Ice cream: ಐಸ್‌ಕ್ರೀಮ್ ಪ್ರಿಯರೇ ಎಚ್ಚರ... ಎಚ್ಚರ! ತಿನ್ನೋ ಮುನ್ನ ಈ ಬಗ್ಗೆ ಹುಷಾರಾಗಿರಿ!
Ice cream: ಐಸ್‌ಕ್ರೀಮ್ ಕುರಿತು ಇದೀಗ ಆತಂಕಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಐಸ್ ಕ್ರೀಮ್ ಉತ್ಪನ್ನಗಳ ಖರ್ಚನ್ನು ಕಡಿಮೆ ಮಾಡಲು ಕೆಲವು ತಯಾರಕರು ಐಸ್ ಕ್ರೀಮ್ ಹಾಗೂ ತಂಪು ಪಾನೀಯ ತಯಾರಿಸುವಾಗ ಡಿಟರ್ಜೆಂಟ್ ಮತ್ತು ಪಾಸ್ಪರಿಕ್ ಆ್ಯಸಿಡ್ ಇತರ ಕಲಬೆರಕೆಗಳನ್ನು ಬಳಸುತ್ತಿರುವ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇರುವ ಐಸ್ ಕ್ರೀಮ್, ಐಸ್ ಕ್ಯಾಂಡಿ ಮತ್ತು ಕೂಲ್ ಡ್ರಿಂಕ್ಸ್ ಅಂಗಡಿಗಳ ಮೇಲೆ ಎಫ್‌ಡಿಎ ರೇಡ್ ನಡೆಸಿ ತಪಾಸನೆ ಮಾಡಿದೆ.

ice cream

ನವದೆಹಲಿ: ಬೇಸಿಗೆ ಎಂದಾಗ ಐಸ್ ಕ್ರೀಮ್ (Ice Cream) ತಿನ್ನಬೇಕೆಂದು ಅನಿಸುವುದು ಸರ್ವೇ ಸಾಮಾನ್ಯ. ಅಂತೆಯೇ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಐಸ್ ಕ್ರೀಮ್ ತಂಪು ಪಾನೀಯ, ಐಸ್ ಕ್ಯಾಂಡಿಗಳು ಲಭ್ಯವಿದ್ದು ಬೇಸಿಗೆ ಕಾಲಕ್ಕೆ ಇವುಗಳ ಬೇಡಿಕೆಯು ಹೆಚ್ಚಿದೆ. ಆದರೆ ಐಸ್‌ಕ್ರೀಮ್ ಕುರಿತು ಇದೀಗ ಆತಂಕಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಐಸ್ ಕ್ರೀಮ್ ಉತ್ಪನ್ನಗಳ ಖರ್ಚನ್ನು ಕಡಿಮೆ ಮಾಡಲು ಕೆಲವು ತಯಾರಕರು ಐಸ್ ಕ್ರೀಮ್ ಹಾಗೂ ತಂಪು ಪಾನೀಯ ತಯಾರಿಸುವಾಗ ಡಿಟರ್ಜೆಂಟ್ ಮತ್ತು ಪಾಸ್ಪರಿಕ್ ಆ್ಯಸಿಡ್ ಇತರ ಕಲಬೆರಕೆಗಳನ್ನು ಬಳಸುತ್ತಿರುವ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಇರುವ ಐಸ್ ಕ್ರೀಮ್, ಐಸ್ ಕ್ಯಾಂಡಿ ಮತ್ತು ಕೂಲ್ ಡ್ರಿಂಕ್ಸ್ ಅಂಗಡಿಗಳ ಮೇಲೆ ಎಫ್‌ಡಿಎ ರೇಡ್ ನಡೆಸಿದೆ. ಕೆಲವು ಅಂಗಡಿಗಳು ನೈರ್ಮಲ್ಯವಿಲ್ಲದೇ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರು ವುದು ಪತ್ತೆಯಾಗಿದ್ದು ಅಂತವರ ವಿರುದ್ಧ ಕಠಿಣ ಕ್ರಮ ಜಾರಿಗೆ ತರಲು ಎಫ್ ಡಿಎ ಅಧಿಕಾರಿಗಳು ಮುಂದಾಗಿದ್ದಾರೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು (ಎಫ್‌ಡಿಎ) ಕರ್ನಾಟಕದಲ್ಲಿ ಉತ್ಪನ್ನಗಳ ಸುರಕ್ಷತಾ ನಿಯಮ ಪಾಲನೆ ಬಗ್ಗೆ ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಇದರಲ್ಲಿ ಕರ್ನಾಟಕದ ಐಸ್ ಕ್ರೀಂ, ಐಸ್ ಕ್ಯಾಂಡಿ, ತಂಪುಪಾನೀಯಗಳ ಸ್ಥಳೀಯ ಉತ್ಪಾದಕ ಘಟಕಗಳದಲ್ಲಿ ಸರಿ ಸುಮಾರು ಅರ್ಧದಷ್ಟು ಉತ್ಪನ್ನಗಳು ಕಳಪೆ ಗುಣಮಟ್ಟದ್ದನ್ನೇ ಬಳಸಿರುವುದು ತಿಳಿದು ಬಂದಿದೆ.
ತಯಾರಕರು ತಮ್ಮ ಲಾಭಕ್ಕಾಗಿ ಡಿಟರ್ಜೆಂಟ್ , ಯೂರಿಯಾ, ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿರು ವುದು ತಿಳಿದು ಬಂದಿದೆ. ಅದೇ ರೀತಿ ನೋಡಲು ಆಕರ್ಷಕವಾಗಿ ಕಾಣುವ ಜೊತೆಗೆ ಐಸ್ ಕ್ರೀಮ್ ಅನ್ನು ರುಚಿಯಾಗಿಸಬೇಕೆಂದು ಸಕ್ಕರೆ ಬದಲು ಸ್ಯಾಕರಿನ್ ಬಳಸಿದ್ದು ಸಹ ಎಫ್ ಡಿಎ ತನಿಖೆ ವೇಳೆ ಪತ್ತೆ ಹಚ್ಚಿದೆ. ಕೆಲವು ತಂಪು ಪಾನೀಯಗಳಲ್ಲಿ ಪಾಸ್ಪರಿಕ್ ಆಮ್ಲ ಅತಿಯಾಗಿ ಬಳಸಿದ್ದು ಇದರ ಸೇವನೆಯಿಂದ ಸ್ನಾಯು ಮತ್ತು ಮೂಳೆಗಳು ಹಾನಿಯಾಗಲಿದೆ ಎಂದು ತಯಾರಿಕಾ ಕಂಪೆನಿಗಳಿಗೆ ಎಫ್ ಡಿಎ ಅಧಿಕಾರಿಗಳು ಈ ಬಗ್ಗೆ ಎಚ್ಚರಿಸಿದ್ದಾರೆ.
ನೈರ್ಮಲ್ಯವೂ ಕಾಪಾಡಿಲ್ಲ:
ಕರ್ನಾಟಕದ ಬಹುತೇಕ ಐಸ್ ಕ್ರೀಂ ಮತ್ತು ತಂಪುಪಾನೀಯ ಉತ್ಪನ್ನ ಘಟಕಕ್ಕೆ ಎಫ್ ಡಿಎ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಐಸ್ ಕ್ರೀಮ್ ತಯಾರಿಸುವ ಬಹುತೇಕ ಸ್ಥಳಗಳು ಕಲುಷಿತವಾಗಿದ್ದು ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರಿನ ಬಳಕೆ ಮಾಡುತ್ತಿರುವುದು ಸಹ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು 97 ಅಂಗಡಿಗಳಿಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ನೋಟಿಸ್ ನೀಡಿದ್ದು 38,000 ರೂ.ಗಳ ದಂಡವನ್ನು ವಿಧಿಸಿದೆ. ಜೊತೆಗೆ ತಕ್ಷಣ ಎಫ್ ಡಿಎ ನಿಯಮಗಳನ್ನು ಅನುಸರಿಸಬೇಕು ಎನ್ನುವ ಎಚ್ಚರಿಕೆ ನೀಡಿದೆ.
ಇದನ್ನು ಓದಿ: Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ
ಏನೆಲ್ಲ ಸಮಸ್ಯೆ ಬರಬಹುದು
- ಕಲಬೆರಕೆ ತಂಪು ಪಾನೀಯ, ಐಸ್ ಕ್ರೀಂ ಸೇವನೆ ಮಾಡಿದರೆ ಚರ್ಮದ ಅಲರ್ಜಿ ಸಮಸ್ಯೆ ಬರಲಿದೆ.
- ಪಾಸ್ಪರಿಕ್ ಆಮ್ಲ ಇರುವ ತಂಪು ಪಾನೀಯ ಸೇವಿಸಿದರೆ ಸ್ನಾಯು ಮತ್ತು ಮೂಳೆಗಳು ಹಾನಿಯಾಗಲಿದೆ.
- ಮಕ್ಕಳಿಗೆ ಹೊಟ್ಟೆ ನೋವು, ಉರಿಯೂತ ಇತ್ಯಾದಿ ಸಮಸ್ಯೆ ಶೀಘ್ರ ಕಾಡಲಿದೆ.
- ಗಂಟಲಿನ ಉರಿ, ಹೊಟ್ಟೆ ಉಬ್ಬಿಸುವುದು, ಉಸಿರುಗಟ್ಟಿಸುವುದು, ಕೆಮ್ಮು , ಉಬ್ಬಸ, ಅಸಿಡಿಟಿ ಇತ್ಯಾದಿ ಆರೋಗ್ಯ ಸಮಸ್ಯೆಗೆ ಕಾರಣ ಆಗಲಿದೆ.
- ಡಿಟರ್ಜೆಂಟ್ ಸೇವಿಸಿದರೆ ಮೂತ್ರಪಿಂಡ ಮತ್ತು ನರಮಂಡಲದ ಹಾನಿಯಾಗಲಿದೆ.
ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸಿಕ್ಕ ಸಿಕ್ಕ ಆಹಾರವನ್ನು ಬೇಕಾಬಿಟ್ಟಿಯಾಗಿ ಸೇವನೆ ಮಾಡಬಾರದು. ಬದಲಿಗೆ ಅದರಲ್ಲಿ ಯಾವೆಲ್ಲ ಅಂಶ ಇದೆ ಅದು ನಿಮ್ಮ ದೇಹಕ್ಕೆ ಪೂರಕವೇ ಎಂಬ ಇತ್ಯಾದಿ ಅಂಶ ಪರಿಶೀಲನೆ ಮಾಡುವ ಹವ್ಯಾಸವನ್ನು ಜನರು ರೂಢಿಸಿಕೊಳ್ಳಬೇಕು. ಇದರಿಂದ ಇಂತಹ ಕಲಬೆರಕೆ ಗಳು ನಿಮ್ಮ ದೇಹಕ್ಕೆ ಹಾನಿ ಮಾಡುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.