ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Post: ನನ್ನನ್ನು ಫ್ರೀಯಾಗಿ ಕೆಲಸಕ್ಕೆ ತೆಗೆದುಕೊಳ್ಳಿ! ವೈರಲ್ ಆಯ್ತು ಬೆಂಗಳೂರು ಯುವಕನ ಪೋಸ್ಟ್!

ನಾವು ಕಲಿತ ವಿದ್ಯೆಗೆ ಸರಿಯಾದ ಕೆಲಸ ಸಿಗದಿದ್ದರೆ ಅದರಿಂದ ಆಗುವ ನೋವು ಮತ್ತು ಹತಾಶೆಯನ್ನು ವಿವರಿಸಲು ಸಾಧ್ಯವಿಲ್ಲ. ಅಂತಹ ಒಂದು ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವಕನೊಬ್ಬ ತನ್ನನ್ನು ಫ್ರೀಯಾಗಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕಂಪೆನಿಗಳಿಗೆ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ.

‘ಸ್ಯಾಲರಿ ಬೇಡ, ಫ್ರೀಯಾಗಿ ಕೆಲ್ಸ ಮಾಡ್ತೀನಿ’ -ಟೆಕ್ಕಿ ಪೋಸ್ಟ್‌ ವೈರಲ್‌

ಸಾಂದರ್ಭಿಕ ಚಿತ್ರ

Profile Sushmitha Jain Feb 18, 2025 9:49 AM

ಬೆಂಗಳೂರು: ಭಾರತ (India) ಯುವ ಸಮುದಾಯದವರಿಂದ ತುಂಬಿ ತುಳುಕುತ್ತಿರುವ ದೇಶವಾಗಿದ್ದು, ನಮ್ಮಲ್ಲಿ ಒಟ್ಟು ಜನಸಂಖ್ಯೆಯ 35%ಕ್ಕಿಂತ ಹೆಚ್ಚಿನವರು ಯುವ ಸಮುದಾಯದವರಾಗಿದ್ದಾರೆ (Youth Population). ಇಂತಹ ಯುವ ಸಮುದಾಯಕ್ಕೆ ಉದ್ಯೋಗವಕಾಶವನ್ನು ಮತ್ತು ಅವರ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಡುವುದು ಯಾವುದೇ ದೇಶಕ್ಕೊಂದು ಸವಾಲಿನ ಸಂಗತಿಯಾಗಿದೆ. ಭಾರತದಲ್ಲಿ ಇಂದು ಸ್ಟಾರ್ಟಪ್ (Start Up) ಉದ್ಯಮ ಸಹಿತ ಯುವ ಸಮುದಾಯವನ್ನು ಸೆಳೆಯುವಂತಹ ಹಲವಾರು ರಂಗಗಳಿವೆ. ಅದರೂ ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸ ಸಿಗುತ್ತಿಲ್ಲ ಎಂಬ ಆಪಾದನೆಯೂ ಸಹ ಕೇಳಿ ಬರುತ್ತಿದೆ ಮತ್ತು ನಮ್ಮನ್ನಾಳುವ ಸರಕಾರಗಳು ಸೂಕ್ತ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿಲ್ಲ ಎಂಬ ಕೂಗೂ ಕೇಳಿಬರುತ್ತಿರುತ್ತದೆ. ಇದಕ್ಕೆ ಪುರಕವೆಂಬಂತೆ ಯುವಕನೊಬ್ಬ ಕಳೆದ ಒಂದು ವರ್ಷದಿಂದ ತನ್ನ ಕಲಿಕೆಗೆ ಸೂಕ್ತವಾದ ಕೆಲಸ ಸಿಗದೇ ಕೊನೆಗೆ ಹತಾಷೆಯಿಂದ ‘ನಾನು ಫ್ರೀಯಾಗಿ ಜಾಬ್ ಮಾಡಲು ತಯಾರಿದ್ದೇನೆ.’ ಎಂದು ಘೋಷಿಸಿಕೊಂಡಿರುವ ಪೋಸ್ಟ್ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Post) ಆಗುತ್ತಿದೆ.

ಇದನ್ನೂ ಓದಿ: Viral Post: ದೆಹಲಿಯ ರಸ್ತೆಗಳಲ್ಲಿ ಆಟೋ ಓಡಿಸುತ್ತಿರುವ ಈ ಮಹಿಳೆಯ ಕಥೆ ಎಲ್ಲರಿಗೂ ಸ್ಪೂರ್ತಿ; ಈಕೆ ಅನುಭವಿಸಿದ್ದು ಒಂದಷ್ಟಲ್ಲ!

ಬೆಂಗಳೂರು ಮೂಲದ, 2023ನೇ ಬ್ಯಾಚ್ ನ ಪದವೀಧರನೊಬ್ಬ ಕಂಪೆನಿಗಳಿಗೆ ಶಾಕಿಂಗ್ ಆಫರ್ ನೀಡಿದ್ದಾನೆ. ಹಲವು ಸಮಯದಿಂದ ಉತ್ತಮ ಕೆಲಸಕ್ಕಾಗಿ ಹುಡುಕಾಡಿ ಸುಸ್ತಾಗಿ, ಕೊನೆಗೆ ತಾನು ಯಾವುದೇ ಕಂಪೆನಿಗೆ ಉಚಿತವಾಗಿ ಕೆಲಸ ಮಾಡಲು ಸಿದ್ಧನಾಗಿದ್ದೇನೆ ಮತ್ತು ತಕ್ಷಣವೇ ಸೇರ್ಪಡೆಯಾಗಲು ರೆಡಿಯಾಗಿದ್ದೇನೆ, ಆದರೆ ತನಗೆ ತಾನಿರುವ ಸ್ಥಳದಲ್ಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂಬ ಕಂಡೀಷನ್ ಹಾಕಿದ್ದಾನೆ.

