ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lakshya Sen: ಆಸ್ಟ್ರೇಲಿಯನ್ ಓಪನ್ ಗೆದ್ದ ಲಕ್ಷ್ಯ ಸೇನ್

ಫೈನಲ್‌ನಲ್ಲಿ ಲಕ್ಷ್ಯ ಸೇನ್ ಕೆಳ ಶ್ರೇಯಾಂಕದ ಎದುರಾಳಿಯನ್ನು ಹಿಂದಿಕ್ಕಲು ಕೇವಲ 38 ನಿಮಿಷಗಳನ್ನು ತೆಗೆದುಕೊಂಡರು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಅವರು ಎದುರಾಳಿಗೆ ಯಾವುದೇ ಹಂತದಲ್ಲಿಯೂ ಚೇತರಿಕೆಗೆ ಅವಕಾಶ ನೀಡಲೇ ಇಲ್ಲ. ಶನಿವಾರ ಮಧ್ಯಾಹ್ನ ನಡೆದ ಸೆಮಿಫೈನಲ್‌ನಲ್ಲಿ ಸೇನ್‌ ಗೆಲುವಿಗಾಗಿ 86 ನಿಮಿಷಗಳ ಹೋರಾಟ ನಡೆಸಿದ್ದರು.

ವರ್ಷದ ಮೊದಲ ಪ್ರಶಸ್ತಿ ಕಾಯುವಿಕೆಗೆ ಅಂತ್ಯ ಹಾಡಿದ ಲಕ್ಷ್ಯ ಸೇನ್

-

Abhilash BC
Abhilash BC Nov 23, 2025 2:52 PM

ಸಿಡ್ನಿ: ಭಾರತದ ಲಕ್ಷ್ಯ ಸೇನ್(Lakshya Sen) ಅವರು ಭಾನುವಾರ ಆಸ್ಟ್ರೇಲಿಯನ್ ಓಪನ್ ಸೂಪರ್‌(Australian Open) 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಜಪಾನ್‌ನ ಯುಶಿ ತನಾಕ ಅವರನ್ನು 21–15, 21–11 ನೇರ ಗೇಮ್‌ಗಳ ಅಂತರದಿಂದ ಮಣಿಸಿ ಈ ವರ್ಷದ ಮೊದಲ ಪ್ರಶಸ್ತಿಗೆ ಕೊರಳೊಡ್ಡಿದರು. ಹಾಂಗ್‌ಕಾಂಗ್ ಓಪನ್‌ನಲ್ಲಿ ಫೈನಲ್‌ ತಲುಪಿದ್ದ ಅವರು ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು.

ಸೆಮಿಫೈನಲ್‌ನಲ್ಲಿ ಸೇನ್‌ ಅವರು ತೈವಾನ್‌ನ ಆಟಗಾರ ಲಿನ್‌ ಚುನ್‌ ಯಿ ಅವರನ್ನು 21–18, 21–15 ರಿಂದ ಸೋಲಿಸಿದ್ದರು. 2017 ರಲ್ಲಿ ಕಿದಂಬಿ ಶ್ರೀಕಾಂತ್ ನಂತರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಸೇನ್‌ ಪಾತ್ರರಾದರು. ಕುತೂಹಲಕಾರಿಯಾಗಿ, ಆಸ್ಟ್ರೇಲಿಯನ್ ಓಪನ್ ಲಕ್ಷ್ಯ ಅವರ ಮೂರನೇ ಸೂಪರ್ 500 ಪ್ರಶಸ್ತಿಯಾಗಿದೆ. ಅವರು 2022 ರಲ್ಲಿ ಇಂಡಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು ಮತ್ತು ಅದರ ನಂತರ 2023 ರಲ್ಲಿ ಕೆನಡಾ ಓಪನ್‌ನಲ್ಲಿ ಜಯಗಳಿಸಿದರು. ಆಸ್ಟ್ರೇಲಿಯನ್ ಓಪನ್ ಗೆಲುವು ಅವರ ವೃತ್ತಿಜೀವನದ ಮೂರನೇ ಸೂಪರ್ 500 ಪ್ರಶಸ್ತಿಯಾಗಿದೆ.

ಇದನ್ನೂ ಓದಿ ಹಾಂಗ್‌ಕಾಂಗ್ ಓಪನ್‌ನಲ್ಲಿ ಭಾರತಕ್ಕೆ ನಿರಾಸೆ; ಫೈನಲ್‌ನಲ್ಲಿ ಸೇನ್‌, ಸಾತ್ವಿಕ್-ಚಿರಾಗ್‌ಗೆ ಸೋಲು