Health Tips: ಮೊಸರಿನ ಜೊತೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ
ಮೊಸರನ್ನು ಕೆಲವು ಆಹಾರ ಪದಾರ್ಥಗಳೊಂದಿಗೆ ಸೇವಿಸಬಾರದು ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಕೆಲವೊಂದು ಆಹಾರ ಪದಾರ್ಥದೊಂದಿಗೆ ಮೊಸರನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿಕಾರಕ. ಹಾಗಾದರೆ ಮೊಸರನ್ನು ಯಾವ ಆಹಾರದ ಜೊತೆ ಸೇವಿಸಬಾರದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು: ಮೊಸರು (curd) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್-ಬಿ ಸೇರಿದಂತೆ ಅನೇಕ ಪೋಷ ಕಾಂಶಗಳು ಮೊಸರಿನಲ್ಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಸರು ಬಹಳಷ್ಟು ಪ್ರಯೋಜನಕಾರಿ. ಆದರೆ ಮೊಸರನ್ನು ಕೆಲವು ಆಹಾರ ಪದಾರ್ಥಗಳೊಂದಿಗೆ ಸೇವಿಸಬಾರದು ಎಂಬುದು ಅನೇಕ ಜನರಿಗೆ ತಿಳಿದಿಲ್ಲ.ಕೆಲವೊಂದು ಆಹಾರ ಪದಾರ್ಥದೊಂದಿಗೆ ಮೊಸರನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿಕಾರಕವಾಗಿದೆ.
ಮೀನು ಮತ್ತು ಮೊಸರು: ಮೊಸರಿನೊಂದಿಗೆ ಮೀನು ಸೇವಿಸಿದರೆ ಇದು ಆಮ್ಲೀಯತೆಗೆ ಕಾರಣವಾಗಬಹುದು. ಅಲ್ಲದೇ, ಮೀನು ಪ್ರೋಟೀನ್ ಮತ್ತು ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಒಟ್ಟಿಗೆ ಸೇರಿದರೆ ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುವಂತೆ ಮಾಡಲಿದೆ. ಮೊಸರು ಸಸ್ಯಹಾರ ಪ್ರೋಟಿನ್ ಆಗಿದ್ದು ಮತ್ತು ಮೀನು ಮಾಂಸಾಹಾರ ಪ್ರೋಟೀನ್ ಜೊತೆಗೂಡಿದರೆ ಇದು ಅಜೀರ್ಣತೆ ಮತ್ತು ಹೊಟ್ಟೆಗೆ ಸಂಬಂಧಪಟ್ಟಂತೆ ಅನೇಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಈರುಳ್ಳಿ ಜೊತೆ ಸೇವಿಸಬೇಡಿ: ಈರುಳ್ಳಿ ಅನ್ನು ಮೊಸರಿನೊಂದಿಗೆ ಸೇವಿಸುವುದರಿಂದ ಜೀರ್ಣಕಾರಿ ಅಸ್ವಸ್ಥತೆ ಉಂಟಾಗುತ್ತದೆ. ಈರುಳ್ಳಿ ದೇಹದ ಮೇಲೆ ಬೆಚ್ಚಗಾಗುವ ಪರಿಣಾಮವನ್ನು ಬೀರಿದರೆ ಮೊಸರು ತಂಪಾಗಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಈ ಎರಡನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ನೋವಿನಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಈರುಳ್ಳಿಯೊಂದಿಗೆ ಮೋಸರು ಸೇವಿಸುವುದನ್ನು ತಪ್ಪಿಸಿ.
