ನೀವು ನಿತ್ಯ ಬಳಸುವ ಟೂತ್‌ಬ್ರಷ್‌ಗೂ ಇದೆ ಎಕ್ಸ್‌ಪೈರಿ ಡೇಟ್: ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಈ ಬಗ್ಗೆ ದಂತ ವೈದ್ಯರ ಸಲಹೆ ಏನು?
ಒಂದು ಟೂತ್ ಬ್ರಷ್ ಅನ್ನು ಮೂರು ತಿಂಗಳಿಗಿಂತ ಹೆಚ್ಚಾಗಿ ಬಳಸಬಾರದು ಎಂದು ದಂತ ವೈದ್ಯರು ಸಲಹೆ ನೀಡಿದ್ದಾರೆ. ಟೂತ್ ಬ್ರಷ್ ಸವೆದುಹೋದಂತೆ ಕಂಡಾಗ ನೀವೆಲ್ಲ ಬದಲಾಯಿಸುತ್ತೀರಿ. ಆದರೆ ದಂತವೈದ್ಯರು ಟೂತ್ ಬ್ರಷ್ ಅವಧಿ ಮುಗಿಯುವ ದಿನಾಂಕ ಇದೆ. ಅದನ್ನು ಗಮನಿಸಬೇಕು ಎಂದು ಹೇಳುತ್ತಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ. 19: ಹಲ್ಲುಜ್ಜುವ ಮೂಲಕ ನಾವು ದಿನಚರಿ ಪ್ರಾರಂಭಿಸುತ್ತೇವೆ. ಕೆಲವರಿಗೆ ಮುಂಜಾನೆ ಮಾತ್ರವಲ್ಲದೆ ಏನೇ ತಿಂದರೂ ಹಲ್ಲುಜ್ಜುವ ಅಭ್ಯಾಸ ಇದೆ. ಆದರೆ ಹೆಚ್ಚಿನವರು ತಮ್ಮ ಹಲ್ಲುಜ್ಜುವ ಬ್ರಷ್ (Toothbrushes) ಅನ್ನು ದಿನಕ್ಕೆ ಎರಡು ಬಾರಿ ಬಳಸುವುದನ್ನು ಬಿಟ್ಟು ಅದರ ಬಗ್ಗೆ ನಿಜವಾಗಿಯೂ ಯೋಚಿಸುವುದಿಲ್ಲ. ಆದರೆ ಟೂತ್‌ಬ್ರಷ್‌ಗೂ ಎಕ್ಸ್‌ಪೈರಿ ಡೇಟ್ ಇರುತ್ತದೆ ಎಂಬುವುದನ್ನು ದಂತ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ನಾವು ದಿನ ನಿತ್ಯ ಬಳಸುವ ಟೂತ್‌ಬ್ರಷ್ ಅನ್ನು ಕೂಡ ಆಗಾಗ ಬದಲಾಯಿಸಬೇಕಾಗುತ್ತದೆ.
ಒಂದು ಟೂತ್ ಬ್ರಷ್ ಅನ್ನು ಮೂರು ತಿಂಗಳಿಗಿಂತ ಹೆಚ್ಚಾಗಿ ಬಳಸಬಾರದು ಎಂದು ದಂತ ವೈದ್ಯರು ಸಲಹೆ ನೀಡಿದ್ದಾರೆ. ಟೂತ್ ಬ್ರಷ್ ಸವೆದುಹೋದಂತೆ ಕಂಡಾಗ ನೀವೆಲ್ಲ ಬದಲಾಯಿ ಸುತ್ತೀರಿ. ಆದರೆ ದಂತವೈದ್ಯರು ಟೂತ್ ಬ್ರಷ್‌ಗೂ ʼಅವಧಿ ಮುಗಿಯುವ ದಿನಾಂಕʼ ಇದೆ ಎಂದು ಹೇಳುತ್ತಾರೆ. ಬ್ರಷ್ ಅನ್ನು ಹೆಚ್ಚಾಗಿ ಬಳಸಿದಾಗ ಅದರ ಕೂದಲುಗಳು ಸಾಫ್ಟ್‌ನೆಸ್ ಕಳೆದು ಆಕಾರವನ್ನು ಬದಲಾಯಿಸುತ್ತವೆ. ಇದರಿಂದ ಹಲ್ಲನ್ನು ಸರಿಯಾಗಿ ಸ್ವಚ್ಛ ಮಾಡಲು ಸಾಧ್ಯ ಆಗೋದಿಲ್ಲ.
