ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒತ್ತಡ, ನಿದ್ರೆ ನಿರ್ವಹಣೆ ಮಾನಸಿಕ ಆರೋಗ್ಯಕ್ಕೆ ಸಹಕಾರಿ

Mental Health: ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಎನ್ನುವುದು ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಅನೇಕರು ಮಾನಸಿಕ ತುಮುಲ ಅನುಭವಿಸುತ್ತಿದ್ದಾರೆ. ಇದರಿಂದ ಹೊರ ಬರಲು ಉತ್ತಮ ನಿದ್ರೆ ಜತೆಗೆ ಒತ್ತಡ ನಿರ್ವಹಣೆ ಮುಖ್ಯ. ಈ ಬಗ್ಗೆ ವಿವರ ಇಲ್ಲಿದೆ.

ಮಾನಸಿಕ ಆರೋಗ್ಯಕ್ಕೆ ಒತ್ತಡ, ನಿದ್ರೆ ನಿರ್ವಹಣೆ ಸಹಕಾರಿ

ಸಾಂದರ್ಭಿಕ ಚಿತ್ರ -

Ramesh B
Ramesh B Nov 23, 2025 7:00 AM

ಬೆಂಳೂರು, ನ. 23: ನಾವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಉತ್ತಮ ನಿದ್ರೆ ಜತೆಗೆ ಒತ್ತಡ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ (Mental Health). ಈ ನಿಟ್ಟಿನಲ್ಲಿ ನಿದ್ರೆ ಮತ್ತು ಒತ್ತಡ ನಿರ್ವಹಣೆ ತುಂಬಾನೆ ಅಗತ್ಯವಾಗಿದ್ದು, ಅದನ್ನು ನಿರ್ವಹಿಸುವುದು ಕೂಡ ಅಷ್ಟೇ ಸವಾಲಿನ ಕೆಲಸ. ಹೀಗಿರುವಾಗ ಇವೆರಡನ್ನೂ ನಿಭಾಯಿಸುವುದು ಹೇಗೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಮನೋವೈದ್ಯ ಡಾ. ತಾರಾಚಂದ್ ಉತ್ತರಿಸಿದ್ದಾರೆ.

ಒತ್ತಡ ಎಂಬುದು ಬದುಕಿನ ಸಹಜ ಕ್ರಿಯೆಯಾದರೂ ಸಹ ಅದು ಅತಿಯಾದರೆ ಭಯ, ಭೀತಿ, ಆತಂಕ ಮತ್ತು ಸುಸ್ತು ಉಂಟಾಗುವಿಕೆಗೆ ತಿರುಗುತ್ತದೆ. ಇದರಿಂದ ದೈಹಿಕ ಚಟುವಟಿಕೆಗಳಲ್ಲಿ ಬದಲಾವಣೆ ಉಂಟಾಗಬಹುದು. ಅದಕ್ಕೆ ಕಾರಣ ಒತ್ತಡದಿಂದ ಕೂಡಿದ ಕೆಲಸ. ಸಂಬಂಧಗಳು, ಆರ್ಥಿಕ ಯೋಚನೆಗಳಿಂದ ಹಿಡಿದು ಜೀವನದಲ್ಲಿ ಎದುರಾಗುವ ಸವಾಲುಗಳು ಅನೇಕ. ಹಾಗಾಗಿ ಒತ್ತಡ ಹೆಚ್ಚಳಕ್ಕೆ ಕಾರಣಗಳನ್ನು ಪತ್ತೆಹಚ್ಚುವುದು ಮತ್ತು ಅದನ್ನು ಶಮನಗೊಳಿಸುವುದು ಪ್ರಮುಖ ಪರಿಹಾರ.

ಯಾವೆಲ್ಲ ಕಾರಣಗಳಿಂದಾಗಿ ಒತ್ತಡ ಉಂಟಾಗುತ್ತದೆ ಮತ್ತು ಅದನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಮೊದಲು ಪಟ್ಟಿ ಮಾಡಬೇಕು. ಧೂಮಪಾನ, ಅತಿಯಾಗಿ ತಿನ್ನುವುದು, ಅತಿಯಾದ ಸ್ಕ್ರೀನ್ ಟೈಮ್, ಅನಾರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ಒತ್ತಡ ಮತ್ತು ನಿದ್ರೆ ಸಮಸ್ಯೆ ಉಂಟಾಗಿ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಈ ಎಲ್ಲ ಸಮಸ್ಯೆಗಳಿಗೆ ಮನೆಮದ್ದು- ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದು.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರನ್ನು ಕುಡಿದರೆ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ಮುಕ್ತಿ

