ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shoulder Pain: ಭುಜದ ನೋವಿನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ!

ಖಾಸಗಿ ಆಸ್ವತ್ರೆಯೊಂದರಲ್ಲಿ ಭುಜದ ನೋವಿನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಪೂರ್ತಿ ಗುಣಮುಖರಾಗಿದ್ದಾರೆ. ಸದ್ಯ ರೋಗಿಯು ಭುಜದ ನೋವಿನಿಂದ ಚೇತರಿಕೆ ಕಂಡಿದ್ದಾರೆ. ಸಾಫ್ಟ್‌ವೇರ್‌ ತಂತ್ರಜ್ಞಾನವನ್ನು ಬಳಸಿ ವೈದ್ಯರು ವರ್ಚುವಲ್ ಇಂಪ್ಲಾಂಟ್ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಭುಜದ ನೋವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡ ವೈದ್ಯರು!

Profile Pushpa Kumari Feb 17, 2025 6:58 PM

ಬೆಂಗಳೂರು: ಭುಜದ ನೋವಿನಿಂದ (Shoulder Pain) ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿರುವ ಘಟನೆ ಖಾಸಗಿ ಆಸ್ಪತ್ರೆವೊಂದರಲ್ಲಿ ನಡೆದಿದೆ. 49 ವರ್ಷದ ಟೆಕ್ಕಿಯೊಬ್ಬರು ಕಳೆದ 10 ವರ್ಷಗಳಿಂದ ಎಡ ಭುಜದ ನೋವಿನಿಂದ ಬಳಲುತ್ತಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಯ ಕೈಗೊಂಡಿದ್ದರು. ಆದ್ರೆ ತದನಂತರ ಅವರಿಗೆ ಸಹಜವಾಗಿ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ಭುಜದ ನೋವು ಹೆಚ್ಚಾಗುತ್ತಾ ಹೋಗಿದ್ದು ತಮ್ಮ ತೋಳನ್ನು ಎತ್ತಿ ಚಾಲನೆ ಮಾಡುವುದೇ ಕಷ್ಟಕರವಾಗಿತ್ತು. ದಿನೇ ದಿನೇ ನೋವು ತೀವ್ರ ಗೊಳ್ಳಲಾರಂಬಿಸಿತು. ತದನಂತರ ನಗರದ ವಾಸವಿ ಆಸ್ಪತ್ರೆಯ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಶ್ರೀವತ್ಸ ಸುಬ್ರಹ್ಮಣ್ಯ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದಿದ್ದಾರೆ.

ಇಲ್ಲಿನ ವೈದ್ಯರು ರೋಗಿಯನ್ನು ಪರೀಕ್ಷಿಸಿದ್ದು, ಭುಜದಲ್ಲಿ ಅತೀವವಾದ ನೋವಿನಿಂದ ಬಳಲುತ್ತಿರುವುದು ಗೊತ್ತಾಗಿದೆ. ರೋಗಿಯ ಕೀಲುಗಳಲ್ಲಿನ ಕಾರ್ಟಿಲೆಜ್ ಸವೆದುಹೋಗಿ ಮೂಳೆಗಳು ಪರಸ್ಪರ ಉಜ್ಜುವುದರಿಂದ ರೋಗಿಗೆ ಹೆಚ್ಚು ನೋವು ಕಾಣೀಸಿಕೊಳ್ಳುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಆಗ ಭುಜದ ಬದಲಿ (ಕೀಲು ಮೇಲ್ಮೈಯನ್ನು ಕೃತಕ ಘಟಕ ಗಳಿಂದ ಬದಲಾಯಿ ಸುವುದು) ಶಸ್ತ್ರಚಿಕಿತ್ಸೆಯನ್ನು ಮಾಡಲು ಮುಂದಾ ಗಿದ್ದು, ನಿಖರ ಫಲಿತಾಂಶಕ್ಕಾಗಿ ಸಾಫ್ಟ್ವೇರ್ ತಂತ್ರಜ್ಞಾನವನ್ನು ಬಳಸಿ ವರ್ಚುವಲ್ ಇಂಪ್ಲಾಂಟ್ ಮೂಲಕ ಶಸ್ತ್ರಚಿಕಿತ್ಸೆ ಕೈಗೊಳ್ಳಲು ನಿರ್ಧರಿಸಿದರು.

ಇದನ್ನು ಓದಿ: Health Tips: ಚಹಾ ಕುಡಿಯದಿದ್ದರೆ ತಲೆನೋವು ಬರುವುದು ಹೌದೇ?

ಅಗತ್ಯ ಸ್ಕ್ಯಾನ್ ಳನ್ನು ಕೈಗೊಂಡ ತದನಂತರ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಎರಡು ದಿನಗಳ ಬಳಿಕ ರೋಗಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮೂರು ತಿಂಗಳ ಬಳಿಕ ರೋಗಿಯು ನೋವಿನಿಂದ ಮುಕ್ತಿಹೊಂದಿದ್ದು, ಚೇತರಿಕೆಯನ್ನು ಕಂಡಿದ್ದಾರೆ. ಇದೀಗ ಅವರು ಎಲ್ಲರಂತೆ ಸಾಮಾನ್ಯವಾಗಿ ದೈನಂದಿನ ಜೀವನವನ್ನು ಸಾಗಿಸುತ್ತಿದ್ದು, ಯಾವುದೇ ತೊಂದರೆ ಇಲ್ಲದೆ ಬದುಕು ಸಾಗಿಸುತ್ತಿದ್ದಾರೆ ಎಂದು ತಜ್ಞರಾದ ಡಾ. ಶ್ರೀವತ್ಸ ಸುಬ್ರಹ್ಮಣ್ಯ ತಿಳಿಸಿದ್ದಾರೆ.