ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Fitness Tips: ದಿನ ನಿತ್ಯ ವಾಕಿಂಗ್‌ ಮಾಡಿದರೂ ತೂಕ ಇಳಿಕೆಯಾಗಿಲ್ಲವೇ? ಅದಕ್ಕೆ ಈ ತಪ್ಪುಗಳೇ ಕಾರಣ!

Walking Tips: ಕೆಲವರು ದಿನ ನಿತ್ಯದ ಆಹಾರ ಬಿಟ್ಟಾದರೂ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಅದರಲ್ಲೂ ತೂಕ ಇಳಿಕೆಗೆ ತಜ್ಞರು ನೀಡುವ ಸರಳ ಸಲಹೆ ಎಂದರೆ ನಡಿಗೆ ಅಥವಾ ವ್ಯಾಯಾಮ. ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವ ನ್ನು ವೃದ್ಧಿಸಿಕೊಳ್ಳಲು ನಡಿಗೆ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗ. ಆದರೆ, ದಿನವೂ ತಪ್ಪದೇ ನಡೆದರೂ ಅನೇಕರಿಗೆ ತೂಕ ಇಳಿಕೆಯಾಗುವುದಿಲ್ಲ. ಇದಕ್ಕೆ ಕಾರಣ ವಾಕಿಂಗ್ ವೇಳೆ ಮಾಡುವ ಕೆಲವೊಂದು ತಪ್ಪು.

ವಾಕಿಂಗ್ ವೇಳೆ ಈ ತಪ್ಪುಗಳನ್ನು ಮಾಡದಿರಿ!

ಸಾಂದರ್ಭಿಕ ಚಿತ್ರ -

Profile
Pushpa Kumari Aug 27, 2026 7:03 AM

ಬೆಂಗಳೂರು: ತೂಕ ಇಳಿಕೆ (Weight Loss) ಅನ್ನೊಂದು ಇತ್ತೀಚಿನ ಯುವಜನರ ಹಾಟ್ ಟಾಪಿಕ್ ಎನಿಸಿಕೊಂಡಿದೆ. ಇದಕ್ಕಾಗಿ ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಡಯೆಟ್, ವರ್ಕೌಟ್, ಅಲ್ಲದೆ ದಿನ ನಿತ್ಯದ ಆಹಾರ ಬಿಟ್ಟಾದರೂ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಅದರಲ್ಲೂ ತೂಕ ಇಳಿಕೆಗೆ ತಜ್ಞರು ನೀಡುವ ಸರಳ ಸಲಹೆ ಎಂದರೆ ಅದು ನಡಿಗೆ ಅಥವಾ ವ್ಯಾಯಾಮ. ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ನಡಿಗೆ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗ. ಆದರೆ, ದಿನವೂ ತಪ್ಪದೇ ನಡೆದರೂ ಅನೇಕರಿಗೆ ತೂಕ ಇಳಿಕೆಯಾಗುವುದಿಲ್ಲ. ಇದಕ್ಕೆ ಕಾರಣ ವಾಕಿಂಗ್ ಮಾಡುವಾಗ ಮಾಡುವ ಕೆಲವೊಂದು ತಪ್ಪು. ಅದೇನು ಎನ್ನುವ ವಿವರ ಇಲ್ಲಿದೆ.

ಒಂದೇ ವೇಗದಲ್ಲಿ ನಡೆಯುವುದು

ಕೆಲವರು ನಡಿಗೆ ಅಂದಾಗ ಸುಮ್ಮನೆ ನಿಧಾನವಾಗಿ ನಡೆಯುತ್ತಾರೆ. ಆದರೆ ವೇಗವಾಗಿ ನಡೆದರೆ ಮಾತ್ರ ಕ್ಯಾಲೊರಿ ಕರಗುತ್ತದೆ. ಅದರಲ್ಲೂ ವಾಕಿಂಗ್‌ ಮಾಡುವಾಗ ಮಧ್ಯ ಮಧ್ಯೆ ವೇಗ ಹೆಚ್ಚಿಸುವುದು ಉತ್ತಮ. ಹಾಗಾಗಿ ನಿಮ್ಮ ದಿನಚರಿಯಲ್ಲಿ ಚುರುಕಾದ ನಡಿಗೆಯ ಅವಧಿಗಳನ್ನು ಸೇರಿಸಲು ಪ್ರಯತ್ನಿಸಿ.

