ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೈ ಹೀಲ್ಸ್ ಚಪ್ಪಲಿ ಬೆನ್ನು ನೋವಿಗೆ ಕಾರಣವಾಗುತ್ತಾ? ವೈದ್ಯರ ಸಲಹೆ ಏನು?

Health Tips: ನಾವು ಕುಳಿತುಕೊಳ್ಳುವ ಭಂಗಿ, ತೂಕ ಹೆಚ್ಚಳ, ಮೂಳೆ ಅಥವಾ ನರಗಳ ಒತ್ತಡ ಹೀಗೆ ನಾನಾ ಕಾರಣಗಳಿಂದ ಬೆನ್ನು ನೋವಿನ ಸಮಸ್ಯೆ ಕಾಡಬಹುದು. ಹಾಗೆಯೇ ನಾವು ಧರಿಸುವಂತಹ ಚಪ್ಪಲಿ ಕೂಡ ಬೆನ್ನು ನೋವಿಗೆ ಕಾರಣವಾಗುತ್ತದೆ ಎಂದು ಹೆಚ್ಚಿನವರು ಹೇಳುತ್ತಾರೆ.ಹಾಗಿದ್ರೆ ನಾವು ಧರಿಸುವ ಚಪ್ಪಲಿ ಮತ್ತು ಬೆನ್ನು ನೋವಿಗೆ ಸಂಬಂಧ ಇದೆಯಾ? ಹೈ ಹೀಲ್ಸ್ ಧರಿಸುವುದು ನಮ್ಮ ದೇಹಕ್ಕೆ ಹಾನಿಕಾರಕವೇ ಈ ಬಗ್ಗೆ ವೈದ್ಯರಾದ ಡಾ.ಅಮೃತ್ ಲಾಲ್ ಎ ಮ್ಯಾಸ್ಕರೆನ್ನಸ್ ಸಲಹೆ ನೀಡಿದ್ದಾರೆ.

ನೀವು ಧರಿಸುವ ಚಪ್ಪಲಿಯೇ ಬೆನ್ನು ನೋವಿಗೆ ಕಾರವಾಗುತ್ತಾ?

ಸಂಗ್ರಹ ಚಿತ್ರ -

Profile
Pushpa Kumari Feb 9, 2026 8:58 PM

ಬೆಂಗಳೂರು,ಫೆ.9: ಇಂದಿನ ದಿನದಲ್ಲಿ ಕೆಟ್ಟ ಜೀವನಶೈಲಿಯಿಂದ ಬೆನ್ನು ನೋವು ಎಂಬುವುದು ತುಂಬಾ ಸಾಮಾನ್ಯವಾಗಿದೆ. ನಾವು ಕುಳಿತುಕೊಳ್ಳುವ ಭಂಗಿ, ತೂಕ ಹೆಚ್ಚಳ, ಮೂಳೆ ಅಥವಾ ನರಗಳ ಒತ್ತಡ ಹೀಗೆ ನಾನಾ ಕಾರಣಗಳಿಂದ ಬೆನ್ನು ನೋವಿನ ಸಮಸ್ಯೆ ಕಾಡಬಹುದು. ಹಾಗೆಯೇ ನಾವು ಧರಿಸುವಂತಹ ಚಪ್ಪಲಿ ಕೂಡ ಬೆನ್ನು ನೋವಿಗೆ ಕಾರಣವಾಗುತ್ತದೆ ಎಂದು ಹೆಚ್ಚಿನವರು ಹೇಳುತ್ತಾರೆ.ಹಾಗಿದ್ರೆ ನಾವು ಧರಿಸುವ ಚಪ್ಪಲಿ ಮತ್ತು ಬೆನ್ನು ನೋವಿಗೆ ಸಂಬಂಧ ಇದೆಯಾ? ಹೈ ಹೀಲ್ಸ್ ಧರಿಸುವುದು ನಮ್ಮ ದೇಹಕ್ಕೆ ಹಾನಿಕಾರಕವೇ ಈ ಬಗ್ಗೆ ವೈದ್ಯರಾದ ಡಾ.ಅಮೃತ್ ಲಾಲ್ ಎ ಮ್ಯಾಸ್ಕರೆನ್ನಸ್ ಸಲಹೆ ನೀಡಿದ್ದಾರೆ.

ವಿಡಿಯೋ ನೋಡಿ:



ಇತ್ತೀಚೆಗೆ ಹೈಹೀಲ್ಡ್ ಚಪ್ಪಲಿ ಧರಿಸೋದು ಫ್ಯಾಷನ್ ಆಗಿದೆ. ಹೆಚ್ಚಿನ ಮಹಿಳೆಯರಿಗೆ ಪಾರ್ಟಿ, ಫಂಕ್ಷನ್ ಗಳಲ್ಲಿ ಇವು ಆಕರ್ಷಣೆಯಾಗಿವೆ. ಇಂತಹ ಹೈಹೀಲ್ಡ್ ಚಪ್ಪಲಿಗಳು ನಿಜ ವಾಗಿಯೂ ಆರೋಗ್ಯಕ್ಕೆ ತೊಂದರೆಯಾಗುತ್ತಾ? ಈ ಬಗ್ಗೆ ತಜ್ಞರು ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ. ನಮ್ಮ ಕಾಲಿನ ಪಾದಗಳು ದೇಹಕ್ಕೆ ಬೇಸ್ ಆಗಿದ್ದು ಪಾದದಲ್ಲಿ ಏನೆಲ್ಲಾ ಸಂಚಲನಗಳು ನಡೆ ಯುತ್ತವೆ ಇದು ದೇಹದ ಭಾಗಗಳಾದ ಸೊಂಟ, ಹಾಗೂ ಬೆನ್ನಿಗೆ ಪರಿಣಾಮಕಾರಿಯಾಗುತ್ತದೆ.

Health Tips: ಬಳಲದೆಯೇ ತೂಕ ಇಳಿಸಬಹುದೇ? ಈ ಟಿಪ್ಸ್‌ ಅನುಸರಿಸಿದರೆ ಸಾಧ್ಯವಿದೆ

ಹೈ ಹೀಲ್ಡ್ ಚಪ್ಪಲಿ ಧರಿಸುವುದರಿಂದ ದೇಹದ ಗುರುತ್ವಾಕ ರ್ಷಣೆಯು ಮುಂದಕ್ಕೆ ಸರಿದು ಸೊಂಟಕ್ಕೆ ಅತೀ ಹೆಚ್ಚಿನ ಒತ್ತಡ ವನ್ನು ನಾವು ಹಾಕುತ್ತೇವೆ. ಇದರಿಂದ ದೇಹದ ಬೆನ್ನಿನ ಭಾಗದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಇದು ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಮತ್ತು ಪಾದಗಳಲ್ಲಿ ನೋವಿಗೆ ಕಾರಣ ವಾಗಬಹುದು. ಕೆಲವೊಮ್ಮೆ ನಮಗೆ ಈ ಚಪ್ಪಲಿಯಲ್ಲಿ ನಡೆದು ಅಭ್ಯಾಸ ಇರದೇ ಇರುವುದರಿಂದ ಸಮತೋಲನ ತಪ್ಪಿ ಕಾಲುಗಳಿಗೆ ತೊಂದರೆಗಳು ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಪರಿಹಾರವೇನು?

*ಹೈ -ಹಿಲ್ಡ್ ಧರಿಸಿದರೂ ಹೆಚ್ಚು ಸಮಯದ ವರೆಗೆ ಬಳಕೆ ಮಾಡಬೇಡಿ

*ಇಂಚುಗಳನ್ನು ಕಡಿಮೆ ಮಾಡಿ. ಜಾಸ್ತಿ ಎತ್ತರದ ಚಪ್ಪಲಿಗಳನ್ನು ಬಳಸಬೇಡಿ

*ಫ್ಲಾಟ್ ಅಥವಾ ಆರಾಮದಾಯಕವಾ ಚಪ್ಪಲಿಯನ್ನು ನಿಯಮಿತವಾಗಿ ಬಳಸಿ.

*ಯಾವುದೇ ಸ್ಯಾಂಡಲ್ ನ ಹಿಮ್ಮಡಿ ಒಂದು ಇಂಚುಗಿಂತ ಹೆಚ್ಚಿರಬಾರದು.