ಅದರ ಜತೆ ನಾವು ಬ್ರಷ್ ಅನ್ನು ಎಲ್ಲಿ ಇಡುತ್ತೇವೆ ಅನ್ನೋದು ಕೂಡ ಮುಖ್ಯ. ನಿಮ್ಮ ಬ್ರಷ್ ದಿನವಿಡೀ ಬ್ಯಾಕ್ಟೀರಿಯಾಗಳೊಂದಿಗೆ ವ್ಯವಹರಿಸುತ್ತದೆ. ನೀವು ಪ್ರತಿ ಬಾರಿ ಹಲ್ಲುಜ್ಜುವಾಗ, ಕೆಲವು ಸೂಕ್ಷ್ಮಜೀವಿಗಳು ಅಂಟಿಗೊಂಡಿರುತ್ತವೆ. ನೀವು ಬ್ರಷ್ ಅನ್ನು ತೊಳೆದರೂ ಅದು ಎಲ್ಲವನ್ನೂ ತೊಡೆದುಹಾಕುವುದಿಲ್ಲ. ಅದರಲ್ಲೂ ಬಾತ್ ರೂಮ್‌ನಂತಹ ನೀರಿನ ಸ್ಥಳದಲ್ಲಿ ಬ್ರಷ್ ಇಡುವುದರಿಂದ ಬ್ಯಾಕ್ಟೀರಿಯಾಗಳು ವೇಗವಾಗಿ ಹರಡುತ್ತವೆ.
ಎಲ್ಲಾ ವಯಸ್ಸಿನವರಲ್ಲೂ ಮೂತ್ರಪಿಂಡದ ಆರೋಗ್ಯ
ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂದ್ರೆ ಶೀತ, ಜ್ವರ ಅಥವಾ ಗಂಟಲು ನೋವು ಉಂಟಾದರೆ ಬೇರೆ ಬ್ರಷ್ ಬಳಸುವುದು ಉತ್ತಮ. ಆ ಸೂಕ್ಷ್ಮಜೀವಿಗಳು ಮತ್ತೆ ಮತ್ತೆ ನಿಮ್ಮ ದೇಹಕ್ಕೆ ತುತ್ತಾಗುವುದನ್ನು ತಪ್ಪಿಸಲು ಇದು ಒಂದು ಸರಳ ಪರಿಹಾರ.
ಬ್ರಷ್‌ನ ಕೂದಲ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ಅವು ಬಾಗಿ ಚೆಲ್ಲಾಪಿಲ್ಲಿಯಾಗಿ ಅಥವಾ ಒರಟಾಗಿ ಕಂಡುಬಂದರೆ, ಹೊಸ ಬ್ರಷ್ ಖರೀದಿಸಿ. ಹಳೆಯ ಬ್ರಷ್ ಹಲ್ಲನ್ನು ಸರಿಯಾಗಿ ಸ್ವಚ್ಛ ಗೊಳಿಸುವುದಿಲ್ಲ ಮತ್ತು ನಿಮ್ಮ ಒಸಡುಗಳು ತಾಜಾವಾಗುವ ಬದಲು ನೋಯುವಂತೆ ಮಾಡುತ್ತದೆ. ಅದರಲ್ಲೂ ಮಕ್ಕಳು ಟೂತ್ ಬ್ರಷ್‌ಗಳನ್ನು ಇನ್ನಷ್ಟು ವೇಗವಾಗಿ ಬಳಸುತ್ತಾರೆ. ಅದರ ಕೂದಲನ್ನು ಅಗಿಯುತ್ತಾರೆ. ಆದ್ದರಿಂದ, ನಿಯಮಿತವಾಗಿ ತಮ್ಮ ಟೂತ್ ಬ್ರಷ್ ಅನ್ನು ಬದಲಾಯಿಸುವುದು ಮುಖ್ಯ ಎನ್ನುತ್ತಾರೆ ವೈದ್ಯರು.