'ಜನನಿ' ಮೂಲಕ ತಾಯಿ, ಮಗುವಿಗೆ ಆರೋಗ್ಯ ಸೇವೆ ಖಚಿತ
ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರವು ನವೀಕರಿಸಿದ ಡಿಜಿಟಲ್ ಅಪ್ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಗರ್ಭಧಾರಣೆ, ಹೆರಿಗೆ, ನವಜಾತ ಶಿಶು ಆರೈಕೆಗೆ ಸಂಬಂಧಿಸಿ ಪ್ರಸವಪೂರ್ವ ಮತ್ತು ಬಳಿಕದ ಸೇವೆಗಳನ್ನು ಡಿಜಿಟಲ್ ಮೂಲಕ ಟ್ರ್ಯಾಕ್ ಮಾಡಲು ವಿನ್ಯಾಸಗೊಳಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಗರ್ಭಧಾರಣೆ, ಹೆರಿಗೆ, ನವಜಾತ ಶಿಶು ಆರೈಕೆಗೆ ಸಂಬಂಧಿಸಿ ಪ್ರಸವ ಪೂರ್ವ ಮತ್ತು ಬಳಿಕದ ಆರೋಗ್ಯ ಸೇವೆಗಳನ್ನು (digital healthcare) ಒದಗಿಸುವುದನ್ನು ಖಚಿತ ಪಡಿಸಿಕೊಳ್ಳಲು ಡಿಜಿಟಲ್ ಮೂಲಕ ಟ್ರ್ಯಾಕಿಂಗ್ ಗೆ ಕೇಂದ್ರ ಸರ್ಕಾರವು ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ನವೀಕರಿಸಿದ ಡಿಜಿಟಲ್ ಅಪ್ ಅನ್ನು ಬಿಡುಗಡೆ ಮಾಡಿದೆ. ಜನನಿ (Janani App) ಎಂಬ ಹೆಸರಿನ ಈ ಹೊಸ ಡಿಜಿಟಲ್ ಅಪ್ ದೇಶಾದ್ಯಂತ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು (Mothers And Child Healthcare) ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ.
ಜನನಿ ಅಪ್ಲಿಕೇಶನ್ ಮೂಲಕ ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಯಾರು ಕೂಡ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಅಲ್ಲದೇ ಇದರ ಮೂಲಕ ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಮೊದಲೇ ಗುರುತಿಸಿ, ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ರೋಗಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಸುಧಾರಿಸುವ ಮೂಲಕ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.
High Blood Pressure: ಅಧಿಕ ರಕ್ತದೊತ್ತಡ ಜೀವನಶೈಲಿ ಬಿಕ್ಕಟ್ಟಿಗೆ ಕಾರಣ
ಏನಿದು ಜನನಿ ಅಪ್ ?
ಜನನಿ ಅಪ್ ಪ್ರಸವ ಪೂರ್ವ ಮತ್ತು ಪ್ರಸವದ ಬಳಿಕ ನವಜಾತ ಶಿಶುಗಳ ಆರೈಕೆಗೆಂದು ವಿನ್ಯಾಸಗೊಳಿಸಿರುವ ಆರೋಗ್ಯ ಸೇವೆ ಟ್ರ್ಯಾಕಿಂಗ್ ವ್ಯವಸ್ಥೆಯಾಗಿದೆ. ಇದು ಆರೈಕೆಯ ವಿವಿಧ ಹಂತಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನಿರಂತರ ಡಿಜಿಟಲ್ ಆರೋಗ್ಯ ದಾಖಲೆಯನ್ನು ಒದಗಿಸುತ್ತದೆ.
ಇದರಲ್ಲಿ ಪ್ರಸವಪೂರ್ವ ಆರೈಕೆ, ವಿತರಣೆ, ಹೆರಿಗೆ ಮತ್ತು ಪ್ರಸವದ ಬಳಿಕ ಆರೈಕೆ, ನವಜಾತ ಮತ್ತು ಚಿಕ್ಕ ಮಕ್ಕಳ ಆರೋಗ್ಯದ ಮೇಲ್ವಿಚಾರಣೆ ಜೊತೆಗೆ ಕುಟುಂಬ ಯೋಜನೆ ಸೇವೆಗಳನ್ನು ಒಳಗೊಂಡಿದೆ.
ಹೇಗೆ ಕಾರ್ಯನಿರ್ವಹಿಸುತ್ತದೆ?
ಇದು ಕ್ಯೂಆರ್ ಕೋಡ್ ಮೂಲಕ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ರಕ್ಷಣಾ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಲು ಇದು ಅವಕಾಶ ಮಾಡಿಕೊಡುತ್ತದೆ. ಇದನ್ನು ಆರೋಗ್ಯ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ. ಹೆಚ್ಚಿನ ಅಪಾಯದ ಗರ್ಭಧಾರಣೆಗಳಿಗೆ ಸ್ವಯಂಚಾಲಿತ ಎಚ್ಚರಿಕೆಯನ್ನು ಒದಗಿಸುತ್ತದೆ. ಅಲ್ಲದೇ ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಸೇವೆಗಳ ಅಂತಿಮ ದಿನಾಂಕ, ಮೇಲ್ವಿಚಾರಣೆ ಮಾಡುವುದನ್ನು ನೆನಪಿಸುತ್ತದೆ.
ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಭಾರತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹಲವಾರು ಸವಾಲುಗಳಿವೆ. ಈ ಅಪ್ ಬಳಕೆಯಿಂದ ಆರೈಕೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಬಹುದು, ನಿಯಮಿತ ತಪಾಸಣೆಗಳನ್ನು ಖಚಿತಪಡಿಸಿಕೊಳ್ಳಬಹುದು, ಲಸಿಕೆ ಮತ್ತು ನವಜಾತ ಶಿಶುಗಳ ಆರೋಗ್ಯ ಮೇಲ್ವಿಚಾರಣೆಯೊಂದಿಗೆ ತಾಯಿ ಮತ್ತು ಮಗುವಿಗೆ ಆರೋಗ್ಯ ಸೇವೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಇದರೊಂದಿಗೆ ಜನನಿ ವೇದಿಕೆಯು ನಿರಂತರ ಮೇಲ್ವಿಚಾರಣೆ ಮತ್ತು ಡಿಜಿಟಲ್ ಎಚ್ಚರಿಕೆಗಳ ಮೂಲಕ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಅಪಾಯದಲ್ಲಿರುವ ಮಹಿಳೆಯರನ್ನು ಗುರುತಿಸಲು ಸಹಾಯ ಮಾಡುತ್ತದೆ.
Hair Care Tips: ಸೀಗೆಕಾಯಿ; ಕೂದಲಿನ ಆರೈಕೆಗೆ ಇದೇ ಮಾಯಾ ಮದ್ದು
ಗ್ರಾಮೀಣ ಆರೋಗ್ಯ ಹೇಗೆ ಸೇವೆಗೆ ಸಹಾಯ
ಈ ಅಪ್ ಮೂಲಕ ಆರೋಗ್ಯ ಕಾರ್ಯಕರ್ತರು ದಾಖಲೆಗಳನ್ನು ತ್ವರಿತವಾಗಿ ಪಡೆಯಬಹುದು. ಆರೈಕೆಯ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳ ನಡುವೆ ಪರಸ್ಪರ ಸಮನ್ವಯ ಸಾಧಿಸಲು ಸಹಕಾರಿಯಾಗುವುದು.