ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holi 2025: ಹೋಳಿಯ ರಂಗು ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಆಪ್ತ; ರಂಗಿನಾಟದ ಮನೋವೈಜ್ಞಾನಿಕ ಉಪಯೋಗಗಳೇನು?

ಹೋಳಿ ಹಬ್ಬ ಸಂತೋಷ ಮಾತ್ರವನ್ನು ತರುವುದಿಲ್ಲ, ಹೊರತಾಗಿ ಈ ರಂಗು ರಂಗಿನ ಬಣ್ಣಗಳು ನಮ್ಮ ದೇಹದಲ್ಲಿ ಸಂತೋಷವನ್ನು ಉಂಟು ಮಾಡುವ ಹಾರ್ಮೋನ್‌ಗಳ(Harmon) ಬಿಡುಗಡೆಯನ್ನು ಮಾಡುತ್ತದೆ... ಹೇಗೆ ಅಂತೀರಾ ಇಲ್ಲಿದೆ ನೋಡಿ ಅದರ ಸಂಕ್ಷಿಪ್ತ ಮಾಹಿತಿ

ರಂಗಿನ ಹೋಳಿ ಹಬ್ಬದ ಸಂಭ್ರಮ ಅಲ್ಲ, ಮಾನಸಿಕ ಆರೋಗ್ಯವನ್ನು ನೀಡುತ್ತದೆ....!

ಹೋಳಿ ಹಬ್ಬ

Profile Sushmitha Jain Mar 14, 2025 12:33 PM

ಬೆಂಗಳೂರು: 2025ರ ಬಹುನಿರೀಕ್ಷಿತ ಹೋಳಿ ಹಬ್ಬ(Holi 2025) ನಮ್ಮೆಲ್ಲರ ಮನೆ ಬಾಗಿಲಿಗೆ ಬಂದೇ ಬಿಟ್ಟಿದೆ. ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರ, ಹಿರಿಯರು-ಕಿರಿಯರು ಎಲ್ಲರೂ ಸೇರಿ ಆಚರಿಸುವ ರಂಗಿನ ಹಬ್ಬ ಹೋಳಿ ಸಂಬಂಧಗಳನ್ನು ಬೆಸೆಯುವ ಸಂದರ್ಭವಾಗಿದೆ. ಬಣ್ಣ, ಸಂಗೀತ, ನೃತ್ಯ ಮತ್ತು ಸಂತೋಷದ ಅಲೆಯಲ್ಲಿ ಮಿಂದೇಳುವ ಈ ಹಬ್ಬದಲ್ಲಿ ನಮ್ಮ‌ ದೇಹ ಮಾತ್ರ ರಂಗಿನಲ್ಲಿ ಮುಳುಗುವುದಿಲ್ಲ, ಬದಲಾಗಿ ಇದು ನಮ್ಮ ಮನಸ್ಸಿನ(Mental Health) ಮೇಲೆಯೂ ಅತ್ಯಂತ ಸಕಾರಾತ್ಮಕ(Positive) ಪರಿಣಾಮ ಬೀರುತ್ತದೆ. ಮನೋವೈಜ್ಞಾನಿಕವಾಗಿ(Psychological) ಈ ಹಬ್ಬ ನಮಗೆಲ್ಲರಿಗೂ ಅತ್ಯಂತ ಮಹತ್ವದ್ದು.

ಬಣ್ಣಗಳು ನಮ್ಮ ದೇಹದಲ್ಲಿ ಸಂತೋಷವನ್ನು ಉಂಟು ಮಾಡುವ ಹಾರ್ಮೋನ್‌ಗಳ(Harmon) ಬಿಡುಗಡೆಯನ್ನು ಉತ್ತೇಜಿಸುತ್ತವೆ. ನೀವು ದುಃಖದಲ್ಲಿದ್ದರೂ, ನಿಮ್ಮ ಮನಸ್ಸಿನಲ್ಲಿ ಹಲವು ನಕಾರಾತ್ಮಕ(Negative) ಆಲೋಚನೆಗಳು ಓಡುತ್ತಿದ್ದರೂ, ಗೆಳೆಯರು ಅಥವಾ ಸಂಬಂಧಿಕರು ನಿಮ್ಮ ಮೇಲೆ ಬಣ್ಣವನ್ನು ಎರಚಿದರೆ ಒಂದು ಕ್ಷಣದಲ್ಲಿ ನೀವು ನಿಮ್ಮ ದುಃಖವನ್ನು ಮರೆತು ಅವರ ಸಂತೋಷದಲ್ಲಿ ಭಾಗಿಯಾಗುತ್ತೀರಾ.

