Health Tips: ಅಗ್ಗವಾಗಿ ಸಿಗುವ ಸೀಬೆ ಹಣ್ಣಿನ ಆರೋಗ್ಯ ಲಾಭದ ಬಗ್ಗೆ ನಿಮಗೆ ಗೊತ್ತೆ?
Health Benefits of Guava Fruit: ಹೆಚ್ಚಿನ ಪೋಷಕಾಂಶಗಳು, ಪ್ರೋಟಿನ್ ಸಿಗಬೇಕೆಂದು ದುಬಾರಿಯಾಗಿರುವ ವಿದೇಶಿ ಹಣ್ಣುಗಳ ಖರೀದಿಗೆ ಆದ್ಯತೆ ನಾವು ನೀಡುತ್ತೇವೆ. ಆದರೆ ಸ್ಥಳೀಯವಾಗಿ, ಸುಲಭವಾಗಿ ಸಿಗುವ ಪೇರಳೆ ಅಥವಾ ಸೀಬೆ ಹಣ್ಣಿನ ಆರೋಗ್ಯ ಲಾಭದ ಬಗ್ಗೆ ನಿಮಗೆ ಗೊತ್ತೆ? ವಿಟಮಿನ್ ಎ, ಬಿ ಹಾಗೂ ಸಿ ಮತ್ತು ಪೊಟಾಶಿಯಂ ಅಂಶಗಳನ್ನು ಹೊಂದಿರುವ ಸೀಬೆ ಕಾಯಿ, ಅತ್ಯಂತ ಪೌಷ್ಟಿಕಯುಕ್ತ ಹಣ್ಣಾಗಿದೆ. ಸೀಬೆ ಹಣ್ಣಿನಿಂದ ಆರೋಗ್ಯಕ್ಕೆ ಏನು ಲಾಭ? ಯಾವ ಆರೋಗ್ಯ ಸಮಸ್ಯೆ ಇದ್ದವರು ಸೇವಿಸಿದರೆ ಉತ್ತಮ? ಇಲ್ಲಿದೆ ಮಾಹಿತಿ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಹಣ್ಣುಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಹೆಚ್ಚಿನ ಪೋಷಕಾಂಶಗಳು, ಪ್ರೋಟಿನ್ ಸಿಗಬೇಕೆಂದು ದುಬಾರಿಯಾಗಿರುವ ವಿದೇಶಿ ಹಣ್ಣುಗಳ ಖರೀದಿಗೆ ಆದ್ಯತೆ ನೀಡುತ್ತೇವೆ. ಆದರೆ ಸ್ಥಳೀಯವಾಗಿ ಸುಲಭವಾಗಿ ಸಿಗುವ ಪೇರಳೆ ಅಥವಾ ಸೀಬೆ ಹಣ್ಣಿನ ಆರೋಗ್ಯ ಲಾಭದ ಬಗ್ಗೆ ನಿಮಗೆ ಗೊತ್ತೆ? ವಿಟಮಿನ್ ಎ, ಬಿ ಹಾಗೂ ಸಿ ಮತ್ತು ಪೊಟಾಶಿಯಂ ಅಂಶಗಳನ್ನು ಹೊಂದಿರುವ ಸೀಬೆಕಾಯಿ, ಅತ್ಯಂತ ಪೌಷ್ಟಿಕಯುಕ್ತ ಹಣ್ಣು. ಪೇರಳ ಹಣ್ಣಿನಿಂದ (Health Benefits of Guava Fruit) ಆರೋಗ್ಯಕ್ಕೆ ಏನು ಲಾಭ? ಯಾವ ಆರೋಗ್ಯ ಸಮಸ್ಯೆ ಇದ್ದವರು ಸೇವಿಸಿದರೆ ಉತ್ತಮ ಇಲ್ಲಿದೆ ಮಾಹಿತಿ.
ಹೆಚ್ಚಿನ ಪ್ರಮಾಣದ ವಿಟಮಿನ್ ಸಿ
ನೋಡಲು ದುಂಡಾಗಿರುವ 100 ಗ್ರಾಂ ಪೇರಳೆ ಹಣ್ಣಿನಲ್ಲಿ ಸುಮಾರು 228 ಮಿಗ್ರಾಂ ವಿಟಮಿನ್ ಸಿ ಲಭ್ಯ. ಇದು ಕಿತ್ತಳೆ ಹಣ್ಣಿಗಿಂತಲೂ ಹೆಚ್ಚಿನ ಪ್ರಮಾಣದ ವಿಟಮಿನ್ ಹೊಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಯಾವುದೇ ರೋಗ ಬರದಂತೆ ತಡೆಯಲು ನೆರವಾಗುತ್ತದೆ.
