ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಟೆ ವಾದ್ಯಗಳಿಗೆ ಜನ ಹುಚ್ಚೆದ್ದು ಕುಣಿಯೋದ್ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ

Music Instruments: ಸಂಗೀತವು ಮನಸ್ಸಿಗೆ ವಿಶ್ರಾಂತಿ, ಶಾಂತಿ ಮತ್ತು ಖುಷಿಯನ್ನು ನೀಡುವ ಅದ್ಭುತ ಕಲೆ. ಪದಗಳ ಅಗತ್ಯವಿಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಇದಕ್ಕಿದೆ. ಪ್ರತಿಯೊಂದು ಸ್ವರವೂ ಮನದಾಳವನ್ನು ಸ್ಪರ್ಶಿಸಿ, ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ವಾದ್ಯಗಳ ನಾದ ಹೇಗೆ ವೈಜ್ಞಾನಿಕವಾಗಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ? ಎಂಬುದರ ವಿಚಾರಗಳ ಕುರಿತು ಪ್ರೊ. ಮಾಲಿನಿ ವಿವರಿಸಿದ್ದಾರೆ.

ತಮಟೆ ವಾದ್ಯಗಳಿಗೆ ಜನ ಆಕರ್ಷಿತರಾಗೋದು ಯಾಕೆ?

ಪ್ರೊ. ಸುತ್ತೂರು ಮಾಲಿನಿ -

Profile
Pushpa Kumari May 2, 2026 7:00 AM

ಬೆಂಗಳೂರು, ಮೇ 2: ವಾದ್ಯಗಳ ಸಂಗೀತವು ಮನಸ್ಸಿಗೆ ವಿಶ್ರಾಂತಿ, ಶಾಂತಿ ಮತ್ತು ಖುಷಿಯನ್ನು ನೀಡುವ ಅದ್ಭುತ ಕಲೆ. ಪದಗಳ ಅಗತ್ಯವಿಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಇವುಗಳಿಗಿದೆ. ಪ್ರತಿಯೊಂದು ಸ್ವರವೂ ಮನದಾಳವನ್ನು ಸ್ಪರ್ಶಿಸಿ, ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ವಾದ್ಯಗಳ ನಾದ (Music Instruments) ಹೇಗೆ ವೈಜ್ಞಾನಿಕವಾಗಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ? ಎಂಬುದರ ಕುರಿತು ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗೆ ಪ್ರೊ. ಮಾಲಿನಿ ತಿಳಿಸಿದ್ದಾರೆ.

ಯಾವುದೇ ಸಂಗೀತ ವಾದನವಿರಲಿ ಒತ್ತಡ ನಿರ್ವಹಣೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಕೊಳಲು, ವೀಣೆ, ತಬಲ ಇಂತಹ ವಾದನಗಳ ಸ್ವರವನ್ನು ಮೆದುಳು ಮೊದಲು ಆಕರ್ಷಿಸುತ್ತದೆ. ಅದರಲ್ಲೂ ವಾದ್ಯ, ತಮಟೆಯ ನಾದವು ಮನುಷ್ಯನಲ್ಲಿರುವ ಮಾನಸಿಕ ಸಮಸ್ಯೆಯನ್ನು ದೂರ ಮಾಡಿ ನೆಮ್ಮದಿ ನೀಡುವಂತಹ ವಾದನ.

ವಿಡಿಯೊ ನೋಡಿ:



ನಾಗರಿಕತೆ ಆರಂಭವಾಗುವ ಮೊದಲು ಜನರು ಕಾಡಿನಲ್ಲಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ತಮಟೆ, ಡಂಗುರಗಳನ್ನು ಬಾರಿಸುತ್ತಿದ್ದರು. ಹಳೆಯ ಕಾಲದಲ್ಲಿ ಹಳ್ಳಿಗಳಲ್ಲಿ ಸುದ್ದಿ ಸಾರಲು ತಮಟೆಯನ್ನು ಬಳಸಲಾಗುತ್ತಿತ್ತು. ಈ ಶಬ್ದವು ಮುಂಭಾಗದ ಮೆದುಳನ್ನು ಹೆಚ್ಚು ಆ್ಯಕ್ಟೀವ್ ಮಾಡುತ್ತದೆ. ಜನ ಹುಚ್ಚೆದ್ದು ಕುಣಿಯುವಷ್ಟು ಈ ಶಬ್ದಕ್ಕೆ ಆಕರ್ಷಿತಗೊಳ್ಳುತ್ತಾರೆ.

ತಮಟೆಯ ನಾದವು ವೇಗಸ್ ನರ್ವ್ ಅನ್ನು ಆ್ಯಕ್ಟೀವ್ ಮಾಡುತ್ತದೆ. ಅದೇ ರೀತಿ ಈ ಶಬ್ದವು ಆತ್ಮವಿಶ್ವಾಸ ಹೆಚ್ಚು ಮಾಡಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ತಮಟೆ ಬಾರಿಸುವಾಗ ಅದರ ಶಬ್ದಕ್ಕೆ ಮರುಹೋಗಿ ಅದರ ತಾಳಕ್ಕೆ ಕುಣಿಯುವಾಗ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುವಂತೆ ಕೂಡ ಮಾಡುತ್ತದೆ.

ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!

ಉಪಯೋಗವೇನು?

  • ತಮಟೆಯ ಶಬ್ದವನ್ನು ಆಲಿಸುವುದರಿಂದ ನಮ್ಮಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ.
  • ಮನಸ್ಸಿನ ದುಗುಡ, ಆತಂಕವನ್ನು ದೂರ ಮಾಡಲು ತಮಟೆಯ ಶಬ್ದ ಸಹಾಯ ಮಾಡುತ್ತದೆ.
  • ಈ ಶಬ್ದವು ಆತ್ಮವಿಶ್ವಾಸ ಹೆಚ್ಚಿಸುತ್ತದೆ.
  • ದೇಹದಲ್ಲಿ ಖುಷಿಯ ಹಾರ್ಮೊನು ಬಿಡುಗಡೆಯಾಗಿ ದೇಹ ಆ್ಯಕ್ಟೀವ್ ಆಗಿ ಇರುವಂತೆ ಮಾಡುತ್ತದೆ.