ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಮಹತ್ವದ ಅಧ್ಯಯನ ಆರಂಭ

ಆರೋಗ್ಯ ಮತ್ತು ಸಂತೋಷ ಪರಿಕಲ್ಪನೆಯಡಿ ರೂಪಿಸಲಾಗಿರುವ ಈ ಅಧ್ಯಯನವು ಭಾರತೀಯ ವಯಸ್ಕರಲ್ಲಿ ಆರೋಗ್ಯಕರ ವಯಸ್ಸಾಗುವಿಕೆಯನ್ನು ಸಾಧ್ಯವಾಗಿಸುವಲ್ಲಿ ಚಯಾಪಚಯ ಆರೋಗ್ಯ, ಸಮುದಾಯದ ಸಹಭಾಗಿತ್ವ, ಆರೋಗ್ಯ ಮತ್ತು ಸಂತೋಷ, ಸ್ವಾಸ್ಥ್ಯ ಮಾರ್ಗದರ್ಶನ ಹಾಗೂ ಬಯೋಮಾರ್ಕರ್ ಆಧಾರಿತ ವೈಜ್ಞಾನಿಕ ಪುರಾವೆಗಳ ನಡುವಿನ ಸಂಬಂಧಗಳನ್ನು ಅನ್ವೇಷಿಸುವ ಗುರಿ ಹೊಂದಿದೆ.

ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಮಹತ್ವದ ಅಧ್ಯಯನ ಆರಂಭ

-

Profile
Ashok Nayak Nov 4, 2026 4:02 PM

ಬೆಂಗಳೂರು: ಪ್ರಮುಖ ಸ್ವಾಸ್ಥ್ಯ ಸಂಸ್ಥೆಯು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜಂಟಿಯಾಗಿ ಆರೋಗ್ಯಕರ ವಯಸ್ಸಾಗುವಿಕೆಯ ಕುರಿತು ಮಹತ್ವದ, ಬಹುಕೇಂದ್ರಿತ ಸಂಶೋಧನಾ ಅಧ್ಯಯನ ಆರಂಭಿಸಿವೆ.

ಆರೋಗ್ಯ ಮತ್ತು ಸಂತೋಷ ಪರಿಕಲ್ಪನೆಯಡಿ ರೂಪಿಸಲಾಗಿರುವ ಈ ಅಧ್ಯಯನವು ಭಾರತೀಯ ವಯಸ್ಕರಲ್ಲಿ ಆರೋಗ್ಯಕರ ವಯಸ್ಸಾಗುವಿಕೆಯನ್ನು ಸಾಧ್ಯವಾಗಿಸುವಲ್ಲಿ ಚಯಾಪಚಯ ಆರೋಗ್ಯ, ಸಮುದಾಯದ ಸಹಭಾಗಿತ್ವ, ಆರೋಗ್ಯ ಮತ್ತು ಸಂತೋಷ, ಸ್ವಾಸ್ಥ್ಯ ಮಾರ್ಗದರ್ಶನ ಹಾಗೂ ಬಯೋಮಾರ್ಕರ್ ಆಧಾರಿತ ವೈಜ್ಞಾನಿಕ ಪುರಾವೆಗಳ ನಡುವಿನ ಸಂಬಂಧಗಳನ್ನು ಅನ್ವೇಷಿಸುವ ಗುರಿ ಹೊಂದಿದೆ. ಐಐಎಸ್‌ಸಿ ಸಹಯೋಗ ಹಾಗೂ ಸ್ವಾಸ್ಥ್ಯ ಸಂಸ್ಥೆಯ ಬೆಂಬಲದೊಂದಿಗೆ ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಚೆನ್ನೈನ ವಿವಿಧ ಕೇಂದ್ರಗಳಲ್ಲಿ ಈ ಸಂಶೋಧನಾ ಅಧ್ಯಯನ ನಡೆಯಲಿದೆ.

ಭಾರತದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ಎಷ್ಟು ಕಾಲ ಬದುಕುತ್ತಾರೆ ಎಂಬುದರ ಜೊತೆಗೆ ಎಷ್ಟು ಗುಣಮಟ್ಟದಿಂದ ಬದುಕುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿಯೂ ಹೆಚ್ಚುತ್ತಿದೆ. ವೈಜ್ಞಾನಿಕ ಸಂಶೋಧನೆಗಳು ಪೋಷಕಾಂಶಗಳು, ಜೀವನಶೈಲಿ ಮತ್ತು ಚಯಾಪಚಯ ಆರೋಗ್ಯದ ಪ್ರಾಮುಖ್ಯತೆಯನ್ನು ಸತತವಾಗಿ ಒತ್ತಿ ಹೇಳುತ್ತಿದ್ದರೂ, ಸಾಮಾಜಿಕ ಸಂಪರ್ಕ, ಜೀವನದ ಉದ್ದೇಶ, ಸ್ವಾಸ್ಥ್ಯ ಬೆಂಬಲ ವ್ಯವಸ್ಥೆಗಳು ಮತ್ತು ಜೈವಿಕ ಮಾರ್ಕರ್‌ಗಳಂತಹ ಅಂಶಗಳು ಚಯಾಪಚಯ ಆರೋಗ್ಯ ಹಾಗೂ ಒಟ್ಟಾರೆ ಸ್ವಾಸ್ಥ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಇರುವ ಮಾಹಿತಿ ಬಹಳ ಸೀಮಿತವಾಗಿದೆ.

ಇದನ್ನೂ ಓದಿ: Health Tips: ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!

ಈ ಆರೋಗ್ಯ ಮತ್ತು ಸಂತೋಷ ಅಧ್ಯಯನದಲ್ಲಿ 1,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಪ್ರತಿಯೊಬ್ಬರೂ ಸುಮಾರು ಆರು ತಿಂಗಳ ಕಾಲ ಅಧ್ಯಯನಕ್ಕೆ ಒಳಪಡಲಿದ್ದಾರೆ. ಬಹು ಆಯಾಮದ ಮೌಲ್ಯಮಾಪನ ವಿಧಾನದ ಮೂಲಕ ದೈಹಿಕ ಆರೋಗ್ಯ, ಜೈವಿಕ ಮಾರ್ಕರ್‌ಗಳು, ಕರುಳಿನ ಮೈಕ್ರೋಬಯೋಮ್ ಸಂಯೋಜನೆ, ಪೋಷಣೆ, ಜೀವನಶೈಲಿ ಪದ್ಧತಿಗಳು ಮತ್ತು ಕ್ಷೇಮ ಸೂಚಕಗಳನ್ನು ಪರೀಕ್ಷಿಸಲಾಗುತ್ತದೆ. ಇದು ವೈಯಕ್ತಿಕ ಒಳನೋಟಗಳನ್ನು ಒದಗಿಸುವು ದರೊಂದಿಗೆ ಆರೋಗ್ಯ, ಸಂತೋಷ ಮತ್ತು ಸ್ವಾಸ್ಥ್ಯದ ಬಗ್ಗೆ ಆಳವಾದ ವೈಜ್ಞಾನಿಕ ತಿಳುವಳಿಕೆ ಯನ್ನು ನೀಡಲಿದೆ.

