ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vagus Nerve: ವೇಗಸ್ ನರ ಕ್ರಿಯಾಶೀಲವಾಗಿದ್ದರೆ ಈ ಎಲ್ಲಾ ಆರೋಗ್ಯ ಪ್ರಯೋಜನ ನೀವು ಪಡೆಯಬಹುದು!

ನಮ್ಮ ದೇಹದಲ್ಲಿ ವೇಗಸ್ ನರಗಳು ಬಹಳ ಪ್ರಾಮುಖ್ಯ ವಾಗಿದೆ..ಇವುಗಳನ್ನು ಸದಾ ಆ್ಯಕ್ಟಿವ್ ಆಗಿ ಇರುವಂತೆ ಜೀವನ ಶೈಲಿ ರೂಪಿಸಿಕೊಂಡರೆ ಆರೋಗ್ಯಯುತ ಜೀವನ ಶೈಲಿ ನಿಮ್ಮದಾಗಲಿದೆ ಎಂಬ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ವೈದ್ಯರಾದ ಡಾ. ಮಾಲಿನಿ ಎಸ್‌. ಸುತ್ತೂರು ಅವರು ತಿಳಿಸಿಕೊಟ್ಟಿದ್ದಾರೆ. ಸಂಗೀತ ಕೇಳುವುದರಿಂದ, ದೈಹಿಕ ಕೆಲವು ವ್ಯಾಯಾಮ ಮಾಡುದರಿಂದ ವೇಗಸ್ ನರ ಆ್ಯಕ್ಟಿವೇಟ್ ಆಗಲಿದೆ, ಇದರಿಂದ ಅನೇಕ ಆರೋಗ್ಯ ಪ್ರಯೋಜನೆ ಸಿಗಲಿದೆ ಎಂಬ ಬಗ್ಗೆ ಅವರು ಸಲಹೆ ನೀಡಿದ್ದಾರೆ.

ವೇಗಸ್ ನರ ಆ್ಯಕ್ಟಿವ್ ಆದರೆ ಏನೆಲ್ಲ ಆರೋಗ್ಯ ಪ್ರಯೋಜನ ಇದೆ ಗೊತ್ತಾ?

ಸಂಗ್ರಹ ಚಿತ್ರ -

Profile
Pushpa Kumari Nov 25, 2025 6:00 AM

"ಆರೋಗ್ಯವೇ ಭಾಗ್ಯ ಎಂಬ ಮಾತಿದೆ".. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯೂ ನಮಗೆ ಅರಿವಿಲ್ಲದಂತೆ ಅನೇಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಇಂತಹ ಸಮಸ್ಯೆಗೆ ವೈದ್ಯಕೀಯ ಮೊರೆ ಹೋದಾಗ ಔಷಧಗಳನ್ನು ಪಡೆದು ವ್ಯಾಯಮ ಮಾಡಲು ಸಲಹೆ ನೀಡುತ್ತಾರೆ. ಆದರೆ ನೀವು ನಿತ್ಯ ನಿಮ್ಮ ದೇಹದ ಬಗ್ಗೆ ಸ್ವ ಕಾಳಜಿ ಹೊಂದಿ ಕೆಲವೊಂದು ಉಪಯುಕ್ತ ಸಲಹೆ ಪಾಲಿಸಿದರೆ ರೋಗ ಬಾರದಂತೆ ಮೊದಲೇ ತಡೆಯಬಹುದು. ನಮ್ಮ ದೇಹದಲ್ಲಿ ವೇಗಸ್ ನರಗಳು (Vagus Nerve) ಬಹಳ ಪ್ರಾಮುಖ್ಯ ವಾಗಿದೆ..ಇವುಗಳನ್ನು ಸದಾ ಆ್ಯಕ್ಟಿವ್ ಆಗಿ ಇರುವಂತೆ ಜೀವನ ಶೈಲಿ ರೂಪಿಸಿಕೊಂಡರೆ ಆರೋಗ್ಯಯುತ ಜೀವನ ಶೈಲಿ ನಿಮ್ಮದಾಗಲಿದೆ ಎಂಬ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ವೈದ್ಯರಾದ ಡಾ. ಮಾಲಿನಿ ಎಸ್‌. ಸುತ್ತೂರು (Dr. Malini S. Suttur) ಅವರು ತಿಳಿಸಿಕೊಟ್ಟಿದ್ದಾರೆ. ಸಂಗೀತ ಕೇಳುವುದರಿಂದ ದೈಹಿಕ ಕೆಲವು ವ್ಯಾಯಾಮ ಮಾಡುದರಿಂದ ವೇಗಸ್ ನರ ಆ್ಯಕ್ಟಿವೇಟ್ ಆಗಲಿದೆ ಇದರಿಂದ ಅನೇಕ ಆರೋಗ್ಯ ಪ್ರಯೋಜನೆ ಸಿಗಲಿದೆ ಎಂಬ ಬಗ್ಗೆ ಅವರು ಸಲಹೆ ನೀಡಿದ್ದಾರೆ.

