Health Tips: ವೇಗವಾಗಿ ಆಹಾರ ತಿನ್ನುತ್ತೀರಾ..?ಈ ಗಂಭೀರ ಆರೋಗ್ಯ ಸಮಸ್ಯೆ ಕಾಡಬಹುದು!
Health tips: ನೀವು ನಿಮ್ಮ ಉಪಾಹಾರವನ್ನು 20-30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಿಂದು ಪೂರ್ಣಗೊಳಿಸಿದ್ದರೆ ನೀವು ತುಂಬಾ ವೇಗವಾಗಿ ತಿನ್ನುತ್ತಿದ್ದೀರಿ ಎಂದರ್ಥ. ಆಹಾರ ಸೇವಿಸುವಾಗ ಸರಿಯಾದ ರೀತಿಯಲ್ಲಿ ಜಗಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಲಾಲಾರಸದಲ್ಲಿರುವ ಟೈಲಿನ್ ಮತ್ತು ಲೈಸೋಜೈಮ್‌ಗಳಂತಹ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡಲಿದೆ.


ನವದೆಹಲಿ: ನಾವು ಸೇವಿಸುವಂತಹ ಆಹಾರವು ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು ಕೆಲವರು ಸಮಯದ ವೇಗವಾಗಿ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ವೇಗವಾಗಿ ಊಟ-ತಿಂಡಿ ಮಾಡುವುದರಿಂದ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮಗೆ ಆಗಾಗ ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂಥ ಜೀರ್ಣಕಾರಿ ಸಮಸ್ಯೆ ಉಂಟಾದರೆ ನಿಮ್ಮ ಆಹಾರ ಸೇವನೆಯ ಕ್ರಮ ಸರಿಯಿಲ್ಲ ಎಂದರ್ಥ (Health Tips) ನೀವು ನಿಮ್ಮ ಉಪಾಹಾರವನ್ನು 20-30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಿಂದು ಪೂರ್ಣಗೊಳಿಸಿದ್ದರೆ ನೀವು ತುಂಬಾ ವೇಗವಾಗಿ ತಿನ್ನುತ್ತಿದ್ದೀರಿ. ಇದರಿಂದ ನಿಮ್ಮ ಆರೋಗ್ಯ ದಿನೇ ದಿನೆ ಕ್ಷೀಣಿಸುತ್ತಿದೆ ಎಂದರ್ಥ. ಹಾಗಾಗಿ ನೀವು ತಿನ್ನುವ ವೇಗವನ್ನು ತುಸು ಕಡಿಮೆ ಮಾಡುವುದೊಂದೇ ಇದಕ್ಕಿರುವ ಪರಿಹಾರ. ಆಹಾರ ಸೇವಿಸುವಾಗ ಸರಿಯಾದ ರೀತಿಯಲ್ಲಿ ಜಗಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಲಾಲಾ ರಸದಲ್ಲಿರುವ ಟೈಲಿನ್ ಮತ್ತು ಲೈಸೋಜೈಮ್‌ಗಳಂತಹ ಕಿಣ್ವಗಳು ಜೀರ್ಣ ಕ್ರಿಯೆಯನ್ನು ಸುಲಭಗೊಳಿ ಸಲು ಸಹಾಯ ಮಾಡಲಿದೆ. ಹಾಗಾಗಿ ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿಸಲು ತಿನ್ನುವ ಪ್ರತಿ ತುತ್ತನ್ನು ಕೂಡ ಸರಿಯಾಗಿ ಜಗಿಯಾಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ.
ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು
ನಾವು ಸೇವಿಸುವ ಆಹಾರಗಳ ಜೀರ್ಣಕ್ರಿಯೆ ಆರಂಭವಾಗುವುದೇ ಬಾಯಿಯಿಂದ. ಹಾಗಾಗಿ ಆಹಾರವನ್ನು ಸರಿಯಾಗಿ ಅಗಿಯಬೇಕು. ಆಗ ಬಾಯಲ್ಲಿ ರುವ ಲಾಲಾರಸ ಕಿಣ್ವಗಳು ಆಹಾರವನ್ನು ಸರಿಯಾಗಿ ಜೀರ್ಣಿಸಲು ಸಹಾಯ ಮಾಡಲಿದೆ. ನೀವು ವೇಗವಾಗಿ ಆಹಾರ ಸೇವನೆ ಮಾಡಿದರೆ ಆಹಾರಗಳು ಅಜೀರ್ಣ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ನೀವು ತಿನ್ನುವ ಯಾವುದೇ ಆಹಾರ ಸರಿಯಾಗಿ ಜಗಿಯದೇ ತಿಂದರೆ ಹೊಟ್ಟೆ ಉಬ್ಬುವುದು ಅಥವಾ ಅಜೀರ್ಣಕ್ಕೆ ಕಾರಣ ವಾಗಬಹುದು. ಇದರಿಂದ ನೀವು ತಿಂದ ಆಹಾರದಿಂದ ಎಲ್ಲಾ ಪೋಷಕಾಂಶಗಳು ಸಿಗುವುದಿಲ್ಲ. ಅಗಿಯದ ಕೆಲವು ಆಹಾರಗಳು ನಿಮ್ಮ ಅನ್ನನಾಳದಲ್ಲಿ ಸಿಲುಕಿಕೊಳ್ಳಬಹುದು.
ಮಧುಮೇಹಕ್ಕೆ ಕಾರಣವಾಗಲಿದೆ
ವೇಗವಾಗಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಅಸಮತೋಲನ ಉಂಟಾಗಲು ಕಾರಣವಾಗುತ್ತದೆ.ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಗೆ ಕಾರಣವಾಗುತ್ತದೆ, ಇದರಿಂದ ಮಧುಮೇಹ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಅದೇ ರೀತಿ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಅತಿಯಾದ ರಕ್ತದ ಒತ್ತಡ, ರಕ್ತದಲ್ಲಿನ ಅತಿಯಾದ ಸಕ್ಕರೆ ಪ್ರಮಾಣ, ಮತ್ತು ಟ್ರೈಗ್ಲಿಸರೈಡ್ ಅಂಶ ಹೆಚ್ಚಾಗಲು ಕಾರಣವಾಗಲಿದೆ.
ತೂಕ ಹೆಚ್ಚಾಗಲಿದೆ
ವೇಗವಾಗಿ ತಿನ್ನುವುದರಿಂದ ದೇಹದ ಮೇಲೆ ಒತ್ತಡವು ಹೆಚ್ಚಾಗುವ ಸಾಧ್ಯತೆ ಇದೆ.ಇದರಿಂದ ಬೊಜ್ಜು ಹೆಚ್ಚುವ ಸಾಧ್ಯತೆ ಇದೆ ಎಂದು ಅಧ್ಯ ಯನಗಳು ಸೂಚಿಸಿವೆ. ನಾವು ಬೇಗನೆ ಆಹಾರ ಜಗಿದರೆ ನಮ್ಮ ಮೆದುಳಿಗೆ 'ಪೂರ್ಣ' ಸಂಕೇತವನ್ನು ಸ್ವೀಕರಿಸಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಾವು ಹೆಚ್ಚು ಆಹಾರವನ್ನು ಸೇವಿಸುವಂತೆ ಮಾಡುತ್ತದೆ, ಇದರಿಂದ ತೂಕ ಕೂಡ ಹೆಚ್ಚಾಗಲಿದೆ.
ಇದನ್ನು ಓದಿ: Health tips: ಹಲ್ಲು ಮೂಡುತ್ತಿರುವ ಪಾಪುವಿನ ತಲ್ಲಣಗಳೇನು?
ಆಹಾರ ಸರಿಯಾದ ರೀತಿಯಲ್ಲಿ ಜಗಿದರೆ ಈ ಉಪಯೋಗ ಇದೆ
- ಆಹಾರವನ್ನು ಸರಿಯಾಗಿ ಜಗಿದರೆ ಆಗ ದೇಹಕ್ಕೆ ಸರಿಯಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯಕವಾಗುವುದು.
- ನಿಧಾನವಾಗಿ ಮತ್ತು ಸರಿಯಾಗಿ ಜಗಿದು ತಿನ್ನುವುದರಿಂದ ಮೆದುಳಿಗೆ ಕೂಡ ಹೊಟ್ಟೆ ತುಂಬಿದೆ ಎನ್ನುವ ಸಂಕೇತ ಕಳುಹಿಸಲು ಸಮಯವು ಸಿಗಲಿದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.
- ಸರಿಯಾಗಿ ಜಗಿದು ತಿನ್ನುವುದರಿಂದ ಹೊಟ್ಟೆಉಬ್ಬರ, ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡುವುದು.
- ನಿಧಾನವಾಗಿ ತಿನ್ನುವುದರಿಂದ ಆಹಾರದ ರುಚಿ ಮತ್ತು ತಿನ್ನುವ ಆಸಕ್ತಿ ಕಡೆಗೆ ಗಮನಹರಿಸಲು ಸಾಧ್ಯವಾಗಲಿದೆ.
- ಆಹಾರವನ್ನು ಸರಿಯಾಗಿ ಜಗಿದು ತಿಂದರೆ ಗಂಟಲಿನಲ್ಲಿ ಸಿಲುಕುವ ಸಾಧ್ಯತೆಯು ಕಡಿಮೆ.