ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಧುಮೇಹಿಗಳೇ ಎಚ್ಚರ: ಹಬ್ಬದ ಸಿಹಿಯ ನಡುವೆ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲ ಟಿಪ್ಸ್‌

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿಹಿ ತಿನಿಸುಗಳು ಮತ್ತು ಎಣ್ಣೆ ಪದಾರ್ಥಗಳದ್ದೇ ಕಾರುಬಾರು. ಇಂತಹ ಸಮಯದಲ್ಲಿ ಮಧುಮೇಹ (ಡಯಾಬಿಟಿಸ್) ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ದೊಡ್ಡ ಸವಾಲು. ಹಬ್ಬದ ದಿನಗಳಲ್ಲಿ ಆರೋಗ್ಯ ಕೆಡದಂತೆ ಮಧುಮೇಹಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.

ಹಬ್ಬದ ಸಿಹಿಯ ನಡುವೆ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲ ಟಿಪ್ಸ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 10, 2026 7:00 AM

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿಹಿ ತಿನಿಸುಗಳು ಮತ್ತು ಎಣ್ಣೆ ಪದಾರ್ಥಗಳದ್ದೇ ಕಾರುಬಾರು. ಇಂತಹ ಸಮಯದಲ್ಲಿ ಮಧುಮೇಹ (ಡಯಾಬಿಟಿಸ್) ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು (Health Tips) ದೊಡ್ಡ ಸವಾಲು. ಹಬ್ಬದ ದಿನಗಳಲ್ಲಿ ಆರೋಗ್ಯ ಕೆಡದಂತೆ ಮಧುಮೇಹಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.

ಆಹಾರ ಪದ್ಧತಿಯಲ್ಲಿ ಇರಲಿ ಎಚ್ಚರಿಕೆ

  • ಕಡಿಮೆ ಪ್ರಮಾಣದ ಸಿಹಿ ಸವಿಯಿರಿ: ಸಿಹಿ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಲು ಕಷ್ಟವಾದರೆ, ಅತ್ಯಲ್ಪ ಪ್ರಮಾಣದಲ್ಲಿ ಸವಿಯಿರಿ. ಮೈದಾ ಮತ್ತು ಸಕ್ಕರೆಯಿಂದ ಮಾಡಿದ ಸಿಹಿ ಬದಲಿಗೆ ಡ್ರೈ ಫ್ರೂಟ್ಸ್ ಅಥವಾ ನೈಸರ್ಗಿಕ ಸ್ವೀಟ್ನರ್ ಬಳಸಿದ ಸಿಹಿ ಪದಾರ್ಥಗಳನ್ನು ಆರಿಸಿಕೊಳ್ಳಿ.
  • ಕಾರ್ಬೋಹೈಡ್ರೇಟ್ಸ್ ನಿಯಂತ್ರಣ: ಹಬ್ಬದ ಊಟದಲ್ಲಿ ಅನ್ನ, ಪೂರಿ, ಬಿರಿಯಾನಿಯಂತಹ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ಕಡಿಮೆ ಮಾಡಿ. ಅದರ ಬದಲಿಗೆ ಪ್ರೊಟೀನ್ ಮತ್ತು ನಾರಿನಂಶ ಹೆಚ್ಚಿರುವ ಸಲಾಡ್, ತರಕಾರಿ ಮತ್ತು ಬೇಳೆಕಾಳುಗಳನ್ನು ಹೆಚ್ಚಾಗಿ ಸೇವಿಸಿ.
  • ಖಾಲಿ ಹೊಟ್ಟೆಯಲ್ಲಿ ಇರಬೇಡಿ: ಹಬ್ಬದ ಪೂಜೆ ಅಥವಾ ಓಡಾಟದ ನೆಪದಲ್ಲಿ ಊಟ/ತಿಂಡಿ ಸಮಯವನ್ನು ತಪ್ಪಿಸಬೇಡಿ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ದಿಢೀರ್ ಕುಸಿಯಲು ಕಾರಣವಾಗಬಹುದು.
  • ಹೆಚ್ಚು ನೀರು ಕುಡಿಯಿರಿ: ಹಬ್ಬದ ದಿನಗಳಲ್ಲಿ ಜ್ಯೂಸ್ ಅಥವಾ ಕೋಲಾಗಳ ಬದಲಾಗಿ ಎಳನೀರು, ಮಜ್ಜಿಗೆ ಅಥವಾ ಜೀರಿಗೆ ನೀರನ್ನು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ.
  • ಔಷಧಿಗಳನ್ನು ಮರೆಯಬೇಡಿ: ಎಷ್ಟೇ ಬ್ಯುಸಿ ಇದ್ದರೂ ವೈದ್ಯರು ಸೂಚಿಸಿದ ಇನ್ಸುಲಿನ್ ಅಥವಾ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ.
  • ಲಘು ನಡಿಗೆ: ಹಬ್ಬದ ಊಟದ ನಂತರ ತಕ್ಷಣ ಮಲಗುವ ಬದಲು 15-20 ನಿಮಿಷಗಳ ಕಾಲ ಲಘುವಾಗಿ ಅಡ್ಡಾಡಿ. ಇದು ಸಕ್ಕರೆ ಮಟ್ಟ ತಕ್ಷಣ ಏರದಂತೆ ತಡೆಯುತ್ತದೆ.