ಉತ್ತಮ ಪ್ರಮಾಣದ ನಾರಿನಂಶವಿದೆ
ಪೇರಳೆಯಲ್ಲಿ ಸುಮಾರು 5 ಗ್ರಾಂ ನಾರಿನಂಶವಿರುತ್ತದೆ. ಇದು ಕರುಳಿನ ಆರೋಗ್ಯ ಮತ್ತು ಹೊಟ್ಟೆ ತುಂಬಿದಂತೆ ಮಾಡಲು ನೆರವಾಗುತ್ತದೆ. ತಜ್ಞರ ಮಾಹಿತಿಯಂತೆ ಪ್ರತಿ 100 ಗ್ರಾಂ ಪೇರಳೆಯಲ್ಲಿ ಸುಮಾರು 5 ಗ್ರಾಂ ನಾರಿನಂಶವಿರುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಹೆಚ್ಚು ನೆರವಾಗುತ್ತದೆ.
ಜೆನ್ ಝೀಗಳನ್ನು ಕಾಡುತ್ತಿದೆ ಕಣ್ಣುರಿ, ಕತ್ತುನೋವು; ಕಾರಣವೇನು?
ಜೀರ್ಣ ಶಕ್ತಿ
ಸೀಬೆಕಾಯಿಗೆ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಸಾಮರ್ಥ್ಯ ಇದೆ. ಆ್ಯಂಟಿ ಬ್ಯಾಕ್ಟೀರಿಯಲ್ ಗುಣವು ತಾವು ತಿಂದ ಆಹಾರವನ್ನು ಬೇಗನೆ ಜೀರ್ಣಪಡಿಸುತ್ತದೆ. ಗ್ಯಾಸ್ಟ್ರಿಕ್ ಹಾಗೂ ಅಜೀರ್ಣ ಸಮಸ್ಯೆ ಇದ್ದವರು ಪೇರಳೆಯನ್ನು ಸೇವಿಸಬಹುದು.
ಪೊಟ್ಯಾಸಿಯಮ್, ಫೋಲೇಟ್‌ನಿಂದ ಸಮೃದ್ಧ
ಪೇರಳೆ ಹೆಚ್ಚಿನ ಪೊಟ್ಯಾಸಿಯಮ್ ಒದಗಿಸುತ್ತದೆ. ಇದು ರಕ್ತದೊತ್ತಡ ಸಮಸ್ಯೆ ನಿವಾರಣೆ ಮಾಡಿ ಸ್ನಾಯುವಿನ ಬೆಂಬಲ ಹಾಗೂ ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಚರ್ಮದ ಆರೋಗ್ಯ ಬೆಂಬಲಿಸುತ್ತದೆ
ಪೇರಳೆ ಹಣ್ಣಿನಲ್ಲಿ 'ಲೈಕೋಪೀನ್' ಎಂಬ ಆ್ಯಂಟಿ ಆಕ್ಸಿಡೆಂಟ್ ಪ್ರಮಾಣವಿದ್ದು ಚರ್ಮ, ಕೂದಲಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಮಧುಮೇಹಿಗಳು ಪೇರಳ ಹಣ್ಣು ಸೇವಿಸಬಹುದೇ?
ಮಧುಮೇಹ ಇರುವವರು ಪೇರಳ ಹಣ್ಣಿನಿಂದ ದೂರವಿರಬೇಕಾಗಿಲ್ಲ. ಇದರಲ್ಲಿ ನೈಸರ್ಗಿಕವಾದ ಸಿಹಿ ಇದ್ದು ನೀರಿನಾಂಶ ಇರುವುದರಿಂದ ಇದನ್ನು ಹಿತಮಿತವಾಗಿ ಸೇವಿಸಬಹುದು. ಆದರೆ ಪೇರಳೆ ಹಣ್ಣಿನ ಜ್ಯೂಸ್ ಕುಡಿಯುವ ಬದಲು, ಸಂಪೂರ್ಣ ಹಣ್ಣನ್ನು ಅಗಿದು ತಿನ್ನುವುದು ಉತ್ತಮ.