ಮಧುಮೇಹಿಗಳು ಬೇಸಿಗೆಯಲ್ಲಿ ಯಾವ ರೀತಿಯ ಹಣ್ಣು ಆಯ್ಕೆ ಮಾಡಬೇಕು?
Health Tips: ಮಾರುಕಟ್ಟೆಯಲ್ಲಿ ವಿವಿಧ ಸೀಸನ್ ಫ್ರೂಟ್ ಗಳು ಕಾಣ ಸಿಗುತ್ತಿದ್ದು ವೈವಿಧ್ಯಮಯ ಹಣ್ಣುಗಳು ಬಂದಿವೆ. ಆದರೆ ಮಧುಮೇಹ ಇದ್ದವರೂ ಎಲ್ಲ ಹಣ್ಣುಗಳ ಸೇವನೆ ಮಾಡುವುದು ಅನಾರೋಗ್ಯಕರ. ಹಾಗಾಗಿ ಕಡಿಮೆ ಸಕ್ಕರೆ ಅಂಶ ಇರುವ ಹಣ್ಣುಗಳನ್ನು ಆಯ್ದುಕೊಂಡು ಸವಿಯ ಬೇಕಾಗುತ್ತದೆ. ಅಧಿಕ ರಕ್ತದ ಸಕ್ಕರೆ ಮಟ್ಟವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವುದು ಆರೋಗ್ಯಕ್ಕೆ ಅತ್ಯಗತ್ಯ. ಹಾಗಿದ್ರೆ ಮಧು ಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು, ಈ ಬಗ್ಗೆ ಯಾವ ನಿಯಮವನ್ನು ಪಾಲಿಸಬೇಕು ಎಂದು ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ,ಮೆ 6: ಬೇಸಿಗೆ ಅಂದಾಗ ಹಣ್ಣುಗಳ ಸೇವನೆ ದೇಹಕ್ಕೆ ಅಗತ್ಯವಾಗಿರುತ್ತದೆ. ಮಾರುಕಟ್ಟೆ ಯಲ್ಲಿ ವಿವಿಧ ಸೀಸನ್ ಫ್ರೂಟ್ ಗಳು ಕಾಣ ಸಿಗುತ್ತಿದ್ದು ವೈವಿಧ್ಯಮಯ ಹಣ್ಣುಗಳು ಬಂದಿವೆ. ಆದರೆ ಮಧುಮೇಹ (Diabetes Control) ಇದ್ದವರೂ ಎಲ್ಲ ಹಣ್ಣುಗಳ ಸೇವನೆ ಮಾಡುವುದು ಅನಾರೋಗ್ಯಕರ. ಹಾಗಾಗಿ ಕಡಿಮೆ ಸಕ್ಕರೆ ಅಂಶ ಇರುವ ಹಣ್ಣುಗಳನ್ನು ಆಯ್ದುಕೊಂಡು ಸವಿಯಬೇಕಾಗುತ್ತದೆ. ಅಧಿಕ ರಕ್ತದ ಸಕ್ಕರೆ ಮಟ್ಟವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವುದು ಆರೋಗ್ಯಕ್ಕೆ ಅತ್ಯಗತ್ಯ. ಹಾಗಿದ್ರೆ ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು, ಈ ಬಗ್ಗೆ ಯಾವ ನಿಯಮವನ್ನು ಪಾಲಿಸಬೇಕು ಎಂದು ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಹಣ್ಣುಗಳ ಸೇವನೆಯೂ ದೇಹಕ್ಕೆ ಅಗತ್ಯವಾಗಿದ್ದು ಅವು ನೈಸರ್ಗಿಕ ಸಕ್ಕರೆ (ಫ್ರಕ್ಟೋಸ್) ಅನ್ನು ಹೊಂದಿದ್ದರೂ ಅಗತ್ಯವಾದ ಫೈಬರ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ನೀಡುತ್ತವೆ. ಆದರೆ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಣ್ಣುಗಳನ್ನು ಆಯ್ಕೆ ಮಾಡಿ ಸೇವಿಸಬೇಕಾಗುತ್ತದೆ. ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಸೇಬು ಪೇರಳೆ, ಬೆರ್ರಿ ಹಣ್ಣುಗಳು ಮತ್ತು ಪಪ್ಪಾಯಿ ಹಣ್ಣುಗಳನ್ನು ಮಧುಮೇಹಿಗಳು ಸುರಕ್ಷಿತವಾಗಿ ಸೇವಿಸಬಹುದು.
ಹಣ್ಣಿನ ಆಯ್ಕೆ ಹೇಗಿರಬೇಕು?
ಕಡಿಮೆ ಜಿಐ ಹಣ್ಣು:
ಗ್ಲೈಸೆಮಿಕ್ ಸೂಚ್ಯಂಕ (GI) ಇದು ಹಣ್ಣು ರಕ್ತದಲ್ಲಿನ ಸಕ್ಕರೆಯನ್ನು ಎಷ್ಟು ಬೇಗನೆ ಹೆಚ್ಚಿಸುತ್ತದೆ ಎಂಬುದನ್ನು ನಿರ್ಧಾರ ಮಾಡುತ್ತದೆ. ಕಡಿಮೆ ಜಿಐ ಇರುವ ಹಣ್ಣುಗಳನ್ನು ಮಧುಮೇಹ ಹೊಂದಿರುವ ವ್ಯಕ್ತಿಗಳು ಸುರಕ್ಷಿತವಾಗಿ ಸೇವನೆ ಮಾಡಬಹುದು. ಏಕೆಂದರೆ ಅವು ಸಕ್ಕರೆಯನ್ನು ನಿಧಾನವಾಗಿ ರಕ್ತಪ್ರವಾಹಕ್ಕೆ ಬಿಡುಗಡೆ ಮಾಡುತ್ತವೆ. ಕಡಿಮೆ GI ಹಣ್ಣುಗಳಲ್ಲಿ ಜಾಮೂನ್, ಪೇರಲೆ, ಪೀಚ್‌ಗಳು, ಪ್ಲಮ್‌ಗಳು, ಪೇರಳೆ ಮತ್ತು ಸೇಬುಗಳು ಸೇರಿವೆ.
Health Tips: ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!
ಎಚ್ಚರಿಕೆಯಿಂದ ತಿನ್ನಬೇಕಾದ ಹಣ್ಣುಗಳು:
ಸಕ್ಕರೆಯೂ ಕೆಲವು ಹಣ್ಣುಗಳು ಅಧಿಕವಾಗಿರುತ್ತವೆ. ಇವು ಹೆಚ್ಚಿನ GI ಅನ್ನು ಹೊಂದಿರುತ್ತವೆ, ಅಂದರೆ ಅವು ವೇಗವಾಗಿ ಸಕ್ಕರೆ ಏರಿಕೆಗೆ ಕಾರಣವಾಗಬಹುದು. ಮಾವು, ಕಲ್ಲಂಗಡಿ, ದ್ರಾಕ್ಷಿಅನಾನಸ್ ಇತ್ಯಾದಿ ತಿನ್ನುವ ಮೊದಲು ಎಚ್ಚರ ವಹಿಸಿ.
ಇಡೀ ಹಣ್ಣನ್ನೇ ತಿನ್ನಿ:
ಮಧುಮೇಹ ಇರುವವರು ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ. ಹಣ್ಣನ್ನು ಜ್ಯೂಸ್ ಮಾಡಿದಾಗ ಅದರಲ್ಲಿರುವ ನಾರಿನಂಶಗಳು ನಾಶವಾಗುತ್ತದೆ, ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ತಕ್ಷಣವೇ ಏರಿಕೆಯಾಗುತ್ತದೆ. ಆದ್ದರಿಂದ ಹಣ್ಣನ್ನು ಕತ್ತರಿಸಿ ಇಡೀ ಹಣ್ಣನ್ನೇ ಸೇವಿಸಿ.
ಬೇಗನೆ ಸೇವಿಸಿ:
ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆಯನ್ನು ತಡೆಗಟ್ಟಲು ಹಣ್ಣನ್ನು ಮಧ್ಯಾಹ್ನದ ಮೊದಲು ಅಥವಾ ತಿಂಡಿಯ ಜೊತೆ ಸೇವಿಸಿ.
ಖಾಲಿ ಹೊಟ್ಟೆಯಲ್ಲಿ ಬೇಡ:
ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಅಥವಾ ಊಟವನ್ನು ಸೇವಿಸಿದ ತಕ್ಷಣ ಹಣ್ಣುಗಳನ್ನು ಸೇವಿಸಬಾರದು.ಒಟ್ಟಿನಲ್ಲಿ ಸರಿಯಾದ ಹಣ್ಣಿನ ಆಯ್ಕೆ ಮೂಲಕ ಮಧುಮೇಹಿಗಳು ಬೇಸಿಗೆಯ ಹಣ್ಣುಗಳನ್ನು ಸೇವಿಸಬಹುದು.