ಮಹಿಳೆಯರು ತಮ್ಮ ರೋಗತಡೆ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಆದ್ಯತೆ
ಗರ್ಭಕಂಠದ ಕ್ಯಾನ್ಸರ್, ಭಾರತೀಯ ಮಹಿಳೆಯರಲ್ಲಿ ಕಂಡು ಬರುವ 2ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಈ ಸಂಬಂಧ ಹೆಚ್ಚುತ್ತಿರುವ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆʼಯ ಪ್ರಮುಖ ಸ್ತ್ರೀರೋಗತಜ್ಞರು ರೋಗತಡೆ ಆರೈಕೆ ಯ ಮಹತ್ವವನ್ನು ಎತ್ತಿ ತೋರಿದರು. ಜೊತೆಗೆ ಮಹಿಳೆಯರು ತಮ್ಮ ದೀರ್ಘಕಾಲೀನ ಸಂತಾ ನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳ ಬಹುದಾದ ಕ್ರಮಗಳ ಮಹತ್ವ ವನ್ನು ಒತ್ತಿ ಹೇಳಿದರು.


ಮಹಿಳಾ ಆರೋಗ್ಯಕ್ಕೆ ಬೆಂಬಲ: ಮಹಿಳೆಯರ ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ಒಟ್ಟುಗೂಡಿದ ʻಎಂಎಸ್‌ಡಿʼ ಹಾಗೂ ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆʼ ಮಹಿಳೆಯರು ತಮ್ಮ ರೋಗತಡೆ ಮತ್ತು ಸಂತಾನೋತ್ಪತ್ತಿ ಆರೋ ಗ್ಯಕ್ಕೆ ಆದ್ಯತೆ ನೀಡಲು ಕೈಗೊಳ್ಳಬಹುದಾದ ಪ್ರಮುಖ ಕ್ರಮಗಳನ್ನು ವೈದ್ಯರು ಎತ್ತಿ ತೋರಿದ್ದಾರೆ.
ಬೆಂಗಳೂರು: ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆʼಯು ʻಎಂಎಸ್‌ಡಿ ಫಾರ್ಮಾ ಸ್ಯುಟಿಕಲ್ಸ್ʼ ಸಹಭಾಗಿತ್ವದಲ್ಲಿ 'ಟುಗೆದರ್ ಫಾರ್ ಹರ್ ವೆಲ್‌ಬೀಯಿಂಗ್' (ಆಕೆಯ ಯೋಗ ಕ್ಷೇಮಕ್ಕಾಗಿ ಒಟ್ಟಾಗುವುದು) ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. 2022ರಲ್ಲಿ, ಭಾರತ ದಲ್ಲಿ 1.5 ಲಕ್ಷಕ್ಕೂ ಹೆಚ್ಚು ಹೊಸ ʻಎಚ್‌ಪಿವಿʼ ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ದಾಖ ಲಾಗಿವೆ.
ಗರ್ಭಕಂಠದ ಕ್ಯಾನ್ಸರ್, ಭಾರತೀಯ ಮಹಿಳೆಯರಲ್ಲಿ ಕಂಡು ಬರುವ 2ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಈ ಸಂಬಂಧ ಹೆಚ್ಚುತ್ತಿರುವ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆʼಯ ಪ್ರಮುಖ ಸ್ತ್ರೀರೋಗತಜ್ಞರು ರೋಗತಡೆ ಆರೈಕೆಯ ಮಹತ್ವವನ್ನು ಎತ್ತಿ ತೋರಿದರು. ಜೊತೆಗೆ ಮಹಿಳೆಯರು ತಮ್ಮ ದೀರ್ಘಕಾಲೀನ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳ ಬಹುದಾದ ಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು.
ಇದನ್ನೂ ಓದಿ: Health Tips: ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಆಹಾರ ತ್ಯಜಿಸಿ!
