ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ; ಮತ್ತೆ ಏರಿಕೆಯಾಗಲಿದೆ ಹೋಟೆಲ್‌ ತಿಂಡಿ- ತಿನಿಸು

ಮಧ್ಯ ಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆಯಿಂದ ಜನ ಹೈರಾಣಾಗಿದ್ದರು. ಇದರ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಎನ್ನುವಂತೆ ಮೇ 1ರಿಂದ ವಾಣಿಜ್ಯ ಅನಿಲ (LPG) ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಹೊಟೆಲ್‌ನ ತಿಂಡಿ ತಿನಿಸುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ;  ಏರಿಕೆಯಾಗಲಿದೆ ಹೋಟೆಲ್‌ ತಿಂಡಿ

ಸಾಂದರ್ಭಿಕ ಚಿತ್ರ -

Vishakha Bhat Heggar
Vishakha Bhat Heggar May 2, 2026 8:05 AM

ಬೆಂಗಳೂರು: ಮಧ್ಯ ಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆಯಿಂದ ಜನ ಹೈರಾಣಾಗಿದ್ದರು. ಇದರ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಎನ್ನುವಂತೆ ಮೇ 1ರಿಂದ ವಾಣಿಜ್ಯ ಅನಿಲ (LPG) ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಮೇ 1 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಬರೊಬ್ಬರಿ ರೂ.993 ರಷ್ಟು ಹೆಚ್ಚಳ ಮಾಡಲಾಗಿದೆ. ಸದ್ಯ ಬೆಂಗಳೂರು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ.3,071.50 ತಲುಪಿದೆ. ಇದರಿಂದಾಗಿ ಹೊಟೆಲ್‌ ಉದ್ಯಮಕ್ಕೂ ಬಿಸಿ ತಟ್ಟಿದ್ದು, ಊಟ, ತಿಂಡಿ ಬೆಲೆ ಇನ್ನಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ವಾಣಿಜ್ಯ ಸಿಲಿಂಡರ್ ದರ ಏರಿಕೆಯ ಬೆನ್ನಲ್ಲೇ, ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಊಟ ಮತ್ತು ತಿಂಡಿಯ ದರಗಳನ್ನು ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸುತ್ತಿದೆ. ನಷ್ಟವನ್ನು ಸರಿದೂಗಿಸಲು ಶೇ. 10 ರಿಂದ 20 ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಸೌದೆ ಒಲೆ, ಎಲೆಕ್ಟ್ರಿಕ್‌ ಇಂಡಕ್ಷನ್‌ ಮತ್ತಿತರ ವ್ಯವಸ್ಥೆಗಳಿಂದ ಅಡುಗೆ ತಯಾರಿಗೆ ಹೋಟೆಲ್‌ಗಳು ಮುಂದಾಗಿದ್ದವು. ಆದ್ದರಿಂದ ಆಗಲೂ ಒಂದಷ್ಟು ಪ್ರಮಾಣದಲ್ಲಿ ತಿನಿಸುಗಳ ದರ ಹೆಚ್ಚಳ ಮಾಡಲಾಗಿತ್ತು.

ಕಾಫಿ-ಟೀ 3 ರಿಂದ 5 ರುಪಾಯಿ, ತಿಂಡಿಗಳಿಗೆ 5 ರು. ಮತ್ತು ಊಟಕ್ಕೆ 10 ರು. ಬೆಲೆ ಅಧಿಕವಾಗುವ ಸಾಧ್ಯತೆ ಇದೆ. ದೊಡ್ಡ ಹೋಟೆಲ್‌ಗಳಲ್ಲಿ ದುಬಾರಿ ದರ ಇರುವುದರಿಂದ ಇವುಗಳು ಬೆಲೆ ಹೆಚ್ಚಳಕ್ಕೆ ಮುಂದಾಗುವ ಸಾಧ್ಯತೆ ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ. ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡಿರುವುದನ್ನು ಖಂಡಿಸಿರುವ ಬೆಂಗಳೂರು ಹೋಟೆಲ್‌ಗಳ ಸಂಘ, ಇದರಿಂದ ಅನಿವಾರ್ಯವಾಗಿ ತಿನಿಸುಗಳ ದರ ಹೆಚ್ಚಳ ಮಾಡಬೇಕಾಗುತ್ತದೆ ಎಂದು ಮುನ್ಸೂಚನೆ ನೀಡಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರೂ, 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರದ ಸಬ್ಸಿಡಿ ಹಾಗೂ ನಿಯಂತ್ರಣ ವ್ಯವಸ್ಥೆಯ ಕಾರಣದಿಂದ ಗೃಹ ಬಳಕೆಯ ಗ್ಯಾಸ್ ದರ ಸ್ಥಿರವಾಗಿಯೇ ಮುಂದುವರಿದಿದೆ.