ವೇಗಸ್ ನರ ಚಟುವಟಿಕೆಯಿಂದ ಇದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗಲಿದೆ. ಹಾಗಾದರೆ ಈ ನರ ಆ್ಯಕ್ಟಿವ್ ಆಗಿರುವಂತೆ ಮಾಡಲು ನಾವು ಏನು ಮಾಡಬೇಕು ಎಂಬ ಪ್ರಶ್ನೆ ಬಹುತೇಕರಿಗೆ ಕಾಡಲಿದೆ. ಇದಕ್ಕಾಗಿ ಬರಿಗಾಲಿನಲ್ಲಿ ನಡೆಯುವುದು, ನೀರಿನಲ್ಲಿ ವಾಕ್ ಮಾಡುವುದು, ಚಪ್ಪಾಳೆ ತಟ್ಟುವುದು, ಹಾಡು ಹೇಳುವುದು, ಹಾಡು ಗುಣುಗುವುದು, ಹೀಗೆ ಮಾಡುವುದರಿಂದ ವೇಗಸ್ ನರ ಆ್ಯಕ್ಟಿವೇಟ್ ಆಗಲಿದೆ ಎಂದು ಅವರು ಹೇಳಿದ್ದಾರೆ.



ವೇಗಸ್ ನರ ಕ್ರಿಯಾಶೀಲವಾಗಿರಲು ನಿಮ್ಮ ದೈಹಿಕ ಚಟು ವಟಿಕೆಯ ಜೊತೆಗೆ ನಾರಿನಾಂಶಯುಕ್ತ ಆಹಾರ ಸೇವಿಸುವುದು ಕೂಡ ಬಹಳ ಮುಖ್ಯ. ಹಣ್ಣು, ತರಕಾರಿ, ಸೊಪ್ಪು ಇತರ ನಾರಿನಾಂಶ ಹೊಂದಿದ್ದ ಆಹಾರ ಸೇವಿಸಬೇಕು. ಅದರೊಂದಿಗೆ ಊಟದ ಜೊತೆ ಮೊಸರು, ಮಜ್ಜಿಗೆ, ಉಪ್ಪಿನ ಕಾಯಿ, ಸಲಾಡ್, ಅನ್ನ, ರಾಗಿ ಗಂಜಿ, ಹಣ್ಣಿನ ಜ್ಯೂಸ್ ಇವುಗಳ ಸೇವನೆ ಕೂಡ ಮಾಡಬೇಕು. ಇವುಗಳಿಂದ ವೇಗಸ್ ಟೋನ್ ಲೆವೆಲ್ ಹೆಚ್ಚಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

Health Tips: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿದರೆ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ಮುಕ್ತಿ

ವೇಗಸ್ ನರಗಳು ಹೃದಯ ಬಡಿತ, ಉಸಿರಾಟ ಮತ್ತು ಜೀರ್ಣಕ್ರಿಯೆಯಂತಹ ಪ್ರಮುಖ ಕಾರ್ಯ ಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಹೀಗಾಗಿ ಬ್ರೀತ್ ಇನ್ ಎಕ್ಸ್ ಸೈಜ್ ಮಾಡುವುದು ಕೂಡ ಒಳ್ಳೆಯದು. ತುಂಬಾ ಒತ್ತಡದ ಪರಿಸ್ಥಿತಿಯಲ್ಲಿ ಆಳವಾಗಿ ಉಸಿರು ತೆಗೆದುಕೊಳ್ಳುವ ಎಕ್ಸ್ ಸೈಜ್ ಮಾಡಿದರೆ ವೇಗಸ್ ನರ ಆ್ಯಕ್ಟಿವ್ ಆಗಲಿದೆ. ಆಗ ಒತ್ತಡ ಕೂಡ ನಿವಾರಣೆ ಆಗಲಿದೆ. ಮೆಡಿಟೇಶನ್, ಯೋಗ, ಸರಳ ಜೀವನ ಶೈಲಿಯಿಂದ ಕೂಡ ವೇಗಸ್ ನರಗಳು ಆ್ಯಕ್ಟಿವ್ ಆಗಲಿದೆ. ಹೀಗಾಗಿ ಆರೋಗ್ಯಯುತ ಜೀವನ ಶೈಲಿ ನಿಮ್ಮದಾಗಲಿದೆ ಎಂದು ಅವರು ಈ ಬಗ್ಗೆ ಕೂಲಂಕುಷವಾಗಿ ತಿಳಿಸಿದ್ದಾರೆ.

ಸಾಧಕರು, ತತ್ವಜ್ಞಾನಿಗಳು, ವಿಜ್ಞಾನಿಗಳು ಒಂದು ಕಾಲದಲ್ಲಿ ಸಾಮಾನ್ಯರಂತೆ ಇದ್ದವರ ವೇಗಸ್ ನರ ಆ್ಯಕ್ಟಿವ್ ಆದ ಪರಿಣಾಮವೇ ಹೊಸ ಹೊಸ ಸಂಶೋಧನೆ, ವಿಭಿನ್ನ ಆಲೋಚನೆಗಳು ಅವರಿಗೆ ಮೂಡಿಬಂದಿದೆ. ಹೀಗಾಗಿ ಈ ವೇಗಸ್ ನರ ಆರೋಗ್ಯಯುತವಾಗಿ ಇರುವಂತೆ ನೋಡಿಕೊಂಡರೆ ದೊಡ್ಡ ಸಾಧನೆಗಳಿಗೂ ನಿಮ್ಮನ್ನು ನೀವು ಸಿದ್ಧಗೊಳಿಸಿದಂತೆ ಎಂದು ಅವರು ಸಲಹೆ ನೀಡಿದ್ದಾರೆ.