ಮಾವಿನ ಹಣ್ಣಿನೊಂದಿಗೆ ಮೊಸರು ಸೇವಿಸಬೇಡಿ: ಮೊಸರು ಹಾಗೂ ಮಾವು ಎರಡನ್ನೂ ಒಟ್ಟಾಗಿ ಎಂದಿಗೂ ತಿನ್ನಬಾರದು. ಈ ಎರಡನ್ನು ಒಟ್ಟಿಗೆ ತಿಂದರೆ ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತದೆ. ಈರುಳ್ಳಿ ಮತ್ತು ಮೊಸರಿನಂತೆಯೇ, ಮಾವು ಮತ್ತು ಮೊಸರು ಸಹ ದೇಹದಲ್ಲಿ ಶಾಖ ಮತ್ತು ಶೀತವನ್ನು ಉಂಟುಮಾಡುತ್ತದೆ. ಹಾಗಾಗಿ ಮಾವಿನ ಹಣ್ಣಿನೊಂದಿಗೆ ಮೊಸರು ಬೆರೆಸಿದಾಗ ಅಜೀರ್ಣ ಮತ್ತು ಇತರ ಅನೇಕ ಸಮಸ್ಯೆಗಳನ್ನು ಎದುರಿಸಬಹುದು.
ಹುರಿದ ಆಹಾರ ಮತ್ತು ಮೊಸರು: ಮೊಸರಿನೊಂದಿಗೆ ಹುರಿದ ಆಹಾರವನ್ನು ಸೇವಿಸದರೆ ಆರೋಗ್ಯ ಕೆಡುವ ಸಾಧ್ಯತೆ ಇದೆ. ಏಕೆಂದರೆ ಮೊಸರಿನಲ್ಲಿರುವ ಕೊಬ್ಬುಗಳು ಅಜೀರ್ಣಕ್ಕೆ ಕಾರಣವಾಗಬಹುದು. ನೀವು ಹುರಿದ ಆಹಾರಗಳೊಂದಿಗೆ ಮೊಸರು ಸೇವಿಸಿದರೆ ಹೊಟ್ಟೆಯ ಸಮಸ್ಯೆ, ಗ್ಯಾಸ್ಟ್ರಿಕ್‌ನಂತಹ ತೊಂದರೆಯನ್ನು ಸಹ ಅನುಭವಿಸಬಹುದು.
ಉದ್ದಿನ ಬೇಳೆ ಮತ್ತು ಮೊಸರು: ಉದ್ದಿನ ಬೇಳೆಯೊಂದಿಗೆ ಮೊಸರು ಸೇರಿಸುವುದು ಕೂಡ ಆರೋಗ್ಯಕ್ಕೆ ಬಹಳಷ್ಟು ತೊಂದರೆ ಉಂಟು ಮಾಡಬಹುದು. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟು ಮಾಡುವ ಜೊತೆಗೆ ಅಜೀರ್ಣತೆ, ಹೊಟ್ಟೆ ಉಬ್ಬರ, ಎದೆಯುರಿ, ವಾಂತಿ ಭೇದಿ ಸಹ ಉಂಟಾಗುತ್ತದೆ.
ಬದನೆಕಾಯಿ ಮತ್ತು ಟೊಮೆಟೊ ಕರಿಯೊಂದಿಗೆ ಸೇವಿಸಬೇಡಿ: ಬದನೆಕಾಯಿ ಮತ್ತು ಟೊಮೆಟೊ ಕರಿ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲೂ ಮಾಡುತ್ತಾರೆ. ಟೊಮೆಟೊ ಮತ್ತು ಬದನೆ ಕರಿಯೊಂದಿಗೆ ಮೊಸರು ತಿಂದರೆ ಇದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ. ಇದರಿಂದ ಅಸಿಡಿಟಿಯೂ ಉಂಟಾಗಿ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆ ಕಾಡಬಹುದು.
ಇದನ್ನು ಓದಿ: Health Tips: ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ ಎಷ್ಟು ಪ್ರಮಾಣದ ಪ್ರೋಟೀನ್ ಅಗತ್ಯ?
ಹಾಲಿನ ಜೊತೆ ಸೇವಿಸಲೇಬಾರದು: ಹಾಗೆಯೇ ಮೊಸರು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ತಲೆನೋವು ಉಂಟಾಗುತ್ತದೆ. ಅಧ್ಯಯನದ ಪ್ರಕಾರ, ಮೊಸರು ಮತ್ತು ಹಾಲಿನ ಮಿಶ್ರಣವು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗಬಹುದು.