ಪಾಕ್ ಆಟಗಾರರನ್ನು ನಿರ್ಬಂಧಿಸುವ ಐಪಿಎಲ್ ಮಾಲೀಕರಿಗೆ ಕಡಿವಾಣ ಹಾಕಿ: ಮೈಕಲ್ ವಾನ್ ಆಗ್ರಹ!
ಮುಂಬರುವ ಹಂಡ್ರೆಡ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಪಾಕಿಸ್ತಾನ ಕ್ರಿಕೆಟಿಗರನ್ನು ನಿರ್ಬಂಧಿಸುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರಿಯ ಮಾಲೀಕರಿಗೆ ಕಡಿವಾಣ ಹಾಕಿ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆಗ್ರಹಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಾನ್ ಪೋಸ್ಟ್ ಹಾಕುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಾರೆ.
ಪಾಕಿಸ್ತಾನ ಆಟಗಾರರಿಗೆ ಮೈಕಲ್ ವಾನ್ ಬೆಂಬಲ. -
ನವದೆಹಲಿ: ಪಾಕಿಸ್ತಾನ ಆಟಗಾರರನ್ನು ಮುಂದಿನ ‘ದಿ ಹಂಡ್ರೆಡ್’ (The Hundred) ಟೂರ್ನಿಯ ಆಟಗಾರರ ಹರಾಜಿನಿಂದ ಹೊರಗಿಡುವ ಸಾಧ್ಯತೆ ಕುರಿತ ವರದಿಗಳು ಹೊರಬಿದ್ದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ತಕ್ಷಣ ಹಸ್ತಕ್ಷೇಪ ಮಾಡಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ (Michael Vayghan) ಆಗ್ರಹಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಲೀಕತ್ವದ ಫ್ರಾಂಚೈಸಿಗಳು ಪಾಕಿಸ್ತಾನ ಆಟಗಾರರನ್ನು ಹರಾಜಿನಿಂದ ಹೊರಗಿಡಬಹುದು ಎಂಬ ವರದಿಗಳ ವಿರುದ್ಧ ವಾನ್ ತಮ್ಮ ಸೋಶಿಯಲ್ ಮೀಡಿಯಾದ ಎಕ್ಸ್ ಖಾತೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಇದರ ಬಗ್ಗೆ ಇಸಿಬಿ ತಕ್ಷಣ ಕ್ರಮ ಕೈಗೊಳ್ಳಬೇಕು. ಐಪಿಎಲ್ ಮಾಲೀಕರು ಕೂಡ ಲೀಗ್ ತಂಡಗಳನ್ನು ಹೊಂದಿದ್ದಾರೆ ಹಾಗೂ ಪಾಕ್ ಆಟಗಾರರನ್ನು ಹೊರಗಿಡಲು ಅವಕಾಶ ಕೊಡಬಾರದು. ದೇಶದ ಅತ್ಯಂತ ಒಳಗೊಂಡಿಕೆಯ ಕ್ರೀಡೆ ಎಂದೇ ಪರಿಗಣಿಸಲ್ಪಡುವ ಕ್ರಿಕೆಟ್‌ನಲ್ಲಿ ಇಂತಹ ಬೆಳವಣಿಗೆಗಳಿಗೆ ಅವಕಾಶ ಇರಬಾರದು,” ಎಂದು ಮೈಕಲ್ ವಾನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ರಾಜಕೀಯ ಉದ್ವಿಗ್ನತೆಗಳು ಕ್ರಿಕೆಟ್‌ನ ಫ್ರಾಂಚೈಸಿ ಮಾದರಿಯ ಮೇಲೆ ಪ್ರಭಾವ ಬೀರುತ್ತಿರುವ ಬಗ್ಗೆ ಹೆಚ್ಚುತ್ತಿರುವ ಆತಂಕವನ್ನು ಈ ವಿವಾದ ಹೊರಹಾಕುತ್ತಿದೆ. ಭಾರತ–ಪಾಕಿಸ್ತಾನ ನಡುವಿನ ಹದಗೆಟ್ಟ ರಾಜತಾಂತ್ರಿಕ ಸಂಬಂಧಗಳು ಇಂಗ್ಲೆಂಡ್‌ನ ದೇಶಿ ಟೂರ್ನಿಯಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನೇ ಪ್ರಭಾವಿತಗೊಳಿಸುತ್ತಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.
IND vs SA: ಭಾರತ ತಂಡವನ್ನು ಗೆಲ್ಲಿಸಬಲ್ಲ ಇಬ್ಬರು ಬೌಲರ್‌ಗಳನ್ನು ಆರಿಸಿದ ಶಾನ್ ಪೊಲಾಕ್!
‘ದಿ ಹಂಡ್ರೆಡ್’ ಟೂರ್ನಿಯ ಎಂಟು ಫ್ರಾಂಚೈಸಿಗಳಲ್ಲಿನ ಕನಿಷ್ಠ ನಾಲ್ಕು ತಂಡಗಳು ಐಪಿಎಲ್ ಘಟಕಗಳ ಭಾಗಶಃ ಮಾಲೀಕತ್ವದಲ್ಲಿರುವುದರಿಂದ, ಆಯ್ಕೆ ಪ್ರಕ್ರಿಯೆ ಪಾರದರ್ಶಕತೆಯ ಕುರಿತು ಚರ್ಚೆಗಳು ಜೋರಾಗಿದೆ. ಇದು ಕ್ರಿಕೆಟ್ ಆಡಳಿತದಲ್ಲಿ ರಾಜಕೀಯದ ಹಸ್ತಕ್ಷೇಪದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
The ECB need to act fast on this .. they own the league and this should not be allowed to happen .. the most inclusive sport in the country is not one that allows this to happen .. https://t.co/IYysTSIYHt
— Michael Vaughan (@MichaelVaughan) February 20, 2026
ಐಪಿಎಲ್ ತಂಡಗಳ ಸಹ-ಮಾಲೀಕತ್ವ ಹೊಂದಿರುವ ಫ್ರಾಂಚೈಸಿಗಳಿಂದ ಪಾಕಿಸ್ತಾನ ಕ್ರಿಕೆಟಿಗರು ಒಪ್ಪಂದಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಅವರನ್ನು ಪರಿಗಣಿಸದೇ ಇರಬಹುದೆಂದು ಪಿಟಿಐ ಗುರುವಾರ ವರದಿ ಮಾಡಿದೆ. ‘ದಿ ಹಂಡ್ರೆಡ್’ ಲೀಗ್‌ನಲ್ಲಿನ ಐಪಿಎಲ್ ಸಂಪರ್ಕ ಹೊಂದಿರುವ ಫ್ರಾಂಚೈಸಿಗಳಲ್ಲಿ ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್, ಎಂಐ ಲಂಡನ್, ಸೌಥೆರ್ನ್ ಬ್ರೇವ್ ಮತ್ತು ಸನ್‌ರೈಸರ್ಸ್ ಲೀಡ್ಸ್ ಪ್ರಮುಖವಾಗಿವೆ.
IND vs SA: ಅಭಿಷೇಕ್ ಶರ್ಮಾ ಔಟ್? ಸೂಪರ್-8ರ ಪದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!
ಪಾಕ್ ಆಟಗಾರರನ್ನು ಹೊರಗಿಡುತ್ತಿರುವುದು ಐಪಿಎಲ್ ಸಂಪರ್ಕ ಹೊಂದಿರುವ ಲೀಗ್‌ಗಳಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಪ್ರವೃತ್ತಿಯ ಭಾಗವಾಗಿದೆ. 2023ರಲ್ಲಿ ಪ್ರಾರಂಭವಾದ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿಯೂ ಯಾವುದೇ ಪಾಕಿಸ್ತಾನ ಕ್ರಿಕೆಟಿಗರು ಸ್ಥಾನ ಪಡೆದಿಲ್ಲ. ಎಲ್ಲಾ ಆರು ತಂಡಗಳೂ ಐಪಿಎಲ್ ಸಂಬಂಧಿತ ಫ್ರಾಂಚೈಸಿ ಗುಂಪುಗಳಿಗೆ ಸೇರಿವೆ. ಮುಖ್ಯವಾಗಿ ಯುಎಇನಲ್ಲಿ ನಡೆಯುವ ILT20 ಲೀಗ್‌ನಲ್ಲಿ, MI London ಮತ್ತು Southern Brave ಮಾಲೀಕರು ನಿಯಂತ್ರಿಸುವ ಫ್ರಾಂಚೈಸಿಗಳಿಂದ ನಾಲ್ಕು ಸೀಸನ್‌ಗಳಲ್ಲಿಯೂ ಒಬ್ಬೇ ಒಬ್ಬರು ಪಾಕಿಸ್ತಾನ ಆಟಗಾರರಿಂದ ಸಹಿ ಹಾಕಿಸಿಕೊಂಡಿಲ್ಲ.
ಹಿಂದೆ ಪಾಕಿಸ್ತಾನ ಆಟಗಾರರು ದಿ ಹಂಡ್ರೆಡ್ ಲೀಗ್‌ನಲ್ಲಿ ಭಾಗವಹಿಸಿದ್ದರು. ಇಮಾದ್ ವಸಿಮ್ ಕಳೆದ ಸೀಸನ್‌ನಲ್ಲಿ ನಾರ್ಥೆರ್ನ್ ಸೂಪರ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸಿದ್ದರು, ಅದು ಈಗ ಸನ್‌ರೈಸರ್ಸ್ ಲೀಡ್ಸ್ ಎಂದು ಹೆಸರು ಬದಲಾಗಿದೆ.
ಇನ್ನಿತರ ಪಾಕಿಸ್ತಾನ ಆಟಗಾರರಲ್ಲಿ ಮೊಹಮ್ಮದ್ ಆಮಿರ್, ಶಾಹೀನ್ ಶಾಹ ಅಫ್ರಿಧಿ, ಶದಾಬ್ ಖಾನ್ ಮತ್ತು ಹರಿಸ್ ರೌಫ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಈ ಲೀಗ್‌ನಲ್ಲಿ ಈಗಾಗಲೇ ಯಾವುದೇ ಪಾಕಿಸ್ತಾನ ಮಹಿಳಾ ಕ್ರಿಕೆಟ್ ಆಟಗಾರ್ತಿ ಭಾಗವಹಿಸಿಲ್ಲ.