ಸ್ತ್ರೀರೋಗತಜ್ಞರ ಶಿಫಾರಸುಗಳು:
- ಸ್ತ್ರೀರೋಗತಜ್ಞರ ಬಳಿಗೆ ವರ್ಷಕ್ಕೊಮ್ಮೆ ಭೇಟಿ: ಹೆಣ್ಣುಮಕ್ಕಳು 12 ರಿಂದ 16 ವರ್ಷ ದ ನಡುವಿನ ವಯೋಮಾನದಲ್ಲೇ ಸ್ತ್ರೀರೋಗತಜ್ಞರನ್ನು ಭೇಟಿ ಮಾಡಲು ಪ್ರಾರಂಭಿಸ ಬೇಕು, ಅವರಿಗೆ ಋತುಸ್ರಾವ ಪ್ರಾರಂಭವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ವರ್ಷಕ್ಕೊಮ್ಮೆ ಸ್ತ್ರೀರೋಗ ತಜ್ಞರನ್ನು ಕಾಣಬೇಕು.
- ರೋಗ ತಡೆ ಲಸಿಕೆಗಳ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ: ಎಲ್ಲಾ ಮಹಿಳೆಯರು ತಮ್ಮ ಸ್ವಂತ ಲಸಿಕೀಕರಣದ (ವ್ಯಾಕ್ಸಿನೇಷನ್) ವೇಳಾಪಟ್ಟಿಯ ಬಗ್ಗೆ ಮಾಹಿತಿ ಹೊಂದಿ ರುವುದು ಮತ್ತು ಅದರ ಮೇಲೆ ನಿಗಾ ಇಡುವುದು ಅತ್ಯಗತ್ಯ. ಅವರು ತಾಯಂದಿರಾ ಗಿದ್ದರೆ, ಮಕ್ಕಳ ವ್ಯಾಕ್ಸಿನೇಷನ್ ವೇಳಾಪಟ್ಟಿಯ ಮೇಲೂ ನಿಗಾ ಇರಿಸುವುದು ಅತ್ಯ ವಶ್ಯಕ. ಏಕೆಂದರೆ ಹಾನಿಕಾರಕ ರೋಗಗಳೊಂದಿಗೆ ಸಂಪರ್ಕಕ್ಕೆ ಬರುವ ಮೊದಲು ಅವುಗಳಿಂದ ರಕ್ಷಣೆ ಪಡೆಯುವುದು ಮುಖ್ಯ. ಪ್ರತಿ ಕುಟುಂಬದ ಬೆನ್ನೆಲುಬಾಗಿರುವ ಮಹಿಳೆಯರು, ವಿಶೇಷವಾಗಿ ತಡೆಗಟ್ಟಬಹುದಾದ ರೋಗಗಳಿಂದ ರಕ್ಷಣೆಗೆ ಸಹಾಯ ಮಾಡಬಲ್ಲ ಹದಿಹರೆಯದ ಮತ್ತು ವಯಸ್ಕ ರೋಗನಿರೋಧಕ ಲಸಿಕೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಇವುಗಳಲ್ಲಿ ʻಎಚ್‌ಪಿವಿ ವ್ಯಾಕ್ಸಿನೇಷನ್ʼ, ʻಎಂಎಂಆರ್ʼ, ʻಹೆಪಟೈಟಿಸ್ ಬಿʼ ಮತ್ತು ʻವೆರಿಸೆಲ್ಲಾʼ ಸೇರಿವೆ.
