RR vs DC: ಧೋನಿಯಂತೆ ಐದು ಟ್ರೋಫಿ ಗೆಲ್ಲಬೇಕು ಎಂದ ಕೆ.ಎಲ್ ರಾಹುಲ್
IPL 2026: 'ಮಹಿ ಭಾಯ್ (ಧೋನಿ) ಅವರ ದಾಖಲೆಯನ್ನು ಮೀರಿದ್ದೆ ಎಂಬ ಅರಿವು ನನಗೆ ಇರಲಿಲ್ಲ. ವೈಯಕ್ತಿಕ ದಾಖಲೆಗಳನ್ನು ಸಾಧಿಸುವುದು ಒಂದು ರೀತಿಯಲ್ಲಿ ಒಳ್ಳೆಯದು. ಅವು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ. ಆದರೆ ಧೋನಿಯವರ ಐದು ಪ್ರಶಸ್ತಿ ಗೆಲುವಿನ ದಾಖಲೆಯನ್ನು ಸಮ ಮಾಡುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ’ ಎಂದು ರಾಹುಲ್ ಹೇಳಿದರು.
KL Rahul posing with the orange cap -
ಜೈಪುರ, ಮೇ 2: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರಂತೆ ಐದು ಸಲ ಐಪಿಎಲ್(IPL 2026) ಟ್ರೋಫಿ ಜಯಿಸುವುದು ತಮ್ಮ ಗುರಿ ಎಂದು ಡೆಲ್ಲಿ ಕ್ಯಾಪಿಟಲ್ಸ್(RR vs DC) ತಂಡದ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್(KL Rahul) ಹೇಳಿದ್ದಾರೆ.
ಶುಕ್ರವಾರ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 40 ಎಸೆತಗಳಲ್ಲಿ 75 ರನ್ ಬಾರಿಸಿದ್ದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆ ಬಳಿಕ ಜಿಯೊ ಹಾಟ್‌ಸ್ಟಾರ್ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಸ್ಟ್ರೈಕ್ ರೇಟ್ ಹಲವು ವರ್ಷಗಳಿಂದ ಯಾವಾಗಲೂ ಚರ್ಚಾಸ್ಪದ ವಿಷಯವಾಗಿದೆ, ಆ ನಿಟ್ಟಿನಲ್ಲಿ ಕೆಲಸ ಮಾಡಲು ಸಂತೋಷವಾಗಿದೆ ಎಂದು ಕೆಎಲ್ ರಾಹುಲ್ ಹೇಳಿದರು.
'ಮಹಿ ಭಾಯ್ (ಧೋನಿ) ಅವರ ದಾಖಲೆಯನ್ನು ಮೀರಿದ್ದೆ ಎಂಬ ಅರಿವು ನನಗೆ ಇರಲಿಲ್ಲ. ವೈಯಕ್ತಿಕ ದಾಖಲೆಗಳನ್ನು ಸಾಧಿಸುವುದು ಒಂದು ರೀತಿಯಲ್ಲಿ ಒಳ್ಳೆಯದು. ಅವು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತವೆ. ಆದರೆ ಧೋನಿಯವರ ಐದು ಪ್ರಶಸ್ತಿ ಗೆಲುವಿನ ದಾಖಲೆಯನ್ನು ಸಮ ಮಾಡುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ’ ಎಂದರು.
‘ಕ್ರಿಕೆಟ್ ತಂಡದ ಆಟವಾಗಿದೆ. ಟ್ರೋಫಿ ಜಯಿಸುವುದು ತಂಡಗಳ ಪ್ರಮುಖ ಗುರಿಯಾಗಿರುತ್ತದೆ. ಅಂತಹ ತಂಡವನ್ನು ಪ್ರತಿನಿಧಿಸುವುದು ಹೆಚ್ಚು ತೃಪ್ತಿ ಕೊಡುವ ಸಂಗತಿ. ತಂಡ ಯಾವುದೇ ಆಗಿದ್ದರೂ ಟ್ರೋಫಿ ಗೆಲ್ಲುವುದೇ ನನ್ನ ಗುರಿ’ ಎಂದರು.
🚨 KL RAHUL TAKES ON HIS STRIKE RATE AFTER WIN AGAINST RR 🚨
— Cricket Central (@CricketCentrl) May 1, 2026
KL Rahul said: "Strike-rate was much talked about over the years. That's something I have worked on. I am happy I am doing what's required by the team and doing what modern T20 cricket requires and yeah, that's… pic.twitter.com/Ol7AFhbxOg
'ಚಿನ್ನಸ್ವಾಮಿ ಕ್ರೀಡಾಂಗಣದೊಂದಿಗೆ ನನಗೆ ಭಾವನಾತ್ಮಕ ನಂಟು ಇದೆ. ನನ್ನ ತವರಿನ ಅಂಗಳ ಅದು. ಅಲ್ಲದೇ ಆರ್‌ಸಿಬಿ ಎದುರು ಆಡುವುದು ಕೂಡ ಒಂದು ರೀತಿಯ ವಿಶೇಷ ಸಂಗತಿಯಾಗಿದೆ’ ಎಂದರು. ಹಾಲಿ ಆವೃತ್ತಿಯಲ್ಲಿ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ರಾಹುಲ್ ಆಡಿದ 9 ಪಂದ್ಯಗಳಿಂದ 433 ರನ್ ಗಳಿಸಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 152 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಪೇರಿಸಿದ ಭಾರತೀಯ ದಾಖಲೆ ನಿರ್ಮಿಸಿದ್ದರು.
RR vs DC: ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ, ಪಂದ್ಯ ಸೋಲಿಗೆ ಬೌಲಿಂಗ್ ವೈಫಲ್ಯ ಕಾರಣ; ರಿಯಾನ್ ಪರಾಗ್
ಕೊಹ್ಲಿ ದಾಖಲೆ ಮುರಿದ ರಾಹುಲ್
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರಾಹುಲ್ ಈ ಸಾಧನೆಯೊಂದಿಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ರಾಜಸ್ಥಾನ್ ಪರ ಅತ್ಯಧಿಕ ಅರ್ಧಶತಕ ಸಿಡಿಸಿದ ಪಟ್ಟಿಯಲ್ಲಿ ಕೊಹ್ಲಿ(7 ಬಾರಿ)ಯನ್ನು ಹಿಂದಿಕ್ಕಿದ್ದಾರೆ. ಸದ್ಯ ಅವರು ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಉಭಯ ಆಟಗಾರರು 8 ಅರ್ಧಶತಕ ಸಿಡಿಸಿದ್ದಾರೆ.