ರೆಡ್ ಇಟ್ ನಲ್ಲಿ ಈ ಕರಿತಾಗಿ ವಿವರವಾದ ಪೋಸ್ಟ್ ಹಾಕಿರುವ ಈ ಯುವಕ ‘ಈತನ ರೆಸ್ಯೂಮನ್ನು ಸುಟ್ಟು ಹಾಕಿ’ ಆದ್ರೆ ಈತನನ್ನು ಕೂಡ್ಲೇ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಬರೆದುಕೊಂಡಿದ್ದಾನೆ. ‘ನನ್ನ ರೆಸ್ಯೂಮನ್ನು ಸುಟ್ಟುಹಾಕಿ, ಆದ್ರೆ ದಯವಿಟ್ಟು ಸಹಾಯ ಮಾಡಿ. ಹತಾಶಗೊಂಡಿರುವ ಮತ್ತು ಉಚಿತವಾಗಿ ನಾನಿರುವಲ್ಲಿಂದಲೇ ಕೆಲಸ ಮಾಡಲು ಬಯಸುವ – 23ರ ಪದವೀಧರ, ತಕ್ಷಣವೇ ಕೆಲಸ ಹುಡುಕುತ್ತಿದ್ದೇನೆ’ ಎಂದು ತನ್ನ ಪೋಸ್ಟ್ ನಲ್ಲಿ ಆ ಯುವಕ ಬರೆದುಕೊಂಡಿದ್ದಾನೆ.

ಈ ಯುವಕ ತನ್ನನ್ನು ತಾನು ಇಂಜಿನಿಯರ್ ಎಂದು ಹೇಳಿಕೊಂಡಿದ್ದಾನೆ. ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಿ.ಇ. ಪದವಿಧರನಾಗಿರು ಸಾಫ್ಟ್ ವೇರ್ ಇಂಜಿನಿಯರ್ ನಾನಾಗಿದ್ದು, ಪೈಥಾನ್ ಮತ್ತು ಜಾವಾ ಲಾಂಗ್ವೇಜ್ ಗಳಲ್ಲಿ ಪರಿಣತನಾಗಿದ್ದೇನೆ. ಯೂಸರ್ ಫ್ರೆಂಡ್ಲೀ ಅಪ್ಲಿಕೇಶನ್ ಗಳನ್ನು ನಿರ್ಮಿಸುವಲ್ಲಿ ಮತ್ತು ಆವಿಷ್ಕಾರಿ ಪರಿಹಾರಗಳ ಮೂಲಕ ಸವಾಲುಗಳನ್ನು ಬಗೆಹರಿಸುವಲ್ಲಿ ಉತ್ಸುಕನಾಗಿದ್ದು, ಪರಿಣಾಮಕಾರಿ ಸಾಫ್ಟ್ ವೇರ್ ಅಭಿವೃದ್ಧಿಗೆ ಹೊಸ ಐಡಿಯಾಗಳನ್ನು ತರಲು ಎಂಟ್ರಿ ಲೆವೆಲ್ ರೋಲ್ ಎದುರು ನೋಡುತ್ತಿದ್ದೆನೆ ಎಂದು ಆತ ಬರೆದುಕೊಂಡಿದ್ದಾನೆ.

ಈತನ ಶೈಕ್ಷಣಿಕ ದಾಖಲಾತಿಗಳ ಪ್ರಕಾರ, ಬೆಂಗಳೂರು ಮೂಲದ ಈ ಪದವೀಧರ ಯುವಕ ಎರಡು ಇಂಟರ್ನ್ ಶಿಪ್ ಗಳ ಕೆಲಸದ ಅನುಭವವನ್ನು ಹೊಂದಿದ್ದು, ಪ್ರೋಗ್ರಾಮಿಂಗ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸಾಫ್ಟ್ ವೇರ್ ಡೆವಲಪ್ಮೆಂಟ್ ಗಳಲ್ಲಿ ಪರಿಣತಿಯನ್ನು ಹೊಂದಿರುವುದು ತಿಳಿದುಬರುತ್ತದೆ.

ಈ ಪೋಸ್ಟ್ ರೆಡ್ ಇಟ್ ನಲ್ಲಿ ಬಂದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಲವೊಂದು ಸ್ಟಾರ್ಟ್ ಅಪ್ ಗಳು ತಮ್ಮನ್ನು ಸಂಪರ್ಕಿಸುವಂತೆ ಈತನಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಮಾವ ಅಪಘಾತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ಕಾರಣ ತಾನು ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಮತ್ತು ಅಗತ್ಯ ಬಿದ್ದರೆ ಆಫಿಸಿನಿಂದಲೂ ಕೆಲಸ ಮಾಡಲು ಸಿದ್ಧವಿರುವುದಾಗಿ ಈ ಯುವಕ ಕೊನೆಯಲ್ಲಿ ಹೇಳಿಕೊಂಡಿದ್ದಾನೆ.

‘ನನಗೊಂದು ಕೆಲ್ಸ ಕೊಡಿ’ – ಸಾಫ್ಟ್ವೇರ್ ಇಂಜಿನಿಯರ್ ಅಳಲು!