Mudra Vishwa: ಜಲಮುದ್ರೆ
ಮುದ್ರೆಯು ತೇವಾಂಶವನ್ನು ಹೆಚ್ಚಿಸುವ ಮೂಲಕ ಶರೀರದೊಳಗಿನ ತಾಪವನ್ನು ತಗ್ಗಿಸುತ್ತದೆ. ನೀವು ಮಾಡುವ ಧ್ಯಾನವು ಮನಸ್ಸಿಗೆ ಶಾಂತಿಯನ್ನು ತಂದು ಕೊಟ್ಟರೆ, ಜಲಮುದ್ರೆಯ ಅಭ್ಯಾ ಸವು ದೇಹವನ್ನು ತಂಪಾಗಿಸುವಲ್ಲಿ ಪ್ರಯೋಜನಕಾರಿ ಯಾಗಿದೆ. ಒಣಚರ್ಮ/ಚರ್ಮ ಸುಕ್ಕಾಗು ವಿಕೆ, ಸಂಧಿವಾತ, ಮಲಬದ್ಧತೆ, ನಿರ್ಜಲೀಕರಣ ಮುಂತಾದ ಸಮಸ್ಯೆಗಳು ಜಲಮುದ್ರೆಯ ಅಭ್ಯಾಸದಿಂದ ನಿವಾರಣೆಯಾಗುವುವು


ಮುದ್ರಾ ವಿಶ್ವ
ಅಭ್ಯಾಸಕ್ರಮ: ಹೆಬ್ಬೆರಳಿನ ತುದಿಯಿಂದ ಕಿರುಬೆರಳಿನ ತುದಿಗೆ ಮುಟ್ಟಿಸಬೇಕು. ಮಿಕ್ಕ ಬೆರಳುಗಳನ್ನು ನೇರವಾಗಿ ಚಾಚಿಕೊಂಡಿರಬೇಕು. ಈ ಭಂಗಿಯಲ್ಲಿ ಕನಿಷ್ಠಪಕ್ಷ 2-3 ನಿಮಿಷ ಗಳವರೆಗೆ ಇರಬೇಕು. ಧ್ಯಾನ ಮಾಡಲು ಕುಳಿತಾಗ ಈ ಮುದ್ರೆಯನ್ನು ಹಾಕಲು ಯತ್ನಿಸ ಬಹುದು. ಪದ್ಮಾಸನದಲ್ಲಿ ಕುಳಿತು ಈ ಮುದ್ರೆ ಯನ್ನು ಅಭ್ಯಾಸ ಮಾಡಬೇಕು. ಪ್ರಯೋ ಜನಗಳು: ಈ ಮುದ್ರೆಯು ತೇವಾಂಶವನ್ನು ಹೆಚ್ಚಿಸುವ ಮೂಲಕ ಶರೀರದೊಳಗಿನ ತಾಪವನ್ನು ತಗ್ಗಿಸುತ್ತದೆ. ನೀವು ಮಾಡುವ ಧ್ಯಾನವು ಮನಸ್ಸಿಗೆ ಶಾಂತಿಯನ್ನು ತಂದು ಕೊಟ್ಟರೆ, ಜಲಮುದ್ರೆಯ ಅಭ್ಯಾಸವು ದೇಹವನ್ನು ತಂಪಾಗಿಸುವಲ್ಲಿ ಪ್ರಯೋಜನಕಾರಿ ಯಾಗಿದೆ. ಒಣಚರ್ಮ/ಚರ್ಮ ಸುಕ್ಕಾಗುವಿಕೆ, ಸಂಧಿವಾತ, ಮಲಬದ್ಧತೆ, ನಿರ್ಜಲೀಕರಣ ಮುಂತಾದ ಸಮಸ್ಯೆಗಳು ಜಲಮುದ್ರೆಯ ಅಭ್ಯಾಸದಿಂದ ನಿವಾರಣೆಯಾಗುವುವು.
ಇದನ್ನೂ ಓದಿ: Yoga Namaskara: ಹನುಮ ಜಯಂತಿ ಪ್ರಯುಕ್ತ 108 ಯೋಗ ನಮಸ್ಕಾರ ಮಾಡಿದ ಯೋಗಪಟುಗಳು
2) ಪೃಥ್ವಿಮುದ್ರೆ

ಅಭ್ಯಾಸಕ್ರಮ: ಉಂಗುರದ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಸ್ಪರ್ಶಿಸಿ. ಮಿಕ್ಕ ಮೂರು ಬೆರಳುಗಳನ್ನು ನೇರವಾಗಿ ಇಟ್ಟುಕೊಂಡಿರಬೇಕು. ಈ ಭಂಗಿಯಲ್ಲಿ ಕನಿಷ್ಠಪಕ್ಷ 2-3 ನಿಮಿಷಗಳವರೆಗೆ ಇರಬೇಕು. ಪೃಥ್ವೀಮುದ್ರೆಯನ್ನು ದಿನದ ಯಾವುದೇ ಅವಧಿಯಲ್ಲಿ ಮಾಡಬಹುದಾದರೂ, ಮುಂಜಾನೆ ಆಚರಿಸಿದರೆ ಅತ್ಯುತ್ತಮ ಎನ್ನುತ್ತಾರೆ ಬಲ್ಲವರು.
ಪ್ರಯೋಜನಗಳು: ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿನ ನೀರಿನ ಅಂಶ ಹೆಚ್ಚಾಗುತ್ತದೆ. ಕಡಿಮೆ ದೇಹತೂಕ ಇರುವವರಿಗೆ ಈ ಮುದ್ರೆ ಬಹಳ ಪ್ರಯೋಜನ ಕಾರಿ. ಪೃಥ್ವೀಮುದ್ರೆಯ ಆಚರಣೆಯಿಂದ ದೇಹಾಯಾಸ ತಗ್ಗುವುದು, ಒಣಚರ್ಮ, ಉರಿ ಯೂತ, ಆಮ್ಲೀಯತೆ ಮುಂತಾದ ಸಮಸ್ಯೆಗಳು ತಹಬಂದಿಗೆ ಬರುವುವು. ದೇಹದಲ್ಲಿನ ರಕ್ತಪರಿಚಲನೆಯ ಶೈಲಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಒತ್ತಡದ ಕಾರಣದಿಂದಾಗಿ ವಿಶ್ರಾಂತಿಯ ಅಗತ್ಯವಿದ್ದಾಗ ಈ ಮುದ್ರೆಯನ್ನು ಅಭ್ಯಾಸ ಮಾಡಿದರೂ ಒಳ್ಳೆಯದು.