ಈ ಕುರಿತು ಮಾತನಾಡಿದ ಸ್ವಾಸ್ಥ್ಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು, "ಸರಿಯಾದ ಪೋಷಣೆಯಾಗಿರಲಿ, ಅವರನ್ನು ಸಕ್ರಿಯವಾಗಿರಿಸುವ ಜನರಿರಲಿ ಅಥವಾ ಪ್ರೇರೇಪಿಸುವ ಸಮುದಾಯವಾಗಿರಲಿ ಜನರ ಸುತ್ತಮುತ್ತ ಸೂಕ್ತ ಬೆಂಬಲವಿದ್ದಾಗ- ಅದು ಅವರು ಆರೋಗ್ಯವಾಗಿರುತ್ತಾರೆ ಎಂದು ಹರ್ಬಲೈಫ್ ಇಂಡಿಯಾದಲ್ಲಿ ನಾವು ನಂಬುತ್ತೇವೆ. ಜನರು ವಯಸ್ಸಾದಂತೆ ಆ ದೈನಂದಿನ ಆಯ್ಕೆಗಳು ಎಷ್ಟು ಮಹತ್ವ ಪಡೆಯುತ್ತವೆ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ, ಮತ್ತು ಆ ಉತ್ತರವು ಭಾರತೀಯರ ಜೀವನಶೈಲಿಯಿಂದಲೇ ಮೂಡಿ ಬರಬೇಕಿದೆ. ಐಐಎಸ್‌ಸಿ ಜೊತೆಗಿನ ಪಾಲುದಾರಿಕೆಯು ಅಂತಹ ಸಂಶೋಧನೆಗೆ ಅಗತ್ಯವಿರುವ ವೈಜ್ಞಾನಿಕ ನಿಖರತೆಯನ್ನು ತಂದುಕೊಡುತ್ತದೆ" ಎಂದು ತಿಳಿಸಿದರು.

ಐಐಎಸ್‌ಸಿಯ ಡೆವಲಪ್‌ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ ವಿಭಾಗದ ಪ್ರೊ. ದೀಪಕ್ ಸೈನಿ ಅವರು ಮಾತನಾಡಿ, "ಸಮುದಾಯ, ಪೋಷಣೆ ಮತ್ತು ದೈನಂದಿನ ಅಭ್ಯಾಸಗಳನ್ನು ಬಾಯಾರ ಹೊಗಳುವುದು ಸುಲಭ, ಆದರೆ ವೈಜ್ಞಾನಿಕವಾಗಿ ಸಾಬೀತುಪಡಿಸುವುದು ಕಷ್ಟ. ಸ್ವಾಸ್ಥ್ಯ ಸಂಸ್ಥೆ ಜತೆಗಿನ ಈ ಸಹಯೋಗದ ಮೂಲಕ, ಕಾಲಾನಂತರದಲ್ಲಿ ಜನರ ಆರೋಗ್ಯದಲ್ಲಿ ಆಗುವ ನೈಜ ಬದಲಾವಣೆಗಳನ್ನು ಗುರುತಿಸಿ ಅರ್ಥಪೂರ್ಣ ವೈಜ್ಞಾನಿಕ ಪುರಾವೆಗಳನ್ನು ಸೃಷ್ಟಿಸುವ ಸುವರ್ಣಾವಕಾಶ ನಮಗೆ ದೊರೆತಿದೆ. ಸ್ವತಂತ್ರ, ಕಟ್ಟುನಿಟ್ಟಿನ ಸಂಶೋಧನೆ ನಡೆಸುವುದು ಮತ್ತು ಪುರಾವೆಗಳು ಎಲ್ಲಿಗೆ ಮುಟ್ಟಿಸುತ್ತವೆಯೋ ಆ ಫಲಿತಾಂಶಗಳನ್ನು ಅತ್ಯಂತ ಪಾರದರ್ಶಕವಾಗಿ ಸಮಾಜಕ್ಕೆ ಮುಟ್ಟಿಸುವುದು ಐಐಎಸ್‌ಸಿಯ ಬದ್ಧತೆಯಾಗಿದೆ. ಈ ಅಧ್ಯಯನದಿಂದ ಹೊರಬರುವ ಜ್ಞಾನವು ಭಾರತೀಯರು ದೀರ್ಘಕಾಲ ಆರೋಗ್ಯವಾಗಿರಲು ಏನು ನೆರವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿದ್ದು, ಜನಸಾಮಾನ್ಯರು, ವೈದ್ಯಕೀಯ ವೃತ್ತಿಪರರು ಹಾಗೂ ನೀತಿ ನಿರೂಪಕರು ಉತ್ತಮ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ದಾರಿದೀಪವಾಗಲಿದೆ" ಎಂದು ವಿವರಿಸಿದರು.