ಜೀವಾವಧಿ ಶಿಕ್ಷೆಗೊಳಗಾದ ವಿನಯ್ ಕುಲಕರ್ಣಿ ಖೈದಿ ಸಂಖ್ಯೆ ಏನು?
Vinay Kulakarni: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಖೈದಿ ನಂಬರ್ ನೀಡಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಯೋಗೀಶ್ ಗೌಡ (Yogish Gowda) ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (MLA Vinay Kulakarni) ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಖೈದಿ ನಂಬರ್ ನೀಡಲಾಗಿದೆ. ವಿನಯ್ ಕುಲಕರ್ಣಿ ಹಾಗೂ ಈ ಪ್ರಕರಣದ ಇತರ 17 ಅಪರಾಧಿಗಳನ್ನು ಪ್ರಸ್ತುತ ಡಿ ಬ್ಯಾರಕ್‌ನ ಕ್ವಾರಂಟೈನ್ ಸೆಲ್‌ಗೆ ಕಳುಹಿಸಲಾಗಿದೆ. ಅಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಇತರ ಮೂವರು ಅಪರಾಧಿಗಳನ್ನು ಒಂದು ಬ್ಯಾರಕ್‌ನಲ್ಲಿ ಇರಿಸಿದರೆ, ಇತರ ಅಪರಾಧಿಗಳನ್ನು ಪಕ್ಕದ ಬ್ಯಾರಕ್‌ನಲ್ಲಿ ಇರಿಸಲಾಗಿದೆ.
ಶುಕ್ರವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು. ಈ ವೇಳೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ ಯುಟಿಪಿ ನಂಬರ್ (ವಿಚಾರಣಾಧೀನ ಖೈದಿ) ನೀಡಿದ್ದರು. ಆದರೆ, ಶನಿವಾರ ಬೆಳಗ್ಗೆ ಕೆಲವು ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿ ಅವರಿಗೆ ಸಜಾ ಬಂಧಿ ಖೈದಿ ನಂಬರ್ 16110 ನೀಡಲಾಗಿದೆ. ಜೊತೆಗೆ ಎಲ್ಲ ಅಪರಾಧಿಗಳಿಗೆ ಸಜಾ ಬಂಧಿ ಖೈದಿ ನಂಬರ್ ಅಧಿಕೃತವಾಗಿ ನೀಡಲಾಗಿದೆ.
ವಿನಯ್ ಕುಲಕರ್ಣಿ ಹಾಗೂ ಸಹ ಅಪರಾಧಿಗಳ ಸಜಾ ಬಂಧಿ ಸಂಖ್ಯೆ:
- ವಿಕ್ರಂ ಬಳ್ಳಾರಿ - 16097
- ಕೀರ್ತಿ ಕುಮಾರ್ ಬೆಳ್ಳಟ್ಟಿ - 16098
- ಸಂದೀಪ್ ಸವದತ್ತಿ - 16099
- ವಿನಾಯಕ ಕಟಗಿ - 16100
- ಮಹಾಬಲೇಶ್ವರ ಹೊಂಗಳೇ - 16101
- ಸಂತೋಷ ಸವದತ್ತಿ - 16102
- ದಿನೇಶ್ -16103
- ಅಶ್ವಥ್ - 16104
- ಸುನಿಲ್ - 16105
- ನಜೀರ್ ಅಹ್ಮದ್ - 16106
- ಶನವಾಜ್ - 16107
- ನೂತನ್ - 16108
- ಹರ್ಷೀತ್ - 16109
- ವಿನಯ್ ಕುಲಕರ್ಣಿ -16110
- ಚಂದ್ರಶೇಖರ್ ಇಂಡಿ -16111
- ವಿಕಾಸ್ ಕಲಬುರ್ಗಿ - 16112
- ಚನ್ನಕೇಶವ ಟಿಂಗರಿಕರ್ - 16113
MLA Vinay Kulkarni: ಬಿಜೆಪಿಯರ ಒಳಸಂಚಿನಿಂದ ವಿನಯ್ ಕುಲಕರ್ಣಿಗೆ ಸಂಕಷ್ಟ: ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ
ವಿನಯ್ ಕುಲಕರ್ಣಿ ಜೈಲಿನಲ್ಲಿ ಇರಲಾಗದೇ ಶುಕ್ರವಾರ ರಾತ್ರಿಯಿಡೀ ಚಿಂತೆಗೆ ಒಳಗಾಗಿದ್ದರು. ಜೊತೆಗೆ, ಶುಕ್ರವಾರ ರಾತ್ರಿ ಚಪಾತಿ, ಊಟ ನೀಡಲಾಗಿತ್ತು. ಸರಿಯಾಗಿ ಆಹಾರ ಸೇವಿಸದೇ ಮಲಗಿದ್ದರು. ತಡರಾತ್ರಿ ಸುಮಾರು 3 ಗಂಟೆಯವರೆಗೆ ಬೇಸರದಲ್ಲಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಉಪಹಾರ ಸೇವಿಸಿ, ಮಧ್ಯಾಹ್ನ ಸ್ವಲ್ಪ ಊಟ ಸೇವಿಸಿದ್ದಾರೆ. ರಾತ್ರಿಯೂ ಸಾಮಾನ್ಯ ಖೈದಿಗಳಂತೆ ಜೈಲೂಟ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.