​ಅತೀ ಕಡಿಮೆ ಅವಧಿ ತೆಗೆದುಕೊಳ್ಳುವುದು

ವಾರಕ್ಕೆ ಒಂದೆರಡು ದಿನ ಮಾತ್ರವಲ್ಲ ಪ್ರತಿದಿನ ನಡಿಗೆ ಅನ್ನೋದು ನಿಮ್ಮ ಅಭ್ಯಾಸವಾಗಿರಬೇಕು. ಇದ್ದಕ್ಕಿದ್ದಂತೆ ಒಂದು ಗಂಟೆ ನಡೆಯಲು ಪ್ರಯತ್ನಿಸುವ ಬದಲು, ನಿಮ್ಮ ಫಿಟ್‌ನೆಸ್ ಮಟ್ಟವನ್ನು ಅವಲಂಬಿಸಿ ಪ್ರತಿ ದಿನದ ನಡಿಗೆಗೆ 5ರಿಂದ 10 ನಿಮಿಷಗಳನ್ನು ನಿಗದಿಪಡಿಸಿ‌.

ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು?

ದೇಹ ಸಕ್ರಿಯ ಇರಿಸಿ

ಕೆಲವರು ನಡಿಗೆಯ ನಂತರ ದೇಹ ಸುಸ್ತು ಎಂದು ಒಂದೇ ಕಡೆ ಕುಳಿತುಕೊಳ್ಳುತ್ತಾರೆ ಅಥವಾ ಮಲಗುತ್ತಾರೆ‌. ಬೆಳಗ್ಗೆ ವಾಕಿಂಗ್‌ ಮಾಡಿದ ನಂತರ ದಿನ ಪೂರ್ತಿ ಒಂದೇ ಕಡೆ ಕುಳಿತಿದ್ದರೆ ನಡಿಗೆಯ ಪ್ರಯೋಜನ ಸಿಗುವುದಿಲ್ಲ. ದಿನವಿಡಿ ಏನಾದರೂ ದೈಹಿಕವಾಗಿ ಕೆಲಸ ಮಾಡುವುದು ಅಥವಾ ಆ್ಯಕ್ಟೀವ್ ಆಗಿ ಇರಿಸಿ.

ಕ್ಯಾಲೊರಿಗಳನ್ನು ಹೆಚ್ಚಿಸುವುದು

ನಡಿಗೆಯಲ್ಲಿ ಎಷ್ಟು ಕ್ಯಾಲೊರಿಗಳು ಸುಡುತ್ತವೆ ಎಂಬುದನ್ನು ಅತಿಯಾಗಿ ಅಂದಾಜು ಮಾಡುವುದು ಸಾಮಾನ್ಯ ತಪ್ಪುಗಳಲ್ಲಿ ಒಂದು. ದೀರ್ಘ ನಡಿಗೆಯು ನಿಮಗೆ ಹಸಿವು ಜಾಸ್ತಿ ಮಾಡಬಹುದು. ಆದರೆ ನಂತರ ಹೆಚ್ಚಿನ ಕ್ಯಾಲೋರಿ ಆಹಾರ ಅಥವಾ ತಿಂಡಿಯನ್ನು ತಿನ್ನುವುದರಿಂದ ಕ್ಯಾಲೊರಿಗಳನ್ನು ಹೆಚ್ಚು ಮಾಡಬಹುದು.

ನಿಮ್ಮ ನಡಿಗೆ ಮಾರ್ಗವನ್ನು ಎಂದಿಗೂ ಬದಲಾಯಿಸಬೇಡಿ

ನಿಮ್ಮ ದೇಹವು ಹೊಂದಿಕೊಂಡಂತೆ ಅದೇ ವೇಗದಲ್ಲಿ ಒಂದೇ ವೇಗದಲ್ಲಿ ನಡೆಯುವುದು ಸುಲಭವಾಗುತ್ತದೆ. ನಿಮ್ಮ ದಿನಚರಿಯೊಂದಿಗೆ ನೀವು ಆರಾಮದಾಯಕವಾದ ಮಾರ್ಗವನ್ನು ಪ್ರಯತ್ನಿಸಿ, ನಡುವೆ ಏರಿಳಿತವಿರುವ ದಾರಿ ಅಥವಾ ಹಾದಿಯನ್ನು ಬದಲಾಯಿಸಿ.

​ತಪ್ಪಾದ ಶರೀರ ಭಂಗಿ

ಬಗ್ಗಿ ನಡೆಯುವುದು, ಕೈ ಕಟ್ಟಿ ನಡೆಯುವುದು ಸರಿಯಲ್ಲ. ಬೆನ್ನು ನೇರವಿಟ್ಟು ಸಡಿಲಗೊಳಿಸಿ ಸರಿಯಾದ ಚಪ್ಪಲಿ ಧರಿಸಿ ನಡೆಯಿರಿ.