Best Cooking Oil: ಉತ್ತಮ ಆರೋಗ್ಯಕ್ಕೆ ಯಾವ ಅಡುಗೆ ಎಣ್ಣೆ ಬೆಸ್ಟ್?
Best Cooking Oil: ಸರಿಯಾದ ಎಣ್ಣೆಯ ಆಯ್ಕೆ ಮಾಡಿದರೆ ಅಡುಗೆ ರುಚಿಯ ಜೊತೆಗೆ ಆರೋಗ್ಯಕ್ಕೂ ಬಹಳ ಪೂರಕವಾಗಿ ಇರಲಿದೆ. ನಾವು ಅಡುಗೆಗೆ ಬಳಸುವ ಎಣ್ಣೆಯಿಂದಾಗಿ ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರುವ ಸಾಧ್ಯತೆ ಇರಲಿದ್ದು ಈ ವಿಚಾರವನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು. ಹಾಗಾಗಿ ಸಿಕ್ಕ ಸಿಕ್ಕ ಎಣ್ಣೆಗಳನ್ನೆಲ್ಲ ಅಡುಗೆಗೆ ಬಳಸದೆ ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾದರೆ ಅಡುಗೆಗೆ ಯಾವ ಎಣ್ಣೆ ಬಳಸಿದರೆ ಸೂಕ್ತ ಎನ್ನುವ ಮಾಹಿತಿ ಇಲ್ಲಿದೆ.


ನವದೆಹಲಿ: ಅಡುಗೆ ರುಚಿ ರುಚಿಯಾಗಬೇಕಾದರೆ ಅಡುಗೆಯಲ್ಲಿ ಬಳಸುವ ಪದಾರ್ಥಗಳನ್ನು ಹದವಾಗಿ ಹಾಕಬೇಕು. ಈ ಪದಾರ್ಥಗಳಿಗೆ ಸರಿಯಾದ ರುಚಿ ತಾಕಬೇಕಾದರೆ ನಾವು ಬಳಸುವ ಅಡುಗೆ ಎಣ್ಣೆ(Best Cooking Oil) ಕೂಡ ಬಹಳ ಮಹತ್ವ ಸ್ಥಾನ ಪಡೆಯಲಿದೆ. ಹಾಗಾಗಿ ಸರಿಯಾದ ಎಣ್ಣೆಯ ಆಯ್ಕೆ ಮಾಡಿದರೆ ಅಡುಗೆ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ (Healthy Oils) ಬಹಳ ಪೂರಕವಾಗಿ ಇರಲಿದೆ. ನಾವು ಅಡುಗೆಗೆ ಬಳಸುವ ಎಣ್ಣೆಯಿಂದಾಗಿ ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರುವ ಸಾಧ್ಯತೆ ಇರಲಿದ್ದು ಈ ವಿಚಾರವನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು. ಹಾಗಾಗಿ ಸಿಕ್ಕ ಸಿಕ್ಕ ಎಣ್ಣೆಗಳನ್ನೆಲ್ಲ ಅಡುಗೆಗೆ ಬಳಸದೇ ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾದರೆ ಅಡುಗೆಗೆ ಯಾವ ಎಣ್ಣೆ ಬಳಸಿದರೆ ಸೂಕ್ತ ಎನ್ನುವ ಮಾಹಿತಿ ಇಲ್ಲಿದೆ.
ಆಲಿವ್ ಎಣ್ಣೆ:

ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಪ್ರಮಾಣ ಸಮೃದ್ಧವಾಗಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಸಹಕಾರಿ ಆಗಲಿದೆ. ಆಲಿವ್ ಎಣ್ಣೆಯಲ್ಲಿ ಮೊನೊ ಸಾಚೊರೇಟೆಡ್ ಕೊಬ್ಬಿನ ಆಮ್ಲ ಹೇರಳ ವಾಗಿದ್ದ ಕಾರಣ ಉರಿಯೂತ ಸಮಸ್ಯೆ ನಿವಾರಣೆಗೆ ಮತ್ತು ಕ್ಯಾನ್ಸರ್ ಬಾರದಂತೆ ತಡೆಗಟ್ಟುವ ನೆಲೆಯಲ್ಲಿ ಬಹಳ ಸಹಕಾರಿ ಆಗಲಿದೆ. ಆಲಿವ್ ಎಣ್ಣೆ ಬಳಸಿ ಅಡುಗೆ ಮಾಡುವುದರಿಂದ ಪಿಸಿಒಡಿ, ಪಿಸಿಒಎಸ್ ಸಮಸ್ಯೆ ಗಳು ನಿವಾರಣೆ ಆಗಲಿದ್ದು ವೈದ್ಯರು ಸಹ ಇದನ್ನು ಸೂಚಿಸುತ್ತಾರೆ.
ಕಡಲೆಕಾಯಿ ಎಣ್ಣೆ:

ಬಹುತೇಕ ಭಾರತೀಯರ ರುಚಿ ಕಟ್ಟಾದ ಪಾಕದಲ್ಲಿ ಕಡಲೆ ಎಣ್ಣೆ ಕೂಡ ಬಹಳ ಜನಪ್ರಿಯವಾಗಿದೆ. ಅಡುಗೆಗೆ ವಿಶೇಷ ಸುವಾಸನೆ ತರುವ ಗುಣವು ಈ ಕಡಲೆಕಾಯಿ ಎಣ್ಣೆಯಲ್ಲಿದ್ದು ಇದನ್ನು ಬಳಸಿ ಅಡುಗೆ ಮಾಡುವುದರಿಂದ ಹೃದಯದ ಆರೋಗ್ಯ ಉತ್ತಮವಾಗಲಿದೆ. ಕಡಲೆ ಎಣ್ಣೆಯಲ್ಲಿ ಮೊನೊ ಸಾಚುರೇಟೆಡ್ ಅಂಶ ಹೆಚ್ಚಾಗಿದ್ದು ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನೆಗಳು ದೊರೆಯಲಿದೆ.
ಸಾಸಿವೆ ಎಣ್ಣೆ:

ಸಾಸಿವೆ ಎಣ್ಣೆಯಲ್ಲಿ ಒಮೆಗಾ 3ಕೊಬ್ಬಿನ ಆಮ್ಲಗಳ ಪ್ರಮಾಣ ಹೇರಳ ವಾಗಿದ್ದು ಹೃದಯ ಸಂಬಂಧಿಸಿದ ಆರೋಗ್ಯಕ್ಕೆ ಬಹಳ ಪೂರಕ ಎನ್ನಬಹುದು. ಹೀಗಾಗಿ ನಮ್ಮ ಪೂರ್ವಜರ ಕಾಲದಿಂದಲೂ ಸಾಸಿವೆ ಎಣ್ಣೆಯೂ ಅಡಿಗೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆಯುತ್ತಲೇ ಇದೆ. ಇದರಲ್ಲಿ ಅಡುಗೆ ಮಾಡುವುದರಿಂದ ಪರಿಮಳ ಕೂಡ ಬಹಳ ಚೆನ್ನಾಗಿ ಬರಲಿದೆ. ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿ ಇದ್ದು ಚರ್ಮದ ಆರೋಗ್ಯಕ್ಕೆ ಈ ಎಣ್ಣೆ ಬಹಳ ಸಹಕಾರಿ ಆಗಲಿದೆ.
ತೆಂಗಿನ ಎಣ್ಣೆ:

ದಕ್ಷಿಣ ಭಾರತದ ಅಡುಗೆ ಶೈಲಿಯಲ್ಲಿ ತೆಂಗಿನ ಎಣ್ಣೆ ಅಧಿಕವಾಗಿ ಬಳ ಸುತ್ತಾರೆ ಎಂದು ಹೇಳಬಹುದು. ಅದರಲ್ಲಿಯೂ ಕರ್ನಾಟಕ ಮತ್ತು ಕೇರಳ ದಲ್ಲಿ ತೆಂಗಿನ ಎಣ್ಣೆಯ ಘಮ ಇಲ್ಲದ ಅಡುಗೆ ಬಹಳ ಅಪರೂಪವಾಗಿದೆ. ವೆಜ್ ಅಥವಾ ನಾನ್ ವೆಜ್ ಎರಡರಲ್ಲಿಯೂ ತೆಂಗಿನ ಪರಿಮಳ ಇದ್ದೇ ಇರಲಿದೆ. ಇದರಲ್ಲಿ ಟ್ರೈಗ್ಲಿಸರೈಡ್ ಅಂಶ ಅತೀ ಹೆಚ್ಚಾಗಿದ್ದು ಜೀರ್ಣಕ್ರಿಯೆ ಉತ್ತೇಜಿಸಲು ಈ ತೆಂಗಿನ ಎಣ್ಣೆ ಬಹಳ ಸಹಕಾರಿ ಆಗಲಿದೆ ಎನ್ನಬಹುದು.
ಸೂರ್ಯಕಾಂತಿ ಎಣ್ಣೆ:

ಸೂರ್ಯಕಾಂತಿ ಎಣ್ಣೆಯಲ್ಲಿ ವಿಟಮಿನ್ ಎ ಇದ್ದು ಕೊಬ್ಬಿನಂಶ ಕಡಿಮೆ ಇರಲಿದೆ ಹಾಗಾಗಿ ಅಡುಗೆ ಮಾಡಲು ಈ ಎಣ್ಣೆ ಬಹಳ ಉಪಯುಕ್ತವಾಗಿದೆ. ಆದರೆ ಸೂರ್ಯ ಕಾಂತಿ ಎಣ್ಣೆಯನ್ನು ಅಧಿಕ ಶಾಖದಲ್ಲಿ ಬೇಯಿಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕಡಿಮೆ ಉರಿಯಲ್ಲಿಯೇ ಆಹಾರ ಬೇಯಿಸಿ ತಿಂದರೆ ಉತ್ತಮ ಎನ್ನಬಹುದು.
ಎಳ್ಳೆಣ್ಣೆ

ಎಳ್ಳೆಣ್ಣೆಯನ್ನು ಕೆಲವರು ದೀಪದ ಹಣತೆ ಹಚ್ಚಲು, ದೇವರ ಪೂಜೆಗೆಂದು ಬಳಸುವುದು ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಅಂತೆಯೆ ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ಜನರು ತಮ್ಮ ಅಡುಗೆಯನ್ನು ಎಳ್ಳೆಣ್ಣೆ ಮೂಲಕವೇ ಮಾಡುತ್ತಾರೆ. ಇದರ ಸೇವನೆ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ಅನಗತ್ಯ ಕೊಬ್ಬಿ ನಾಂಶ ಸಂಗ್ರಹವಾಗದಂತೆ ದೇಹದಲ್ಲಿ ಸಮತೋಲನ ಕಾಪಾಡಲು ಬಹಳ ಸಹಕಾರಿ ಆಗಲಿದೆ.
ಇದನ್ನು ಓದಿ: Health Tips: ಆರೋಗ್ಯ ವೃದ್ಧಿಗಾಗಿ ಸೇವಿಸಬೇಕಾದ ಆಯುರ್ವೇದ ಎಲೆಗಳು
ತುಪ್ಪ:

ಭಾರತೀಯ ಪಾಕ ಪರಂಪರೆಯಲ್ಲಿ ತುಪ್ಪದ ಅಡುಗೆಗಳಿಗೆ ವಿಶೇಷ ಪ್ರಾತಿ ನಿಧ್ಯ ಇದೆ. ಒಮೇಗಾ 3 ಕೊಬ್ಬಿನಾಮ್ಲ, ವಿಟಮಿನ್ ಎ,ಇ, ಕೆ ಮತ್ತು ಬ್ಯುಟ ರಿಕ್ ಆಮ್ಲ ಇದರಲ್ಲಿ ಸಮೃದ್ಧವಾಗಿದೆ. ಕೆಲವೊಂದು ತಿಂಡಿಗಳ ತಯಾ ರಿಕೆಗೆ , ಸಿಹಿ ತಿನಿಸಿನಲ್ಲಿ ತುಪ್ಪದ ಘಮ ಇಲ್ಲದಿದ್ದರೆ ಅಡುಗೆ ರುಚಿಸುವುದೇ ಇಲ್ಲ ಹೀಗಾಗಿ ತುಪ್ಪದ ಅಡುಗೆ ದೇಹಕ್ಕೂ ಸಹ ಅನೇಕ ಆರೋಗ್ಯ ಪ್ರಯೋಜನೆ ನೀಡಲಿದೆ ಎನ್ನಬಹುದು. ಒಟ್ಟಿನಲ್ಲಿ ಮಾರು ಕಟ್ಟೆಯಲ್ಲಿ ಪ್ರಸ್ತುತ ದಿನದಲ್ಲಿ ತರತರಹದ ಎಣ್ಣೆಗಳು ವಿವಿಧ ಬೆಲೆಗಳಲ್ಲಿ ಲಭ್ಯ ವಾಗುತ್ತಿದ್ದರೂ ಅವುಗಳೆಲ್ಲವೂ ಆರೋಗ್ಯದ ದೃಷ್ಟಿಯಿಂದ ಉತ್ತಮ ಅಲ್ಲ .ಹಾಗಾಗಿ ನಿಮ್ಮ ಅಡುಗೆ, ಕುಟುಂಬದ ಜನರ ಆರೋಗ್ಯ ಕಾಳಜಿಯೊಂದಿಗೆ ಅಡುಗೆ ಎಣ್ಣೆ ಆಯ್ಕೆ ಮಾಡಿ ಶುಚಿ ರುಚಿಯಾಗಿ ಅಡುಗೆ ಮಾಡಿದರೆ ಬಾಯಿಗೆ ರುಚಿ ಸಿಗುವ ಜೊತೆಗೆ ದೇಹಕ್ಕೂ ಅನೇಕ ಆರೋಗ್ಯ ಪ್ರಯೋಜನೆ ನೀಡಲಿದೆ