ಕಳಪೆ ಜೀವನಶೈಲಿ ಕೆಲಸದ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿಗಳಿಂದಾಗಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ನಿರ್ಲಕ್ಷ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವ ವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆ ಕಾಡಬಹುದು. ಹೀಗಾಗಿ ಕೆಲ ವೊಂದು ಆಹಾರ ಕ್ರಮಗಳನ್ನು ಪಾಲಿಸುವ ಮೂಲಕ ಇದಕ್ಕೆ ಪರಿಹಾರ ಪಡೆಯ ಬಹುದು. ಮುಖ್ಯವಾಗಿ ಬೆಳಿಗ್ಗೆ ಅರಿಶಿನ ನೀರು ಕುಡಿಯುವ (Drinking Turmeric Water) ಮೂಲಕ ರಕ್ತದೊತ್ತಡ ನಿಯಂತ್ರಣ ಸಾಧ್ಯವೆ?
ಅರಿಶಿನವು ಬಹಳ ಹಿಂದಿನಿಂದಲೂ ಮೌಲ್ಯಯುತವಾಗಿದೆ, ಇದರಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಉರಿಯೂತ ಗುಣ ಲಕ್ಷಣ ಹೊಂದಿದವರು ಹಾಗೂ ನಂಜಿನ ಅಂಶ ಇದ್ದರೆ ಅರಶಿನ ಬಳಕೆಯಿಂದ ಗುಣ ಮುಖವಾಗುತ್ತದೆ. ಆದರೆ ಇದು ನಿಜವಾಗಿಯೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆಯೇ? ಇತ್ತೀಚಿನ ಆಹಾರ ವಿಜ್ಞಾನ ಜರ್ನಲ್‌ನಲ್ಲಿ ನಡೆದ ಅಧ್ಯಯನ ಪ್ರಕಾರ ಅರಿಶಿನ ನೀರು ನಿರ್ದಿಷ್ಟವಾಗಿ ಸಕ್ರಿಯ ಸಂಯುಕ್ತ ಕರ್ಕ್ಯುಮಿನ್ ಹೊಂದಿದ್ದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Health Tips: ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!
ಅರಶಿನದಲ್ಲಿರುವ ಕರ್ಕ್ಯೂಮಿನ್ ಎನ್ನುವ ಅಂಶದಲ್ಲಿ ಉರಿಯೂತ ಶಮನಕಾರಿ, ಆ್ಯಂಟಿ ಆಕ್ಸಿಡೆಂಟ್ ಗುಣಗಳು ಇವೆ. ಇವು ರಕ್ತದ ಧಮನಿಗಳು ಸಡಿಲಗೊಳ್ಳಲು ಸಹಾಯ ಮಾಡಿ, ರಕ್ತ ಸಂಚಲನವನ್ನು ಅಭಿವೃದ್ಧಿ ಮಾಡುತ್ತದೆ. ಅದೇ ರೀತಿ ರಕ್ತನಾಳದ ಆರೋಗ್ಯ ಸುಧಾರಣೆ ಮಾಡುವ ಮೂಲಕ ರಕ್ತದ ಹರಿವನ್ನು ಸುಲಭಗೊಳಿಸುತ್ತದೆ.
ಅರಶಿನವು ರಕ್ತನಾಳಗಳಿಗೆ ಹಾನಿ ಮಾಡುವ ಉರಿಯೂತವನ್ನು ಗುಣಪಡಿಸಲಿದ್ದು ರಕ್ತದ ಹರಿ ವನ್ನು ಸುಧಾರಿಸುತ್ತದೆ. ಇನ್ನು ಹೃದಯದ ಆರೋಗ್ಯಕ್ಕೆ ಹಾನಿ ಮಾಡುವ ಫ್ರೀ ರಾಡಿಕಲ್‌ಗಳನ್ನು ಕೂಡ ಇದು ತಡೆಯುತ್ತದೆ ಇದರಿಂದ ರಕ್ತನಾಳದಲ್ಲಿ ಪ್ರತಿರೋಧ ಕಡಿಮೆಯಾಗಿ, ರಕ್ತದೊತ್ತಡ ತಗ್ಗುವುದು.
ಆದರೆ ಮಧ್ಯಮ ಪ್ರಮಾಣದಲ್ಲಿ ಅರಿಶಿನ ನೀರನ್ನು ಕುಡಿಯುವುದು ಸುರಕ್ಷಿತವಾಗಿದೆ. ಆದಾಗ್ಯೂ, ಪಿತ್ತಕೋಶದ ಕಾಯಿಲೆ ಅಥವಾ ಹೊಟ್ಟೆಯ ಸಮಸ್ಯೆ ಇದ್ದವರು, ಇದನ್ನು ದೈನಂದಿನ ಅಭ್ಯಾಸ ವನ್ನಾಗಿ ಮಾಡಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ, ಅತಿಯಾದ ಸೇವನೆಯು ಕೆಲವು ವ್ಯಕ್ತಿಗಳಲ್ಲಿ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟು ಮಾಡಬಹುದು, ಆದ್ದರಿಂದ ಮಿತವಾಗಿ ಸೇವಿಸುವುದು ಮುಖ್ಯ.