ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳು; ಫೋನ್ ನಂಬರ್ ಕೇಳಿ ಕಿರುಕುಳ, ವಿಡಿಯೋ ನೋಡಿ
Students misbehave with woman reporter: ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳ ಗುಂಪೊಂದು ಮಹಿಳಾ ವರದಿಗಾರ್ತಿಯೊಬ್ಬರಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಫೆಬ್ರವರಿ 17 ರಿಂದ 25 ರವರೆಗೆ ನಡೆಯುತ್ತಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ 10ನೇ ತರಗತಿ ಪರೀಕ್ಷೆಗಳ ಮಧ್ಯೆ ಈ ಘಟನೆ ನಡೆದಿದೆ.
ಮಹಿಳಾ ವರದಿಗಾರ್ತಿ ಜೊತೆ ಅಸಭ್ಯವಾಗಿ ವರ್ತಿಸಿದ ವಿದ್ಯಾರ್ಥಿಗಳು -
ಪಟನಾ, ಫೆ.20: ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳ ಗುಂಪೊಂದು ಮಹಿಳಾ ವರದಿಗಾರ್ತಿಯೊಬ್ಬರಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಫೆಬ್ರವರಿ 17 ರಿಂದ 25 ರವರೆಗೆ ನಡೆಯುತ್ತಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ 10ನೇ ತರಗತಿ ಪರೀಕ್ಷೆಗಳ ಮಧ್ಯೆ ಈ ಘಟನೆ ನಡೆದಿದೆ. ಪರೀಕ್ಷೆಯ ನಂತರ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲು ವರದಿಗಾರರು ಕೇಂದ್ರದ ಹೊರಗೆ ಹಾಜರಿದ್ದರು.
ವೈರಲ್ ಆಗಿರುವ ಈ ವಿಡಿಯೊದಲ್ಲಿ, ವಿದ್ಯಾರ್ಥಿಗಳ ಬಳಿ ಅವರ ಪರೀಕ್ಷಾ ಅನುಭವದ ಬಗ್ಗೆ ವರದಿಗಾರ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಆದರೆ, ಈ ಪ್ರಶ್ನೆಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಬದಲು, ಹಲವಾರು ಹುಡುಗರು ಅಶ್ಲೀಲ ಟೀಕೆಗಳನ್ನು ಮಾಡುವುದು, ಕೂಗುವುದು ಮತ್ತು ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
Reporter: How was your exam?
— Nehr_who? (@Nher_who) February 20, 2026
Bihari Student: Give me your number, we'll talk at night
Student 2: We don't want to become anything from this exam, we are happy as farmer.
Look at their behaviour, how they treat a female reporter, pushing, mocking, cat-calling all at once. pic.twitter.com/UcytbXPzqn
ಅಷ್ಟೇ ಅಲ್ಲ, ವಿದ್ಯಾರ್ಥಿಗಳು ವರದಿಗಾರ್ತಿಯ ಮೊಬೈಲ್ ಸಂಖ್ಯೆಯನ್ನು ಕೇಳಿದರು. ರಾತ್ರಿ ವೇಳೆ ಆಕೆಯೊಂದಿಗೆ ಮಾತನಾಡುವುದಾಗಿ ಹೇಳಿದರು. ಕ್ಯಾಮರಾದಲ್ಲಿ ಹದಿಹರೆಯದ ಹುಡುಗರ ಕೂಗಾಟ, ನಗು ಮತ್ತು ಗದ್ದಲದ ಅಸಭ್ಯ ನಡವಳಿಕೆಯು ಸೆರೆಹಿಡಿಯಲ್ಪಟ್ಟಿದೆ.
ಭವಿಷ್ಯದ ಬಗ್ಗೆ ಕೇಳಿದಾಗ, ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಏನನ್ನೂ ಮಾಡಲು ಬಯಸುವುದಿಲ್ಲ. ರೈತರಾಗುವುದು ಅಥವಾ ಡೈರಿ ವ್ಯವಹಾರ ಮಾಡುವುದಾಗಿ ಉತ್ತರಿಸಿದರು. ಯಾರೊಬ್ಬರೂ ಸೂಕ್ತ ಉತ್ತರವನ್ನು ನೀಡಿಲ್ಲ. ವರದಿಗಾರ್ತಿ ಜೊತೆ ಕಟುವಾದ ಮಾತು ಮತ್ತು ಅನುಚಿತ ವರ್ತನೆ ತೋರಿದ್ದಾರೆ.
ವೃದ್ಧ ತಾಯಿಯ ಕೂದಲು ಹಿಡಿದು ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ಮಗಳು: ನೋಡಿದವರ ರಕ್ತ ಕುದಿಯುತ್ತೆ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿದ್ಯಾರ್ಥಿಗಳ ನಡವಳಿಕೆಯನ್ನು ಖಂಡಿಸಿದರು. ಹಲವಾರು ಮಂದಿ ಸಾರ್ವಜನಿಕ ನಡವಳಿಕೆ ಮತ್ತು ವೃತ್ತಿಪರ ಸ್ಥಳಗಳಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮದುವೆಯಲ್ಲಿ ವರ ಶೂ ಧರಿಸಿದ್ದ ಫೋಟೋ ವೈರಲ್
ವರ ಶೂ ಧರಿಸುವುದು ಸಾಮಾನ್ಯ, ಅದರಲ್ಲೇನು ಅಚ್ಚರಿಯಿದೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ವರನು ಕೋಟ್ ಮತ್ತು ಪ್ಯಾಂಟ್ ಧರಿಸಿದ್ದಾನೆ. ಅದರೊಂದಿಗೆ ಅವನು ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದಾನೆ. ಅದು ಕೂಡ ಹಸಿರು ಬಣ್ಣದ್ದು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಇದೇ ಕಾರಣ. ವಧುವಿನ ಕಡೆಯವರು ನಿಮ್ಮ ಶೂವನ್ನು ಕದಿಯಲು ನಿರಾಕರಿಸುವ ರೀತಿಯಲ್ಲಿ ಶೂಗಳನ್ನು ಧರಿಸಿ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಇನ್ನೊಂದೆಡೆ ವರನ ಮದುವೆ ಮೆರವಣಿಗೆ ಹೊರಟಿದ್ದರೆ, ವ್ಯಕ್ತಿಯೊಬ್ಬರು ಹತ್ತಿರದ ವಿದ್ಯುತ್ ಕಂಬವನ್ನು ಹತ್ತಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.