2nd PUC Results: ನಾಳೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ; ಅಂಕಪಟ್ಟಿ ಇಲ್ಲಿ ಲಭ್ಯ
ಏ.7ರಂದು ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ರಿಸಲ್ಟ್ ಮುಂದೂಡಿಕೆ ಆದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಮೂಡಿತ್ತು. ಮೌಲ್ಯಮಾಪನದ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದ ಹಿನ್ನೆಲೆ ಫಲಿತಾಂಶ ತಡವಾಗಿದೆ. ಫಲಿತಾಂಶ ಪ್ರಕಟವಾದ ದಿನದಂದು 12 ಗಂಟೆಗೆ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.
ದ್ವಿತೀಯ ಪಿಯುಸಿ ಫಲಿತಾಂಶ -
ಬೆಂಗಳೂರು, ಏ.08: ದ್ವಿತೀಯ ಪಿಯುಸಿ ಫಲಿತಾಂಶದ (2nd PUC Results) ದಿನಾಂಕದ ಗೊಂದಲಕ್ಕೆ ತೆರೆ ಬಿದ್ದಿದ್ದು, ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಫಲಿತಾಂಶ (PUC Results) ಪ್ರಕಟಣೆ ಬಹುತೇಕ ಫಿಕ್ಸ್ ಆಗಿದೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ರಿಸಲ್ಟ್ ಅನೌನ್ಸ್ ಆಗುವ ದಿನದಂದು ಅಧಿಕೃತ ವೆಬ್ಸೈಟ್ನಲ್ಲೂ (Website) ವಿದ್ಯಾರ್ಥಿಗಳು ರಿಸಲ್ಟ್ ನೋಡಬಹುದಾಗಿದೆ.
ಫಲಿತಾಂಶ ಆನ್ಲೈನ್ನಲ್ಲಿ ನೋಡುವುದು ಹೇಗೆ?
ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ
‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಪರೀಕ್ಷೆ ಅಂಕಪಟ್ಟಿ ಸಿಗಲಿದೆ.
ಫೆ.28 ರಿಂದ ಮಾರ್ಚ್ 17ವರೆಗೂ PUC ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1217 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಏಪ್ರಿಲ್ನ ಮೊದಲ ವಾರದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸೋದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದರು.
ಏ.7ರಂದು ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ರಿಸಲ್ಟ್ ಮುಂದೂಡಿಕೆ ಆದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಮೂಡಿತ್ತು. ಮೌಲ್ಯಮಾಪನದ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದ ಹಿನ್ನೆಲೆ ಫಲಿತಾಂಶ ತಡವಾಗಿದೆ. ಫಲಿತಾಂಶ ಪ್ರಕಟವಾದ ದಿನದಂದು 12 ಗಂಟೆಗೆ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.
2nd PUC Exam result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ.9ರಂದು, ನೋಡುವುದು ಹೇಗೆ?
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಅನ್ನು ಮಂಡಳಿಯು karresults.nic.in ಮತ್ತು kseab.karnataka.gov.in ಅಧಿಕೃತವಾಗಿ ಪ್ರಕಟಿಸಲಿದೆ. ಇದರಲ್ಲಿ ವಿದ್ಯಾರ್ಥಿಗಳು ಪಡೆದಿರುವ ಮಾರ್ಕ್ಸ್, ಶೇಕಡಾವಾರು ವಿವರ, ಟಾಪರ್‌ಗಳ ಲಿಸ್ಟ್ ಕೂಡ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ 2ನೇ ಪಿಯುಸಿ ಅಂಕಪಟ್ಟಿ 2026 ಅನ್ನು ಡಿಜಿಲಾಕರ್ ಮೂಲಕ digilocker.gov.in ನಲ್ಲಿ ಅಥವಾ ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು.