ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mahakumbhabhisheka: ನಾಲ್ಕು ನೂರು ವರ್ಷಗಳ ಇತಿಹಾಸದ ಗಂಗಾಧರೇಶ್ವರ ದೇವಾಲಯದಲ್ಲಿ ಮಹಾ ಕುಂಭಾಭಿಷೇಕ

ಪುರಾತನ ದೇವಾಲಯದಲ್ಲಿ ಹಲವು ದಶಕಗಳ ಬಳಿಕ ನಡೆದ ಕುಂಭಾಭಿಷೇಕ ಮಹೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯವನ್ನು ದೀಪಾಲಂಕಾರ, ಬಾಳೆಕಂಬ ಹಾಗೂ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ಭಕ್ತರ ಗಮನ ಸೆಳೆಯಿತು.

ಮಳೆ-ಬೆಳೆ ಸಮೃದ್ಧಿಗಾಗಿ ಗ್ರಾಮಸ್ಥರಿಂದ ವಿಶೇಷ ಪ್ರಾರ್ಥನೆ

-

Profile
Ashok Nayak Sep 21, 2026 11:14 PM

ಚಿಂತಾಮಣಿ: ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸ ಹೊಂದಿರುವ ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಮದ ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಜ್ಯೇಷ್ಠಾದೇವಿ ಸಮೇತ ದೇವಸ್ಥಾನ ದಲ್ಲಿ ಮಹಾ ಕುಂಭಾಭಿಷೇಕ ಮಹೋತ್ಸವವನ್ನು ಭಾನುವಾರ ಹಾಗೂ ಸೋಮವಾರ ಧಾರ್ಮಿಕ ಶ್ರದ್ಧಾಭಕ್ತಿಗಳಿಂದ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಪುರಾತನ ದೇವಾಲಯದಲ್ಲಿ ಹಲವು ದಶಕಗಳ ಬಳಿಕ ನಡೆದ ಕುಂಭಾಭಿಷೇಕ ಮಹೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯವನ್ನು ದೀಪಾಲಂಕಾರ, ಬಾಳೆಕಂಬ ಹಾಗೂ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ಭಕ್ತರ ಗಮನ ಸೆಳೆಯಿತು.

ಇದನ್ನೂ ಓದಿ: Chinthamani News: ಅಂಬೇಡ್ಕರ್ ಪ್ರತಿಮೆಗೆ ಪೂಜೆಗಿಂತ ಆಶಯಗಳ ಅಳವಡಿಕೆಯೇ ನಿಜವಾದ ಗೌರವ: ಇಒ ಆನಂದ್

ಸುಮಾರು 50–60 ವರ್ಷಗಳ ಹಿಂದೆ ದೇವಾಲಯದಲ್ಲಿ ಕುಂಭಾಭಿಷೇಕ ನೆರವೇರಿಸಲಾಗಿತ್ತು. ಆ ಸಂದರ್ಭದಲ್ಲಿ ಉತ್ತಮ ಮಳೆಯಾಗಿ ಗ್ರಾಮದಲ್ಲಿ ಸಮೃದ್ಧಿ ನೆಲೆಸಿತ್ತು ಎಂಬುದನ್ನು ಗ್ರಾಮದ ಹಿರಿಯರು ಸ್ಮರಿಸುತ್ತಾರೆ. ಇದೇ ನಂಬಿಕೆಯಿಂದ ಪ್ರಸ್ತುತ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತಾಪಿ ಜನರು ಒಗ್ಗೂಡಿ ಈ ಬಾರಿ ಕುಂಭಾಭಿಷೇಕ ಮಹೋತ್ಸವವನ್ನು ಆಯೋಜಿಸಿದ್ದಾರೆ.

ರಾಜಣ್ಣ ಸ್ವಾಮಿ, ಗುರುಂಪಲ್ಲಿ ಸ್ವಾಮಿ ಹಾಗೂ ಕೊತ್ತಕೋಟ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆ.ಎಸ್.ಹರೀಶ್ ಕುಮಾರ್ ಹಾಗೂ ಅಶೋಕ್ ಮಾತನಾಡಿ, ಗ್ರಾಮದ ಹಾಗೂ ಸುತ್ತಮುತ್ತಲಿನ ರೈತಾಪಿ ಜನರು ಒಗ್ಗೂಡಿ ಭಗವಂತನ ಕೃಪೆಗಾಗಿ ಕುಂಭಾಭಿಷೇಕ ನೆರವೇರಿಸಿದ್ದೇವೆ. ಉತ್ತಮ ಮಳೆ-ಬೆಳೆ ಲಭಿಸಿ ರೈತರು ಸೇರಿದಂತೆ ಸಮಸ್ತ ಜನತೆಗೆ ಶ್ರೇಯಸ್ಸು, ಸುಖ-ಸಮೃದ್ಧಿ ದೊರೆಯಲಿ ಎಂದು ಶ್ರೀ ಗಂಗಾಧರೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.