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇರುವ ಸರಳ ಸೂತ್ರವೆಂದರೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ವ್ಯಾಯಾಮ ಮಾಡುವುದರಿಂದ ಮಾನಸಿಕ, ದೈಹಿಕ ಆರೋಗ್ಯವನ್ನು ಹೆಚ್ಚಿಸುವ ಮತ್ತು ಉದ್ವೇಗವನ್ನು ಕಡಿಮೆ ಮಾಡುವ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತವೆ. ಇತರರೊಂದಿಗೆ ಸಂಪರ್ಕ ಸಾಧಿಸುವುದು, ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮತ್ತು ವಿರಾಮ ತೆಗೆದುಕೊಳ್ಳುವ ಮೂಲಕ ಚಟುವಟಿಕೆಗಳನ್ನು ಮುಂದುವರಿಸುವುದು ಭಾವನಾತ್ಮಕ ಸಮತೋಲನವನ್ನು ಮತ್ತಷ್ಟು ಹೆಚ್ಚಿಸಬಹುದು. ಒತ್ತಡವು ಅತಿಯಾದರೆ ವೃತ್ತಿಪರ ಸಹಾಯವನ್ನು ಪಡೆಯಲು ಎಂದಿಗೂ ಹಿಂಜರಿಯಬಾರದು ಎಂದು ಅವರು ಸಲಹೆ ನೀಡಿದರು.

ಪ್ರತಿಯೊಬ್ಬರ ಜೀವನಶೈಲಿಯಲ್ಲೂ ನಿದ್ರೆ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಇಡೀ ದಿನ ದೇಹ ದಣಿದಿರುವಾಗ ಚೇತರಿಕೆಗೆ, ರೋಗನಿರೋಧಕ ಶಕ್ತಿ ಮತ್ತು ಹಾರ್ಮೋನ್ ನಿಯಂತ್ರಣದಲ್ಲಿಡಲು ನಿದ್ರೆ ಬಹಳ ಮುಖ್ಯ. ನಿದ್ರೆ ಮಾಡಲು ಕಷ್ಟಪಡುವವರು, ಹಗಲಿನಲ್ಲಿ ಆಯಾಸದಿಂದಿರುವವರು ಅಥವಾ ಏರುಪೇರಿನ ದಿನಚರಿಗಳನ್ನು ಹೊಂದಿರುವವರು ನಿದ್ರೆ ಸಮಸ್ಯೆಯನ್ನು ಹೊಂದಿರುತ್ತಾರೆ.

ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಈ ಕೆಳಗಿನ ಸಲಹೆಗಳನ್ನು ಪಾಲಿಸಿ

  • ನಿದ್ರೆಗೆ ನಿಗದಿತ ವೇಳಾಪಟ್ಟಿಯನ್ನು ಅನುಸರಿಸಬೇಕು. ಹಗಲಿನ ಹೊತ್ತು ನಿದ್ರೆ ಮಾಡುವುದನ್ನು ತಪ್ಪಿಸಬೇಕು ಮತ್ತು ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡುವುದನ್ನು ಅಭ್ಯಾಸ ಮಾಡಬೇಕು.
  • ಮಲಗುವ ಮುನ್ನ ದೀಪಗಳನ್ನು ಮಂದಗೊಳಿಸುವುದು, ವಸ್ತು/ಸಾಧನಗಳ ಬಳಕೆಯಿಂದ ದೂರವಿರುವುದು ಮತ್ತು ಸಂಜೆ ವೇಳೆ ಕೆಫೀನ್ ಅಥವಾ ಭಾರಿ ಊಟ ಮಾಡುವುದನ್ನು ತಪ್ಪಿಸಬೇಕು.
  • ಮಲಗುವ ಕೋಣೆಯಲ್ಲಿ ಆರಾಮದಾಯಕ ಹಾಸಿಗೆ, ತಂಪಾದ ತಾಪಮಾನ ಮತ್ತು ಕನಿಷ್ಠ ಶಬ್ದದೊಂದಿಗೆ ಕೂಡಿದ ವಾತಾವರಣವನ್ನು ನಿರ್ಮಿಸಿಕೊಂಡಾಗ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.