- ಮುಂಚಿತವಾಗಿ ಪತ್ತೆಹಚ್ಚುವಿಕೆ ಮತ್ತು ತಡೆಗಟ್ಟುವಿಕೆ: ತಮಗೆ ಶಿಫಾರಸು ಮಾಡ ಲಾದ ಸ್ಕ್ರೀನಿಂಗ್(ತಪಾಸಣೆ)ಗಳ ಬಗ್ಗೆ ವೈದ್ಯರೊಂದಿಗೆ ಮಾತನಾಡುವುದು ಅನಾ ರೋಗ್ಯವನ್ನು ತಡೆಗಟ್ಟಲು ಅಥವಾ ಆರಂಭಿಕ ಹಂತಗಳಲ್ಲಿ ರೋಗನಿರ್ಣಯ ಮಾಡಲು ಸಹಾಯ ಮಾಡುತ್ತದೆ. ಇದು ಸಮಯೋಚಿತ ಮಧ್ಯಸ್ಥಿಕೆಗಳು ಮತ್ತು ಸೂಕ್ತ ಆರೋಗ್ಯ ಫಲಿತಾಂಶಗಳಿಗೆ ಅನುವು ಮಾಡಿಕೊಡುತ್ತದೆ. ಸಂಭಾವ್ಯ ಆರೋಗ್ಯ ಸಮಸ್ಯೆ ಗಳನ್ನು ಮುಂಚಿತವಾಗಿ ಪತ್ತೆಹಚ್ಚುವ ನಿಟ್ಟಿನಲ್ಲಿ ʻಪ್ಯಾಪ್ ಸ್ಮಿಯರ್ʼಗಳು, ಪರೀಕ್ಷೆಗಳು ಮತ್ತು ಸ್ತನ ತಪಾಸಣೆಗಳು ಸೇರಿದಂತೆ ನಿಯಮಿತ ರೋಗ ತಪಾಸಣೆಗಳು ನಿರ್ಣಾಯಕ ವಾಗಿವೆ. ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಅನೇಕ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳನ್ನು ವಾಡಿಕೆಯ ತಪಾಸಣೆಯ ಮೂಲಕ ಮೊದಲೇ ಪತ್ತೆಹಚ್ಚಬಹುದು.
- ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯು ವುದರಿಂದ ಗಂಭೀರ ತೊಡಕುಗಳನ್ನು ತಡೆಗಟ್ಟಬಹುದು.
- ಆರೋಗ್ಯಕರ ಆಹಾರವನ್ನು ಸೇವಿಸಿ, ವ್ಯಾಯಾಮ ಮಾಡಿ, ಒತ್ತಡವನ್ನು ನಿರ್ವಹಿಸಿ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಹಾರ್ಮೋನು ಗಳನ್ನು ನಿಯಂತ್ರಿಸುವಲ್ಲಿ ಸಮತೋಲಿತ ಆಹಾರವು ಮಹತ್ವದ ಪಾತ್ರ ವಹಿಸುತ್ತದೆ. ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತವೆ. ಸಮೃದ್ಧ ಪ್ರಮಾಣದಲ್ಲಿ ಸಸ್ಯ ಆಧಾರಿತ ಸೊಪ್ಪು-ತರಕಾರಿಗಳು, ಬೀಜಗಳು ಹಾಗೂ ಹಾಲಿನ ಉತ್ಪನ್ನ ಪರ್ಯಾಯ ಗಳನ್ನು ಒಳಗೊಂಡಿರುವ ಆಹಾರಾಭ್ಯಾಸವು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೀರ್ಘಕಾಲದ ಒತ್ತಡ ಮತ್ತು ಅಸಮರ್ಪಕ ನಿದ್ರೆಯು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ಅನಿಯ ಮಿತ ಋತುಚಕ್ರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕ್ಷಣದ ಜಾಗೃತಾವಸ್ಥೆ, ಯೋಗ ಮತ್ತು ಸ್ಥಿರವಾದ ನಿದ್ರೆಯ ಸಮಯವನ್ನು ಕಾಪಾಡಿಕೊಳ್ಳು ವುದು ಸಹ ಈ ನಿಟ್ಟಿನಲ್ಲಿ ಸಹಾಯಕಾರಿ.
ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ಸಮಾಲೋಚಕಿ ಡಾ. ಪೂರ್ಣಿಮಾ ರಾಮಕೃಷ್ಣ ಅವರು ಮಾತನಾಡಿ, “ಪ್ರತಿ ಯೊಬ್ಬ ಮಹಿಳೆಯೂ ತನ್ನ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಿ ಸುಭದ್ರ ಭವಿಷ್ಯ ವನ್ನು ನಿರ್ಮಿಸಿಕೊಳ್ಳಬೇಕು.
ಲಸಿಕೆಗಳ ಬಗ್ಗೆ ಸ್ವತಃ ಅರಿವು ಪಡೆಯುವ ಮೂಲಕ, ವಿಶೇಷವಾಗಿ ತಡೆಗಟ್ಟಬಹುದಾದ ರೋಗಗಳು ಮತ್ತು ಗರ್ಭಕಂಠದ ಕ್ಯಾನ್ಸರ್‌ನಂತಹ ಕ್ಯಾನ್ಸರ್‌ಗಳಿಂದ ತಮ್ಮನ್ನು ರಕ್ಷಿಸಿ ಕೊಳ್ಳುವ ಮೂಲಕ ಮಹಿಳೆಯು ತನ್ನ ಭವಿಷ್ಯವನ್ನು ಆರೋಗ್ಯವಂತವಾಗಿಸಿಕೊಳ್ಳಬೇಕು. ಕ್ರಮ ತಪ್ಪದೆ ವಾರ್ಷಿಕ ಸ್ತ್ರೀರೋಗ ತಜ್ಞರ ಭೇಟಿಗಳ ಮೂಲಕ, ಆರಂಭಿಕ ಪತ್ತೆ ಹಚ್ಚು ವಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಹಾಗೂ ಸಂಭಾವ್ಯ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಜಾಗರೂಕರಾಗಿರುವ ಮೂಲಕ, ಮಹಿಳೆಯರು ತಮ್ಮ ಯೋಗಕ್ಷೇಮವನ್ನು ರಕ್ಷಿಸಲು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರತಿಯೊಬ್ಬ ಮಹಿಳೆಯೂ ತಮ್ಮ ವೈದ್ಯರೊಂದಿಗೆ ಮಾತನಾಡಬೇಕು, ಅಗತ್ಯ ಕ್ರಮವನ್ನು ಕೈಗೊಳ್ಳಬೇಕು.
ಆ ಮೂಲಕ ನಿಮ್ಮ ಆರೋಗ್ಯ ಮತ್ತು ಆಕಾಂಕ್ಷೆಗಳು ತಡೆಗಟ್ಟಬಹುದಾದ ಕಾಯಿಲೆ ಗಳಿಂದ ಹೊರೆಯಾಗದ ರೀತಿಯಲ್ಲಿ ಭವಿಷ್ಯವನ್ನು ಕಾಯ್ದುಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ.
"ಮಹಿಳೆಯರು ತಮ್ಮ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸುವ ಮತ್ತು ಅವರ ಭವಿಷ್ಯ ದ ಯೋಗಕ್ಷೇಮವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಹಾಗೂ ಹಿರಿಯ ಸಲಹೆಗಾರಾದ ಡಾ. ಅಪರ್ಣಾ ಝಾ ಅವರು ಹೇಳಿದರು. "ಉತ್ತಮ ಆರೋಗ್ಯ ವನ್ನು ಕಾಪಾಡಿಕೊಳ್ಳುವುದು ಜೀವನವಿಡೀ ಕಾಯ್ದುಕೊಳ್ಳಬೇಕಾದ ಬದ್ಧತೆಯಾಗಿದೆ. ರೋಗ ತಡೆಗಟ್ಟುವಿಕೆಯು ನಮಗಿರುವ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.
ಲಸಿಕೆಗಳು, ನಿಯಮಿತ ತಪಾಸಣೆಗಳು ಮತ್ತು ಆರಂಭಿಕ ಮಧ್ಯಪ್ರವೇಶವು ಮಹಿಳೆ ಯರನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ಜೊತೆಗೆ ಸದೃಢ ಮತ್ತು ಸ್ವತಂತ್ರ ಜೀವನ ವನ್ನು ನಡೆಸಲು ಅವರನ್ನು ಸಶಕ್ತಗೊಳಿಸುತ್ತದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಆರೋ ಗ್ಯಕ್ಕೆ ಆದ್ಯತೆ ನೀಡಬೇಕು ಮತ್ತು ತನ್ನ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಪೂರ್ವ ಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ,ʼʼ ಎಂದು ಅವರು ಹೇಳಿದರು.
ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ರಾದ ಫಣಿ ಮಾಧುರಿ ಅವರು ಮಾತನಾಡಿ, "ಪ್ರತಿಯೊಬ್ಬ ಮಹಿಳೆಯೂ ಉತ್ತಮ ಸಂತಾ ನೋತ್ಪತ್ತಿ ಆರೋಗ್ಯಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸ್ತ್ರೀರೋಗತಜ್ಞರನ್ನು ನಿಯಮಿತವಾಗಿ ಭೇಟಿ ಮಾಡುವ ಮೂಲಕ, ʻಎಚ್‌ಪಿವಿʼ ಲಸಿಕೆ ಯಂತಹ ಪ್ರಮುಖ ಲಸಿಕೆಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಹಾಗೂ ನಿಯಮಿತ ತಪಾಸಣೆ ಮತ್ತು ರೋಗತಡೆ ಆರೈಕೆಯನ್ನು ಅಳವಡಿಸಿಕೊಳ್ಳುವ ಮೂಲಕ, ಮಹಿಳೆಯರು ತಮ್ಮ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಬಹುದು. ಜೊತೆಗೆ, ಅವರ ದೀರ್ಘಕಾಲೀನ ಯೋಗಕ್ಷೇಮವನ್ನು ಖಾತರಿಪಡಿಸಿಕೊಳ್ಳಬಹುದು. ಇದು ಸಮಸ್ಯೆಗಳು ಉದ್ಭವಿಸಿದಾಗ ಅವುಗಳನ್ನು ಪರಿಹರಿಸುವ ಬಗ್ಗೆ ಮಾತ್ರವಲ್ಲ - ಇದು ತಮಗಾಗಿ ಮತ್ತು ತಮ್ಮ ಪ್ರೀತಿ ಪಾತ್ರರಿಗೆ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸುವ ಪೂರ್ವಭಾವಿ ಆಯ್ಕೆಗಳ ಕುರಿತದ್ದಾ ಗಿದೆ,ʼʼ ಎಂದು ಹೇಳಿದರು.
ಅಪೊಲೊ ಕ್ರೆಡಲ್ ಬಗ್ಗೆ:ʻಅಪೊಲೊ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆʼ ಮೂಲಕ ಮಹಿಳೆ ಯರು ಮತ್ತು ಮಕ್ಕಳ ಆರೈಕೆಗಾಗಿ ವಿಶೇಷ ಹಾಗೂ ಪ್ರತ್ಯೇಕ ಆರೋಗ್ಯ ಕೇಂದ್ರಗಳ ಪರಿ ಕಲ್ಪನೆಯನ್ನು ʻಅಪೊಲೊ ಹಾಸ್ಪಿಟಲ್ಸ್ ಗ್ರೂಪ್ʼ ಪ್ರವರ್ಧಮಾನಕ್ಕೆ ತಂದಿದೆ. ಹೆರಿಗೆ, ಸ್ತ್ರೀರೋಗ, ಭ್ರೂಣದ ಔಷಧ, ಹೆಚ್ಚಿನ ಅಪಾಯದ ಗರ್ಭಧಾರಣೆಯ ಆರೈಕೆ, ನವಜಾತ ಶಿಶುವಿಜ್ಞಾನ, ಶಿಶುವೈದ್ಯಶಾಸ್ತ್ರ ಮತ್ತು ಮಕ್ಕಳ ಉಪ ವಿಭಾಗಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸುತ್ತಿರುವ ಭಾರತದ ಪ್ರಮುಖ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾದ ಅಪೊಲೊ ಕ್ರೇಡಲ್ ಐದು ನಗರಗಳಲ್ಲಿ 19+ ಕೇಂದ್ರಗಳಿಗೆ ವಿಸ್ತರಿಸಿದೆ: ಹೈದರಾಬಾದ್, ಬೆಂಗಳೂರು, ದೆಹಲಿ ಎನ್‌ಸಿಆರ್, ಅಮೃತಸರ ಮತ್ತು ಚೆನ್ನೈ. ತನ್ನ ಪರಿಣತಿ ಮತ್ತು ಸಹಾನುಭೂತಿಯ ಆರೈಕೆಯೊಂದಿಗೆ, ಪೋಷಕರಿಗೆ ತಾವು ಸದಾ ಸುರಕ್ಷಿತ ಕೈಯಲ್ಲಿದ್ದಾರೆ ಎಂಬ ಭರವಸೆಯನ್ನು ʻಅಪೊಲೊ ಕ್ರೇಡಲ್ʼ ನೀಡುತ್ತದೆ.
