Health Tips: ಹುರುಳಿ ಕಾಳು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಬುತ ಪ್ರಯೋಜನಗಳೇನು?
ಹುರುಳಿಯು ಪ್ರೋಟೀನ್, ಫೈಬರ್, ಜೀವಸತ್ವ ಮತ್ತು ಖನಿಜಗಳ ಮುಖ್ಯ ಆಗರವಾಗಿದ್ದು ವಾರಕ್ಕೊಮ್ಮೆ ಯಾದರೂ ಇದರ ಸೇವನೆ ಮಾಡುವುದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹುರುಳಿ ಸೇವನೆ ಮಧುಮೇಹಿಗಳಿಗೆ ಬಹಳ ಉತ್ತಮ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಅಲ್ಲದೆ ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು ಮಧು ಮೇಹಿಗಳು ವಾರಕ್ಕೊಮ್ಮೆಯಾದರೂ ಹುರುಳಿ ಸೇವನೆ ಮಾಡಿದರೆ ಉತ್ತಮ.
ನವದೆಹಲಿ: ನಮ್ಮ ಆಹಾರ ಕ್ರಮದಲ್ಲಿ ಹಲವಾರು ಬಗೆಯ ಧಾನ್ಯಗಳನ್ನು ಬಳಕೆ ಮಾಡುತ್ತೇವೆ. ಈ ಸಾಲಿನಲ್ಲಿ ಹುರುಳಿ (Beans) ಸಹ ತನ್ನದೇ ಆದ ಮಹತ್ವ ಪಡೆದಿದೆ. ಪ್ರಧಾನ ಧಾನ್ಯಗಳಲ್ಲಿ ಹುರುಳಿಯೂ ಒಂದಾಗಿದ್ದು ಬಹಳಷ್ಟು ಪೌಷ್ಠಿಕಾಂಶಗಳಿಂದ ಕೂಡಿದೆ. ಹುರುಳಿಯು ಪ್ರೋಟೀನ್, ಫೈಬರ್, ಜೀವಸತ್ವ ಮತ್ತು ಖನಿಜಗಳ ಮುಖ್ಯ ಆಗರವಾಗಿದ್ದು ವಾರಕ್ಕೊಮ್ಮೆ ಯಾದರೂ ಇದರ ಸೇವನೆ ಮಾಡುವುದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಧುಮೇಹಿಗಳಿಗೆ ಒಳ್ಳೆಯದು:
ಹುರುಳಿ ಸೇವನೆ ಮಧುಮೇಹಿಗಳಿಗೆ ಬಹಳ ಉತ್ತಮ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ.ಅಲ್ಲದೆ ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು ಮಧು ಮೇಹಿಗಳು ವಾರಕ್ಕೊಮ್ಮೆ ಯಾದರೂ ಹುರುಳಿ ಸೇವನೆ ಮಾಡಿದರೆ ಉತ್ತಮ.
ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ:
ಹುರುಳಿ ಸೇವನೆ ತೂಕ ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಸಹಕಾರಿ ಯಾಗಲಿದೆ. ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಅಂಶವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹುರುಳಿಯಲ್ಲಿ ಫೀನಾಲಿಕ್ ಸಂಯುಕ್ತಗಳು ಇರಲಿದ್ದು, ಇದು ಹೈಪೋಲಿಪಿಡೆಮಿಕ್ ಚಟುವಟಿಕೆ ಹೆಚ್ಚು ಮಾಡಲಿದೆ. ಜೊತೆಗೆ ಪಿತ್ತರಸದ ರಚನೆ ಕಡಿಮೆ ಮಾಡಲಿದ್ದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.
ಉಸಿರಾಟದ ತೊಂದರೆಗೆ ಉತ್ತಮ:
ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಅನೇಕ ಜನರು ಉಸಿರಾಟದ ಸಮಸ್ಯೆ ಯಿಂದ ಬಳಲುತ್ತಾರೆ.ಹಾಗಾಗಿ ನಿಮ್ಮ ಆಹಾರದಲ್ಲಿ ಹುರುಳಿ ಕಾಳು ಸೇರಿಸುವುದರಿಂದ ದೇಹಕ್ಕೆ ಬಹಳ ಉತ್ತಮ. ಹುರುಳಿ ಸೇವನೆಯಿಂದ ಶೀತ, ಆಸ್ತಮಾ, ಬ್ರಾಂಕೈಟಿಸ್, ಗಂಟಲಿನ ಸೋಂಕು ಇತ್ಯಾದಿಯನ್ನು ತಡೆ ಗಟ್ಟಲು ಸಹಾಯ ಮಾಡಲಿದೆ.
ಅಜೀರ್ಣ ಸಮಸ್ಯೆಗೆ ಪರಿಹಾರ:
ಹುರುಳಿ ಕಾಳಿನಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರಲಿದ್ದು ಇದು ಜೀರ್ಣಕ್ರಿಯೆ ಮಟ್ಟವನ್ನು ಸುಧಾರಿಸುತ್ತದೆ. ಹಾಗಾಗಿ ನಿಮ್ಮಲ್ಲಿ ಅಜೀರ್ಣ ಸಮಸ್ಯೆ ಉಂಟಾಗಿದ್ದರೆ ಪ್ರತಿದಿನ ಹುರುಳಿ ಕಾಳಿನ ಸೇವನೆ ಮಾಡುವ ಮೂಲಕ ಜೀರ್ಣಕಾರಿ ಸಮಸ್ಯೆಯನ್ನು ಹೋಗಲಾಡಿಸಬಹುದು.
ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿದ್ದರೆ ಸಹಕಾರಿ:
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿದರೆ ಬಹಳ ಉತ್ತಮ. ಹುರುಳಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಇದು ದೇಹದಿಂದಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಲು ಸಹಕಾರಿಯಾಗಲಿದೆ. ಹುರುಳಿಯಲ್ಲಿ ಕಬ್ಬಿಣಾಂಶ ಹಾಗೂ ಪಾಲಿಫಿನಾಲ್ ಅಂಶವು ಹೇರಳವಾಗಿದ್ದು ಇದು ಕಿಡ್ನಿ ಸ್ಟೋನ್ ನಿವಾರಣೆಗೆ ಸಹಕಾರಿಯಾಗಲಿದೆ.
ಇದನ್ನು ಓದಿ: Health Tips: ಮೊಸರಿನ ಜೊತೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ
ಹೃದಯದ ಆರೋಗ್ಯಕ್ಕೆ ಉತ್ತಮ:
ಹುರುಳಿ ಸೇವನೆಯಿಂದ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗಲಿದ್ದು ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ಇದು ತಡೆಗಟ್ಟಲಿದ್ದು ಇದು ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಈ ಧಾನ್ಯವನ್ನು ಸೇವನೆ ಮಾಡಿದಲ್ಲಿ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡಬಹುದು.