Weight Loss: ಏಳೇ ದಿನಕ್ಕೆ 35ಕೆಜಿ ವೇಯ್ಟ್ ಲಾಸ್! ಈಕೆಯ ಡಯೆಟ್ ಹೇಗಿದೆ ಗೊತ್ತಾ?
ತೂಕ ಇಳಿಕೆ ಮಾಡಲು ನಿಯಮಿತ ವ್ಯಾಯಾಮ ಸರಿಯಾದ ಆಹಾರ ಕ್ರಮ ಎಲ್ಲವೂ ಪ್ರಧಾನ ಪಾತ್ರ ವಹಿಸಲಿದೆ. ತೂಕ ಇಳಿಸುವವರಿಗಾಗಿ ಜಿಮ್, ವರ್ಕೌಟ್, ಡಯೆಟ್ ಟಿಪ್ಸ್ ಹೇಳುವ ಅನೇಕ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಕಾಣಬಹುದು. ಅಂತೆಯೇ ಬಹಳ ಸುಲಭವಾಗಿ ತೂಕ ಇಳಿಸಬಹುದಾದ ಕ್ರಮವನ್ನು ಸೋಶಿಯಲ್ ಮಿಡಿಯಾದ ಇನ್‌ಫ್ಲುಯೆನ್ಸರ್ ಒಬ್ಬರು ತಿಳಿಸಿ ಕೊಟ್ಟಿದ್ದಾರೆ


ನವದೆಹಲಿ: ದೇಹದ ತೂಕ ಇಳಿಸಿಕೊಳ್ಳುವುದನ್ನು ಪ್ರತಿಯೊಬ್ಬರು ಕೂಡ ಇಷ್ಟಪಡುತ್ತಾರೆ. ಆದರೆ ಅದರ ಕಾರ್ಯವಿಧಾನಗಳನ್ನು ಕಂಡಾಗ ತೂಕ ಇಳಿಸುವುದು (Weight Loss) ಬಹಳ ಕಷ್ಟ ಎಂದು ಅಂದುಕೊಳ್ಳುತ್ತಾರೆ. ತೂಕ ಇಳಿಕೆ ಮಾಡಲು ನಿಯಮಿತ ವ್ಯಾಯಾಮ ಸರಿಯಾದ ಆಹಾರ ಕ್ರಮ ಎಲ್ಲವೂ ಪ್ರಧಾನ ಪಾತ್ರವಹಿಸಲಿದೆ. ತೂಕ ಇಳಿಸುವವರಿಗಾಗಿ ಜಿಮ್, ವರ್ಕೌಟ್, ಡಯೆಟ್ ಟಿಪ್ಸ್ ಹೇಳುವ ಅನೇಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಕಾಣಬಹುದು. ಅಂತೆಯೇ ಬಹಳ ಸುಲಭವಾಗಿ ತೂಕ ಇಳಿಸಬಹುದಾದ ಕ್ರಮವನ್ನು ಸೋಶಿಯಲ್ ಮಿಡಿಯಾದ ಇನ್ ಫ್ಲುಯೆನ್ಸರ್ ಒಬ್ಬರು ತಿಳಿಸಿಕೊಟ್ಟಿದ್ದಾರೆ. ಕೆಲವು ಆಹಾರ ಸೇವಿಸದೆ ಇದ್ದರೆ ಬರೀ 7ತಿಂಗಳಿಗೆ 35ಕೆ.ಜಿ. ತೂಕ ಇಳಿಸಬಹುದು ಎಂಬುದನ್ನು ಇತ್ತೀಚೆಗಷ್ಟೇ ನೇಹಾ ಅವರು ತೋರಿಸಿಕೊಟ್ಟಿದ್ದಾರೆ.
ನೇಹಾ ಅವರು ಜೂನ್ 8 ರಂದು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ನಮ್ಮ ಮನಸ್ಥಿತಿ ಸಮತೋಲನವನ್ನು ಕಾಯ್ದಿ ಟ್ಟುಕೊಂಡರೆ ದೇಹವನ್ನು ಸರಿಯಾದ ತೂಕಕ್ಕೆ ರೂಪಾಂತರ ಮಾಡಬಹುದು ಎಂದು ತಿಳಿಸಿಕೊಟ್ಟಿದ್ದಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ತಪ್ಪಿಸ ಬೇಕಾದ 10 ಆಹಾರ ಕ್ರಮವನ್ನು ತಿಳಿಸಿಕೊಟ್ಟಿದ್ದು ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಈ ಆಹಾರಗಳ ಸೇವನೆಯನ್ನು ತಪ್ಪಿಸಬೇಕು ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಯಾವುದು ಆ ಆಹಾರಗಳು?
ಗ್ರಾನೋಲಾ: ಡಯೆಟ್ ಮಾಡಿ ತೂಕ ಇಳಿಸಲು ಬಯಸುವವರು ಹೆಚ್ಚಾಗಿ ಹೆಲ್ತಿ ಗ್ರಾನೋಲಾ ಸೇವಿಸುವುದು ಇದೆ. ಆದರೆ ಇದರಲ್ಲಿ ಹೆಚ್ಚಾಗಿ ಸಕ್ಕರೆ ಮತ್ತು ಎಣ್ಣೆ ಅಂಶಗಳಿದ್ದ ಕಾರಣ ಇದನ್ನು ಸೇವಿಸದಿರುವುದು ಉತ್ತಮ.
ಯೋಗರ್ಟ್: ಇದು ಹಾಲಿನಿಂದ ತಯಾರಾಗುವ ಡೈರಿ ಉತ್ಪನ್ನವಾಗಿದೆ. ಇದರಲ್ಲಿ ಕ್ಯಾಲ್ಸಿಯಂ , ಪ್ರೋಟೀನ್ ಇದೆ ಎಂಬ ಕಾರಣಕ್ಕೆ ಅತೀ ಹೆಚ್ಚು ಜನರು ಇದನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಸಕ್ಕರೆ ಪ್ರಮಾಣ ಕೂಡ ಅಧಿಕವಿದ್ದು ತೂಕ ಇಳಿಸಲು ಬಯಸುವವರು ಇದನ್ನು ಸೇವಿಸದಿರುವುದು ಉತ್ತಮ.
ಪ್ಯಾಕ್ ಮಾಡಿದ ಫ್ರುಟ್ ಜ್ಯೂಸ್: ಹಣ್ಣಿನ ರಸದಿಂದ ತೂಕ ಇಳಿಸಲು ಸಾಧ್ಯ ಎಂಬುದು ಇದೆ. ಆದರೆ ಪ್ಯಾಕ್ ಮಾಡಿ ಸಂಸ್ಕರಿಸಿದ ಫ್ರುಟ್ ಜ್ಯೂಸ್ ಕುಡಿದರೆ ಅದರಲ್ಲಿ ಸೋಡಾ ಮತ್ತು ಸಕ್ಕರೆಯ ಅಂಶ ಸಂಗ್ರಹವಾಗಿದ್ದು ತೂಕ ಇಳಿಸಲು ಬಯಸುವವರಿಗೆ ಇದು ನೆಗೆಟಿವ್ ಎಫೆಕ್ಟ್ ಆಗಲಿದೆ. ಇದನ್ನು ಬಳಸದಿರುವುದು ಉತ್ತಮ.
ಚಿಪ್ಸ್: ಸಂಸ್ಕರಿಸಿದ ಚಿಪ್ಸ್ ಇತರ ಆಹಾರಗಳು ಅಧಿಕ ಕೊಬ್ಬಿನಿಂದ ಕೂಡಿರುತ್ತದೆ. ಹೀಗಾಗಿ ಅದು ತೂಕ ಇಳಿಕೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಇಂತಹ ಆಹಾರ ಸಾಧ್ಯವಾದಷ್ಟು ತಿನ್ನದಿದ್ದರೆ ದೇಹದ ತೂಕ ಇಳಿಸಬಹುದು.
ಪ್ರೋಟಿನ್ ಬಾರ್‌ಗಳು: ಹಲವು ಪ್ರೋಟೀನ್ ಬಾರ್ ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶ ನೀಡುತ್ತದೆ ಎಂಬುದು ನಮ್ಮ ತಪ್ಪು ಕಲ್ಪನೆ. ಪ್ರೋಟಿನ್ ಬಾರ್ ಗಳು ಅನೇಕ ಸಮಯ ಸಂಗ್ರಹ ಮಾಡುವ ಉದ್ದೇಶದಿಂದ ಅದಕ್ಕೆ ಸಕ್ಕರೆ ಹಾಗೂ ಇತರ ಅಂಶ ಹಾಕಲಾಗಿದ್ದು ಇದರ ಸೇವನೆ ಕೂಡ ತೂಕ ಇಳಿಸುವ ಬದಲು ತೂಕ ಹೆಚ್ಚಿಸುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ:Health Tips: ಹೊಟ್ಟೆ ಸರಿಯಾಗಿದೆಯೇ? ಈ ವಿಷಯಗಳ ಬಗ್ಗೆ ಗಮನಕೊಡಿ!
ಜೇನುತುಪ್ಪ ಮತ್ತು ಬೆಲ್ಲ: ಕೆಲವರು ಸಕ್ಕರೆ ತಿಂದರೆ ತೂಕ ಹೆಚ್ಚಾಗುತ್ತದೆ ಎಂದು ಅದಕ್ಕೆ ಪರ್ಯಾಯವಾಗಿ ಜೇನು ತುಪ್ಪ ಹಾಗೂ ಬೆಲ್ಲ ಸೇವಿಸುತ್ತಾರೆ. ಇದು ನೈಸರ್ಗಿಕವೇ ಆಗಿದ್ದರೂ ಇದರಲ್ಲಿಯೂ ಸಕ್ಕರೆ ಅಂಶ ಇರುವ ಕಾರಣ ತೂಕ ಇಳಿಕೆ ಮಾಡಲು ಸಾಧ್ಯವಾಗಲಾರದು.
ಬ್ರೌನ್ ಬ್ರೆಡ್: ವೈಟ್ ಬ್ರೆಡ್ ಅನ್ನು ಮೈದಾದಲ್ಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಬಹುತೇಕರು ಈ ಬ್ರೌನ್ ಬ್ರೆಡ್ ಮೊರೆ ಹೋಗುತ್ತಾರೆ. ಆದರೆ ಇಂದು ಮಾರುಕಟ್ಟೆಯಲ್ಲಿ ಕಲಬೆರಕೆ ಸಾಮಾನ್ಯ ವಾಗಿದ್ದು ಬಹುತೇಕ ಫೇಕ್ ಪ್ರಾಡೆಕ್ಟ್ ಇರಲಿದೆ. ವೈಟ್ ಬ್ರೆಡ್ ಗೆ ಬಣ್ಣ ಹಾಕಿ ಮಾರುವಾಗ ಅದನ್ನು ನೀವು ಸೇವಿಸಿದರೆ ತೂಕ ಕಡಿಮೆ ಆಗಲು ಸಾಧ್ಯವಿಲ್ಲ.
ಫ್ರುಟ್ಸ್ ಸ್ಮೂಥಿಸ್: ಕೆಲ ಅಂಗಡಿಯಲ್ಲಿ ಫ್ರೆಶ್ ಜ್ಯೂಸ್ ಅನ್ನು ನಾವು ಸೇವಿಸುತ್ತೇವೆ. ಆದರೆ ಇಲ್ಲಿ ಕೂಡ ಕೆಲವರು ಹಣ್ಣಿನ ಫ್ಲೆವರ್ ಮಿಕ್ಸ್ ಕೂಡ ಹಾಕಿ ನೀಡುವುದು ಇದೆ. ಹೀಗಾಗಿ ಸಕ್ಕರೆ ಅಧಿಕವಾಗಿ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕೂಡ ಕಾರಣವಾಗುತ್ತದೆ.
ಕಡಿಮೆ ಕೊಬ್ಬಿನ ಪ್ಯಾಕ್ ಆಹಾರಗಳು: ಇಂದು ಕೊಲೆಸ್ಟ್ರಾಲ್ ರಹಿತ ಪ್ಯಾಕ್ ಆಹಾರಕ್ಕೆ ಬಹಳ ಬೇಡಿಕೆ ಇದೆ. ಚಿಪ್ಸ್, ಬೇಕರಿ ತಿನಿಸು, ಬಿಸ್ಕತ್ ಎಲ್ಲವು ಈ ಪ್ಯಾಕ್ ಆಹಾರದಲ್ಲಿ ಇವೆ. ಆದರೆ ಇದು ತೂಕ ಹೆಚ್ಚಿಸುವ ಸಾಧ್ಯತೆ ಇದೆ.
ಸೋಯಾ ಉತ್ಪನ್ನ: ಸೋಯಾ ಚಂಕ್ಸ್, ಇತರ ಆಹಾರ ಸೇವಿಸಿದರೆ ಅದು ಹಾರ್ಮೋನುಗಳ ಬದಲಾವಣೆಗೆ ಕಾರಣವಾಗಲಿದೆ. ಹೀಗಾಗಿ ದೇಹದ ತೂಕ ಕಡಿಮೆ ಆಗುವ ಬದಲು ಹೆಚ್ಚಾಗಲಿದೆ.