"ಉತ್ತಮ ಆರೈಕೆಯು ಸುರಕ್ಷಿತ ರೋಗಿಗಳಿಗೆ ಸಮಾನ" ಎಂಬ ಬಲವಾದ ನಂಬಿಕೆಯು ಹಲವು ವರ್ಷಗಳಿಂದ ಅದರ ಅತ್ಯುತ್ತಮ ಸುರಕ್ಷತಾ ದಾಖಲೆಗೆ ಕೊಡುಗೆ ನೀಡಿದ್ದು, ಫಲವಾಗಿ 200,000 ಕ್ಕೂ ಹೆಚ್ಚು ಶಿಶುಗಳ ಪ್ರಸವ ನಡೆಸಿಕೊಡಲಾಗಿದೆ. ತಾಯಂದಿರು ಮತ್ತು ಮಕ್ಕಳಿಗೆ ಉನ್ನತ ದರ್ಜೆಯ ವೈದ್ಯಕೀಯ ಆರೈಕೆಯ ಜತೆ ಬೆಚ್ಚಗಿನ, ಐಷಾರಾಮಿ ಅನುಭವವನ್ನು ʻಅಪೊಲೊ ಕ್ರೇಡಲ್ʼ ಸಂಯೋಜಿಸುತ್ತದೆ. ಭ್ರೂಣದ ಔಷಧ ಮತ್ತು ಹೆಚ್ಚಿನ ಅಪಾಯದ ಹೆರಿಗೆ ಆರೈಕೆಯ ಮೇಲೆ ಗಮನ ಹರಿಸುವ ಮೂಲಕ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಸಮಗ್ರ ಆರೈಕೆಯನ್ನು ಒದಗಿಸುವ ಧ್ಯೇಯವನ್ನು ಬಲಪಡಿಸು ತ್ತದೆ. ನೈಜ-ಸಮಯದ ನವಜಾತ ಶಿಶುಗಳ ಮೇಲ್ವಿಚಾರಣೆಗಾಗಿ ಆಸ್ಪತ್ರೆಯು ʻಇಎನ್ಐ ಸಿಯುʼ ವ್ಯವಸ್ಥೆಯನ್ನು ಸಹ ಪರಿಚಯಿಸಿದೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿರುವ ಹೆಚ್ಚು ಅರ್ಹ ತಜ್ಞರ ತಂಡವು ಈ ಯಶಸ್ಸಿನ ಹೃದಯಭಾಗದಲ್ಲಿ. ಉತ್ತಮ ತರಬೇತಿ ಪಡೆದ ನರ್ಸಿಂಗ್ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲವೂ ಇದೆ. ಹೆಚ್ಚಿನ ಅಪಾಯದ ಗರ್ಭಧಾರಣೆಗಳು ಮತ್ತು ಸಂಕೀರ್ಣ ಅವಧಿಪೂರ್ವ ಶಿಶುಗಳನ್ನು ನಿರ್ವಹಿಸು ವುದರಿಂದ ಹಿಡಿದು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ತೊಡಕುಗಳೊಂದಿಗೆ ಮಕ್ಕಳಿಗೆ ಚಿಕಿತ್ಸೆ ನೀಡುವವರೆಗೆ, ಪ್ರತಿ ಆರೋಗ್ಯ ಸವಾಲಿಗೆ ʻಅಪೊಲೊ ಕ್ರೇಡಲ್ʼ ಸೂಕ್ತ ಪರಿಹಾರ ಗಳನ್ನು ನೀಡುತ್ತದೆ.