ಸಮುದಾಯ ಮತ್ತು ಸಾಮಾಜೀಕರಣ

ಇದು ಸಮುದಾಯ ಆಧಾರಿತ ಹಬ್ಬವಾಗಿರುವುದರಿಂದ, ಹೋಳಿಯಂದು ಯಾರೂ ಒಂಟಿಯಾಗಿ ಉಳಿಯುವುದಿಲ್ಲ. ನೀವು ಬಣ್ಣಗಳೊಂದಿಗೆ ಆಟವಾಡದಿದ್ದರೂ ಸಹ, ನಿಮ್ಮ ಸುತ್ತಲೂ ಆಡವಾಡುವವರನ್ನು ನೋಡಿಯೇ ನೀವು ಖುಷಿಯಾಗಿರುತ್ತೀರಿ. ಹಬ್ಬದ ವಿಶೇಷ ಖಾದ್ಯಗಳು, ನಿಮ್ಮ ಕುಟುಂಬಸ್ಥರು ಸ್ನೇಹಿತರ ಸಂತೋಷ, ನಗುವನ್ನು ನೀವು ನಿಮಗರಿವಿಲ್ಲದೆಯೇ ಹಂಚಿಕೊಳ್ಳುತ್ತೀರಿ. ಇದು ನಿಮ್ಮ ಮನಸ್ಸಿನೊಳಗಿನ ದುಗುಡಗಳನ್ನು ದೂರಗೊಳಿಸಿ, ನಿಮ್ಮಲ್ಲಿ ಖುಷಿಯ, ಸಂತೋಷದ ಭಾವನೆಯನ್ನು ಪ್ರೇರೇಪಿಸುತ್ತದೆ.

Holi 2025: ಹೋಳಿ ಹಬ್ಬದ ಪೌರಾಣಿಕ ಹಿನ್ನೆಲೆ ಏನು...? ಹೋಲಿಕಾ ದಹನ ಯಾಕೆ ಮಾಡುತ್ತಾರೆ ಗೊತ್ತಾ..?

ಹೋಳಿ ಎಂಬುದು ಎಂಡಾರ್ಫಿನ್‌ಗಳ ಹಬ್ಬ

ಬಣ್ಣ ಅಥವಾ ಗುಲಾಲ್‌ಗಳೊಂದಿಗೆ ಹೋಳಿ ಆಡುವ ಕ್ರಿಯೆಯು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ಮತ್ತೊಂದು ಚಟುವಟಿಕೆ. ಬಣ್ಣ ಹಚ್ಚುವುದು, ಬಣ್ಣದ ನೀರು ಎರಚುವುದು ಮತ್ತು ಯಾರಿಗೂ ಗಂಭೀರವಾದ ನೋವುಂಟು ಮಾಡದ ಸಣ್ಣಪುಟ್ಟ ಕೀಟಲೆಗಳನ್ನು ಮಾಡುವುದು ಮಗುವಿನಂತಹ ಸ್ವಾತಂತ್ರ್ಯದ ಭಾವನೆಯನ್ನು ನಿಮ್ಮಲ್ಲಿ ಉಂಟು ಮಾಡುತ್ತದೆ.

ಮನಶ್ಶಾಸ್ತ್ರಜ್ಞರು ಹೇಳುವ ಪ್ರಕಾರ, ಬಣ್ಣಗಳೊಂದಿಗೆ ಆಟವಾಡುವ ಕ್ರಿಯೆಯು ಒತ್ತಡ ಉಂಟು ಮಾಡುವ ಹಾರ್ಮೋನ್‌ಗಳಾದ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್‌ ನಮ್ಮ ಮನಸ್ಥಿತಿಯನ್ನು ಸುಧಾರಿಸಿ, ಸಂತೋಷದ ಭಾವನೆಯನ್ನು ಹೆಚ್ಚಿಸುತ್ತದೆ.

ಹೋಳಿಯ ಮನೋವೈಜ್ಞಾನಿಕ ಪ್ರಯೋಜನಗಳೇನು?

ಹೋಳಿಯ ರೋಮಾಂಚಕ ಬಣ್ಣಗಳು ಮನೋವೈಜ್ಞಾನಿಕ ಪರಿಣಾಮವನ್ನು ಸಹ ಹೊಂದಿದೆ. ಬಣ್ಣಗಳು ಮೆದುಳನ್ನು ಉತ್ತೇಜಿಸುತ್ತವೆ, ಕೆಂಪು ಮತ್ತು ಹಳದಿ ಬಣ್ಣಗಳು ಶಕ್ತಿ ಮತ್ತು ಸಂತೋಷವನ್ನು ಉಂಟುಮಾಡುತ್ತವೆ. ಇದೇ ವೇಳೆ ನೀಲಿ ಮತ್ತು ಹಸಿರುಗಳು ಶಾಂತತೆಯನ್ನು ಪ್ರೇರೇಪಿಸುತ್ತವೆ. ಹಬ್ಬದ ಸಂವೇದನಾ ಶ್ರೀಮಂತಿಕೆ, ದೃಶ್ಯಗಳು, ಶಬ್ದಗಳು ಮತ್ತು ನಮ್ಮ ಅಭಿರುಚಿಗಳಲ್ಲಿ ಮನಸ್ಸು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ, ನಕಾರಾತ್ಮಕ ಚಿಂತನೆಗಳು ನಮ್ಮತ್ತ ಸುಳಿಯಲು ಅವಕಾಶವೇ ಇರುವುದಿಲ್ಲ.

ಈ ಬಾರಿಯ ಹೋಳಿಯ ರಂಗು ನಿಮ್ಮ ದೇಹವನ್ನು ಮಾತ್ರ, ನಿಮ್ಮ ಮನಸ್ಸನ್ನು ಕೂಡಾ ಬಣ್ಣಗಳಿಂದ ತುಂಬಲಿದೆ. ಹೀಗಾಗಿ, ಹೋಳಿಯಾಡುವುದು ಬೇಡ ಎಂಬ ಮನಸ್ಥಿತಿಯಿಂದ ಹೊರಬಂದು, ಮನಸ್ಫೂರ್ತಿಯಾಗಿ ಹೋಳಿಯಾಟ ಅಡಿ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೂ ಅತ್ಯಗತ್ಯ.