ಮಧುಮೇಹ ನಿಯಂತ್ರಣಕ್ಕೆ ಹಸಿ ಪಪ್ಪಾಯಿ ಉತ್ತಮವೋ ಅಥವಾ ಹಣ್ಣೋ?
Health Tips: ಇತ್ತೀಚೆಗೆ ಮಧುಮೇಹದ ಸಮಸ್ಯೆ ಎಲ್ಲರಲ್ಲೂ ಕಾಡುತ್ತಿದೆ. ಹೀಗಾಗಿ ಆಹಾರ ಕ್ರಮವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ.. ಸಕ್ಕರೆ ಮಟ್ಟವನ್ನು ಕಾಯ್ದು ಕೊಳ್ಳುವುದು ಪ್ರಮುಖವಾಗಿದ್ದು ಪಪ್ಪಾಯಿ ಮಧು ಮೇಹಿಗಳಿಗೆ ರಾಮಬಾಣ ವಾಗಿದೆ.. ಆದರೆ, ಹಸಿಯಾದ ಪಪ್ಪಾಯಿ ಅಥವಾ ಹಣ್ಣಾದ ಪಪ್ಪಾಯಿ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಉತ್ತಮ?
ಸಂಗ್ರಹ ಚಿತ್ರ -
ನವದೆಹಲಿ, ಎ.9: ಇತ್ತೀಚೆಗೆ ಮಧುಮೇಹದ ಸಮಸ್ಯೆ ಎಲ್ಲರಲ್ಲೂ ಕಾಡುತ್ತಿದೆ. ಹೀಗಾಗಿ ಆಹಾರ ಕ್ರಮವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಅದರಲ್ಲೂ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವುದು ಪ್ರಮುಖವಾಗಿದ್ದು ಪಪ್ಪಾಯಿ (papaya) ಮಧು ಮೇಹಿಗಳಿಗೆ ರಾಮಬಾಣವಾಗಿದೆ. ಆದರೆ, ಹಸಿಯಾದ ಪಪ್ಪಾಯಿ ಅಥವಾ ಹಣ್ಣಾದ ಪಪ್ಪಾಯಿ ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಉತ್ತಮ?
ಹಸಿ ಪಪ್ಪಾಯಿ - ಹಣ್ಣಾದ ಪಪ್ಪಾಯಿ: ಯಾವುದು ಒಳಿತು?
ಸಂಶೋಧನೆಯ ಪ್ರಕಾರ ಪಪ್ಪಾಯಿ ಸಾರಗಳು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ. ಇದು ವಿಟಮಿನ್ ಸಿ, ಫೈಬರ್, ಫ್ಲೇವನಾಯ್ಡ್‌ಗಳು ಮತ್ತು ಸಪೋನಿನ್ ಅನ್ನು ಹೊಂದಿ ರುತ್ತದೆ. ಆದರೆ ಇದು ಹಣ್ಣು ಆಗುತ್ತಿದ್ದಂತೆ ಪೌಷ್ಟಿಕಾಂಶಗಳು ಬದಲಾವಣೆಗೊಳ್ಳುತ್ತವೆ.
ಹಸಿ ಪಪ್ಪಾಯ:
ಇದರಲ್ಲಿ ಸಕ್ಕರೆ ಅಂಶಗಳು ಕಡಿಮೆ ಪ್ರಮಾಣದಲ್ಲಿದೆ, ಇದು ಪೂರ್ವ ಮಧುಮೇಹ ಅಥವಾ ಟೈಪ್ -1 ಅಥವಾ ಟೈಪ್ -2 ಮಧುಮೇಹ ಹೊಂದಿರುವ ಜನರಿಗೆ ಉತ್ತಮ ಆಯ್ಕೆಯಾಗಿದೆ, ರಕ್ತದಲ್ಲಿ ಸಕ್ಕರೆ ಮಟ್ಟ ಥಟ್ಟನೆ ಏರದಂತೆ ಇದು ತಡೆಯುತ್ತದೆ.
Health Tips: ಅರಿಶಿನದ ಹಾಲಿನ ಸೇವನೆ: ಅತಿಯಾದರೆ ಅಮೃತವೂ ವಿಷ; ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!
ಹಣ್ಣಾದ ಪಪ್ಪಾಯಿ: ಇದು ಹೆಚ್ಚು ಸಿಹಿಯಾಗಿರುತ್ತದೆ. ಹಣ್ಣಾದ ಪಪ್ಪಾಯಿಯಲ್ಲಿ ಹೆಚ್ಚಿನ ಫ್ರಕ್ಟೋಸ್ ಅಂಶವಿದ್ದು ಅದು ಹಠಾತ್ ಸಕ್ಕರೆ ಏರಿಕೆಗೆ ಕಾರಣವಾಗಬಹುದು, ಆದ್ದರಿಂದ ಮಧು ಮೇಹಿಗಳು ತಮ ನಿಮ್ಮ ವೈದ್ಯರ ಸಲಹೆಯ ಪ್ರಕಾರ ಹಣ್ಣನ್ನು ಸೇವಿಸಿ.
ಆರೋಗ್ಯ ಲಾಭವೇನು?
ಹಸಿ ಪಪ್ಪಾಯಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಧಿಕ ನಾರಿನಂಶವು ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಅದೇ ರೀತಿ ಊಟದ ನಂತರ ಸಕ್ಕರೆ ಮಟ್ಟ ಏರುವುದಿಲ್ಲ. ಹೆಚ್ಚಿನ ನಾರಿನ ಅಂಶವು ಇನ್ಸುಲಿನ್ ಸಂವೇದನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಹಣ್ಣಾದ ಪಪ್ಪಾಯಿ ಮಧುಮೇಹಿಗಳಿಗೆ ಕೆಟ್ಟದ್ದೇ?
ಹಣ್ಣಾದ ಪಪ್ಪಾಯಿ ಮಧುಮೇಹಿಗಳಿಗೆ ಕೆಟ್ಟದ್ದಲ್ಲ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ನಿಜ, ಆದರೆ ಇದು ದೀರ್ಘಕಾಲೀನ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ಆದರೆ ನೀವು ಸೇವಿಸುವ ಗಾತ್ರವನ್ನು ನಿಯಂತ್ರಿಸಬೇಕು.ಪಪ್ಪಾಯಿ ನೈಸರ್ಗಿಕ ಹಣ್ಣಾಗಿದ್ದು, ಇದನ್ನು ಎಚ್ಚರಿಕೆಯಿಂದ ಸೇವಿಸಬೇಕು. ಸಕ್ಕರೆ ಮಟ್ಟದಲ್ಲಿ ಏರಿಳಿತವಿರುವವರು ಒಂದೇ ಬಾರಿಗೆ ಹೆಚ್ಚು ಹಣ್ಣಾದ ಪಪ್ಪಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು.